ನಟ ಯಶ್ ಅವರು ಕೆಜಿಎಫ್ ಭಾಗ 1 ಮತ್ತು 2 ರ ಬಳಿಕ ಈಗ 'ಟಾಕ್ಸಿಕ್' ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಮಲಯಾಳಂ ಮೂಲದ ನಿರ್ದೇಶಕಿ ಗೀತೂ ಮೋಹನ್‌ದಾಸ್ ಮುಂಬರುವ ಯಶ್ ನಟನೆಯ ಟಾಕ್ಸಿಕ್ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಹಾಗೂ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಜತೆಯಲ್ಲಿರುವ ಹಳೆಯ ವೀಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಶಿವಣ್ಣ ಹಾಗೂ ಯಶ್ ವೇದಿಕೆಯೊಂದರಲ್ಲಿ ಇರುವಾಗ ನಡೆದ ಮಾತುಕತೆಯ ತುಣುಕಿನ ವೀಡಿಯೋ ಇದಾಗಿದೆ. ಈ ವೀಡಿಯೋದಲ್ಲಿ ನಟ ಯಶ್ ಅವರನ್ನು ಪುನೀತ್ ರಾಜ್‌ಕುಮಾರ್ ಕೊನೆಯ ಭೇಟಿ ಬಗ್ಗೆ ಪ್ರಶ್ನೆ ಕೇಳಿ ಅವರಿಂದ ಉತ್ತರ ಪಡೆಯಲಾಗಿದೆ. ಯಶ್ ಕೊಟ್ಟ ಉತ್ತರವನ್ನು ಮೆಚ್ಚಿ ಸಾಮಾಜಿಕ ಮಾಧ್ಯಮಗಳಲ್ಲಿ ಬಹಳಷ್ಟು ಕಾಮೆಂಟ್‌ಗಳು ಬಂದಿವೆ.
'ಇದೇ ರೀತಿ ಈವೆಂಟ್ ಒಂದರಲ್ಲಿ ನೀವು, ಪುನೀತ್ ರಾಜ್‌ಕುಮಾರ್ ಮತ್ತು ಶಿವಣ್ಣ ಮೂವರೂ ಜತೆಯಲ್ಲಿ ಇದ್ರಿ. ಅದೇ ಲಾಸ್ಟ್ ಈವೆಂಟ್ ಆಯ್ತು. ಆ ಬಗ್ಗೆ ಏನು ಹೇಳೋಕೆ ಇಷ್ಟ ಪಡ್ತೀರಿ' ಎಂದು ನಟ ಯಶ್ ಅವರನ್ನು ಕೇಳಲಾಗಿದೆ. ಅದಕ್ಕೆ ಉತ್ತರವಾಗಿ ಪ್ಯಾನ್ ಇಂಡಿಯಾ ಸ್ಟಾರ್ ಯಶ್ 'ಹೌದು ನೋಡಿ, ನಂಬೋಕಾಗಲ್ಲ..! ಲಾಸ್ಟ್ ಟೈಮ್ ನಾನು, ಶಿವಣ್ಣ ಮತ್ತು ಅಪ್ಪು ಅವ್ರು ಇದೇ ತರ ಸ್ಟೇಜ್ ಮೇಲೆ ಭೇಟಿಯಾಗಿದ್ವಿ. ಆದ್ರೆ ಆಮೇಲೆ ಸಿಗೋಕೇ ಆಗ್ಲಿಲ್ಲ. ಅದ್ರ ಬಗ್ಗೆ ಅವ್ರ ಕುಟುಂಬಕ್ಕೆ ಎಷ್ಟು ನೋವಿದ್ಯೋ ಅಷ್ಟೇ ನೋವು ಇಡೀ ಕರ್ನಾಟಕಕ್ಕೇ ಇದೆ.
ಹುಟ್ಟೂರಿಗೆ ಏನ್ಮಾಡ್ಬೇಕು ಅಂತಿದಾರೆ ನೋಡಿ; ನಟ ದೊಡ್ಡಣ್ಣನ ಹೃದಯ ಅದೆಷ್ಟು ದೊಡ್ಡದು ..!
ಅದ್ರಲ್ಲಿ ಡಿಫ್ರೆನ್ಸೇ ಇಲ್ಲ, ಅವ್ರು ಇಡೀ ಕರ್ನಾಟಕಕ್ಕೇ ಮನೆ ಮಗ.. ಏನ್ ಹೇಳೋಕ್ ಆಗುತ್ತೆ? ಇವತ್ತು ಅವ್ರು ಎಲ್ಲೇ ಇದ್ರೂ ಖುಷಿಯಾಗಿರ್ತಾರೆ. ಈ ಒಂದಿನ ಈ ಕಾರ್ಯಕ್ರಮ ಕರ್ನಾಟಕದಲ್ಲಿ ನಡೆದಿರೋದು ಅವ್ರಿಗೆ ಬಹಳ ಖುಷಿ ತರ್ತಿರುತ್ತೆ ಅನ್ನೋದು ನನ್ನ ಮಾತು' ಎಂದಿದ್ದಾರೆ ನಟ ಯಶ್. ಪಕ್ಕದಲ್ಲೇ ಇದ್ದ ಶಿವಣ್ಣ ಯಶ್ ಅವರಾಡಿದ ಮಾತುಗಳಿಗೆ ಮೌನವಾಗಿ ಸಮ್ಮತಿ ನೀಡಿದಂತೆ ತೋರುತ್ತಿತ್ತು ಎನ್ನಬಹುದು. 'ಕರ್ನಾಟಕ ರತ್ನ' ಪುರಸ್ಕ್ರತ ನಟ ಪುನೀತ್ ಅವರನ್ನು ಯಶ್ ಕರ್ನಾಟಕದ ಮನೆಮಗ ಎಂದಿದ್ದಕ್ಕೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ..
ದೊಡ್ಮನೆ ಕುಡಿಯ 'ಸರಳ ಪ್ರೇಮಕ್ಕೆ' ಆಶೀರ್ವದಿಸಲು ಬಸ್ ತಗೊಂಡು ಬಂದ್ರಲ್ಲ ಕರುನಾಡ ಫ್ಯಾನ್ಸ್!
ಅಂದಹಾಗೆ, ನಟ ಯಶ್ ಅವರು ಕೆಜಿಎಫ್ ಭಾಗ 1 ಮತ್ತು 2 ರ ಬಳಿಕ ಈಗ 'ಟಾಕ್ಸಿಕ್' ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಮಲಯಾಳಂ ಮೂಲದ ನಿರ್ದೇಶಕಿ ಗೀತೂ ಮೋಹನ್‌ದಾಸ್ ಮುಂಬರುವ ಯಶ್ ನಟನೆಯ ಟಾಕ್ಸಿಕ್ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಯಶ್ ಲುಕ್ ವಿಭಿನ್ನವಾಗಿದ್ದು, ತಲೆ ಮೇಲೆ ಕವ್ ಬಾಯ್ (Cow Boy)ಮತ್ತು ಕೈನಲ್ಲೊಂದು ಗನ್ (Gun)ಇದೆ, ಈ ಚಿತ್ರವು 2025ರಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ, ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಕರುನಾಡಿನಲ್ಲಿ ಯಾವುದೋ ರೂಪದಲ್ಲಿ ನೆನಪಾಗುತ್ತಲೇ ಇರುತ್ತಾರೆ.
ನಾನ್ಯಾಕೆ 'ರಾಗಿಣಿ ರೂಂ'ಗೆ ಹೋಗ್ಲಿ ಎಂದ್ಬಿಟ್ರು ಉಪೇಂದ್ರ; ಬಿದ್ದು ಬಿದ್ದು ನಕ್ಕ ಶಿವರಾಜ್‌ಕುಮಾರ್!