
ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Rocking Star Yash) ಅವರು ಕರುನಾಡಿನ ಮೆರು ನಟ ಡಾ ರಾಜ್‌ಕುಮಾರ್ ಬಗ್ಗೆ ಮಾತನ್ನಾಡಿದ್ದಾರೆ. ಈಗ ನಟ ಯಶ್ ಅವರು ವಿಶ್ವವಿಖ್ಯಾತ ನಟ. ಅಂಥವರು ಡಾ ರಾಜ್‌ಕುಮಾರ್ ಬಗ್ಗೆ ಅದೇನು ಮಾತನ್ನಾಡಿರಬಹುದು ಎಂಬ ಕುತೂಹಲ ಎಲ್ಲರಲ್ಲಿ ಮೂಡುವುದು ಸಹಜ. ಹಾಗಿದ್ದರೆ ಅದೇನು ಅಂತ ನೋಡಿ..
'ನಾನು ಯಾವಾಗ್ಲೂ ಹೇಳ್ತಾ ಇರ್ತೀನಿ, ನಮ್ಮನೆಲ್ಲಿ ನಮ್ಮಮ್ಮ ಡಾ ರಾಜ್‌ಕುಮಾರ್‌ಗೆ ಅವರ ದೊಡ್ಡ ಫ್ಯಾನ್. ನಾನೇನೋ ತುಂಬಾ ಕಷ್ಟಪಟ್ಟು ಬಂದಿದೀನಿ, ನಾನೇನೋ ಗ್ರೇಟ್ ಎಂಬ ಫೀಲಲ್ಲಿ ನಾನಿರ್ತೀನಿ.. ಒಂದ್ ವಿಷ್ಯ ಹೇಳ್ಬೇಕು ಅಂದ್ರೆ, ಮೊಗ್ಗಿನ ಮನಸ್ಸು ಅನ್ನೋ ಸಿನಿಮಾ ಶೂಟಿಂಗ್‌ನಲ್ಲಿ 'ಯಾಣ' ಅನ್ನೋ ಜಾಗಕ್ಕೆ ನಾಲ್ಕು ಕಿಲೋ ಮೀಟರ್ ದೂರ ನಡ್ಕೊಂಡು ಹೋಗಿದ್ವಿ.. ಮನೆಗೆ ಬಂದು ನಾನು ನನ್ನ ಅಮ್ಮನಿಗೆ ಹೇಳ್ತಾ ಇದ್ದೆ, ನಾನು 4 ಕೀಮೀ ನಡ್ಕೊಂಡು ಹೋಗಿ ಶೂಟಿಂಗ್ ಮುಗಿಸಿಕೊಂಡು ಬಂದಿದೀನಿ ಅಂತ..
ಶಿವರಾಜ್‌ಕುಮಾರ್‌ಗೆ 'ಬಾರಿಸಿ' ಎಂದಿದ್ದ ಡಾ ರಾಜ್‌ಕುಮಾರ್.. ಸಿಹಿ ಕಹಿ ಚಂದ್ರು ಹೊಡೆದ್ರು, ಆದ್ರೆ..
ಅದಕ್ಕೆ ನಮ್ಮ ಅಮ್ಮ ಹೇಳಿದ್ರು, 'ಡಾ ರಾಜ್‌ಕುಮಾರ್ ಅವರು 'ಒಂದು ಮುತ್ತಿನ ಕಥೆ' ಸಿನಿಮಾ ಶೂಟಿಂಗ್ ಟೈಮಲ್ಲಿ 14 ಕೀಮೀ ನಡ್ಕೊಂಡು ಹೋಗಿದ್ರಂತೆ. ಆದ್ರೆ ಈಗ ಅಲ್ಲಿ ರೋಡ್ ಮಾಡಿ ಬರೀ ನಾಲ್ಕೇ ಕಿಲೋ ಮೀಟರ್ ನಡ್ಕೊಂಡು ಹೋಗೋ ತರ ಮಾಡ್ಬಿಟ್ಟಿದ್ದಾರೆ. ಅದೇ ನಿಮ್ಗೆ ಕಷ್ಟ ನೋಡು..' ಅಂದ್ರು. ನಂಗೆ ಆ ಕಷ್ಟ ಗೊತ್ತಿರ್ಲಿಲ್ಲ, ಆದ್ರೆ 4 ಕೀಮೀ ನಡೆದುಕೊಂಡು ಹೋಗೋ ಕಷ್ಟ ಅಷ್ಟೇ ಗೊತ್ತಾಯ್ತು' ಎಂದಿದ್ದಾರೆ ನಟ ಯಶ್. ನಟ ಯಶ್ ಆಡಿರುವ ಈ ಮಾತು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬಹುತೇಕ ಎಲ್ಲರಿಗೂ ಗೊತ್ತಿರುವಂತೆ, ನಟ ಯಶ್ ಅವರು ಜಂಭದ ಹುಡುಗಿ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟರು. ಆದರೆ, ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಎಲ್ಲರಿಗೂ ಪರಿಚಯ ಆದ್ರು.. ಆ ಚಿತ್ರದ ಒಂದು ಹಾಡು ಹಾಗೂ ಕ್ಲೈಮ್ಯಾಕ್ಸ್ ಸೀನ್ ಮೂಲಕವೇ ಯಶ್ ಅವರು ಸ್ಯಾಂಡಲ್‌ವುಡ್ ಹಾಗೂ ಕರ್ನಾಟಕದ ತುಂಬಾ ಪರಿಚಿತರಾದ್ರು. ಈಗ ಯಶ್ ಯಾರು ಅನ್ನೋದು ಇಡೀ ಜಗತ್ತಿಗೆ ಗೊತ್ತು. ಇಂದು ಎಂಥೆಂಥದೋ ಕಷ್ಟವನ್ನು ಎದುರಿಸಿ ಮೇಲೆ ಬಂದಿದ್ದಾರೆ ಯಶ್. ಆದರೆ, ಅಂದು ಕೇವಲ ನಾಲ್ಕು ಕೀಮೀ ನಡೆದಿದ್ದೇ ಗ್ರೇಟ್ ಎನ್ನಿಸಿಬಿಟ್ಟಿತ್ತಾ ಯಶ್ ಅವ್ರಿಗೆ? ಉತ್ತರ ನಿಮಗೇ ಗೊತ್ತಿದೆ..
ಅಶ್ವಿನ ದೇವತೆಗಳು 'ಅಸ್ತು' ಅಂದ್ಬಿಟ್ರಾ?.. ಸೌಂದರ್ಯಾ ಸಾವಿನ ಸುಳಿವು ಹಲವರಿಗೆ ಮೊದಲೇ ಸಿಕ್ಕಿತ್ತಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.