ಕನ್ನಡವೇ ಸರ್ವಸ್ವ ಅಂತಿದ್ದ ಡಾ ರಾಜ್ ಒಂದು ತೆಲುಗು ಸಿನಿಮಾದಲ್ಲಿ ನಟಿಸುವಂತೆ ಮಾಡಿದ್ದು ಯಾರು?

By Shriram BhatFirst Published Oct 24, 2024, 11:59 AM IST
Highlights

ಕನ್ನಡದಲ್ಲಿ ಡಾ ರಾಜ್‌ಕುಮಾರ್ ನಟಿಸಿದ 'ಬೇಡರ ಕಣ್ಣಪ್ಪ' ಚಿತ್ರವು 1954ರಲ್ಲಿ ತೆರೆಕಂಡಿತು. ಅದೇ ವರ್ಷ ಅದು ತೆಲುಗಿನಲ್ಲಿ 'ಕಾಳಹಸ್ತಿ ಮಹಾತ್ಯಂ' ಹೆಸರಿನಲ್ಲಿ ರೀಮೇಕ್ ಆಗಿ ಅಲ್ಲೂ ಸೂಪರ್ ಹಿಟ್ ಆಯಿತು. ಆದರೆ, ಅದಕ್ಕೂ ಮೊದಲು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಡಾ ರಾಜ್‌ಕುಮಾರ್ ಅವರು ತೆಲುಗು ಸಿನಿಮಾದಲ್ಲಿ ನಟಿಸಲು ಕಾರಣವಾಗಿದ್ದೇನು? ಇಲ್ಲಿದೆ ಆ ಸೀಕ್ರೆಟ್‌ಗೆ ಉತ್ತರ..

ಪದ್ಮ ಭೂಷಣ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತ ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ (Dr Rajkumar) ಅವರ ಪ್ರತಿಭೆ ಹಾಗೂ ಪ್ರಸಿದ್ಧಿ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ ರಾಜ್‌ಕುಮಾರ್ ಅವರು ಕೇವಲ ಕನ್ನಡ ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ ಎಂದು ಹಲವರು ಅಂದುಕೊಂಡಿದ್ದಾರೆ. ಆದರೆ, ಡಾ ರಾಜ್‌ಕುಮಾರ್ ಅವರು ಕನ್ನಡದ ಹೊರತಾಗಿ ಒಂದೇ ಒಂದು ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ. 

ಹಲವರಿಗೆ ಈ ಸಂಗತಿಯೇ ಗೊತ್ತಿಲ್ಲ! ಹೌದು, ಡಾ ರಾಜ್ ಅವರು ಒಂದೇ ಒಂದು ತೆಲುಗು ಸಿನಿಮಾದಲ್ಲಿ ನಾಯಕರಾಗಿಯೇ ನಟಿಸಿದ್ದಾರೆ. ಅದು 'ಕಾಳಹಸ್ತಿ ಮಹಾತ್ಯಂ', ಇದು ಕನ್ನಡದಲ್ಲಿ ಅವೇ ನಟಿಸಿದ್ದ 'ಬೇಡರ ಕಣ್ಣಪ್ಪ' ಚಿತ್ರದ ರಿಮೇಕ್. ಕನ್ನಡದಲ್ಲಿ ಡಾ ರಾಜ್‌ಕುಮಾರ್ ನಟಿಸಿದ ಬೇಡರ ಕಣ್ಣಪ್ಪ ಚಿತ್ರವನ್ನು ನೋಡಿದ ಅದೇಷ್ಟೋ ತೆಲುಗು ನಿರ್ದೇಶಕರು ಹಾಗೂ ನಿರ್ಮಾಪಕರು ಈ ಚಿತ್ರವನ್ನು ತೆಲುಗಿಗೆ ರೀಮೇಕ್ ಮಾಡಲೇಬೇಕು ಎಂದು ನಿರ್ಧರಿಸಿದರಂತೆ. 

Latest Videos

 

ಕನ್ನಡದಲ್ಲಿ ಡಾ ರಾಜ್‌ಕುಮಾರ್ ನಟಿಸಿದ ಬೇಡರ ಕಣ್ಣಪ್ಪ ಚಿತ್ರವು 1954ರಲ್ಲಿ ತೆರೆಕಂಡಿತು. ಅದೇ ವರ್ಷ ಅದು ತೆಲುಗಿನಲ್ಲಿ 'ಕಾಳಹಸ್ತಿ ಮಹಾತ್ಯಂ' (Kalahasti Mahatyam) ಹೆಸರಿನಲ್ಲಿ ರೀಮೇಕ್ ಆಗಿ ಅಲ್ಲೂ ಸೂಪರ್ ಹಿಟ್ ಆಯಿತು. ಆದರೆ, ಸಿನಿಮಾಗಿಂತ ಮೊದಲು ಕನ್ನಡ ನಾಟಕಗಳಲ್ಲಿ ನಟಿಸುತ್ತಿದ್ದ, ಅದಕ್ಕೂ ಮೊದಲು ಎರಡು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಡಾ ರಾಜ್‌ಕುಮಾರ್ ಅವರು ತೆಲುಗು ಸಿನಿಮಾದಲ್ಲಿ ನಟಿಸಲು ಕಾರಣವಾಗಿದ್ದೇನು? ಇಲ್ಲಿದೆ, ಮಹತ್ವಪೂರ್ಣವಾದ ವಿಷಯ!

ಡಾ ರಾಜ್‌ಕುಮಾರ್ ನಟನೆಯ ಬೇಡರ ಕಣ್ಣಪ್ಪ ಸಿನಿಮಾ ನೋಡಿದ ತೆಲುಗು ಸಿನಿಮಾ ಮಂದಿಗೆ ಅದನ್ನು ತೆಲುಗಿನಲ್ಲಿ ತರಲೇಬೇಕು ಎಂಬ ಮನಸ್ಸಾಯಿತು, ಅದು ನಿರ್ಧಾರದ ರೂಪ ತಳೆದು ನಾಯಕ ಯಾರಾಗಬೇಕು ಎಂಬ ಚರ್ಚೆ ಕೂಡ ನಡೆಯಿತು. ಆದರೆ, ಅಂದು ಟಾಲಿವುಡ್ ಚಿತ್ರರಂಗದಲ್ಲಿ ಬೇಡರ ಕಣ್ಣಪ್ಪನ ಪಾತ್ರಕ್ಕೆ ಸೂಕ್ತವಾದ ನಟನನ್ನು ಹುಡುಕುವುದು ಅವರಿಗೆ ಕಷ್ಟವಾಯ್ತು. ಆಗ ರಾಜ್‌ಕುಮಾರ್ ಅವರೇ ತೆಲುಗು ಆವೃತ್ತಿಗೂ ಸೂಕ್ತ ಎಂಬ ನಿರ್ಧಾರಕ್ಕೆ ಬಂದರು. 

ಜಗತ್ತಿನಲ್ಲೇ ಅತೀ ಹೆಚ್ಚು ಅಭಿಮಾನಿ ಸಂಘಗಳಿರುವ ಕನ್ನಡದ ಏಕೈಕ ನಟ ಯಾರು ಗೊತ್ತೇ? 

ಕೊನೆಗೆ ಡಾ ರಾಜ್‌ಕುಮಾರ ನಾಯಕತ್ವದಲ್ಲಿ ತೆಲುಗಿನ 'ಕಾಳಹಸ್ತಿ ಮಹಾತ್ಯಂ' ಸಿನಿಮಾ ತೆರೆಗೆ ಬಂದು ಅಲ್ಲೂ ಭಾರೀ ಯಶಸ್ಸು ಪಡೆಯಿತು. ಆ ಚಿತ್ರವನ್ನು ಹೆಚ್. ಎಲ್. ಎನ್. ಸಿಂಹ ನಿರ್ದೇಶನ ಮಾಡಿದ್ದಾರೆ. ರಾಜ್‌ಕುಮಾರ್ ನಾಯಕರಾಗಿದ್ದು, ಮಿಕ್ಕಂತೆ ಆ ಚಿತ್ರದಲ್ಲಿ ನಟಿ ಮಾಲತಿ, ರತನ್, ಕುಶಾಲ ಕುಮಾರಿ, ಮುದಿಗೊಂಡ ಲಿಂಗಮೂರ್ತಿ, ಕುಮಾರಿ, ಪದ್ಮನಾಭಂ, ಹೆಚ್. ಆರ್. ರಾಮಚಂದ್ರ ಶಾಸ್ತ್ರಿ, ರುಷ್ಯೇಂದ್ರಮಣಿ, ರಾಜಸುಲೋಚನ ನಟಿಸಿದ್ದಾರೆ. ಸಿ.ಆರ್. ಬಸವರಾಜು, ಗುಬ್ಬಿ ವೀರಣ್ಣ ತೆಲುಗಿನ ಆ ಚಿತ್ರವನ್ನು ನಿರ್ಮಿಸಿದ್ದಾರೆ. 

ತೆಲುಗಿನ ಕಾಳಹಸ್ತಿ ಮಹಾತ್ಯಂ ಚಿತ್ರವು ಹೆಚ್ಚು ಸಂಗೀತಮಯ. ಆ ಚಿತ್ರದಲ್ಲಿ ಒಟ್ಟು 16 ಹಾಡುಗಳಿವೆ. ಆರ್. ಗೋವರ್ಧನಂ, ಆರ್. ಸುದರ್ಶನಂ ಸಂಗೀತ ನೀಡಿದ್ದಾರೆ. ಎ. ಎಂ. ರಾಜಾ, ಎಂ. ಎಲ್. ವಸಂತಕುಮಾರಿ, ಘಂಟಸಾಲ ವೆಂಕಟೇಶ್ವರರಾವ್, ಪಿ. ಸುಶೀಲ, ಟಿ.ಎಸ್. ಭಗವತಿ ಹಾಡುಗಳನ್ನು ಹಾಡಿದ್ದಾರೆ. ಇರುವ ಕೆಲವು ಸಂವಾದಗಳನ್ನು ತೋಲೇಟಿ ವೆಂಕಟರೆಡ್ಡಿ ಬರೆದಿದ್ದಾರೆ. ಈ ಚಿತ್ರ 1954 ನವೆಂಬರ್ 12 ರಂದು ಬಿಡುಗಡೆಯಾಯಿತು. ಹಲವು ಕಡೆಗಳಲ್ಲಿ ನೂರು ದಿನಗಳು ಪ್ರದರ್ಶನ ಕಂಡಿತು. 

ಸಂಗೀತ, ಹಾಡುಗಳು ಸೂಪರ್ ಹಿಟ್ ಆಯಿತು.  ಹಾಡುಗಳನ್ನು ಬಹಳಷ್ಟು ಪ್ರೇಕ್ಷಕರು ಮೆಚ್ಚಿದರು. ಕನ್ನಡದಲ್ಲಿ ಬೇಡರ ಕಣ್ಣಪ್ಪ ಚಿತ್ರದ ಮೂಲಕವೇ ಅವರು ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದೇ ಚಿತ್ರ ತೆಲುಗಿನಲ್ಲಿ ರಿಮೇಕ್ ಆಗಿ, ಒಂದೇ ವರ್ಷದಲ್ಲಿ ನಟ ಡಾ ರಾಜ್‌ಕುಮಾರ್ ಅವರು ಕನ್ನಡ ಹಾಗೂ ತೆಲುಗು ಪ್ರೇಕ್ಷಕರನ್ನು ರಂಜಿಸಿ ಮನೆಮಾತಾದರು. 'ಬೇಡರ ಕಣ್ಣಪ್ಪ' ಚಿತ್ರದ ತೆಲುಗು ರೀಮೇಕ್ 'ಕಾಳಹಸ್ತಿ ಮಹಾತ್ಯಂ' ಸಿನಿಮಾಗೆ ಡಾ ರಾಜ್‌ ಬಿಟ್ಟು ಪರ್ಯಾಯ ನಟ ತೆಲುಗಿನಲ್ಲಿ ಇಲ್ಲದ್ದು 'ಅಣ್ಣಾವ್ರು' ಬೇರೆ ಭಾಷೆಯಲ್ಲಿ ನಟಿಸಲು ಕಾರಣವಾಯ್ತು ಎನ್ನಬಹುದು!

ಒಬ್ಬನು ಹೋದ್ರೆ ಮತ್ತೊಬ್ಬನ ಕಥೆ ಮುಗೀತು; ಯಾಕೆ ಹಾಗೆ ಅಂದಿದ್ರು ಶಂಕರ್ ನಾಗ್?

ಆದರೆ, ಡಾ ರಾಜ್‌ಕುಮಾರ್ ಅದೇ ವೇಳೆ ದೊಡ್ಡ ಸಂದಿಗ್ಧ ಪರಿಸ್ಥತಿಯಲ್ಲೂ ಸಿಕ್ಕಿಹಾಕಿಕೊಂಡರು. ಕಾರಣ, ಮುಂದೆ ಕನ್ನಡ ಸಿನಿಮಾದಲ್ಲಿ ಮಾತ್ರವೇ ನಟಿಸುವುದೋ ಅಥವಾ ಬೇರೆ ಭಾಷೆಗಳ ಅವಕಾಶವನ್ನೂ ಬಾಚಿಕೊಂಡು ಬೆಳೆಯುವುದೋ..!? ಅಂತಹ ಪರಸ್ಥಿತಿಯಲ್ಲಿ ಡಾ ರಾಜ್‌ಕುಮಾರ್ ದಿಟ್ಟ ನಿರ್ಧಾರವೊಂದನ್ನು ತೆಗೆದುಕೊಂಡರು. ಅದು 'ಇನ್ಮುಂದೆ ನಾನು ಕನ್ನಡ ಸಿನಿಮಾ ಬಿಟ್ಟು ಬೇರೆ ಭಾಷೆಯಲ್ಲಿ ನಟಿಸುವುದಿಲ್ಲ' ಎಂಬುದು. 

ಆ ಬಳಿಕ ತೆಲುಗು, ತಮಿಳು ಹೀಗೆ ಬೇರೆ ಭಾಷೆಗಳಿಂದ ಬಹಳಷ್ಟು ಆಫರ್ ಬಂದರೂ ಅದನ್ನು ರಿಜೆಕ್ಟ್ ಮಾಡಿ ಕನ್ನಡಕ್ಕೆ ಮಾತ್ರ ಸೀಮಿತರಾಗಿ ನಿಂತರು. ಹೀಗಾಗಿಯೇ ಇಂದು ಅವರನ್ನು 'ಕನ್ನಡ ನಟ', ಕೇವಲ ಕನ್ನಡ ಸಿನಿಮಾ ನಟ ಎಂದೇ ಗುರುತಿಸುತ್ತಾರೆ. ಒಂದು ತೆಲುಗು ಚಿತ್ರದ ನಟನೆ ಬಳಿಕ ಅವರು ತಮ್ಮದೇ ನಿರ್ಧಾರಕ್ಕೆ ಕಟ್ಟುಬಿದ್ದು ಬೇರೆ ಭಾಷೆಯ ಸಿನಿಮಾ ಮಾಡಲಿಲ್ಲ. 

ಮಾಲಾಶ್ರಿ 'ಕೋತಿ' ಹೇಳಿಕೆ ಅಸಲಿಯತ್ತು ಬಹಿರಂಗ; ಕನಸಿನ ರಾಣಿ ನಿಜವಾಗಿ ಹಾಗೆ ಹೇಳಿದ್ರಾ?

'ಜೀವನ ಚೈತ್ರ' ಚಿತ್ರದ 'ನಾದಮಯ ಈ ಲೋಕವೆಲ್ಲಾ..' ಹಾಡಿಗೆ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ ಡಾ ರಾಜ್‌ಕುಮಾರ್'. ಅವರ ನಟನೆಯ ಕೊನೆಯ ಚಿತ್ರ 'ಶಬ್ದವೇದಿ' 2000ನೇ ಇಸವಿಯಲ್ಲಿ ತೆರೆಕಂಡಿತ್ತು. ಈ ಚಿತ್ರದ ಬಳಿಕ 'ಭಕ್ತ ಅಂಬರೀಷ' ಚಿತ್ರದಲ್ಲಿ ನಟಿಸಲು ಡಾ ರಾಜ್‌ಕುಮಾರ್ ಅವರು ಸಕಲ ಸಿದ್ಧತೆ ಮಾಡಿಕೋಮಡಿದ್ದರು. ಆದರೆ, ಅಷ್ಟರಲ್ಲಿ ಅವರಿಗೆ ಅನಾರೋಗ್ಯ ಕಾಲಾರಂಭಿಸಿ ಅವರು ಇಹಲೋಕ ತ್ಯಜಿಸಿದರು. ಈ ಮೂಲಕ ಭಕ್ತ ಅಂಬರೀಷ್ ಸಿನಿಮಾ ಹಾಗೇ ಕನಸಾಗಿ ಉಳಿಯಿತು. 

click me!