ಅಂದು ಮೆಜೆಸ್ಟಿಕ್‌ನಲ್ಲಿ ಮಲಗಿದ್ದ ʼರಾಕಿಂಗ್‌ ಸ್ಟಾರ್ʼ ಯಶ್‌; ಇಂದು ಮನೆ ಮುಂದೆ ಸಾಲಾಗಿ ನಿಂತ ದುಬಾರಿ ಕಾರ್‌ಗಳು!

ʼರಾಕಿಂಗ್‌ ಸ್ಟಾರ್ʼ‌ ಯಶ್‌ ಅವರು ʼಟಾಕ್ಸಿಕ್ʼ‌ ಸಿನಿಮಾ ಕೆಲಸದಲ್ಲಿ ಬ್ಯುಸಿಯಿದ್ದರೆ, ಈಗ ಇವರ ಕಾರ್‌ ಕಲೆಕ್ಷನ್‌ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. 
 


ನಟ ಯಶ್‌ ಬೆಳೆದು ಬಂದ ಹಾದಿ ಎಂಥವರಿಗೂ ಪ್ರೇರಣೆ ನೀಡುವುದು. ಅಂದು ಅವಕಾಶಗಳಿಗೋಸ್ಕರ ಪರದಾಡಿದ್ದ ನವೀನ್‌, ಈಗ ನ್ಯಾಶನಲ್‌ ಸ್ಟಾರ್‌ ಆಗಿ, ʼರಾಕಿಂಗ್‌ ಸ್ಟಾರ್‌ʼ ಆಗಿ ಮೆರೆಯುತ್ತಿದ್ದಾರೆ. ಇತ್ತೀಚೆಗೆ ಯಶ್‌ ಅವರ ಕಾರ್‌ ಕಲೆಕ್ಷನ್‌ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಇಂದು ಯಶ್‌ ಯಶಸ್ಸಿನ ಬಗ್ಗೆ ಏನು ಹೇಳ್ತೀರಾ?
ಅಂದು ಮೆಜೆಸ್ಟಿಕ್‌ನಲ್ಲಿ ಮಲಗಿದ್ದ ಯಶ್‌ ಮನೆ ಮುಂದೆ, ಇಂದು ದುಬಾರಿ ಕಾರ್‌ಗಳು ಸಾಲಾಗಿ ನಿಂತಿವೆ. ಆಯುಧಪೂಜೆ ದಿನ ಯಶ್‌ ಅವರ ಕಾರ್‌ಗಳ ಜೊತೆಯಲ್ಲಿ ಅವರ ಮಕ್ಕಳ ಪುಟಾಣಿ ಬೈಕ್‌, ಕಾರ್‌ಗಳಿಗೂ ಕೂಡ ಪೂಜೆ ಆಗುವುದು. ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿ ರಾಧಿಕಾ ಪಂಡಿತ್‌, ಮಕ್ಕಳಾದ ಆಯ್ರಾ, ಯಥರ್ವ್‌ ಜೊತೆಗೆ ಯಶ್‌ ವಾಸ ಮಾಡುತ್ತಿದ್ದಾರೆ. ಮನೆಯ ಮುಂದೆ ಯಶ್‌ ಅವರು ಸೆಕ್ಯುರಿಟಿಗಳ ಜೊತೆಯಲ್ಲಿ ಓಡಾಡುವ ಜಬರ್ದಸ್ತ್ ವಿಡಿಯೋ‌ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಬಸ್‌ ಡ್ರೈವರ್‌ ಮಗನೊಬ್ಬ ಇಂದು ಬಹುಬೇಡಿಕೆಯ ನಟನಾಗಿ, ಬ್ರ್ಯಾಂಡ್‌ಗಳಿಗೆ ಅಂಬಾಸಿಡರ್‌ ಆಗಿರೋದು ನೋಡಿ ಅನೇಕರು ಹುಬ್ಬೇರಿಸುತ್ತಿದ್ದಾರೆ. ʼಟಾಕ್ಸಿಕ್‌ʼ ಸಿನಿಮಾ ಕೆಲಸದಲ್ಲಿ ಬ್ಯುಸಿಯಿರೋ ಬಹುಬೇಡಿಕೆಯ ನಟ ಯಶ್‌ ಎಂದಿಗೂ ಫ್ಯಾಮಿಲಿಗೆ ಟೈಮ್‌ ಕೊಡೋದು ಮರೆಯೋದಿಲ್ಲ. ಮನೆಯ ಸದಸ್ಯರ ಜನ್ಮದಿನ, ಹಬ್ಬಗಳ ಜೊತೆಯಲ್ಲಿ ಟ್ರಾವೆಲಿಂಗ್‌ ಮಾಡೋದನ್ನು ಕೂಡ ತಪ್ಪಿಸೋದಿಲ್ಲ. 

Latest Videos

ಮಕ್ಕಳ ಜೊತೆ ಸಮ್ಮರ್ ವೆಕೇಶನ್ ಎಂಜಾಯ್ ಮಾಡ್ತಿದ್ದಾರೆ ರಾಧಿಕಾ ಪಂಡಿತ್… ಯಶ್ ಮಿಸ್ಸಿಂಗ್!

ʼಟಾಕ್ಸಿಕ್‌ʼ ಸಿನಿಮಾ ರಿಲೀಸ್‌ ಯಾವಾಗ?
ಯಶ್‌ ಅವರನ್ನು ತೆರೆ ಮೇಲೆ ನೋಡಲು ವೀಕ್ಷಕರು ಕಾಯುತ್ತಿದ್ದಾರೆ. ಈಗ ಟಾಕ್ಸಿಕ್‌ ಸಿನಿಮಾವು 2015 ಮಾರ್ಚ್‌ 19ರಂದು ರಿಲೀಸ್‌ ಆಗಲಿದೆ. ನಟ ಯಶ್‌ ಅವರೇ ಸೋಶಿಯಲ್‌ ಮೀಡಿಯಾದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲಿ ʼಟಾಕ್ಸಿಕ್‌ʼ ಸಿನಿಮಾ ರಿಲೀಸ್‌ ಆಗಲಿದೆ. ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿರುವ ಯಶ್‌ ಅವರ ಈ ಚಿತ್ರವೂ ಕೂಡ ಕನ್ನಡ, ತೆಲುಗು, ಮಲಯಾಳಂ, ತಮಿಳು, ಹಿಂದಿ ಭಾಷೆಗಳಲ್ಲಿ ರಿಲೀಸ್‌ ಆಗಲಿದೆ. ಮುಂಬರುವ ವರ್ಷ ಯುಗಾದಿ ಹಬ್ಬದಂದೇ ಈ ಚಿತ್ರ ರಿಲೀಸ್‌ ಆಗಲಿದೆ. 

ನಟ ಯಶ್‌ ಅವರು ‘ಟಾಕ್ಸಿಕ್‌’ ಸಿನಿಮಾದಲ್ಲಿ ʼಸ್ಟೈಲಿಷ್ʼ ಡಾನ್‌ ಆಗಿ ಕಾಣಿಸಿಕೊಂಡಿದ್ದಾರೆ. ಇದಕ್ಕಾಗಿ ವಿಭಿನ್ನ ಹೇರ್‌ಸ್ಟೈಲ್‌ ಕೂಡ ಮಾಡಿದ್ದಾರೆ. ಆಗರ್ಭ ಶ್ರೀಮಂತ ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಅವರ ವಿವಾಹದಲ್ಲಿ ಈ ಹೇರ್‌ಸ್ಟೈಲ್‌ ರಿವೀಲ್‌ ಆಗಿತ್ತು. ಈ ಮದುವೆಯಲ್ಲಿ ಯಶ್‌, ರಾಧಿಕಾ ಪಂಡಿತ್‌ ಕೂಡ ಭಾಗಿಯಾಗಿದ್ದರು. ಈ ಮೂಲಕ ಕನ್ನಡ ಚಿತ್ರರಂಗದಿಂದ ಹೋದ ಏಕೈಕ ನಟ ಎನಿಸಿಕೊಂಡಿದ್ದಾರೆ. 

ಯಶ್‌ ಬಗ್ಗೆ ಹಗುರವಾಗಿ ಮಾತನಾಡಿದ ವ್ಯಕ್ತಿಗೆ ತಿರುಗೇಟು ಕೊಟ್ಟ ನಟಿ ಮಾನ್ವಿತಾ ಕಾಮತ್; ಟಗರು ಪುಟ್ಟಿ ಪರ ನಿಂತ ಕನ್ನಡಿಗರು!

ಈ ಸಿನಿಮಾ ಕಥೆ ಏನು?
60, 70ರ ದಶಕದಲ್ಲಿ ನಡೆಯುವ ಡ್ರಗ್‌ ಮಾಫಿಯಾ ಸುತ್ತ ಈ ಸಿನಿಮಾ ಕಥೆ ಸಾಗಲಿದೆ. ಲಂಡನ್‌, ಬೆಂಗಳೂರು, ಗೋವಾ, ಶ್ರೀಲಂಕಾದಲ್ಲಿ ಈ ಸಿನಿಮಾ ಶೂಟಿಂಗ್‌ ಮಾಡಲಾಗುವುದು. ಲಂಡನ್‌ನಲ್ಲಿ ನಟ ಯಶ್‌ ನಿಭಾಯಿಸುತ್ತಿರೋ ಡಾನ್‌ ಪಾತ್ರದ ಅನೇಕ ದೃಶ್ಯಗಳ ಶೂಟಿಂಗ್ ನಡೆಯಲಿದೆ ಎಂದು ಹೇಳಲಾಗಿದೆ. “ಜನರಿಗೆ ಒಳ್ಳೆಯ ಸಿನಿಮಾ ಕೊಡಬೇಕು, ಹೀಗಾಗಿ ಈ ಸಿನಿಮಾ ತೆರೆ ಕಾಣೋದು ಲೇಟ್‌ ಆಗ್ತಿದೆ. ವೀಕ್ಷಕರ ನಿರೀಕ್ಷೆಗೆ ತಕ್ಕಂತೆ ನಾವು ಸಿನಿಮಾ ಮಾಡಬೇಕು” ಎಂದು ಯಶ್‌ ಅವರು ಸಾಕಷ್ಟು ಬಾರಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಮಲಯಾಳಂನ ಗೀತು ಮೋಹನ್‌ದಾಸ್‌ ಅವರು ಈ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್‌ ಪ್ರೊಡಕ್ಷನ್ಸ್‌ ಈ ಸಿನಿಮಾಕ್ಕೆ ಹಣ ಹೂಡಿದೆ. ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದೆ. ಹಾಲಿವುಡ್‌ ಕಲಾವಿದರು, ತಂತ್ರಜ್ಞರು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. 
 

 

click me!