ಯಶ್ ಮುಂದಿನ ಸಿನಿಮಾಗೆ ದೊಡ್ಡ ಸಮಸ್ಯೆ..! ಶೂಟಿಂಗ್ ಮತ್ತೆ ಶುರುವಾಗೋದು ಯಾವಾಗ ಗೊತ್ತಾ?

Published : Jul 28, 2024, 03:41 PM ISTUpdated : Jul 31, 2024, 04:30 PM IST
ಯಶ್ ಮುಂದಿನ ಸಿನಿಮಾಗೆ ದೊಡ್ಡ ಸಮಸ್ಯೆ..! ಶೂಟಿಂಗ್ ಮತ್ತೆ ಶುರುವಾಗೋದು ಯಾವಾಗ ಗೊತ್ತಾ?

ಸಾರಾಂಶ

ರಾಕಿಂಗ್ ಸ್ಟಾರ್ ಯಶ್ ನಟನೆಯಲ್ಲಿ ಮುಂಬರುವ ಚಿತ್ರವಾಗಿರುವ ಟಾಕ್ಸಿಕ್ ಸಿನಿಮಾಗೆ ಮತ್ತೆ ವಿಘ್ನ ಎದುರಾಗಿದೆ. ಕೋರ್ಟ್ ಗ್ರೀನ್ ಸಿಗ್ನಲ್ ನೀಡುವವರೆಗೂ ಸಿನಿಮಾ ಟೀಮ್ ಶೂಟಿಂಗ್ ಅಥವಾ ಇನ್ಯಾವುದೇ ಕೆಲಸಕಾರ್ಯಗಳನ್ನು ಅಲ್ಲಿ ಮಾಡುವಂತಿಲ್ಲ ಎನ್ನಲಾಗಿದೆ. 

ಕನ್ನಡದ ನಟ, ರಾಕಿಂಗ್ ಸ್ಟಾರ್ ಯಶ್ (Rocking Star Yash) ನಟನೆಯಲ್ಲಿ ಮುಂಬರುವ ಚಿತ್ರವಾಗಿರುವ ಟಾಕ್ಸಿಕ್ ಸಿನಿಮಾಗೆ ಮತ್ತೆ ವಿಘ್ನ ಎದುರಾಗಿದೆ. ಈಗಾಗಲೇ ಕಾಪಿ ರೈಟ್ಸ್‌ ಸಮಸ್ಯೆಯಿಂದ ಬಳಲುತ್ತಿರುವ, ಯಶ್ ನಟನೆಯ 'ರಾಮಾಯಣ' ಚಿತ್ರದ ಶೂಟಿಂಗ್ ಮುಂದಕ್ಕೆ ಹೋಗಿದೆ. ಇದೀಗ ಟಾಕ್ಸಿಕ್ ಚಿತ್ರತಂಡಕ್ಕೆ ಶಾಕ್ ಆದುರಾಗಿದೆ. ಕಾರಣ, ಟಾಕ್ಸಿಕ್ ಚಿತ್ರತಂಡ ಹಾಕಿಕೊಂಡಿರುವ ಶೂಟಿಂಗ್ ಸೆಟ್ ವಿರುದ್ಧ ಆರೋಪ ಮಾಡಿ ಲಾಯರ್ ಒಬ್ಬರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಹಾಗಿದ್ದರೆ ಇದೇನು ಕಾನೂನು ಹೋರಾಟ? ಏನಾಗ್ತಿದೆ ಅಲ್ಲಿ? ಇಲ್ಲಿದೆ ಡೀಟೇಲ್ಸ್.. 

ಸಿಟಿ ಬೇಸ್ಡ್ ಲಾಯರ್ ಒಬ್ಬರು ಟಾಕ್ಸಿಕ್ ಶೂಟಿಂಗ್ ಸೆಟ್ ಮಮ್ಮೋತ್ (mammoth set) ವಿರುದ್ಧ ಅದು ಫಾರೆಸ್ಟ್ ಏರಿಯಾ ಎಂದು ಕೇಸ್ ದಾಖಲಿಸಿದ್ದಾರೆ ಎನ್ನಲಾಗಿದೆ. ಟಾಕ್ಸಿಕ್ ಚಿತ್ತತಂಡವು ಶೂಟಿಂಗ್‌ಗೆ ಎಂದು ಹಾಕಿರುವ ಸೆಟ್ ಇರುವ ಜಾಗವು ಫಾರೆಸ್ಟ್ ಏರಿಯಾ ಎಂದು ಮೀಸಲಾಗಿ ಇಟ್ಟಿರುವುದು. ಅಲ್ಲಿ ಅನಧಿಕೃತ ಸೆಟ್ ಹಾಕಲಾಗಿದೆ ಎಂದು ಆ ಪಟ್ಟಣದ ಲಾಯರ್ ಒಬ್ಬರು ಕೇಸ್ ದಾಖಲಿಸಿದ್ದಾರೆ. ಆ ಕೇಸ್ ಹಿಯರಿಂಗ್ ಆಗಸ್ಟ್ 19ಕ್ಕೆ (19 August 2024) ನಿಗದಿಯಾಗಿದೆ. 

ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಯನ್ನು ಅಪರಾಧಿ ಸ್ಥಾನಕ್ಕೆ ತರಲು ಹೋಗಬೇಡಿ: ನಟ ಗಣೇಶ್ ರಾವ್

ಈಗ ಸದ್ಯಕ್ಕೆ, ಕೋರ್ಟ್ ಗ್ರೀನ್ ಸಿಗ್ನಲ್ ನೀಡುವವರೆಗೂ ಸಿನಿಮಾ ಟೀಮ್ ಶೂಟಿಂಗ್ ಅಥವಾ ಇನ್ಯಾವುದೇ ಕೆಲಸಕಾರ್ಯಗಳನ್ನು ಅಲ್ಲಿ ಮಾಡುವಂತಿಲ್ಲ ಎನ್ನಲಾಗಿದೆ. ಹೀಗಾಗಿ ಟಾಕ್ಸಿಕ್ ಚಿತ್ರದ ಶೂಟಿಂಗ್ ಆಗಸ್ಟ್ 19ರ ಹಿಯರಿಂಗ್ ಬಳಿಕ ನಡೆಯಲಿದೆ. ಅಂದು, ಅಂದರೆ ಆಗಸ್ಟ್ 19ರ ಬಳಿಕ ಕೋರ್ಟ್ ಏನು ಹೇಳಲಿದೆ ಎಂಬುದನ್ನು ಕಾದು ನೋಡಿ, ಬಳಿಕವಷ್ಟೇ ಶೂಟಿಂಗ್ ಮಾಡಬೇಕಿದೆ. ಹೀಗಾಗಿ ಸದ್ಯ ಯಶ್ ನಾಯಕತ್ವದ ಟಾಕ್ಸಿಕ್ ಶೂಟಿಂಗ್ ಮತ್ತೆ ಮುಂದಕ್ಕೆ ಹೋಗಿದೆ. 

ಮಲಯಾಳಂ ನಿರ್ದೇಶಕಿ ಗೀತೂ ಮೋಹನ್‌ದಾಸ್ ನಿರ್ದೇಶನದಲ್ಲಿ ಯಶ್ ನಟನೆಯ ಮುಂಬರುವ ಟಾಕ್ಸಿಕ್ ಚಿತ್ರವು ಮೂಡಿ ಬರಲಿದೆ. ಕೆಜಿಎಫ್ ಬಳಿಕ ನಟ ಯಶ್ ಅವರು ಎರಡು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಒಂದು, ಗೀತೂ ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್, ಇನ್ನೊಂದು ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ. ರಣಬೀರ್ ಕಪೂರ್ ನಾಯಕತ್ವದ ರಾಮಾಯಣ ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತೆಯಾಗಿ, ರಣಬೀರ್ ಕಪೂರ್ ರಾಮನಾಗಲಿದ್ದು, ಯಶ್ ರಾವಣನ ಪಾತ್ರ ಪೋಷಿಸುತ್ತಿದ್ದಾರೆ ಎನ್ನಲಾಗಿದೆ. 

ಸುದೀಪ್-ದರ್ಶನ್‌ ಮಧ್ಯೆ ಇಲ್ಲದ ಸಂಬಂಧ: ಅದೊಂಥರಾ ಖಾಲಿ ಪಾತ್ರೆ ಇದ್ದಂಗೆ ಅಂತಾರೆ ಆಪ್ತರು!

ಒಟ್ಟಿನಲ್ಲಿ, ಕೆಜಿಎಫ್ ಮೂಲಕ ಜಗತ್ಪ್ರಸಿದ್ಧಿ ಪಡೆದಿರುವ ನಟ ಯಶ್ ಅವರ ಮುಂಬರುವ ಚಿತ್ರವಾದ ಟಾಕ್ಸಿಕ್‌ಗೆ ಶುರುವಿನಲ್ಏ ಬಹಳಷ್ಟು ಸಮಸ್ಯೆ ಎದುರಾಗಿದೆ. ಈ ಎಲ್ಲ ಅಡೆತಡೆಗಳನ್ನು ದಾಟಿ ಟಾಕ್ಸಿಕ್‌ ಸಿನಿಮಾ ತಂಡ ಶೂಟಿಂಗ್ ಮುಗಿಸಿ ಸಿನಿಮಾವನ್ನು ತೆರೆಗೆ ತರಲು ಹೆಚ್ಚಿನ ಸಮಯ ಬೇಕಾಗಬಹುದೇ? ಗೊತ್ತಿಲ್ಲ, ಅದನ್ನು ಟಾಕ್ಸಿಕ್ ಚಿತ್ರತಂಡವೇ ಹೇಳಬೇಕು ಅಷ್ಟೇ!. ಆದರೆ, ಯಶ್ ಮುಂದಿನ ಚಿತ್ರವನ್ನು ತೆರೆಯ ಮೇಲೆ ನೋಡಲು ರಾಕಿಂಗ್ ಸ್ಟಾರ್ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?