
ಬೆಂಗಳೂರು: ಕನ್ನಡದ ವರನಟ ಡಾ.ರಾಜ್‌ಕುಮಾರ್ ಅವರ ಪುತ್ರಿ ಪೂರ್ಣಿಮಾ ರಾಮ್‌ಕುಮಾರ್ ಸಂದರ್ಶನವೊಂದರಲ್ಲಿ ತಂದೆಯ ಕುರಿತಾದ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಡಾ.ರಾಜ್‌ಕುಮಾರ್ ನಿಧನರಾದ ದಿನದಂದು ಪೂರ್ಣಿಮಾ ಅವರು ಮನೆಯಲ್ಲಿದ್ದರು. ಅಂದು ಶಿವರಾಜ್‌ಕುಮಾರ್ ಶೂಟಿಂಗ್‌ಗೆ ಹೋಗಿದ್ದರು. ಪುನೀತ್ ರಾಜ್‌ಕುಮಾರ್ ಆಸ್ಪತ್ರೆಗೆ ತೆರಳಿದ್ದರು. ಮನೆಯಲ್ಲಿ ಪಾರ್ವತಮ್ಮ, ಅತ್ತೆ ಮತ್ತು ನಾನು ಇದ್ದೇವು. ನನ್ನ ಮಗ ಸಂಸ್ಕೃತದಲ್ಲಿ ಉತ್ತಮ ಅಂಕ ತೆಗೆದಿರುವ ವಿಷಯ ಹೇಳಲು ಅಪ್ಪಾಜಿ ಮನೆಗೆ ಬಂದಿದ್ದೆ. ತಂದೆಯ ಕೊನೆಕ್ಷಣಗಳನ್ನು ಪೂರ್ಣಿಮಾ ಹತ್ತಿರದಿಂದ ನೋಡಿದ್ದಾರೆ.
ಸಾವಿನ ಸುಳಿವು ಸಿಕ್ಕಿತ್ತಾ?
ಈ ಸಂದರ್ಶನದಲ್ಲಿ ನಿರೂಪಕ ಒಂದು ಮಾತನ್ನು ಹೇಳುತ್ತಾರೆ. ನಿಧನಕ್ಕೂ ಮುನ್ನ ಅಂದ್ರೆ ಸ್ವಲ್ಪ ದಿನಗಳ ಮುಂಚೆ ರಾಜ್‌ಕುಮಾರ್ ವರ್ತನೆಯಲ್ಲಿ ಸ್ವಲ್ಪ ಬದಲಾವಣೆಯಾಗಿತ್ತು ಎಂದು ಪಾರ್ವತಮ್ಮ ಅವರು ಪತ್ರಿಕೆಯಯೊಂದಕ್ಕೆ ಹೇಳಿಕೆ ನೀಡಿದ್ದರು ಎಂದು ಹೇಳುತ್ತಾರೆ. ಇದಕ್ಕೆ ಪೂರ್ಣಿಮಾ ಸಹ ತಲೆಯಾಡಿಸುತ್ತಾ ಹೌದು ಎಂದು ಹೇಳುತ್ತಾರೆ. ಇನ್ಮುಂದೆ ಎಲ್ಲಾ ಜವಾಬ್ದಾರಿ ನಿನ್ನದೇ ಎಂದು ಪಾರ್ವತಮ್ಮರಿಗೆ ರಾಜ್‌ಕುಮಾರ್ ಹೇಳುತ್ತಿದ್ದರಂತೆ. ಆ ಸಮಯದಲ್ಲಿ ಯಾಕೆ ಹೀಗೆಲ್ಲಾ ಹೇಳ್ತಿದ್ದಾರೆ ಎಂದು ಪಾರ್ವತಮ್ಮ ಅವರಿಗೆ ಗೊತ್ತಾಗಿರಲಿಲ್ಲ.
ನಿಧನಕ್ಕೂ ಅಮ್ಮನ ಮುಂದೆ ತುಂಬಾ ವಿಷಯಗಳನ್ನು ಹೇಳಿದ್ದರು. ಯಾವುದೋ ಒಂದು ವಿಷಯಕ್ಕೆ Anytime (ಯಾವಾಗ ಬೇಕಾದ್ರು) ಅಂತ ಹೇಳಿದ್ದರಂತೆ. ಆದ್ರೆ ಅಪ್ಪಾಜಿ ಯಾಕೆ ಆ ಪದ ಹೇಳಿದರು ಅನ್ನೋದು ಗೊತ್ತಿಲ್ಲ. ಅಪ್ಪಾಜಿ ಯಾವುದೇ ಮುಚ್ಚುಮರೆಯಿಲ್ಲದೇ ಮಾತನಾಡ್ತಾರೆ. ಮನಸ್ಸಿಲ್ಲಿರೋ ಮಾತುಗಳನ್ನು ನೇರವಾಗಿಯೇ ಹೇಳುತ್ತಿದ್ದರು. ಇಷ್ವವಾಗದ ವಿಷಯಗಳು ನಡೆದರೆ ಅದರ ಸಮೀಪಕ್ಕೂ ಹೋಗುತ್ತಿರಲಿಲ್ಲ ಎಂದು ಪೂರ್ಣಿಮಾ ರಾಮ್‌ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಅಶ್ವಿನಿ ಲವ್ ಮಾಡಿದ್ದ ಅಪ್ಪು ಮನೆಯವರನ್ನು ಒಪ್ಪಿಸಿದ್ದು ಹೇಗೆ? ಇಲ್ಲಿದೆ ಸತ್ಯ ಕಥೆ..!
ಅಮ್ಮನ ಮುಂದೆ ನಾನು ಅಪ್ಪುದ್ದು ಏಳಿಗೆಯನ್ನು ನೋಡಿದ್ದೇನೆ. ನನಗೆ ತೃಪ್ತಿಯಿದೆ. ನೀನು ಇನ್ನೂ ಅಪ್ಪುವಿನ ಏಳಿಗೆಯನ್ನು ನೋಡಬೇಕು. ನಾನು ನೋಡಿದ್ದು, ನನಗೆ ತೃಪ್ತಿಯಾಗಿದೆ ಎಂದು ಅಪ್ಪಾಜಿ ಹೇಳಿದ್ದರು. ಒಮ್ಮೆ ಈ ವಿಷಯವನ್ನು ಹೇಳಿಕೊಂಡು ಅಮ್ಮಾ ಅಳುತ್ತಿದ್ದರು. ಯಾಕೆ ಹೀಗೆ ಅಂದ್ರು ಅಂತಾ ಅಮ್ಮಾ ಯೋಚನೆ ಮಾಡುತ್ತಿದ್ದರು. ನಾನು ನೋಡಬಾರದಂತಹ ದಿನಗಳನ್ನು ನೋಡಬಾರದು ಅಂತಿದ್ದರು. ಅವರ ಮನಸ್ಸಿನಲ್ಲಿ ಏನಿತ್ತು ನಮಗೆ ಗೊತ್ತಿಲ್ಲ ಎಂದು ಪೂರ್ಣಿಮಾ ಹೇಳಿದ್ದಾರೆ.
ಡಯಟ್ ಬಗ್ಗೆ ರಜಿನಿಕಾಂತ್ ಪ್ರಶ್ನೆ
ರಾಜ್‌ಕುಮಾರ್ ಅವರನ್ನು ನೋಡಿದ ರಜಿನಿಕಾಂತ್, ಏನು ಇಷ್ಟೊಂದು ಡಯಟ್ ಮಾಡ್ತೀರಿ. ಕಳೆದ 50 ವರ್ಷದಿಂದ ನಿಮ್ಮ ಸೊಂಟದ ಸುತ್ತಳತೆ ಒಂದೇ ರೀತಿಯಾಗಿದೆ. 200 ವರ್ಷ ಬದುಕಬೇಕು ಅಂತಿದ್ದೀರಾ ಎಂದು ಕೇಳಿದ್ದರಂತೆ. ಇದಕ್ಕೆ ಉತ್ತರಿಸಿದ್ದ ಅಣ್ಣಾವರು, ನಾನು ಎಷ್ಟು ವರ್ಷ ಬದುಕಿರುತ್ತೇನೋ ನನ್ನ ಕೆಲಸಗಳನ್ನು ನಾನೇ ಮಾಡಿಕೊಳ್ಳುವ ರೀತಿಯಲ್ಲಿರಬೇಕು ಎಂದು ಹೇಳಿದ್ದರಂತೆ.
ಇದನ್ನೂ ಓದಿ: ನಿಮಗೆ ಗೊತ್ತಿತ್ತಾ? ಅಣ್ಣಾವ್ರೊಂದಿಗೆ ನಟಿಸದ ಕ್ರೇಜಿಸ್ಟಾರ್, ಬಾಲನಟನಾಗಿ ಬಣ್ಣಹಚ್ಚಿದ್ದೇ ರಾಜ್‌ಕುಮಾರ್ ಜೊತೆಗೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.