
ದುನಿಯಾ ಕಿಶೋರ್, ಅವಿನಾಶ್, ಪ್ರಸಾದ್ ವಸಿಷ್ಠ ನಟಿಸಿರುವ ‘ಕಬಂಧ’ ಸಿನಿಮಾ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಶ್ರೇಯಸ್ ಬಿ ರಾವ್, ರಘೋತ್ತಮ ಎನ್‌ಎಸ್ ಸಂಗೀತ, ಕೆ ಕಲ್ಯಾಣ್ ಸಾಹಿತ್ಯ, ವಾಸುಕಿ ವೈಭವ್ ಧ್ವನಿ ಇದೆ. ನಿರ್ದೇಶಕ ಸತ್ಯನಾಥ್, ‘ಇದೊಂದು ಹಾರರ್ ಚಿತ್ರ. ಹಾಗಾಗಿ, ಸ್ನೇಹದ ಸುತ್ತ ಮಾಂಟೇಜ್ ಹಾಡು ಮಾಡಿಕೊಂಡಿದ್ದೇವೆ. ಹಾಡು ಕೇಳಿದವರೆಲ್ಲ ಖುಷಿಪಟ್ಟಿದ್ದಾರೆ. ಈ ಸಿನಿಮಾದಲ್ಲಿ ವ್ಯವಸಾಯದ ಸುತ್ತ ಇರುವ ಸಮಸ್ಯೆ ಹೇಳುತ್ತಿದ್ದೇವೆ’ ಎಂದರು.
ದುನಿಯಾ ಕಿಶೋರ್, ನಾನು ಮೂಲತಃ ರೈತ. ಇದೇ ಮೊದಲ ಬಾರಿಗೆ ಈ ಚಿತ್ರದಲ್ಲೂ ರೈತನಾಗಿ ಹನುಮ ಹೆಸರಿನ ಪಾತ್ರ ಮಾಡಿದ್ದೇನೆ. ದೆವ್ವವನ್ನು ಬಳಸಿಕೊಂಡು ಒಂದು ಸಮಸ್ಯೆಯನ್ನು ಹೇಳುವ ಪ್ರಯತ್ನ ಇದು. ಸಾವಯವ ಕೃಷಿಯ ಬಗ್ಗೆ ಹೇಳಿದ್ದೇವೆ. ಸಿನಿಮಾ ಒಂದು ಪ್ರಭಾವಶಾಲಿ ಮಾಧ್ಯಮ. ಇದನ್ನು ಉಳಿಸಿಕೊಳ್ಳದಿದ್ದರೆ, ನಾವು ನಮ್ಮ ಅಭಿವ್ಯಕ್ತಿಯ ಮಾಧ್ಯಮವನ್ನು ಕಳೆದುಕೊಳ್ಳುತ್ತೇವೆ. ದೆವ್ವವನ್ನು ಬಳಸಿಕೊಂಡು ಒಂದು ಸಮಸ್ಯೆಯನ್ನು ಹೇಳುವ ಪ್ರಯತ್ನ ಇದು. ಸ್ಟಾರ್‍ಗಳಿಲ್ಲದ ಸಿನಿಮಾದಲ್ಲಿ ದೆವ್ವ ಅಥವಾ ದೇವರನ್ನು ಹಿಡಿದುಕೊಳ್ಳಬೇಕು. ಅವರೇ ನಮಗೆ ದೊಡ್ಡ ಸ್ಟಾರ್‌ಗಳು.
ದೆವ್ವ ಅಥವಾ ದೇವರ ಬಗ್ಗೆ ನಂಬಿಕೆ ಇದೆಯೋ, ಇಲ್ಲವೋ ಬೇರೆ ಮಾತು. ಅದನ್ನು ಸಲಕರೆಯಾಗಿ ಬಳಸಿಕೊಂಡು ಒಂದು ಕಥೆ ಹೇಳುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಅದರ ಮೂಲಕ ಅನುಭವಗಳನ್ನು ಮತ್ತು ಸಂವಹನ ಹಂಚಿಕೊಳ್ಳುವುದಕ್ಕೆ ಸಾಧ್ಯವಾದರೆ ಯಾಕೆ ಮಾಡಬಾರದು ಎಂದರು. ನಾವು ಯಾವಾಗಲೂ ಸೇಫ್ ಆಗಿದ್ದೇವೆ ಅಂದುಕೊಂಡಿರುತ್ತೇವೆ. ಒಂದು ರಸ್ತೆಗೆ ಬೆಂಕಿ ಅಂಟಿಕೊಂಡರೆ ನಮ್ಮ ಮನೆಗೆ ಏನೂ ಆಗುವುದಿಲ್ಲ ಎಂಬ ಭಾವನೆಯಲ್ಲಿರುತ್ತೇವೆ. ಅದು ನಮ್ಮ ಮನೆಯವರೆಗೂ ಬರಬಹುದು ಎಂದು ಯೋಚಿಸುವುದಿಲ್ಲ. ಅಲ್ಲಿಯವರೆಗೂ ಅಜಾಗರೂಕರಾಗಿಯೇ ಇರುತ್ತೇವೆ. ಆ ನಿಟ್ಟಿನಲ್ಲಿ ಜಾಗರೂಕತೆಯನ್ನು ಮೂಡಿಸುವ ಪ್ರಯತ್ನ ಈ ಸಿನಿಮಾ.
ಮುಡಾ ಹಗರಣದಿಂದ ಸಿಎಂ ಪಾರಾಗಲು ದೇಸಾಯಿ ಆಯೋಗ ರಚನೆ: ಎಚ್.ಡಿ.ಕುಮಾರಸ್ವಾಮಿ
ಈ ಕಥೆ ಒಪ್ಪುವುದಕ್ಕೆ ಕಾರಣ, ನಾನು ನಂಬಿರುವ ವಿಷಯವನ್ನು ಈ ಚಿತ್ರದಲ್ಲಿ ಹೇಳಬಹುದು ಎಂಬ ಕಾರಣಕ್ಕಾಗಿ. ಜೊತೆಗೆ ಇದು ಮಾತನಾಡಬೇಕಾದ ವಿಷಯ. ಮೂಲಭೂತ ವಿಷಯ ಆಹಾರ. ಆ ಆಹಾರದ ಬಗ್ಗೆ ನಾವು ಹೆಚ್ಚು ಗಮನಹರಿಸುತ್ತಿಲ್ಲ. ಎಂದರು ಕಿಶೋರ್. ನಿರ್ಮಾಣದ ಜತೆಗೆ ನಾಯಕನಾಗಿ ನಟಿಸಿರುವ ಪ್ರಸಾದ್ ವಸಿಷ್ಠ, ‘ಈ ಚಿತ್ರದಲ್ಲಿ ನಚಿಕೇತ ಎಂಬ ಜಮೀನ್ದಾರಿ ಕುಟುಂಬದವನ ಪಾತ್ರ ನನ್ನದು. ನಿಶ್ಯಕ್ತನಾದವನು ಶಕ್ತನಾಗುವುದು ಹೇಗೆ ಎನ್ನುವುದು ನನ್ನ ಪಾತ್ರದ ತಿರುಳು’ ಎಂದರು. ಪ್ರಿಯಾಂಕ ಮಳಲಿ, ಯೋಗರಾಜ್ ಭಟ್, ಪ್ರಶಾಂತ್ ಸಿದ್ದಿ, ಛಾಯಾಶ್ರೀ, ಶ್ರುತಿ ನಾಯಕ್ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.