ಅನ್ನ ಕೊಟ್ಟ ಊರಿಗೆ 'ದೊಡ್ಡ ಗಿಫ್ಟ್' ಕೊಡಲು ಪ್ಲಾನ್; ದೊಡ್ಡಣ್ಣನ ಹೃದಯ ಅದೆಷ್ಟು ದೊಡ್ಡದು ..!

Published : Feb 10, 2024, 02:31 PM ISTUpdated : Feb 10, 2024, 04:42 PM IST
ಅನ್ನ ಕೊಟ್ಟ ಊರಿಗೆ 'ದೊಡ್ಡ ಗಿಫ್ಟ್' ಕೊಡಲು ಪ್ಲಾನ್; ದೊಡ್ಡಣ್ಣನ ಹೃದಯ ಅದೆಷ್ಟು ದೊಡ್ಡದು ..!

ಸಾರಾಂಶ

ನಟ ದೊಡ್ಡಣ್ಣ ಕೇವಲ ಯೋಚನೆ, ಪ್ಲಾನ್ ಮಾಡಿಕೊಂಡು ಕುಳಿತಿಲ್ಲ. ಬದಲಾಗಿ ಅದಕ್ಕೆ ಸಂಬಂಧಪಟ್ಟ ಹಲವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಲೇ ಇದ್ದಾರಂತೆ...

ಸಾಮಾನ್ಯವಾಗಿ ಬಹುತೇಕ ಸಿನಿಮಾ ನಟನಟಿಯರ ಕನಸು ಬಹಳಷ್ಟು ಹಣ ಮಾಡಿ ಸ್ಟ್ಯಾಂಡರ್ಡ್ ಮೆಂಟೇನ್ ಮಾಡುವುದಾಗಿದೆ. ಸಿನಿಮಾ ಅವಕಾಶ ಕಡಿಮೆಯಾದ ಮೇಲೆ ಕೂಡಿಟ್ಟ ಹಣವನ್ನು ಕುಳಿತುಕೊಂಡು ತಿಂದು ಕರಗಿಸುವುದು ಹೆಚ್ಚಿನ ಸೆಲೆಬ್ರಟಿಗಳು ಮಾಡುವ ಕೆಲಸ ಎನ್ನಬಹುದು. ಆದರೆ ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಹಲವರಂಥಲ್ಲ ಎನ್ನಬಹುದು. ಕಾರಣ, ಅವರು ಸಾಮಾಜಿಕ ಕಳಕಳಿ ಮೆರೆಯುವ ಕೆಲಸ ಮಾಡಲು ಹೊರಟಿದ್ದಾರೆ. ಅದೂ ಕೂಡ ಅಂತಿಂಥ ಕೆಲಸವಲ್ಲ, ಬಹಳಷ್ಟು ಜನರಿಗೆ ಉಪಯೋಗವಾಗುವಂಥ ಕೆಲಸ, ಇತಿಹಾಸದ ಪುಟದಲ್ಲಿ ಅಜರಾಮರವಾಗಿ ಉಳಿಯುವಂಥಹ ಕೆಲಸ ಎನ್ನಬಹುದು. 

ಹೌದು, ನಟ ದೊಡ್ಡಣ್ಣ (Actor Doddanna)ಅಂತಹ 'ಗ್ರೇಟ್' ಎನ್ನಬಹುದಾದ ಕೆಲಸಕ್ಕೆ ಕೈ ಹಾಕಿದ್ದಾರೆ. ಅವರು ತಾವು 20 ವರ್ಷ ಅನ್ನ ತಿಂದ ಊರು ಭದ್ರಾವತಿಯ ಋಣ ತೀರಿಸ್ಬೇಕು ಅಂತ ಹೊಸದೊಂದು ಕೆಲಸಕ್ಕೆ ಕೈ ಹಾಕಿದ್ದಾರೆ. ಭದ್ರಾವತಿಯಲ್ಲಿ ಈ ಮೊದಲು ಕ್ರಿಯಾಶೀಲವಾಗಿದ್ದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಪುನಶ್ಚೇತನ ಮಾಡಬೇಕು ಅಂತ ಪ್ಲಾನ್ ಹಾಕಿಕೊಂಡಿದ್ದಾರೆ. 'VISL Factory'ಯನ್ನು ಮುಚ್ಚಬೇಕು ಅಂತ ಈಗಾಗಲೇ ಕೇಂದ್ರ ಸರ್ಕಾರ ಆದೇಶವನ್ನೂ ಕೊಟ್ಟಿದೆ ಎನ್ನಲಾಗಿದೆ. ಈ ಸಂಗತಿಯೀಗ ನಟ ದೊಡ್ಡಣ್ಣನ ಮನಸ್ಸು ಕಲಕಿದೆ, ಹೃದಯ ಭಾರವಾಗಿದೆ. 

ಆದರೆ, ವಿಐಎಸ್‌ಎಲ್‌ ಫ್ಯಾಕ್ಟರಿಯನ್ನು ಮುಚ್ಚುವ ಆದೇಶ ಹಿಂಪಡೆಯಬೇಕು, ಅದನ್ನು ಮತ್ತೆ ಓಪನ್ ಮಾಡಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಬೇಕು ಎಂದು ದೊಡ್ಡಣ್ಣನವರು ಯೋಚಿಸುತ್ತಿದ್ದಾರಂತೆ. ಅಲ್ಲಿರುವ 800 ಎಕರೆ ಪ್ರದೇಶದಲ್ಲಿ ದೊಡ್ಡ ಪ್ಲಾಂಟ್ ಓಪನ್ ಮಾಡಬೇಕು, ಕಾರ್ಖಾನೆ ಮೊದಲಿಗಿಂತ ಚೆನ್ನಾಗಿ ನಡೆಯಬೇಕು ಎಂದು ನಟ ದೊಡ್ಡಣ್ಣ ಪ್ಲಾನ್ ಮಾಡಿದ್ದಾರಂತೆ. ಈ ವಿಷಯವನ್ನು ಅವರು ನಮ್ಮ ಏಷ್ಯಾನೆಟ್ ಸುವರ್ಣಾ ಜತೆ ಹಂಚಿಕೊಂಡಿದ್ದಾರೆ. 'VISL ಅನ್ನು ಯಾವುದೇ ಕಾರಣಕ್ಕೆ ಮುಚ್ಚಬಾರದು, ಮತ್ತೆ ಅದು ಶುರುವಾಗಿ ಮೊದಲಿನಂತೆ ಲಕ್ಷಾಂತರ ಜನರಿಗೆ ಅನ್ನ ಕೊಡುವಂತಾಗಬೇಕು' ಎಂದಿದ್ದಾರೆ ನಟ ದೊಡ್ಢಣ್ಣ.

ವಿಷ್ಣುವರ್ಧನ್‌-ಭಾರತಿ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದು ಯಾಕೆ; ಎರಡೂ ಹೆಣ್ಣು ಮಕ್ಕಳೇ ಯಾಕೆ..!?

ನಟ ದೊಡ್ಡಣ್ಣ ಕೇವಲ ಯೋಚನೆ, ಪ್ಲಾನ್ ಮಾಡಿಕೊಂಡು ಕುಳಿತಿಲ್ಲ. ಬದಲಾಗಿ ಅದಕ್ಕೆ ಸಂಬಂಧಪಟ್ಟ ಹಲವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಲೇ ಇದ್ದಾರಂತೆ. ಕರ್ನಾಟಕ ಮೂಲದ ಕೇಂದ್ರ ವಿತ್ತ ಸಚಿವೆ  ನಿರ್ಮಲಾ ಸೀತಾರಾಮನ್ ಸೇರಿದಂತೆ, ಖುದ್ದು ಪ್ರಧಾನಿ ಮೋದಿಯವರನ್ನೇ ಭೆಟಿಯಾಗಿ ಮಾತುಕತೆ ನಡೆಸಲು ನಟ ದೊಡ್ಡಣ್ಣ ಪ್ಲಾನ್ ಹಾಕಿಕೊಂಡಿದ್ದಾರಂತೆ. ಈ ನಿಟ್ಟಿನಲ್ಲಿ ಅವರು ಕರ್ನಾಟಕದ ಗೌರವಾನ್ವಿತ ವ್ಯಕ್ತಿಯೊಬ್ಬರ ಮುಖಾಂತರ ಪ್ರಧಾನಿ ನರೇಂದ್ರ ಮೋದಿಯವರನ್ನು ಬೇಟಿಯಾಗಲು ಸದ್ಯದಲ್ಲೇ ದೆಹಲಿಗೆ ಹೋಗಲಿದ್ದಾರಂತೆ. 

ದೊಡ್ಮನೆ ಕುಡಿಯ 'ಸರಳ ಪ್ರೇಮಕ್ಕೆ' ಆಶೀರ್ವದಿಸಲು ಬಸ್ ತಗೊಂಡು ಬಂದ್ರಲ್ಲ ಕರುನಾಡ ಫ್ಯಾನ್ಸ್!

ನಟ ದೊಡ್ಡಣ್ಣ ಈ ಬಗ್ಗೆ ಮಾತನಾಡುತ್ತ 'ನಾನು ಹುಟ್ಟಿದ್ದು ಹಾಸನ ಜಲ್ಲೆ  ಅರಸೀಕೆರೆ. ಅರಸೀಕೆರೆಯಲ್ಲಿ ಶಿಕ್ಷಣ ಪಡೆದ ನಾನು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿ, 20 ವರ್ಷ (1968 ರಿಂದ 1988) ಅಲ್ಲಿ ಕೆಲಸ ಮಾಡಿದ್ದೇನೆ. ಅಲ್ಲಿ ನನ್ನ ನೆನಪಿದೆ, ಸ್ನೇಹಿತರಿದ್ದಾರೆ. ಅಷ್ಟೇ ಅಲ್ಲ, ನನ್ನ ಮೂವರು ಮಕ್ಕಳೂ ಸಹ ಅಲ್ಲಿಯೇ ಹುಟ್ಟಿ ಅಲ್ಲಿಯೇ ಶಿಕ್ಷಣ ಪಡೆದಿದ್ದಾರೆ. ನಾನು ಬಣ್ಣದ ಬದುಕು ಅರಸಿ ಬೆಂಗಳೂರಿಗೆ ಬಂದರೂ ನಾನು ನನ್ನ ಊರಿನ ನಂಟನ್ನಾಗಲೀ, ಅನ್ನ ಕೊಟ್ಟ ಭದ್ರಾವತಿಯ ಋಣವನ್ನಾಗಲೀ ಕಡಿದುಕೊಂಡಿಲ್ಲ. ನಾನೀಗ ಬದುಕಿನ ಇಳಿಸಂಜೆಯಲ್ಲಿ ಇದ್ಧೇನೆ. ಹುಟ್ಟಿದ ಊರಿನ ಋಣವನ್ನು ತೀರಸಬೇಕೆಂದು ನನ್ನ ಮನಸ್ಸು ಹೇಳುತ್ತಿದೆ. 

ನಾನ್ಯಾಕೆ 'ರಾಗಿಣಿ ರೂಂ'ಗೆ ಹೋಗ್ಲಿ ಎಂದ್ಬಿಟ್ರು ಉಪೇಂದ್ರ; ಬಿದ್ದು ಬಿದ್ದು ನಕ್ಕ ಶಿವರಾಜ್‌ಕುಮಾರ್!

ಅದಕ್ಕೆ ಸರಿಯಾಗಿ ನಮ್ಮ ಊರಿನ ಈ ಕಾರ್ಖಾನೆ ಮುಚ್ಚುವ ಸ್ಥಿತಿಯಲ್ಲಿದೆ. VSIL ಫ್ಯಾಕ್ಟರಿ ಮುಚ್ಚಿ ಹೋಗಿ ಇತಿಹಾಸದ ಪುಟ ಸೇರಬಾರದು, ಮತ್ತೆ ಅದು ಹಲವರಿಗೆ ಅನ್ನ ನೀಡುವ ತಾಣವಾಗಬೇಕು. ಅದೇ ನನ್ನಾಸೆ, ಸದ್ಯಕ್ಕೆ ಅದನ್ನು ಮಾಡುವುದೇ ನನ್ನ ಗುರಿ' ಎಂದಿದ್ದಾರೆ ಹಿರಿಯ ನಟ ದೊಡ್ಡಣ್ಣ. ಮುಂದಿನ ದಿನಗಳಲ್ಲಿ ಈ ದಿಸೆಯಲ್ಲಿ ಅವರು ಕೈಗೊಳ್ಳುವ ಯೋಜನೆ ಏನು, ಎಷ್ಟರ ಮಟ್ಟಿಗೆ ಅದು ಫಲಪ್ರದವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. 

ಒತ್ತಾಯಕ್ಕೆ ಮಣಿದು ಮದುವೆ, ದಿನಂಪ್ರತಿ ಜಗಳ; ಡಿವೋರ್ಸ್ ಬಳಿಕ ಏನ್ ಮಾಡ್ತಿದಾರೆ ನಟಿ ರೂಪಿಣಿ..?!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?
Karna Serial: ಸಂಜಯ್‌ ಕುತಂತ್ರಕ್ಕೆ ಬಲಿಯಾದ ನಿತ್ಯಾ: ಈಗ ಕರ್ಣನ ಜೊತೆ ಅಸಲಿ ಮದುವೆ ಆಗ್ಲೇಬೇಕು! ನಿಧಿ ಕಥೆ ಏನು?