ಮತ್ತೆ ಅಮೇರಿಕಾಗೆ ಹಾರಿರೋ ಯಶ್; USA ಸುತ್ತಾಡಿ ರಾಕಿಂಗ್ ಸ್ಟಾರ್ ಮಾಡ್ತಿರೋ ಪ್ಲಾನ್ ಏನ್ ಗೊತ್ತಾ?

Published : Jun 08, 2026, 09:14 PM IST
Yash

ಸಾರಾಂಶ

ಕಳೆದ 20 ದಿನಗಳಿಂದ ಅಮೇರಿಕಾದಲೇ ಬೀಡು ಬಿಟ್ಟಿರುವ ಯಶ್ ಹಾಲಿವುಡ್ ನಲ್ಲಿ ಟಾಕ್ಸಿಕ್ ರಿಲೀಸ್ ಮಾಡೊಕೆ ನಿರಂತರವಾಗಿ ಹಾಲಿವುಡ್ ನಿರ್ಮಾಪಕರು, ವಿತರಕರ ಜೊತೆ ಸಾಲು ಸಾಲು ಮೀಟಿಂಗ್ ಮಾಡುತ್ತಿದ್ದಾರೆ. ಹೋಗಿರುವ ಕೆಲಸವನ್ನು ಸಕ್ಸಸ್ ಮಾಡಿಕೊಂಡು ಬರಲೇ ಬೇಕು ಅಂತ ಯಶ್ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

20 ದಿನದಿಂದ ವಿಶ್ವದ ದೊಡ್ಡಣ್ಣ ಅಮೇರಿಕಾದಲ್ಲಿ ಯಶ್ ಸುತ್ತಾಟ, ಡಿಸೆಂಬರ್ ಗೆ ಟಾಕ್ಸಿಕ್ ರಿಲೀಸ್!

ರಾಕಿಂಗ್ ಸ್ಟಾರ್ ಯಶ್​(Yash)​ ಟಾಕ್ಸಿಕ್​ ಸಿನಿಮಾವನ್ನ ಈ ವರ್ಷ ಡಿಸೆಂಬರ್​ನಲ್ಲಿ ರಿಲೀಸ್ ಮಾಡೋ ಸುಳಿವು ಕೊಟ್ಟ ಮೇಲೆ ಕರುನಾಡಿಂದ ಕಣ್ಮರೆ ಆಗಿದ್ದಾರೆ. ಹಾಗಾದ್ರೆ ಯಶ್​ ಎಲ್ ಹೋದ್ರು ಅಂತ ಹುಡುಕಿದ್ರೆ ರಾಕಿಯ ಹೆಜ್ಜೆ ಗುರುತು ಸಿಕ್ಕಿದ್ದು ಅಮೇರಿಕಾದಲ್ಲಿ. ಯಶ್​ ಈಗ ಅಲ್ಲೇನು ಮಾಡುತ್ತಿದ್ದಾರೆ ಅಂತ ಕೇಳಿದ್ರೆ ನಿಜಕ್ಕು ನಿಮಗೆ ಥ್ರಿಲ್ ಆಗುತ್ತೆ. ಹಾಗಾದ್ರೆ ರಾಯ ಅಮೇರಿಕಾದಲ್ಲೇನು ಮಾಡುತ್ತಿದ್ದಾರೆ ಅಂತ ನೋಡೋಣ ಬನ್ನಿ..

ರಾಕಿಂಗ್ ಸ್ಟಾರ್ ಯಶ್ ಕನ್ನಡ ಚಿತ್ರರಂಗದಲ್ಲಿ ಬಹು ದೊಡ್ಡ ಕನಸ್ಸ ನನಸು ಮಾಡಿಕೊಂಡ ಚಿನ್ನದ ಹುಡುಗ. ಬೆಟ್ಟಕ್ಕೆ ಗುರಿಯಿಟ್ಟು ದಣಿವರಿಯದೇ ಹೋರಾಡುವ ರಾಕಿ ಈಗ ಟಾಕ್ಸಿಕ್ ಮೂಲಕ ವಿಶ್ವವನ್ನೇ ಗೆಲ್ಲೋಕೆ ಸಜ್ಜಾಗಿದ್ದಾರೆ. ಕೆಜಿಎಫ್ ಸಕ್ಸಸ್ ಪ್ರಯಾಣದ ನಂತ್ರ ಮುಂಬೈನಲ್ಲೇ ಬೀಡು ಬಿಟ್ಟಿದ್ದ ರಾಕಿ. ಈಗ ಟಾಕ್ಸಿಕ್ ಗಾಗಿ ಹಾಲಿವುಡ್ ಟಾರ್ಗೆಟ್ ಮಾಡ್ಕೊಂಡ್ ವಿಶ್ವದ ದೊಡ್ಡಣ್ಣನ ಮನೆಯಂಗಳಲ್ಲಿ ನೆಲೆಯೂರಿದ್ದಾರೆ.

ಅಮೇರಿಕಾ ಹೋಗಿದ್ದ ಯಶ್ ರಾಮಾಯಣದ ಪ್ರಚಾರ

ಇತ್ತೀಚೆಗಷ್ಟೇ ರಾಮಾಯಣ ಚಿತ್ರದ ಪ್ರಚಾರಕ್ಕಾಗಿ ಅಮೇರಿಕಾ ಹೋಗಿದ್ದ ಯಶ್ ರಾಮಾಯಣದ ಪ್ರಚಾರ ಮುಗಿಸಿ ಬಂದಿದ್ರು. ರಾಮಾಯಣ ಪ್ರಚಾರ ಮಾಡುತ್ತಾ. ಟಾಕ್ಸಿಕ್​​​ ಮೂಲಕ ಆಸ್ಕರ್​ಗೆ ಮುತ್ತಿಡಲೇ ಬೇಕು ಅಂತ ಪಣ ತೊಡುತ್ತಾ ಅದಕ್ಕಾಗಿ ದಾರಿ ಹುಡುಕಿರೋ ಯಶ್​ ಈಗ ಮತ್ತೆ ಅಮೇರಿಕಾಗೆ ಹಾರಿದ್ದಾರೆ.

ಯಶ್ ಕಳೆದ ಮೇನಲ್ಲಿ ಅಮೆರಿಕಾದ ಲಾಸ್ ವೇಗಾಸ್‌ ನಲ್ಲಿ ನಡೆದ ಸಿನಿಮಾಕಾನ್ ಸಮಾವೇಶದಲ್ಲಿ ಭಾಗವಹಿಸಿದ್ರು. ಅಲ್ಲೇ ತಮ್ಮ ರಾಮಾಯಣ ಚಿತ್ರ ಪ್ರಮೋಟ್ ಮಾಡಿದ್ರು. ಆದ್ರೆ ಅಂದು ಯಶ್​ ತಲೆಯಲ್ಲಿ ಬಂದ ಪ್ಲಾನ್ ಟಾಕ್ಸಿಕ್​ ಸಿನಿಮಾವನ್ನ ಇಲ್ಲಿನವರ ಮನ ಗೆಲ್ಲೊ ಹಾಗೆ ಮಾಡಬೇಕು ಅನ್ನೋ ಐಡಿಯಾ ಅದಕ್ಕಾಗಿ ಎರಡನೇ ಸಲ ಟಾಕ್ಸಿಕ್ ರಿಲೀಸ್ ಡೇಟ್ ಕ್ಯಾನಲ್ ಮಾಡಿದ್ದ ಯಶ್‌. ಟಾಕ್ಸಿಕ್ ಚಿತ್ರದ ಶೋ ರೀಲ್ ಅನ್ನು ಹಾಲಿವುಡ್ ಮಂದಿಗೆ ಪ್ರದರ್ಶನ ಮಾಡಿದ್ದಾರೆ.

ಟಾಕ್ಸಿಕ್ ಚಿತ್ರದ ಶೋ ರೀಲ್ ಗೆ ಪ್ರಶಂಶೆ ಜೊತೆ ಟಾಕ್ಸಿಕ್ ಚಿತ್ರವನ್ನು ಹಾಲಿವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವಂತೆ ಸಲಹೆ ಸಿಕ್ಕಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರೀಕ್ಷೆಗೂ ಮೀರಿದ ರೀತಿ ಟಾಕ್ಸಿಕ್​​ಅನ್ನ ರಿಲೀಸ್ ಮಾಡಲು ಅಮೇರಿಕಾ ಸುತ್ತುತ್ತಿದ್ದಾರೆ ಯಶ್

20 ದಿನದಿಂದ ಅಮೇರಿಕಾದಲ್ಲಿ ರಾಕಿ ಸುತ್ತಾಟ!

ಕಳೆದ 20 ದಿನಗಳಿಂದ ಅಮೇರಿಕಾದಲೇ ಬೀಡು ಬಿಟ್ಟಿರುವ ಯಶ್ ಹಾಲಿವುಡ್ ನಲ್ಲಿ ಟಾಕ್ಸಿಕ್ ರಿಲೀಸ್ ಮಾಡೊಕೆ ನಿರಂತರವಾಗಿ ಹಾಲಿವುಡ್ ನಿರ್ಮಾಪಕರು ಹಾಗೂ ವಿತರಕರ ಜೊತೆ ಸಾಲು ಸಾಲು ಮೀಟಿಂಗ್ ಮಾಡುತ್ತಿದ್ದಾರೆ. ಹೋಗಿರುವ ಕೆಲಸವನ್ನು ಸಕ್ಸಸ್ ಮಾಡಿಕೊಂಡು ಬರಲೇ ಬೇಕು ಅಂತ ಯಶ್ ನಿರ್ಧರಿಸಿದ್ದಾರೆ. ಹಾಲಿವುಡ್ ನಲ್ಲಿ ಇದುವರೆಗೂ ಭಾರತೀಯ ಯಾವ ಚಿತ್ರವೂ ರಿಲೀಸ್ ಆಗದ ರೀತಿ ಟಾಕ್ಸಿಕ್ ತೆರೆಗೆ ಬರೋದಂತು ಸತ್ಯ.

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

666 operation Dream Theatre Teaser: ಶಿವರಾಜ್‌ಕುಮಾರ್-ಧನಂಜಯ್ '666 ಆಪರೇಶನ್ ಡ್ರೀಮ್ ಥಿಯೇಟರ್ ಟೀಸರ್' ಬಿಡುಗಡೆ; ಭಾರೀ ಹೈಪ್ ಸೃಷ್ಟಿ!
BBK13: 'ಪ್ರತಿ ವರ್ಷವೂ ನನ್ನ ಹೆಸರು ಕೇಳಿಬರುತ್ತೆ'... ಈ ಬಾರಿ ಬಿಗ್ ಬಾಸ್‌ಗೆ ಹೋಗ್ತಾರಾ ಮೇಘಾ ಶೆಟ್ಟಿ?