ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ: ಜೋಗಿ ಪ್ರೇಮ್

Suvarna News   | Asianet News
Published : Oct 21, 2021, 05:02 PM ISTUpdated : Oct 21, 2021, 05:11 PM IST
ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ: ಜೋಗಿ ಪ್ರೇಮ್

ಸಾರಾಂಶ

ಪ್ರತಿ ಬಾರಿ ನನ್ನ ಅನ್ನದಾತರು, ಸ್ನೇಹಿತರು ಹಾಗೂ ನನ್ನ ಬಂಧು, ಬಳಗದವರು ಪ್ರತಿಯೊಬ್ಬರು ಬಂದು ನನಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಹೋಗುತ್ತಿದ್ದರು. ಆದರೆ ಈ ಬಾರಿ ನಾನು ಮನೆಯಲ್ಲಿ ಇರುವುದಿಲ್ಲ. 

ಚಂದನವನದ ಸ್ಟಾರ್ ನಿರ್ದೇಶಕ ಎಂದೇ ಹೆಸರು ವಾಸಿಯಾಗಿರುವ ಜೋಗಿ ಪ್ರೇಮ್ (Jogi Prem) 'ಏಕ್ ಲವ್ ಯಾ' (Ek LOve Ya)ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ತಮ್ಮ ಹುಟ್ಟುಹಬ್ಬದ (Birthday) ಪ್ರಯುಕ್ತ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ವಿಡಿಯೋವನ್ನು ಹಂಚಿಕೊಳ್ಳುವುದರ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ಅಕ್ಟೋಬರ್ 22ರಂದು ಜೋಗಿ ಪ್ರೇಮ್ ಹುಟ್ಟುಹಬ್ಬ. ಈ ಬಾರಿ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದು ಈ ಬಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಹೌದು! ಪ್ರತಿವರ್ಷ ಅಭಿಮಾನಿಗಳೊಂದಿಗೆ ಅದ್ದೂರಿಯಾಗಿ ಬರ್ತ್‍ಡೇ ಸೆಲೆಬ್ರೆಟ್ (Celebrate) ಮಾಡುತ್ತಿದ್ದ ಪ್ರೇಮ್ ಈ ಬಾರಿ 'ಏಕ್ ಲವ್ ಯಾ' ಸಿನಿಮಾ ಕೆಲಸದ ಕಾರಣಾಂತರದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ. 'ಎಲ್ಲರಿಗೂ ನಮಸ್ಕಾರ... ಇದೇ ಅಕ್ಟೋಬರ್ 22ರಂದು ನನ್ನ ಹುಟ್ಟುಹಬ್ಬವಿದೆ. ಪ್ರತಿ ಬಾರಿ ನನ್ನ ಅನ್ನದಾತರು, ಸ್ನೇಹಿತರು ಹಾಗೂ ನನ್ನ ಬಂಧು, ಬಳಗದವರು ಪ್ರತಿಯೊಬ್ಬರು ಬಂದು ನನಗೆ ಶುಭಾಶಯ ತಿಳಿಸಿ ಹೋಗುತ್ತಿದ್ದರು. ಆದರೆ ಈ ಬಾರಿ ನಾನು ಮನೆಯಲ್ಲಿ ಇರುವುದಿಲ್ಲ. ಕಾರಣ 'ಏಕ್ ಲವ್ ಯಾ' ಸಿನಿಮಾದ ಕೆಲಸಗಳು ನಡೆಯುತ್ತಿದೆ. ಹಾಗಾಗಿ ದಯವಿಟ್ಟು ಯಾರೂ ಕೂಡ ಮನೆಯ ಬಳಿ ಬಂದು ಕಾಯಬೇಡಿ. ಎಲ್ಲೆ ಇದ್ದರೂ ದೂರದಿಂದಲೇ ನನಗೆ ಆಶೀರ್ವಾದ ಮಾಡಿ ಎಂದು ನಿಮ್ಮಲ್ಲಿ ಪ್ರೀತಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು. 

'ಏಕ್ ಲವ್ ಯಾ' ಬಿಡುಗಡೆ ದಿನಾಂಕ ತಿಳಿಸಿದ ಜೋಗಿ ಪ್ರೇಮ್!

ದೀಪಾವಳಿ (Diwali) ಹಬ್ಬದ ದಿನ ಚಿತ್ರದ ಸಿನಿಮಾದ ಮೂರನೇ ಹಾಡನ್ನು ಬಿಡುಗಡೆಗೊಳಿಸುತ್ತಿದ್ದೇವೆ. ಈಗಾಗಲೇ ಎರಡು ಹಾಡನ್ನು ಹಿಟ್ ಮಾಡಿಕೊಟ್ಟಿದ್ದೀರಾ. ಈಗ ಮತ್ತೊಂದು ಲವ್ ಬ್ರೇಕ್ ಅಪ್ ಸಾಂಗ್ ರಿಲೀಸ್ ಆಗುತ್ತಿದೆ. ಈ ಹಾಡನ್ನು ವಿಶೇಷವಾಗಿ ಹುಡುಗಿಯರಿಗೆಂದು ಬಿಡುಗಡೆ ಮಾಡಲಾಗುತ್ತಿದೆ. ಹಾಡನ್ನು ಕೇಳಿ, ನೋಡಿ, ಬೆಂಬಲಿಸಿ ಮತ್ತು ಜನವರಿ 21ಕ್ಕೆ 'ಏಕ್ ಲವ್ ಯಾ' ಸಿನಿಮಾ ಎಲ್ಲೆಡೆ ಬಿಡುಗಡೆಗೊಳಿಸಲಾಗುತ್ತಿದೆ. ನಿಮ್ಮ ಪ್ರೀತಿ ವಿಶ್ವಾಸ ಸದಾ ನನ್ನ ಮೇಲೆ ಹೀಗೆ ಇರಲಿ ಎಂದು ಪೋಸ್ಟ್ ಮಾಡಿರುವ  ವಿಡಿಯೋದಲ್ಲಿ ತಿಳಿಸಿದ್ದಾರೆ. 

 


ಇನ್ನು ಇತ್ತಿಚೆಗಷ್ಟೇ ಜೋಗಿ ಪ್ರೇಮ್ ನಾಯಕನ ಮೋಷನ್ ಪೋಸ್ಟರ್‌ನ್ನು (Motion Poster) ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದರು. ಚಿತ್ರದ ನಾಯಕ ಅಭಿಷೇಕ್ (ರಾಣಾ) (Abhishek) ರಕ್ಷಿತಾ ಸಹೋದರ. ಹಾಗಾಗಿ ಅಕ್ಕ-ಭಾವನ ಸಿನಿಮಾ ಬ್ಯಾನರ್‌ನಲ್ಲಿ ಲಾಂಚ್ ಆಗುತ್ತಿರುವ 'ಅಭಿರಾಣಾ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಭಾಮೈದುನ ಸಿನಿಮಾಗೆ ಪ್ರೇಮ್ ವಿಭಿನ್ನ ಕಥೆ ಹೆಣೆದಿದ್ದಾರೆ. ಈ ಚಿತ್ರದಲ್ಲಿ ರಾಣಾಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಹಾಗೂ ಇನ್ನೊಂದು ಮುಖ್ಯ ಪಾತ್ರದಲ್ಲಿ ಹೊಸ ನಟಿ ಗ್ರೀಷ್ಮಾ ನಾಣಯ್ಯ (Grishma Nanayya) ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್, ಲಿರಿಕಲ್ ವಿಡಿಯೋ ಹಾಗೂ ಹೀರೋ, ಹೀರೋಯಿನ್ ಲುಕ್ ರಿವೀಲ್ ಮಾಡಲಾಗಿದ್ದು, ರಚಿತಾ ರಾಮ್ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಸಿಗರೇಟು ಸೇದಿ, ಲಿಪ್‌ ಲಾಕ್‌ ಕೂಡ ಮಾಡಿದ್ದಾರೆ.

ಮುತ್ತತ್ತಿಯಲ್ಲಿ ಕೊನೆಯ ಶೂಟ್; ಭಾವುಕರಾದ ರಕ್ಷಿತಾ, ಪ್ರೇಮ್!

ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ (Arjun Janya) ಸಂಗೀತದಲ್ಲಿ 'ಏಕ್ ಲವ್ ಯಾ' ಹಾಡುಗಳು ಮೂಡಿಬಂದಿದ್ದು, ವಿಶೇಷವಾಗಿ ತೆಲುಗು ಗಾಯಕಿ ಮಂಗ್ಲಿ (Mangli) ಎಣ್ಣಿ ಸಾಂಗ್ ಹಾಡಿದ್ದಾರೆ. ಜೊತೆಗೆ ಅರ್ಮಾನ್ ಮಲಿಕ್ (Arman Malik) ಹಿನ್ನೆಲೆ ಗಾಯನದಲ್ಲಿ 'ಯಾರೆ ಯಾರೆ' ಲಿರಿಕಲ್ ಸಾಂಗ್ ಬಿಡುಗಡೆಯಾಗಿ ಸಿನಿರಸಿಕರ ಗಮನ ಸೆಳೆದಿತ್ತು. ಕನ್ನಡ (Kannada), ತಮಿಳು (Tamil), ತೆಲುಗು (Telugu), ಮತ್ತು ಮಲಯಾಳಂ (Malayalam) ಭಾಷೆಗಳಲ್ಲಿ ಏಕಕಕಾಲಕ್ಕೆ 'ಏಕ್ ಲವ್ ಯಾ' ಚಿತ್ರ ತೆರೆ ಕಾಣಲಿದೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?