ಬೆಂಗಳೂರು ಹೆಚ್‌ಎಎಲ್‌ ಆವರಣದಲ್ಲಿ 'ಟಾಕ್ಸಿಕ್' ಶೂಟಿಂಗ್ ಸೆಟ್; ಜಗತ್ತಿಗೇ ಕೊಡುತ್ತಿರುವ ಮೆಸೇಜ್ ಏನು?

By Shriram Bhat  |  First Published Apr 8, 2024, 6:40 PM IST

ರಾಕಿಂಗ್ ಸ್ಟಾರ್ ಮಾತನಾಡಿರುವ ವೀಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ವೈರಲ್ ಆಗುತ್ತವೆ. ಅವರ ಮಾತುಗಳನ್ನು ಹಲವರು ಇನ್‌ಸ್ಪಿರೇಷನ್ ಆಗಿ ತೆಗೆದುಕೊಳ್ಳುತ್ತಾರೆ. ಏಕೆಂದರೆ, ನಟ ಯಶ್ ತಾವು ಕಂಡ ಕನಸನ್ನು ಬಹುಬೇಗ ನನಸು ಮಾಡಿಕೊಂಡು ಹಲವರಿಗೆ ಮಾದರಿಯಾಗಿದ್ದಾರೆ.


ರಾಕಿಂಗ್ ಸ್ಟಾರ್ ಯಶ್ (Rocking Star Yash) ನಟನೆಯ 'ಟಾಕ್ಸಿಕ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಬೆಂಗಳೂರಿನಲ್ಲೇ ಸೆಟ್‌ ಹಾಕಿ ಚಿತ್ರೀಕರಣ ಪ್ರಾರಂಭಿಸಲು ಸಿದ್ಧತೆ ನಡೆಯುತ್ತಿದೆ. ನೂರಾರು ಕಾರ್ಮಿಕರು ಸೆಟ್ ನಿರ್ಮಾಣದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಗೀತು ಮೋಹನ್ ದಾಸ್ (Geethu Mohandas)ಆಕ್ಷನ್ ಕಟ್ ಹೇಳಲಿರೋ ಟಾಕ್ಸಿಕ್ ಶೂಟಿಂಗ್ ಏಪ್ರಿಲ್ 15ರ ಬಳಿಕ ಶುರುವಾಗುತ್ತೆ. ಅಷ್ಟರಲ್ಲೇ ಟಾಕ್ಸಿಕ್ ಶೂಟಿಂಗ್ ಸೆಟ್​​ನ ಫೋಟೋಗಳು ವೈರಲ್ ಆಗಿದೆ. 
 
ಹಾಗಿದ್ದರೆ ಹೇಗಿರುತ್ತೆ ಟಾಕ್ಸಿಕ್ (Toxic) ಸಿನಿಮಾ ಸೆಟ್..? ಅದಕ್ಕೆ ಉತ್ತರ ಇಲ್ಲಿದೆ. ಟಾಕ್ಸಿಕ್' ಸಿನಿಮಾ ಚಿತ್ರೀಕರಣಕ್ಕೆ ಬೆಂಗಳೂರಿನ ಹೆಚ್‌ಎಎಲ್ ಫ್ಯಾಕ್ಟರಿ ಆವರಣದಲ್ಲಿ ಸೆಟ್ ನಿರ್ಮಾಣ ಆಗುತ್ತಿದೆ.  2 ಎಕರೆ ಜಾಗದಲ್ಲಿ 60, 70ರ ದಶಕದ ಪಟ್ಟಣವನ್ನು ನೆನಪಿಸುವ ಸೆಟ್ ಹಾಕಲಾಗುತ್ತಿದೆ. ಎತ್ತರದ ಟವರ್‌ಗಳು, ದೊಡ್ಡ ಕಟ್ಟಡಗಳು, ಜೋಕರ್ ಆಡಿಟೋರಿಯಂ ರೀತಿಯ ಸೆಟ್‌ ನಿರ್ಮಾಣವಾಗಿದೆಯಂತೆ. ಈಗ ವೈರಲ್ ಆಗಿರೋ ಎರಡು ಫೋಟೋಗಳ ಹಾಗೆ ಟಾಕ್ಸಿಕ್​ ಸೆಟ್​ ಇರಲಿದೆ ಅಂತ ವೈರಲ್ ಮಾಡಲಾಗುತ್ತಿದೆ.

ಕೊಟ್ಟಿದ್ದು ಒಂದೇ ಸೂಪರ್ ಹಿಟ್, 'ಸುಸ್ತಾಗಿ ಎದ್ದು ಹೋದ್ರಾ' ಕನ್ನಡ ನಟಿಯರಿವರು!
 
'ಟಾಕ್ಸಿಕ್' ಸಿನಿಮಾ ದೊಡ್ಡಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ಹಾಲಿವುಡ್ ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡುತ್ತಾರೆ ಎನ್ನಲಾಗ್ತಿದೆ. ಕೆವಿಎನ್ ಪ್ರೊಡಕ್ಷನ್ ಜೊತೆಗೆ ಯಶ್ ಕೂಡ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಒಟ್ಟಿನಲ್ಲಿ ಯಶ್​ ಈಗ ಟಾಕ್ಸಿಕ್​ ಕಿಕ್ ಸ್ಟಾರ್ಟ್​ ಮಾಡುತ್ತಿರೋದಂತು ಸತ್ಯ. ಟಾಕ್ಸಿಕ್ ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಹಾಗೂ ಸಾಯಿ ಪಲ್ಲವಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. 

Tap to resize

Latest Videos

ಜೂನ್‌ನಲ್ಲಿ ತೆರೆ ಮೇಲೆ 'ಇಂಡಿಯನ್ 2' ದರ್ಬಾರ್; ಮತ್ತೆ ಮೋಡಿಗೆ ಸೇನಾಪತಿ ಕಮಲ್ ಹಾಸನ್ ಸಜ್ಜು!

ರಾಕಿಂಗ್ ಸ್ಟಾರ್ ಮಾತನಾಡಿರುವ ವೀಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಅವರ ಮಾತುಗಳನ್ನು ಹಲವರು ಇನ್‌ಸ್ಪಿರೇಷನ್ ಆಗಿ ತೆಗೆದುಕೊಳ್ಳುತ್ತಾರೆ. ಏಕೆಂದರೆ, ನಟ ಯಶ್ ತಾವು ಕಂಡ ಕನಸನ್ನು ಬಹುಬೇಗ ನನಸು ಮಾಡಿಕೊಂಡು ಹಲವರಿಗೆ ಮಾದರಿಯಾಗಿದ್ದಾರೆ. ಯಶ್ ನಟನೆಯ ಕೆಜಿಎಫ್ ಸೂರ್ ಹಿಟ್ ಆಗುವ ಮೂಲಕ ಕನ್ನಡ ಚಿತ್ರರಂಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದೆ. ಈಗ ಕನ್ನಡ ಚಿತ್ರಗಳ ಮಾರ್ಕೆಟ್ ಬಹಳಷ್ಟು ವಿಸ್ತರಣೆ ಕಂಡಿದೆ. 

ದೊಡ್ಮನೆಯ 'ಯುವ' ಸಿನಿಮಾಗೆ ಕಾಂತಾರ ಚೆಲುವೆ ಸಪ್ತಮಿ ಗೌಡ ಸೆಲೆಕ್ಟ್ ಆಗಿದ್ದ ಗುಟ್ಟು ರಟ್ಟಾಯ್ತು!

ನಟ ಯಶ್ ಈಗ ಗೀತೂ ಮೋಹನ್‌ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಶೂಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಲಯಾಳಂ ನಿರ್ದೇಶಕಿ ಆಗಿರುವ ಗೀತೂ ಮೋಹನ್ ದಾಸ್ ಅವರು ಮಾಡಿಕೊಂಡ ಕಥೆ ಯಶ್ ಅವರಿಗೆ ಇಷ್ಟವಾಗಿ ಅದಕ್ಕೆ ರಾಕಿಂಗ್ ಸ್ಟಾರ್ ಸಹಿ ಮಾಡಿದ್ದು ಹಲವರಿಗೆ ಅಚ್ಚರಿ ತಂದಿತ್ತು. ಏಕೆಂದರೆ ಕೆಜಿಎಫ್ ಬಳಿಕ ನಟ ಯಶ್, ಹಲವು ಕಥೆಗಳನ್ನು ಕೇಳಿಯೂ ಯಾವುದನ್ನೂ ಸಹ ಒಪ್ಪಿಕೊಂಡಿರಲಿಲ್ಲ. ಆದರೆ, ಟಾಕ್ಸಿಕ್ ಕಥೆ ಜಗತ್ತನ್ನೇ ಪ್ರೇರಣೆ ಮಾಡುವಂತೆ ಇದೆ ಎಂಬ ಮಾತು ಕೇಳಿಬರುತ್ತಿದ್ದು ಅದಕ್ಕಾಗಿಯೇ ನಟ ಯಶ್, ಈ ಕಥೆಯನ್ನು ಒಪ್ಪಿಕೊಂಡು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 

ಹೊಸಬರ 'ಎಲ್ಟು ಮುತ್ತಾ' ಪೋಸ್ಟರ್ ರಿಲೀಸ್, ಸಾಥ್ ಕೊಟ್ಟ ಶೈಲಜಾ ವಿಜಯ್ ಕಿರಗಂದೂರು ಟೀಮ್!

click me!