
ಟಾಕ್ಸಿಕ್ ಹಾಟ್ ಟಾಪಿಕ್
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಜೂನ್ 4ಕ್ಕೆ ವಿಶ್ವದಾದ್ಯಂತ ಬಿಡುಗಡೆ ಆಗ್ತಾ ಇದೆ. ಆದ್ರೆ ಈ ಸಿನಿಮಾ ಮೇಲಿ ಕುತೂಹಲ ಹೆಚ್ಚಾಗಿದ್ದು, ಮತ್ತು ಒಂದಷ್ಟು ವಿವಾದಕ್ಕೂ ಕಾರಣ ಆಗಿದ್ದು ಅದೊಂದು ಟೀಸರ್. ಇದೀಗ ಆ ಎಲ್ಲಾ ಕುತೂಹಲ ಹಾಗು ವಿವಾದಕ್ಕೆ ರಾಕಿಂಗ್ ಸ್ಟಾರ್ ಯಶ್ ತೆರೆ ಎಳೆದಿದ್ದಾರೆ. ಹಾಗಾದ್ರೆ ರಾಯನ ಹಾಟೆಸ್ಟ್ ಟೀಸರ್ ಬಗ್ಗೆ ಯಶ್ ಏನ್ ಹೇಳಿದ್ದಾರೆ ನೋಡೋಣ ಬನ್ನಿ..
ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಸಿನಿಮಾವನ್ನ ತೋರಿಸಲೇ ಬೇಕು ಅಂತ ಫ್ಯಾನ್ಸ್ ಕಾಯ್ತಾ ಇದ್ದಾರೆ. ಅದಕ್ಕೆ ಕಾರಣ ಆಗಿದ್ದು, ಟಾಕ್ಸಿಕ್ ಮತ್ತು, ಆ ಸಿನಿಮಾದ ಟೀಸರ್..
ಯೆಸ್, ಈ ಟೀಸರ್ ಬಂದಾಗ ಟಾಕ್ಸಿಕ್ ಸೌಂಡು ಬ್ಯಾಂಡು ಭಾರಿ ಜೋರಾಗಿತ್ತು. ಯುನಿವರ್ಸಲ್ ಟೀಸರ್ ನೋಡಿದವರು, ಟಾಕ್ಸಿಕ್ ಬಗ್ಗೆ ತರಹೇವಾರಿಯಾಗಿ ಮಾತನಾಡೋಕೆ ಶುರು ಮಾಡಿದ್ರು. ಟೀಸರ್ ಸೂಪರ್ ಹಿಟ್ ಆದ್ರೂ, ಈ ತರ ರೋಲ್ ಯಶ್ ಮಾಡಬೇಕಿತ್ತಾ.? ಅಂತ ಒಂದು ವರ್ಗ ಕೇಳಿದ್ದು ಇದೆ. ಟ್ರೋಲ್ ಮಾಡಿದ್ದು ಇದೆ.
'ಟಾಕ್ಸಿಕ್' ಟೀಸರ್‌ನಲ್ಲಿದ್ದ ಹಸಿಬಿಸಿ ದೃಶ್ಯಗಳ ಬಗ್ಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ದೂರು ದಾಖಲಾಗಿ ವಿವಾದ ಸೃಷ್ಟಿ ಆಗಿತ್ತು. ಕನ್ನಡ ಸಿನಿಮಾಗಳಲ್ಲಿ ಇದೆಲ್ಲಾ ಅತಿಯಾಯಿತು, ಯಶ್ ಚಿತ್ರಕ್ಕೆ ಇದೆಲ್ಲಾ ಬೇಕಿರಲಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಯಿತು. ಆದರೆ ಯಶ್ ಅಭಿಮಾನಿಗಳು ಇದಕ್ಕೆ ತಿರುಗೇಟು ನೀಡಿದ್ದರು. ಸಿನಿಮಾ ಬರುವವರೆಗೂ ತಾಳ್ಮೆಯಿಂದ ಇರಲಿ, ಕಾದು ನೋಡೋಣ ಎಂದಿದ್ರು.. ಈಗ ಯಶ್ ಉತ್ತರ ಕೊಟ್ಟಿದ್ದಾರೆ.
ಟಾಕ್ಸಿಕ್ ಗೆ ಆ್ಯಕ್ಷನ್ ಕಟ್ ಹೇಳಿರೋದು ಮಹಿಳಾ ನಿರ್ದೇಶಕಿ. ರಾಷ್ಟ್ರಪ್ರಶಸ್ತಿ ವಿಜೇತೆ ಗೀತು ಮೋಹನ್ ದಾಸ್. ಮಹಿಳಾ ನಿರ್ದೇಶಕಿಯೊಬ್ಬರು 'ಟಾಕ್ಸಿಕ್' ರೀತಿಯ ಆಕ್ಷನ್ ಚಿತ್ರವನ್ನು ನಿರ್ದೇಶನ ಮಾಡುವುದು ಅಪರೂಪ ಎಂದಿರೋ ಯಶ್ ಇದು ದೊಡ್ಡ ಪ್ರಮಾಣದ ಆಕ್ಷನ್ ಸಿನಿಮಾ. ಅದರಲ್ಲೂ ಇದು ಹೊಸ ಬಗೆಯ, ವಿಭಿನ್ನವಾದ ಸ್ತ್ರೀ ಹಿನ್ನೆಲೆ ಇರೋ ಗ್ಯಾಂಗ್‌ಸ್ಟರ್ ಸಿನಿಮಾ" ಎಂದಿದ್ದಾರೆ ಯಶ್...
ಯಶ್ ಹುಟ್ಟುಹಬ್ಬದ ದಿನ 'ಟಾಕ್ಸಿಕ್' ಸಿನಿಮಾ ಟೀಸರ್ ಬಿಡುಗಡೆ ಆಗಿತ್ತು. ರಾಯನ ಅವತಾರದಲ್ಲಿ ಯಶ್ ಆರ್ಭಟದ ಜೊತೆಗೆ ಕಾರಿನ ಒಳಗಿನ ರೊಮ್ಯಾಂಟಿಕ್ ದೃಶ್ಯಗಳು ಎಲ್ಲರ ಹುಬ್ಬೇರಿಸಿತ್ತು. ಈ ದೃಶ್ಯದ ವಿರುದ್ಧ ದೂರುಗಳು ದಾಖಲಾಗಿದ್ವು. ಕಾರಿನ ಒಳಗೆ ಯಶ್ ಜೊತೆ ಕಾಣಿಸಿಕೊಂಡ ನಟಿಯ ಹುಡುಕಾಟವೂ ಜೋರಾಗಿತ್ತು. ಕೊನೆಗೆ ನಿರ್ದೇಶಕಿ ಗೀತು ಮೋಹನ್ ದಾಸ್ ಅವರೇ ಮುಂದೆ ಬಂದು ನಟಿ, ಮಾಡೆಲ್ ಬೀಟ್ರಿಜ್ ಟೌಫೆನ್‌ಬಾಚ್ ಈ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದಿದ್ರು. ಕೊನೆಗೆ ಎಲ್ಲವೂ ತಣ್ಣಗಾಗಿತ್ತು..
ಇನ್ನು ಟಾಕ್ಸಿಕ್ ನಲ್ಲಿ ನಯನತಾರ, ಹುಮಾ ಖುರೇಷಿ, ಕಿಯಾರಾ ಅದ್ವಾನಿ, ರುಕ್ಮಿಣಿ ವಸಂತ್ ಸೇರಿ ದೊಡ್ಡ ತಾರಾಗಣ ಇದೆ. ಈ ಗ್ಯಾಂಗ್‌ಸ್ಟರ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಬಿಡುಗಡೆಗೆ ಇನ್ನು 38 ದಿನ ಬಾಕಿಯಿದೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.