'ಮೊಗ್ಗಿನ ಮನಸ್ಸು' ನಟಿ ಬಾಳಲ್ಲಿ ಭಾರೀ ಬಿರುಗಾಳಿ.. ಮುರಿದುಬಿತ್ತಾ ಮದುವೆ? ತಾಳ ತಪ್ಪಿದ್ದು ಎಲ್ಲಿ?

Published : Jun 06, 2026, 03:38 PM IST
Shubha Poonja

ಸಾರಾಂಶ

ಸೋಶಿಯಲ್ ಮೀಡಿಯಾದಲ್ಲಿಯೂ ಪತಿಯೊಂದಿಗಿನ ಫೋಟೋಗಳನ್ನ ಶುಭಾ ಡಿಲೀಟ್ ಮಾಡಿದ್ದಾರೆ. ಪ್ರೀತಿಸಿ ಮದುವೆಯಾದ ಎಷ್ಟೋ ಜೋಡಿಗಳು ಹೀಗೆ ಅರ್ಧದಲ್ಲೇ ದೂರವಾಗ್ತಾ ಇರೋದು ನಿಜಕ್ಕೂ ವಿಪರ್ಯಾಸ. ಶುಭಾ ಪೂಂಜಾ ಡಿವೋರ್ಸ್ ಹಿಂದಿನ ನಿಖರವಾದ ಕಾರಣವೇನು? ಈ ಸ್ಟೋರಿ ನೋಡಿ…

ಶುಭಾ ಬಾಳಲ್ಲಿ ಬಿರುಗಾಳಿ: ಶುಭಾ ಪೂಂಜಾ ವೈವಾಹಿಕ ಬದುಕಿನಲ್ಲಿ ನಡೆದಿದ್ದೇನು..?

ಮುರಿದುಬಿತ್ತಾ ಮೊಗ್ಗಿನ ಮನಸಿನ ಹುಡುಗಿ ಮದುವೆ..? ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ಶುಭಾ ಪೂಂಜಾ-ಸುಮಂತ್?

4 ವರ್ಷಗಳ ಹಿಂದೆ ಮದುವೆಯಾಗಿದ್ದ ಶುಭಾ-ಸುಮಂತ್; ಡಿವೋರ್ಸ್ ಗಾಗಿ ಕೋರ್ಟ್ ಮೆಟ್ಟಿಲೇರಿದ ನಟಿಮಣಿ!

ಆಕೆ ಮೊಗ್ಗಿನ ಮನಸಿನ ಹುಡುಗಿ.. ತನ್ನ ಬಬ್ಲಿ ಮಾತುಗಳಿಂದ ಫ್ಯಾನ್ಸ್ ಮನಸು ಕದ್ದಿದ್ದ ಚೆಲುವೆ. ಈಗ ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿದ ಹುಡುಗನ ಜೊತೆ ದಾಂಪತ್ಯ ಜೀವನಕ್ಕೂ ಕಾಲಿಟ್ಟಿದ್ರು. ಆದ್ರೀಗ ಆ ಮದುವೆ ಮುರಿದು ಬಿದ್ದಿದೆ. ಹೌದು ಶುಭಾ ಪೂಂಜಾ (Shubha Poonja) ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆ.

ಮುರಿದುಬಿತ್ತಾ ಮೊಗ್ಗಿನ ಮನಸಿನ ಹುಡುಗಿ ಮದುವೆ..?

ಮೊಗ್ಗಿನ ಮನಸು ಸಿನಿಮಾದಲ್ಲಿ ‘ ನಾನು ಈಗ ಪ್ರೀತಿಯಲ್ಲಿ ಬೀಳಬೇಕು.. ನನಗೂ ಒಬ್ಬ ಗೆಳೆಯಬೇಕು ’ ಅಂತ ಜೊತೆಯಾಗಿ ಹಾಡಿ ಕುಣಿದವರು ರಾಧಿಕಾ ಪಂಡಿತ್ ಮತ್ತು ಶುಭಾ ಪೂಂಜಾ. ಈ ಸಿನಿಮಾದಲ್ಲಿ ರಾಧಿಕಾ ಮದುವೆ ಆಗಿ ಸೆಟಲ್ ಆದ್ರೆ ಶುಭಾ ಪಾತ್ರ ಮಾತ್ರ ಜೀವನ ಹಾಳು ಮಾಡಿಕೊಳ್ಳುತ್ತೆ.

ರಿಯಲ್ ಲೈಫ್​ನಲ್ಲೂ ರಾಧಿಕಾ ಯಶ್ ಜೊತೆ ಕೈ ಹಿಡಿದು ಸೆಟಲ್ ಆದ್ರೆ, ಶುಭಾ ಜೀವನ ಮಾತ್ರ ಥೇಟ್ ಸಿನಿಮಾದಂತೆಯೇ ಆಗಿಬಿಟ್ಟಿದೆ. ಹಿಂದೆ ಯಶಸ್ಸಿನ ಉತ್ತುಂಗದಲ್ಲಿದ್ದಾಗ ಶುಭಾ ಹೆಸರು, ಒಬ್ಬ ವಿವಾಹಿತ ನಟನ ಜೊತೆಗೆ ಥಳುಕು ಹಾಕಿಕೊಂಡಿತ್ತು.

ಆ ನಟನ ವಿಚಾರದಲ್ಲಿ ಅನೇಕ ವಿವಾದ ನಡೆದು ಕೊನೆಗೂ ಅದ್ರಿಂದ ಶುಭಾ ಹೊರಬಂದ್ರು. ಮುಂದೆ ಬಿಗ್ ಬಾಸ್ ಸೀಸನ್ 8 ನಲ್ಲಿ ಸ್ಪರ್ಧಿಯಾಗಿ ಮತ್ತೆ ಜನರ ಮನಸು ಗೆದ್ರು. ಬಿಗ್​ಬಾಸ್​ ನಿಂದ ಹೊರಬರ್ತಾನೆ ಉದ್ಯಮಿ ಸುಮಂತ್ ಬಿಲ್ಲವ ಜೊತೆ ಮದುವೆ ಆಗಿ ಗುಡ್ ನ್ಯೂಸ್ ಕೊಟ್ಟಿದ್ರು.

ಕರಾವಳಿಯಲ್ಲಿ ಅದ್ಧೂರಿಯಾಗಿ ಇಬ್ಬರ ಮದುವೆ ನೆರವೇರಿತ್ತು. ಮದುವೆಯ ನಂತರ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಪ್ರೀತಿಯ ಫೋಟೋಗಳು ವೈರಲ್ ಆಗುತ್ತಿದ್ದವು. ಎಲ್ಲವೂ ಚೆನ್ನಾಗಿದೆ ಎನ್ನುತ್ತಿರುವಾಗಲೇ ಈ ಜೋಡಿ ಈಗ ಬೇರೆಯಾಗುವ ನಿರ್ಧಾರಕ್ಕೆ ಬಂದಿದೆ.

ಹೊಂದಾಣಿಕೆಯ ಕೊರತೆ?

ಮೂಲಗಳ ಪ್ರಕಾರ, ಶುಭಾ ಪೂಂಜಾ ಮತ್ತು ಸುಮಂತ್ ನಡುವೆ ಕಳೆದ ಕೆಲವು ತಿಂಗಳುಗಳಿಂದ ಹೊಂದಾಣಿಕೆಯ ಕೊರತೆ ಎದುರಾಗಿತ್ತು . ಇಬ್ಬರ ನಡುವಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ದೊಡ್ಡದಾಗಿ, ಅಂತಿಮವಾಗಿ ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ದೂರಾಗಲು ನಿರ್ಧರಿಸಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿಯೂ ಪತಿಯೊಂದಿಗಿನ ಫೋಟೋಗಳನ್ನ ಶುಭಾ ಡಿಲೀಟ್ ಮಾಡಿದ್ದಾರೆ. ಪ್ರೀತಿಸಿ ಮದುವೆಯಾದ ಎಷ್ಟೋ ಜೋಡಿಗಳು ಹೀಗೆ ಅರ್ಧದಲ್ಲೇ ದೂರವಾಗ್ತಾ ಇರೋದು ನಿಜಕ್ಕೂ ವಿಪರ್ಯಾಸ. ಶುಭಾ ಪೂಂಜಾ ಡಿವೋರ್ಸ್ ಹಿಂದಿನ ನಿಖರವಾದ ಕಾರಣ ಅವರು ಅಧಿಕೃತವಾಗಿ ಬಾಯಿ ಬಿಟ್ಟರಷ್ಟೇ ಗೊತ್ತಾಗಬೇಕಿದೆ. ಏನೇ ಆಗಲಿ, ಶುಭಾ ಮುಂದಿನ ಜೀವನ ಸುಖಕರವಾಗಿರಲಿ ಅನ್ನೋದೇ ಅಭಿಮಾನಿಗಳ ಆಶಯ.

ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಚಿಂಟು ಅಣ್ಣನ ಹುಟ್ಟುಹಬ್ಬಕ್ಕೆ ಪ್ರಗತಿ ಶೆಟ್ಟಿ ಸ್ಪೆಷಲ್ ವಿಶ್… ಇವತ್ತಾದ್ರೂ ಸಿನಿಮಾ Update ಕೊಡ್ತಾರ ಶೆಟ್ರು?
ಮತ್ತೆ ಶುರುವಾಯ್ತು ಕಾವೇರಿ ಕದನ.. ಕರ್ನಾಟಕಕ್ಕೆ ವಿಲನ್ ಆಗ್ತಾರಾ ತಮಿಳುನಾಡು ಸಿಎಂ ವಿಜಯ್?