ಜನರಿಗೆ ಹಾಗು ಸಮಾಜಕ್ಕೆ ತಮ್ಮಿಂದ ಆದಷ್ಟು ಕೊಡುಗೆ ನೀಡಬೇಕೆಂಬ ಕಾರಣಕ್ಕೇ ಯಶ್ ಹಾಗೂ ಕೆವಿಎನ್ ಸಂಸ್ಥೆ ಈ ಪ್ಯಾನ್ ವರ್ಲ್ಡ್ ಸಿನಿಮಾ ಟಾಕ್ಸಿಕ್ ಸೆಟ್ ಅನ್ನು ಮುಖ್ಯವಾಗಿ ಕರ್ನಾಟಕದಲ್ಲಿ, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲೇ ನಿರ್ಮಾಣ ಮಾಡಿಸಿದೆ. ಈ ಮೂಲಕ ಶೂಟಿಂಗ್ ಸೆಟ್..
ಕನ್ನಡದ ಖ್ಯಾತ ನಟ, ರಾಕಿಂಗ್ ಸ್ಟಾರ್ ಯಶ್ (Rocking Star Yash) ನಟನೆಯಲ್ಲಿ ಮುಂಬರುವ ಚಿತ್ರವಾಗಿರುವ ಟಾಕ್ಸಿಕ್ ಸಿನಿಮಾಗೆ ದೊಡ್ಡ ಸಮಸ್ಯೆ ಎದುರಾಗಿದೆ. ಕಾರಣ, ಟಾಕ್ಸಿಕ್ ಚಿತ್ರತಂಡ ಹಾಕಿಕೊಂಡಿರುವ ಶೂಟಿಂಗ್ ಸೆಟ್ ವಿರುದ್ಧ ಆರೋಪ ಮಾಡಿ ಲಾಯರ್ ಒಬ್ಬರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನ ಹೆಚ್‌ಎಂಟಿ ಗ್ರೌಂಡ್‌ನಲ್ಲಿ ಹಾಕಿರುವ ಬೃಹತ್ ಶೂಟಿಂಗ್ ಸೆಟ್‌ನಲ್ಲಿ ಟಾಕ್ಸಿಕ್ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಆದರೆ ಈಗ ಶೂಟಿಂಗ್ ಸ್ಟಾಪ್ ಆಗಿದೆ. ಹಾಗಿದ್ದರೆ ಯಾಕೆ ಕಾನೂನು ಹೋರಾಟ? ಏನಾಗ್ತಿದೆ ಅಲ್ಲಿ? ನೋಡಿ ಇಲ್ಲಿದೆ ಡೀಟೇಲ್ಸ್..
ಬೆಂಗಳೂರಿನ ವಿದ್ಯಾರಣ್ಯಪುರ ಹೋಗುವ ಮಾರ್ಗದಲ್ಲಿ ಹೆಚ್‌ಎಂಟಿ (HMT Ground) ಗ್ರೌಂಡ್ ಬಳಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರದ ಶೂಟಿಂಗ್ ಸೆಟ್ ಹಾಕಲಾಗಿದೆ. ಭಾರೀ ಬಿಗ್ ಬಜೆಟ್ ಚಿತ್ರವಾದ ಟಾಕ್ಸಿಕ್ ಶೂಟಿಂಗ್‌ಗೆ ಸಿಕ್ಕಾಪಟ್ಟೆ ಹಣ ಖರ್ಚು ಮಾಡಿ ಅಲ್ಲಿ ಬೃಹತ್ ಸೆಟ್ ನಿರ್ಮಾಣ ಮಾಡಲಾಗಿದೆ. ಆದರೆ ಈಗ, ಸಿಟಿ ಬೇಸ್ಡ್ ಲಾಯರ್ ಒಬ್ಬರು ಟಾಕ್ಸಿಕ್ ಶೂಟಿಂಗ್ ಸೆಟ್ ಮಮ್ಮೋತ್ (mammoth set) ವಿರುದ್ಧ ಅದು ಫಾರೆಸ್ಟ್ ಏರಿಯಾ ಎಂದು ಕೇಸ್ ದಾಖಲಿಸಿದ್ದಾರೆ ಎನ್ನಲಾಗಿದೆ.
undefined
ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿಸಲು ಹೊರಟಿದ್ದಾರಾ ಸೃಜನ್-ಚಂದನ್ ಜೋಡಿ? ಇದೇನ್ ಗುರೂ..!
ಟಾಕ್ಸಿಕ್ ಚಿತ್ತತಂಡವು ಶೂಟಿಂಗ್‌ಗೆ ಎಂದು ಹಾಕಿರುವ ಸೆಟ್ ಇರುವ ಜಾಗವು ಫಾರೆಸ್ಟ್ ಏರಿಯಾ ಎಂದು ಮೀಸಲಾಗಿ ಇಟ್ಟಿರುವುದು. ಅಲ್ಲಿ ಅನಧಿಕೃತ ಸೆಟ್ ಹಾಕಲಾಗಿದೆ ಎಂದು ಸಿಟಿ ಲಾಯರ್ ಒಬ್ಬರು ಕೇಸ್ ದಾಖಲಿಸಿದ್ದಾರೆ. ಆ ಕೇಸ್ ಹಿಯರಿಂಗ್ ಆಗಸ್ಟ್ 19ಕ್ಕೆ (19 August 2024) ನಿಗದಿಯಾಗಿದೆ. ಈಗ ಅನಿವಾರ್ಯವಾಗಿ ಶೂಟಿಂಗ್ ನಿಲ್ಲಿಸಬೇಕಾಗಿದೆ. ಆದರೆ, ಸಿಕ್ಕ ಮಾಹಿತಿ ಪ್ರಕಾರ, ಸೆಟ್ ಹಾಕಿರುವ ಜಾಗ ಹೆಚ್‌ಎಂಟಿ ಗ್ರೌಂಡ್ ಆಗಿದ್ದರೂ ಅದು ಕೆನರಾ ಬ್ಯಾಂಕ್ ಸುಪರ್ದಿಯಲ್ಲಿದೆ.
ಹೌದು, ಹೆಚ್‌ಎಂಟಿ ಕಾರ್ಖಾನೆ ಈಗ ರನ್ನಿಂಗ್ ಇಲ್ಲ. ಆದರೆ ಲೋನ್ ತೆಗೆದುಕೊಂಡಿರುವ ಕಾರಣಕ್ಕೋ ಅಥವಾ ಇನ್ಯಾವುದೋ ರೂಲ್ಸ್ ಅಡಿ, ಈ ಹೆಚ್‌ಎಂಟಿ ಗ್ರೌಂಡ್ ಜಾಗ ಖಾಸಗಿ ಬ್ಯಾಂಕ್ ಒಂದರ ಅಧೀನದಲ್ಲಿದೆ ಎನ್ನಲಾಗಿದೆ. ವೆಂಕಟ್ ಕೆ ನಾರಾಯಣ್ ಅವರ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್ಸ್‌ಟರ್ ಮೈಂಡ್ ಕ್ರಿಯೇಶನ್ಸ್ (Venkat K Narayana's KVN Productions and Yash's Monster Mind Creations) ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಆ ಖಾಸಗಿ ಬ್ಯಾಂಕ್ ಟಾಕ್ಸಿಕ್ ಸೆಟ್ ನಿರ್ಮಾಣಕ್ಕೆ ಪರ್ಮಿಷನ್ ಕೊಟ್ಟಿದೆ ಎನ್ನಲಾಗಿದೆ.
ಎನೋ ಇದೆ, ಅಪರ್ಣಾ ಎದುರು ದರ್ಶನ್ ಅಂದು ಪುನೀತ್ ಬಗ್ಗೆ ಹೇಳಿದ್ದ ಮಾತು ಇಂದು ವೈರಲ್ ಆಗ್ತಿದ್ಯಲ್ಲ..!
ಆದರೆ, ಸೆಟ್ ನಿರ್ಮಾಣವಾದ ಜಾಗ ಫಾರೆಸ್ಟ್ ಏರಿಯಾಗೆ ಮೀಸಲಾಗಿದ್ದು ಎಂದು ಸಿಟಿ ಲಾಯರ್ ಈಗ ತಗಾದೆ ತೆಗೆದಿದ್ದು, ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಾರೆ. ಈಗ ಆಗಸ್ಟ್ 19ಕ್ಕೆ ಈ ಕುರಿತು ಹಿಯರಿಂಗ್ ನಡೆಯಲಿದ್ದು, ಅಲ್ಲಿಯವರೆಗೆ ಅಂದರೆ, ಮುಂದಿನ ಸೂಚನೆ ಬರುವವರೆಗೆ ಶೂಟಿಂಗ್ ಮುಂದೂಡಲಾಗಿದೆ. ಈ ಮೂಲಕ ಯಶ್ ನಿರ್ಮಾಣ ಹಾಗು ನಟನೆಯ ಟಾಕ್ಸಿಕ್ ಚಿತ್ರಕ್ಕೆ ಶುರುವಿನಲ್ಲೇ ವಿಘ್ನ ಎದುರಾಗಿದೆ.
ಆದರೆ, ಸಿಕ್ಕ ಮಾಹಿತಿ ಪ್ರಕಾರ, ಜನರಿಗೆ ಹಾಗು ಸಮಾಜಕ್ಕೆ ತಮ್ಮಿಂದ ಆದಷ್ಟು ಕೊಡುಗೆ ನೀಡಬೇಕೆಂಬ ಕಾರಣಕ್ಕೇ ಯಶ್ ಹಾಗೂ ಕೆವಿಎನ್ ಸಂಸ್ಥೆ ಈ ಪ್ಯಾನ್ ವರ್ಲ್ಡ್ ಸಿನಿಮಾ ಟಾಕ್ಸಿಕ್ ಸೆಟ್ ಅನ್ನು ಮುಖ್ಯವಾಗಿ ಕರ್ನಾಟಕದಲ್ಲಿ, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲೇ ನಿರ್ಮಾಣ ಮಾಡಿಸಿದೆ. ಈ ಮೂಲಕ ಶೂಟಿಂಗ್ ಸೆಟ್ ನಿರ್ಮಾಣ, ನಿರ್ವಹಣೆ ಹಾಗೂ ಜಾಗದ ಬಾಡಿಗೆ ಎಲ್ಲವೂ ಕನ್ನಡಿಗರಿಗೇ ಸಿಗಲಿ ಎಂಬ ಸದುದ್ದೇಶವಿದೆ ಎನ್ನಲಾಗಿದೆ. ಆದರೆ, ಕಾನೂನು ಪಾಲನೆಯಲ್ಲಿ ಲೋಪದೋಷವೇನಾದರೂ ಇತ್ತೇ ಎಂಬ ಸಂಗತಿ ಇನ್ನಷ್ಟೇ ಹೊರಬರಲಿದೆ.
ಸದ್ಯಕ್ಕೆ, ಕರ್ನಾಟಕ ಹೈ ಕೋರ್ಟ್ ಗ್ರೀನ್ ಸಿಗ್ನಲ್ ನೀಡುವವರೆಗೂ ಸಿನಿಮಾ ಟೀಮ್ ಶೂಟಿಂಗ್ ಅಥವಾ ಇನ್ಯಾವುದೇ ಕೆಲಸಕಾರ್ಯಗಳನ್ನು ಅಲ್ಲಿ ಮಾಡುವಂತಿಲ್ಲ ಎನ್ನಲಾಗಿದೆ. ಹೀಗಾಗಿ ಟಾಕ್ಸಿಕ್ ಚಿತ್ರದ ಶೂಟಿಂಗ್ ಆಗಸ್ಟ್ 19ರ ಹಿಯರಿಂಗ್ ಬಳಿಕ ನಡೆಯಲಿದೆ. ಅಂದು, ಅಂದರೆ ಆಗಸ್ಟ್ 19ರ ಬಳಿಕ ಕೋರ್ಟ್ ಏನು ಹೇಳಲಿದೆ ಎಂಬುದನ್ನು ಕಾದು ನೋಡಿ, ಬಳಿಕವಷ್ಟೇ ಶೂಟಿಂಗ್ ಮಾಡಬೇಕಿದೆ. ಹೀಗಾಗಿ ಸದ್ಯ ಯಶ್ ನಾಯಕತ್ವದ ಟಾಕ್ಸಿಕ್ ಶೂಟಿಂಗ್ ಮತ್ತೆ ಮುಂದಕ್ಕೆ ಹೋಗಿದೆ.
ಮಲಯಾಳಂ ನಿರ್ದೇಶಕಿ ಗೀತೂ ಮೋಹನ್‌ದಾಸ್ ನಿರ್ದೇಶನದಲ್ಲಿ ಯಶ್ ನಟನೆಯ ಮುಂಬರುವ ಟಾಕ್ಸಿಕ್ ಚಿತ್ರವು ಮೂಡಿ ಬರಲಿದೆ. ಕೆಜಿಎಫ್ ಬಳಿಕ ನಟ ಯಶ್ ಅವರು ಎರಡು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಒಂದು, ಗೀತೂ ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್, ಇನ್ನೊಂದು ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ. ರಣಬೀರ್ ಕಪೂರ್ ನಾಯಕತ್ವದ ರಾಮಾಯಣ ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತೆಯಾಗಿ, ರಣಬೀರ್ ಕಪೂರ್ ರಾಮನಾಗಲಿದ್ದು, ಯಶ್ ರಾವಣನ ಪಾತ್ರ ಪೋಷಿಸುತ್ತಿದ್ದಾರೆ ಎನ್ನಲಾಗಿದೆ.
ವಿಷ್ಣುವರ್ಧನ್‌ಗೆ ಪೋನ್‌ನಲ್ಲಿ ಡಾ ರಾಜ್ ಹೇಳಿದ್ದು ಕೇಳಿ ಎಸ್ ನಾರಾಯಣ್ ಕಕ್ಕಾಬಿಕ್ಕಿ ಯಾಕ್ ಆದ್ರು..?
ಒಟ್ಟಿನಲ್ಲಿ, ಕೆಜಿಎಫ್ ಮೂಲಕ ಜಗತ್ಪ್ರಸಿದ್ಧಿ ಪಡೆದಿರುವ ನಟ ಯಶ್ ಅವರ ಮುಂಬರುವ ಚಿತ್ರವಾದ ಟಾಕ್ಸಿಕ್‌ಗೆ ಶುರುವಿನಲ್ಲೇ ಭಾರೀ ಸಮಸ್ಯೆ ಎದುರಾಗಿದೆ. ಈ ಎಲ್ಲ ಅಡೆತಡೆಗಳನ್ನು ದಾಟಿ ಟಾಕ್ಸಿಕ್ ಸಿನಿಮಾ ತಂಡ ಶೂಟಿಂಗ್ ಮುಗಿಸಿ ಸಿನಿಮಾವನ್ನು ತೆರೆಗೆ ತರಲು ಹೆಚ್ಚಿನ ಸಮಯ ಬೇಕಾಗಬಹುದೇ? ಗೊತ್ತಿಲ್ಲ, ಅದನ್ನು ಟಾಕ್ಸಿಕ್ ಚಿತ್ರತಂಡವೇ ಹೇಳಬೇಕು ಅಷ್ಟೇ!. ಆದರೆ, ಯಶ್ ಮುಂದಿನ ಚಿತ್ರವನ್ನು ತೆರೆಯ ಮೇಲೆ ನೋಡಲು ರಾಕಿಂಗ್ ಸ್ಟಾರ್ ಅಭಿಮಾನಿಗಳು ತಮ್ಮ ತುದಿಗಾಲಿನ ತುಟ್ಟತುದಿಯಲ್ಲಿ ನಿಂತು ಕಾಯುತ್ತಿದ್ದಾರೆ.