
ಕಠಿಣ ಶ್ರಮದ ಹಿಂದೆ ದೊಡ್ಡ ಜಯವಿದೆ. ಇದಕ್ಕೆ ಕಾಂತಾರ ಚಾಪ್ಟರ್ 1 (Kantara Chapter 1) ಗಿಂತ ಉತ್ತಮ ನಿದರ್ಶನ ಬೇಕಿಲ್ಲ. ರಿಷಬ್ ಶೆಟ್ಟಿ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಸಾಕಷ್ಟು ಸಮಸ್ಯೆ, ಸಾವು – ನೋವಿನ ಮಧ್ಯೆಯೂ ಹಗಲಿರುಳೆನ್ನದೆ ಶ್ರಮಿಸಿದ ತಂಡಕ್ಕೆ ಈಗ ವಿಶ್ವ ಮಟ್ಟದಲ್ಲಿ ಮನ್ನಣೆ ಸಿಕ್ಕಿದೆ. ಕಾಂತಾರಾ ಚಾಪ್ಟರ್ 1 ದಾಖಲೆ ಬರೆದಿದೆ. ಭಾರತದ ನಂಬರ್ ಒನ್ ಚಿತ್ರವಾಗಿ ಹೊರ ಹೊಮ್ಮಿದೆ. ರಿಷಬ್ ಶೆಟ್ಟಿ ಹೋದಲ್ಲೆಲ್ಲ ಹೂಮಳೆಯಾಗ್ತಿದೆ. ಕಾಂತಾರಾ ಚಾಪ್ಟರ್ 1 ಸಿನಿಮಾ ನೋಡಿದವರಿಗೆ ಕಣ್ಣಲ್ಲಿ ಉಳಿದಿರೋದು ಕ್ಲೈಮ್ಯಾಕ್ಸ್. ಸಿನಿಮಾ ಕ್ಲೈಮ್ಯಾಕ್ಸ್ ಅತ್ಯಧ್ಬುತವಾಗಿ ಮೂಡಿ ಬಂದಿದೆ, ರಿಷಬ್ ಶೆಟ್ಟಿ ಆಕ್ಟಿಂಗ್ ಹೊಗಳಿಕೆ ಪದವಿಲ್ಲ ಎಂಬ ಮಾತುಗಳು ಕೇಳಿ ಬರ್ತಿವೆ. ಆದ್ರೆ ಕ್ಲೈಮ್ಯಾಕ್ಸ್ ವೇಳೆ ರಿಷಬ್ ಶೆಟ್ಟಿ (Rishab Shetty) ಅನುಭವಿಸಿದ ನೋವು ಹೇಳತೀರದು.
ಸಿನಿಮಾ ಶೂಟಿಂಗ್ ಮುಗಿಯುತ್ತಿದ್ದಂತೆ ರಿಷಬ್ ಶೆಟ್ಟಿ ತಮ್ಮ ಅನುಭವ ಹಂಚಿಕೊಂ ಡಿದ್ದರು. ಸಾಕಷ್ಟು ಕಷ್ಟಪಟ್ಟಿದ್ದೆ ಎಂಬುದನ್ನು ತಿಳಿಸಿದ್ದರು. ಆದ್ರೀಗ ಫೋಟೋ ಸಾಕ್ಷ್ಯ ನೀಡಿದ್ದಾರೆ. ರಿಷಬ್ ಶೆಟ್ಟಿ ಇನ್ಸ್ಟಾಗ್ರಾಮ್ ನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲಿ ಅವ್ರ ಕಾಲುಗಳನ್ನು ನೀವು ನೋಡ್ಬಹುದು. ಕಪ್ಪಗಾಗಿರುವ, ಊದಿಕೊಂಡಿರುವ ಕಾಲುಗಳ ಫೋಟೋ ಹಾಕಿದ ರಿಷಬ್ ಶೆಟ್ಟಿ, ಕ್ಲೈಮ್ಯಾಕ್ಸ್ ಶೂಟಿಂಗ್ ಸಮಯ.. ಊದಿಕೊಂಡಿದ್ದ ಕಾಲು , ನಿತ್ರಾಣವಾಗಿದ್ದ ದೇಹ.. ಇವತ್ತು ಕೋಟ್ಯಂತರ ಜನ ನೋಡಿ ಮೆಚ್ಚುವಹಾಗೆ ಆಗಿದೆ. ಇದು ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯ. ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ತ್ಯಪಡಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು ಅಂತ ಶೀರ್ಷಿಕೆ ಹಾಕಿದ್ದಾರೆ.
ರಿಷಬ್ ನನ್ನ ಒಳ್ಳೆಯ ಸ್ನೇಹಿತ.. ಅವರಿಗೆ ಮತ್ತೊಮ್ಮೆ ನ್ಯಾಷನಲ್ ಅವಾರ್ಡ್ ಬರಬೇಕು:
ಅಕ್ಟೋಬರ್ 2 ರಂದು ಬಿಡುಗಡೆಯಾದ ಕಾಂತಾರಾ ಚಾಪ್ಟರ್ 1, ಶರವೇಗದಲ್ಲಿ ಓಡ್ತಿದೆ. ಬರೀ ಕನ್ನಡ ಮಾತ್ರವಲ್ಲ ಹಿಂದಿ, ತಮಿಳು, ತೆಲುಗು ಎಲ್ಲ ಭಾಷೆಯ ಜನ ಕಾಂತಾರವನ್ನು ಮೆಚ್ಚಿಕೊಂಡಿದ್ದಾರೆ. ಈಗಾಗಲೇ 500 ಕೋಟಿ ಕ್ಲಬ್ ಸೇರಿರುವ ಕಾಂತಾರಾ ಸಿನಿಮಾ, 600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ರಜನಿ ಕಾಂತ್ ಅಭಿನಯದ ಜೈಲರ್, ರಣಬೀರ್ ಕಪೂರ್ ಅಭಿನಯದ ಸಂಜು ದಾಖಲೆಯನ್ನು ಮುರಿದಿದ್ದ ಸಿನಿಮಾ, ಈಗ ಬಾಹುಬಲಿ ದಿ ಬಿಗನಿಂಗ್ ಸಿನಿಮಾ ದಾಖಲೆ ಮುರಿದು ನಂಬರ್ 1 ಪಟ್ಟಕ್ಕೇರಿದೆ.
ಕಾಂತಾರ ಚಾಪ್ಟರ್ 1ನಲ್ಲಿ ನನ್ನ ಪಾತ್ರದ ನರೇಶನ್ ಕೇಳಿದಾಗ ಟೆನ್ಶನ್ ಆಗಿತ್ತು: ರುಕ್ಮಿಣಿ ವಸಂತ್
ಕಾಂತಾರಾ ಸಿನಿಮಾ ನಂತ್ರ ಪ್ರೇಕ್ಷಕರು ಕಾಂತಾರಾ ಚಾಪ್ಟರ್ 1 ಸಿನಿಮಾ ವೀಕ್ಷಣೆಗೆ ತುದಿಗಾಲಿನಲ್ಲಿ ನಿಂತಿದ್ರು. ಮೂರು ವರ್ಷಗಳಿಂದ ಸಿನಿಮಾ ಶೂಟಿಂಗ್ ನಡೆದಿತ್ತು. ಕುಂದಾಪುರದ ಕೆರಾಡಿಯಲ್ಲೇ ಬಹುತೇಕ ಸಿನಿಮಾ ಶೂಟಿಂಗ್ ಮಾಡಲಾಗಿದೆ. ಕಾಂತಾರಾ ಚಾಪ್ಟರ್ 1 ಸಿನಿಮಾವನ್ನು 125 ಕೋಟಿ ರೂಪಾಯಿಯಲ್ಲಿ ನಿರ್ಮಿಸಲಾಗಿದೆ. ಹೊಂಬಾಳೆ ಫಿಲ್ಮಂ ನಿರ್ಮಾಣದ ಕಾಂತಾರಾ ಚಾಪ್ಟರ್ 1 ಸಿನಿಮಾ, 2022ರಲ್ಲಿ ಬಿಡುಗಡೆಯಾದ ಕಾಂತಾರಾ ಸಿನಿಮಾದ ಪ್ರೀಕ್ವೆಲ್. ಚಿತ್ರ ತೆರೆಗೆ ಬರ್ತಿದ್ದಂತೆ ಭಾರತೀಯ ಚಿತ್ರ ರಂಗದಲ್ಲಿ ದೊಡ್ಡ ದಾಖಲೆ ಬರೆಯುತ್ತ ಚಿತ್ರ ಮುನ್ನುಗ್ಗುತ್ತಿದೆ. ಅದ್ಭುತ ದೃಶ್ಯ ಕಾವ್ಯ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ದೇಶ ವಿದೇಶಗಳಿಂದ ಮೆಚ್ಚುಗೆಯ ಸುರಿಮಳೆ ವ್ಯಕ್ತವಾಗುತ್ತಿದೆ. ರಿಷಬ್ ಶೆಟ್ಟಿಗೆ ಮುಂಬೈನಲ್ಲಿ ಹೂ ಮಳೆ ಮೂಲಕ ಭರ್ಜರಿ ಸ್ವಾಗತ ಸಿಕ್ಕಿದೆ. ಸಂಪೂರ್ಣ ಹೂವಿನಲ್ಲಿ ಮುಚ್ಚಿ ಹೋಗಿದ್ದ ರಿಷಬ್ ಶೆಟ್ಟಿ ನೋಡಲು ಜನಸಾಗರವೇ ಹರಿದು ಬಂದಿತ್ತು. ಇದು ಕಾಂತಾರಾ ಚಾಪ್ಟರ್ 1ರ ಪ್ರಸಿದ್ಧಿಯನ್ನು ಹೇಳ್ತಿದೆ. ಈಗಾಗಲೇ ಸಿನಿಮಾವನ್ನು ಮೂರ್ನಾಲ್ಕು ಬಾರಿ ಕಣ್ತುಂಬಿಕೊಂಡಿರುವ ಫ್ಯಾನ್ಸ್, ಕಾಂತಾರಾ ಮುಂದಿನ ಭಾಗಕ್ಕೆ ಕಾಯ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಶೆಟ್ಟಿ ಊದಿಕೊಂಡಿರುವ ಕಾಲು ನೋಡಿದ ಫ್ಯಾನ್ಸ್, ರಿಷಬ್ ಶೆಟ್ಟಿಗೆ ಆಸ್ಕರ್ ಪ್ರಶಸ್ತಿ ಸಿಗ್ಬೇಕು ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.