ನಟ ಯಶ್ ಕಡೆಯಿಂದ ಬಿಗ್‌ ಸಪ್ರೈಸ್, ಡಿ.8ಕ್ಕೆ 19ನೇ ಸಿನಿಮಾದ ಟೈಟಲ್‌ ಅನೌನ್ಸ್

By Gowthami K  |  First Published Dec 4, 2023, 11:17 AM IST

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮುಂದಿನ ಚಿತ್ರದ ಬಗ್ಗೆ ಬಿಗ್‌ಅಪ್ಢೇಟ್‌ ಸಿಕ್ಕಿದ್ದು,  ಇದೇ ಡಿಸೆಂಬರ್‌ 8ರಂದು ಬೆಳಗ್ಗೆ 9.55ಕ್ಕೆ ಮುಂದಿನ ಸಿನೆಮಾದ ಟೈಟಲ್‌ ಅನೌನ್ಸ್ ಆಗಲಿದೆ.


ಕಳೆದ ಎರಡು ವರ್ಷದ ಬಳಿಕ ಕೊನೆಗೂ ರಾಕಿಂಗ್ ಸ್ಟಾರ್ ಯಶ್ ಸಿನಿಪ್ರಿಯರಿಗೆ ಸಿಹಿ ಸುದ್ದಿ ನೀಡಲು ತಯಾರಾಗಿದ್ದಾರೆ. ತಮ್ಮ  19ನೇ ಸಿನಿಮಾದ ಬಗ್ಗೆ ಅಪ್ಟೇಡ್‌ ನೀಡುತ್ತಿದ್ದು, ಇದೇ ಡಿಸೆಂಬರ್‌ 8ರಂದು ಬೆಳಗ್ಗೆ 9.55ಕ್ಕೆ ಮುಂದಿನ ಸಿನೆಮಾದ ಟೈಟಲ್‌ ಅನೌನ್ಸ್ ಮಾಡಲಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಹೊಸ ಸಿನೆಮಾದ  ಟೈಟಲ್‌ ಬಗ್ಗೆ ಕೆವಿಎನ್‌ ಪ್ರೊಡಕ್ಷನ್‌ ನೋಡುತ್ತಿರಿ ಎಂದಿದ್ದಾರೆ.

ಡಿಸೆಂಬರ್‌ 3ರಂದು ಲೋಡಿಂಗ್‌ ಎಂಬ ರೀತಿಯಲ್ಲಿ ತಮ್ಮ ಪ್ರೊಫೈಲ್‌ ಫೋಟೋ ಚೇಂಜ್‌ ಮಾಡಿದ್ದ ನಟ ಯಶ್  ಡಿಸೆಂಬರ್ 4ರಂದು ಟೈಟಲ್‌ ಏನಿರಬಹುದು ಎಂಬ ರೀತಿಯಲ್ಲಿ ಪ್ರಶ್ನಾರ್ಥಕ ಚಿಹ್ನೆ ಇರುವ ಪ್ರೊಫೈಲ್‌ ಫೋಟೋ ಹಾಕಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.

Tap to resize

Latest Videos

ಬಾಲಿವುಡ್ ನಟಿಯ ಲಕ್ಷುರಿ ಬದುಕು 13 ಲಕ್ಷದ ಪರ್ಸ್, 100 ಕೋಟಿಯ ಮನೆ, 33 ಕೋಟಿಯ ಸ್ವಿಟ್ಜರ್ಲೆಂಡ್ ನಿವಾಸ!

ಎರಡು ವರ್ಷಗಳಿಂದ ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಲೇ ಇತ್ತು. ಮೊದಲಿಗೆ ಯಶ್‌19 ಚಿತ್ರವನ್ನು ನರ್ತನ್ ನಿರ್ದೇಶನ ಮಾಡ್ತಾರೆ ಎನ್ನಲಾಗಿತ್ತು. ಬಳಿಕ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಹೆಸರು ಚಾಲ್ತಿಗೆ ಬಂತು. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಎನ್ನಲಾಗಿತ್ತು. ಅದರಂತೆ ಇದೀಗ  ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯಿಂದಲೇ 19ನೇ ಸಿನೆಮಾ ತೆರೆಗೆ ಬರುತ್ತಿದೆ ಎಂಬುದು ದೃಢವಾಗಿದೆ. 

ಕೆಜಿಎಫ್‌ ಸರಣಿ ಸಿನೆಮಾ ಬಳಿಕ ಯಶ್‌ ಯಾವ ರೀತಿಯ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಕುತೂಹಲಕ್ಕೆ ಡಿಸೆಂಬರ್‌ 8ಕ್ಕೆ ಅಲ್ಪ ಮಟ್ಟದಲ್ಲಿ ಉತ್ತರ ಸಿಗಬಹುದು. ಇನ್ನು ಯಶ್‌ 19 ಚಿತ್ರ 1960ರ ದಶಕದ ಗ್ಯಾಂಗ್‌ಸ್ಟರ್‌ ಶೈಲಿನ ಸಿನಿಮಾ ಇದಾಗಿರಲಿದೆ. ಈ ಚಿತ್ರದ ಹೆಚ್ಚಿನ ಶೂಟಿಂಗ್‌ ಗೋವಾದಲ್ಲಿಯೇ ನಡೆಯಲಿದೆ ಎಂದೆಲ್ಲ ಹಲವು ದಿನಗಳಿಂದ ಗಾಸಿಪ್ ಇದೆ.

ಪ್ರಸಿದ್ದ ನಟನ ಐಷಾರಾಮಿ ಐಕಾನಿಕ್ ಬಂಗಲೆ ಮಾರಾಟ, ಬರೋಬ್ಬರಿ 500 ಕೋಟಿ ವೆಚ್ಚದಲ್ಲಿ ವಸತಿ ಸ್ಥಳವಾಗಿ ಬದಲಾವಣೆ

ಈ ನಡುವೆ ಯಶ್ ಬಾಲಿವುಡ್‌ಗೆ ಹೋಗ್ತಾರೆ. 'ರಾಮಾಯಣ' ಚಿತ್ರದಲ್ಲಿ ರಾವಣನಾಗಿ ನಟಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಯಶ್ ಮಾತ್ರ ಈ ಸುದ್ದಿ  ಬಗ್ಗೆ ಮೌನವಾಗಿಯೇ ಇದ್ದಾರೆ.  ‘ಯಶ್ 19’ ಪ್ರಾಜೆಕ್ಟ್ ಜೊತೆಗೆ ಕೆಜಿಎಫ್ 3 ಕೂಡ ಯಶ್ ಕೈಯಲ್ಲಿದೆ ಎನ್ನಲಾಗಿದೆ. 

click me!