
Yash Movie Toxic Karnataka Exclusive-ಯಶ್ ಟಾಕ್ಸಿಕ್ ಸಿನಿಮಾದ ಕರ್ನಾಟಕ ಎಕ್ಸ್‌ಕ್ಲೂಸಿವ್ ನ್ಯೂಸ್:
ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಬಿಗ್ ಧಮಾಕ ನಾಳೆ ಬೆಳ್ಳಂಬೆಳಿಗ್ಗೆ ಶುರುವಾಗಲಿದೆ. ಯಶ್ ನಟನೆ-ನಿರ್ಮಾಣ, ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಇಡೀ ವಿಶ್ವದಾದ್ಯಂತ ನಾಳೆ, ಅಂದರೆ 26 ಆಗಸ್ಟ್ 2026ರಂದು ಬಿಡುಗಡೆ ಆಗಲಿದೆ. ಯಶ್ ಸ್ವರಾಜ್ಯ ಕರ್ನಾಟಕದಲ್ಲೂ ನಾಳೆ ಬೆಳಿಗ್ಗೆ ಶುರುವಾಗಲಿದೆ ಟಾಕ್ಸಿಕ್ ಪ್ರದರ್ಶನ. ಬೆಳಿಗ್ಗೆ ಅಂದರೆ ಎಷ್ಟು ಗಂಟೆಗೆ ಗೊತ್ತಾ? ಈ ಸ್ಟೋರಿ ನೋಡಿ..
ಯಶ್ ಅಭಿನಯದ ವಿಶ್ವಮಟ್ಟದ ಟಾಕ್ಸಿಕ್ ಸಿನಿಮಾ ನಾಳೆ ಬಿಡುಗಡೆ ಆಗಲಿರುವುದು ಗೊತ್ತೇ ಇದೆ. ಬೆಂಗಳೂರಿನಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಪ್ರದರ್ಶನ ಆರಂಭವಾಗಲಿರುವುದು ವಿಶೇಷ. ಇಡೀ ಕರ್ನಾಟಕದಾದ್ಯಂತ 350 ಸಿಂಗಲ್ ಸ್ಕ್ರೀನ್ ಥಿಯೇಟಗಳಲ್ಲಿ ಯಶ್ ಚಿತ್ರ ಟಾಕ್ಸಿಕ್ ಪ್ರದರ್ಶನ ಆಗಲಿದೆ. ಹಾಗೂ, ಕರ್ನಾಟಕದ 280 ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲಿ ಸಹ ಟಾಕ್ಸಿಕ್ ಪ್ರದರ್ಶನ ಆಗಲಿದೆ.
ಕರ್ನಾಟಕದಲ್ಲಿ ಫಸ್ಟ್ ಡೇ ಮುಂಗಡ ಟಿಕೆಟ್ ಮೂಲಕ ಪಕ್ಕಾ ಲೆಕ್ಕಾಚಾರದ ಮೂಲಕ 25 ರಿಂದ 30 ಕೋಟಿ ಕಲೆಕ್ಷನ್ ಮಾಡಿದೆ ಯಶ್ ನಟನೆಯ ಟಾಕ್ಸಿಕ್ ಸಿನಿಮಾ. ಏಕೆಂದರೆ, ಫಸ್ಟ್ ಡೇ ಟಿಕೆಟ್‌ಗಳು ಕರ್ನಾಟಕದ ಎಲ್ಲಾ ಚಿತ್ರಮಂದಿರಗಳಲ್ಲಿ ಸೋಲ್ಡ್ ಔಟ್ ಆಗಿವೆ. ಈ ಕಾರಣಕ್ಕೆ ಈಗಾಗಲೇ ಫಸ್ಟ್ ಡೇ ಗಳಿಕೆಯ ಲೆಕ್ಕಾಚಾರ ಸಿಕ್ಕಿಬಿಟ್ಟಿದೆ. ಕರ್ನಾಕಟದಲ್ಲಿ 'ಸಿಂಗಲ್ ಸ್ಕ್ರೀನ್'ಗಳಲ್ಲಿ 225 ರೂಪಾಯಿ ಆವರೇಜ್ ರೇಟ್ ಇದೆ. ಇನ್ನು, 'ಮಲ್ಟಿಪ್ಲೆಕ್ಸ್'ನಲ್ಲಿ 500 ರೂ ಆವರೇಜ್ ರೇಟ್ ಇದೆ.
ಪ್ರತಿ ಥಿಯೇಟರ್‌ನಲ್ಲಿ 6 ಶೋ ನಡೆಯಲಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ದಿನಕ್ಕೆ ಆವರೇಜ್ 30 ಶೋಗಳು ಇವೆ. ಇದನ್ನೆಲ್ಲಾ ಲೆಕ್ಕ ಹಾಕಿದ್ರೆ, ಕರ್ನಾಟಕದಲ್ಲಿ ಒಂದರಲ್ಲೇ ಮೊದಲ ದಿನ 25 ರಿಂದ 30 ಕೋಟಿ ಕಲೆಕ್ಷನ್ ಆಗಿದೆ. ಪಕ್ಕಾ ಲೆಕ್ಕಾಚಾರವನ್ನು ಸಿನಿಮಾ ನಿರ್ಮಾಪಕರು ಬಳಿಕ ನೀಡಲಿದ್ದು, ಆ ಬಳಿಕ ಅಪ್‌ಡೇಟ್ ಗಳಿಕೆ ಜಗಜ್ಜಾಹೀರಾಗಲಿದೆ.
ಹೌದು, ಬೆಂಗಳೂರಿನ ಗಾಂಧಿನಗರದಲ್ಲಿರೋ ನಾಲ್ಕು ಚಿತ್ರ ಮಂದಿರಗಳಾದ ಸಂತೋಷ್, ನರ್ತಕಿ, ತ್ರಿವೇಣಿ ಹಾಗೂ ಅನುಪಮಗಳಲ್ಲಿ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ರಿಲೀಸ್ ಆಗಲಿದೆ. ಇದು ಯಶ್ ಸಿನಿಮಾದ ದೊಡ್ಡ ಹೆಗ್ಗಳಿಕೆ ಮಾತ್ರವಲ್ಲ, ಕನ್ನಡದ ಯಾವುದೇ ಸ್ಟಾರ್ ನಾಯಕರ ಸಿನಿಮಾ ಕೂಡ ಈ ಮೊದಲು ಮೆಜೆಸ್ಟಿಕ್ ಬಳಿ, ಅಂದರೆ ಗಾಂಧಿನಗರದ 4 ಥಿಯೇಟರ್‌ಗಳಲ್ಲಿ ಆಗಿರುವ ದಾಖಲೆ ಇಲ್ಲವೇ ಇಲ್ಲ. ಪ್ಯಾನ್ ವರ್ಲ್ಡ್ ಪಟ್ಟ ಗಿಟ್ಟಿಸಿಕೊಂಡಿರುವ ಕನ್ನಡ ನಟ ಕೈಹಾಕಿದಲ್ಲೆಲ್ಲಾ ಹೊಸಹೊಸ ದಾಖಲೆಯೇ ಸೃಷ್ಟಿಯಾಗುತ್ತಿದೆ.
ಒಟ್ಟಿನಲ್ಲಿ, 'ಕೆಜಿಎಫ್' 1-2 ಸರಣಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗವನ್ನು ಪ್ಯಾನ್ ಇಂಡಿಯಾ ಲೆವಲ್‌ಗೆ ಕೊಂಡೊಯ್ದಿದ್ದ ನಟ ಯಶ್ ಅವರು, ಟಾಕ್ಸಿಕ್ ಮೂಲಕ ಇದೀಗ ಸ್ಯಾಂಡಲ್‌ವುಡ್‌ಅನ್ನು ಜಾಗತಿಕ ಹಂತಕ್ಕೆ ಅಂದರೆ ಪ್ಯಾನ್ ವರ್ಲ್ಡ್ ಹಂತಕ್ಕೆ ಕೊಂಡೊಯ್ದಿದ್ದಾರೆ. ಜಾಗತಿಕವಾಗಿ 12000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಯಶ್ ನಟನೆಯ ಟಾಕ್ಸಿಕ್ ಬಿಡುಗಡೆ ಆಗಲಿದೆ.
* ಯಶ್ ನಟನೆಯ Toxic ಸಿನಿಮಾ ಕರ್ನಾಟಕದಲ್ಲಿ ರಾಜ್ಯಾದ್ಯಂತ 500ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಲಿದೆ.
* ವಿಶ್ವದಾದ್ಯಂತ ಈ ಚಿತ್ರವು ಒಟ್ಟು 12,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ.
* ಭಾರತದಾದ್ಯಂತ ಸರಿಸುಮಾರು 5,500ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಪ್ರದರ್ಶನಗೊಳ್ಳಲಿದೆ.
* ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ (KVN Productions), ಹಾಗೂ ಯಶ್ 'ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ (Monster Mind Creations) ಮೂಲಕ ಅತಿ ಹೆಚ್ಚು ಸ್ಕ್ರೀನ್‌ಗಳು ಹಾಗೂ ವಿಶೇಷ ಮುಂಜಾನೆ ಶೋಗಳನ್ನು ವ್ಯವಸ್ಥೆ ಮಾಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.