ನೆಚ್ಚಿನ ನಟ ಮೇಲೆ ಮುನಿಸಿಕೊಂಡ ಅಭಿಮಾನಿಗಳು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್......
ಕನ್ನಡದ ನಟ ದರ್ಶನ್ ತೂಗುದೀಪ ಕೊಲೆ ಆರೋಪದ ಮೇಲೆ ಪರಪ್ಪನ ಅಗ್ರಹಾರ ಸೇರಿದ್ದಾರೆ. ಸುಮಾರು ಒಂದು ತಿಂಗಳಿನಲ್ಲಿ ಪತ್ನಿ ವಿಜಯಲಕ್ಷ್ಮಿ ಮತ್ತು ಕುಟುಂಬಸ್ಥರು ನಟನನ್ನು ಹೊರ ತರಲು ಹರ ಸಾಹಸ ಮಾಡುತ್ತಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ. ಸುಮಾರು 17 ಮಂದಿ ಜೈಲಿನಲ್ಲಿದ್ದಾರೆ. ಅದರಲ್ಲಿ ಏ4 ಆರೋಪಿ ಮತ್ತು ಏ7 ಆರೋಪಿ ಕುಟುಂಬಸ್ಥರನ್ನು ಕಳೆದುಕೊಂಡರು. ಈ ಸಮಯದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ದರ್ಶನ್‌ರನ್ನು ಭೇಟಿ ಮಾಡಲು ಆಗಮಿಸಿದ್ದರು.
ದರ್ಶನ್ ನನಗೆ ಫೋನ್ ಮಾಡಿ ಮೈಸೂರಿನ ಫಾರಂ ಹೌಸ್‌ಗೆ ಕರೆಸಿಕೊಂಡರು; ಹಿಂದೆ ನಡೆದ ಘಟನೆ ಬಿಚ್ಚಿಟ್ಟ ರಾಜವರ್ಧನ್
ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ದರ್ಶನ್ ಬ್ಯಾನರ್ಗೆ ಚಪ್ಪಲಿ ಪೂಜೆ ಮಾಡಿದ್ದಾರೆ ಹಾಗೂ ಹಂದಿ ಸಗಣಿ ಎಸೆದಿದ್ದಾರೆ. ತೂಗುದೀಪ ಡೈನಾಸ್ಟಿ ಎನ್ನು ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದ್ದು. 'ರೇಣುಕಸ್ವಾಮಿ ಅವರನ್ನು ಕೊಲೆ ಮಾಡಿರುವುದರಿಂದ ಮನ ನೊಂದ ದರ್ಶನ್ ಅಭಿಮಾನಿಗಳು ನೆನ್ನೆ ದರ್ಶನ್ ಬ್ಯಾನರ್ಗೆ ಚಪ್ಪಲಿ ಪೂಜೆ ಮಾಡಿದ್ದಾರೆ, ಹಾಗು ಹಂದಿ ಸಗಣಿ ಅನ್ನು ಮುಕಕ್ಕೆ ಒಡೆದು 'ಈ ಸೂಳೆಗ್ ಹುಟ್ಟಿದ್ ಸುಳೆ ಮಗನನ್ನು ನೇಣಿಗೆ ಹಾಕಿ' ಎಂದು ಘೋಷಣೆ ಕೂಗಿದ್ದಾರೆ' ಎಂದು ಬರೆದುಕೊಂಡಿದ್ದಾರೆ.
ನಡೆದಿರುವ ಘಟನೆಯಿಂದ ಅನೇಕರಿಗೆ ಬೇಸರ ಆಗಿರುವುದು ಹೌದು ಆದರೆ ನೆಚ್ಚಿನ ನಟನನ್ನು ಬಿಟ್ಟುಕೊಡಲು ಯಾರಿಗೂ ಮನಸ್ಸಿಲ್ಲ. ಅಲ್ಲದೆ ದರ್ಶನ್ ಜೈಲಿನಿಂದ ಹೊರ ಬರುವ ದಿನ ದೊಡ್ಡ ಆಚರಣೆ ಮಾಡಬೇಕು ಎಂದು ಅಭಿಮಾನಿಗಳು ಪ್ಲ್ಯಾನ್ ಮಾಡುತ್ತಿದ್ದಾರೆ. ಸುಮಾರು 50 ಸಾವಿರ ಜನರು ಸೇರುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇನ್ನು ಪತಿ ಸಿಲುಕಿಕೊಂಡಿರುವ ತೊಂದರೆಯಿಂದ ದೂರವಾಗಲೂ ಪತ್ನಿ ವಿಜಯಲಕ್ಷ್ಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಜನಪ್ರಿಯ ವಕೀಲರನ್ನು ಸಂಪರ್ಕ ಮಾಡುತ್ತಾ ದರ್ಶನ್‌ನ ಹೊರ ತರುವ ಪ್ರಯತ್ನದಲ್ಲಿದ್ದಾರೆ. ಇಷ್ಟು ದಿನ ದರ್ಶನ್ ದೂರವಿಟ್ಟಿದ್ದ ತಾಯಿ, ಸಹೋದರ ದಿನಕರ್ ಮತ್ತು ಕುಟುಂಬಸ್ಥರು ಸಹಾಯಕ್ಕೆ ಮುಂದಾಗಿದ್ದಾರೆ.
ರೇಣುಕಸ್ವಾಮಿ ಅವರನ್ನು ಕೊಲೆ ಮಾಡಿರುವುದರಿಂದ
ಮನ ನೊಂದ ದರ್ಶನ್ ಅಭಿಮಾನಿಗಳು ನೆನ್ನೆ ದರ್ಶನ್ ಬ್ಯಾನರ್ಗೆ ಚಪ್ಪಲಿ ಪೂಜೆ ಮಾಡಿದ್ದಾರೆ, ಹಾಗು ಹಂದಿ ಸಗಣಿ ಅನ್ನು ಮುಕಕ್ಕೆ ಒಡೆದು " ಈ ಸೂಳೆಗ್ ಹುಟ್ಟಿದ್ ಸುಳೆ ಮಗನನ್ನು ನೇಣಿಗೆ ಹಾಕಿ" ಎಂದು ಘೋಷಣೆ ಕೂಗಿದ್ದಾರೆ. pic.twitter.com/9uEZ1qmD4x