ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಬಾಲಿವುಡ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಬಗ್ಗೆ ಕನ್ನಡ ಸಿನಿಪ್ರಿಯರಿಂದ ಪರ-ವಿರೋಧದ ಚರ್ಚೆಗಳು ನಡೆಯುತ್ತಿದ್ದು, ಕೆಲವರು ಕನ್ನಡದ ಇತಿಹಾಸದ ವೀರರ ಬಗ್ಗೆ ಸಿನಿಮಾ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು (ಡಿ.3): ಕಾಂತಾರ ಸಿನಿಮಾದ ಮೂಲಕ ಭಾರತೀಯ ಸಿನಿರಂಗ ಹುಬ್ಬೇರುವಂತೆ ಮಾಡಿದ್ದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಬಾಲಿವುಡ್‌ಗೆ ಭರ್ಜರಿಯಾಗಿ ಎಂಟ್ರಿ ಕೊಡೋಕೆ ಸಜ್ಜಾಗಿದ್ದಾರೆ. ಜೈ ಹನುಮಾನ್ ಸಿನಿಮಾದಲ್ಲಿ ಹನುಮಾನ್ ಪಾತ್ರದ ಮೂಲಕ ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಡೋದನ್ನು ಖಚಿತಪಡಿಸಿದ್ದ ರಿಷಬ್ ಶೆಟ್ಟಿ, ಬಾಲಿವುಡ್‌ಗೆ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ಪಾದಾರ್ಪಣೆ ಮಾಡಲಿದ್ದಾರೆ. ಸಂದೀಪ್ ಸಿಂಗ್ ನಿರ್ದೇಶನದ 'ದ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಹೆಸರಿನಲ್ಲಿ ಶಿವಾಜಿ ಮಹಾರಾಜರ ಬಯೋಪಿಕ್ ಬಾಲಿವುಡ್‌ನಲ್ಲಿ ಘೋಷಣೆಯಾಗಿದ್ದು, ಇದರಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರವನ್ನು ರಿಷಬ್ ಶೆಟ್ಟಿ ಮಾಡುತ್ತಿದ್ದಾರೆ. ಇದರ ಬೆನ್ನಲ್ಲಿಯೇ ಕನ್ನಡ ಸಿನಿ ಅಭಿಮಾನಿಗಳ ಬೇಸರ ವ್ಯಕ್ತವಾಗಿದ್ದು, ಛತ್ರಪತಿ ಶಿವಾಜಿ ಪಾತ್ರ ಬೇಡ ಎಂದು ಹೇಳುತ್ತಿದ್ದಾರೆ.
ಕಾಂತಾರ ಪ್ರೀಕ್ವಲ್ ಭಾಗದ ನಿರ್ದೇಶನ ಹಾಗೂ ನಟನೆಯನ್ನು ಪೂರ್ಣ ಮಾಡಿರುವ ರಿಷಬ್ ಶೆಟ್ಟಿ, ಶೂಟಿಂಗ್ ನಂತರದ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. 2025ರ ಅಕ್ಟೋಬರ್ 2 ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಇದರ ಬೆನ್ನಲ್ಲಿಯೇ ರಿಷಬ್ ಹೊಸ ಹೊಸ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಛತ್ರಪತಿ ಶಿವಾಜಿ ಬಯೋಪಿಕ್‌ನ ಮೂಲಕ ಅವರು ಬಾಲಿವುಡ್‌ಗೆ ಲಗ್ಗೆ ಇಡುತ್ತಿದ್ದಾರೆ.
ಸಿನಿಮಾದ ಪೋಸ್ಟರ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬೆನ್ನಲ್ಲಿಯೇ ಕನ್ನಡದ ಸಿನಿ ಪ್ರೇಕ್ಷಕರಿಂದ ಪರ ವಿರೋಧದ ಚರ್ಚೆಗಳು ಆರಂಭವಾಗಿದೆ. ಶಿವಾಜಿ ಮಹಾರಾಜರೊಂದಿಗೆ ನೀವು ಕನ್ನಡದ ಇಮ್ಮಡಿ ಪುಲುಕೇಶಿ ಚಿತ್ರವನ್ನೂ ಮಾಡಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ದಯವಿಟ್ಟು ಮೊದಲು ಇತಿಹಾಸ ಓದಿ 1674 ರಿಂದ 1680ರವರೆಗೆ ಆಳಿದ ಶಿವಾಜಿ ಅವರು ಅದು ಹೇಗೆ ಹಿಂದೂ ಸಾಮ್ರಾಜ್ಯ ಉಳಿವಿಗೆ ಕಾರಣರಾದರು ಅಂತ ದಯವಿಟ್ಟು ಯಾರಾದ್ರೂ ಸ್ಪಲ್ಪ ತಿಳಿಸಿ' ಎಂದು ರಿಷಬ್ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.
'ಆಕೆ ನಟಿ ಅನ್ನೋದೇ ಗೊತ್ತಿರ್ಲಿಲ್ಲ..' ಸೊಸೆಯ ಸಾವಿನ ಬಗ್ಗೆ ಮೌನ ಮುರಿದ ಶೋಭಿತಾ ಶಿವಣ್ಣ ಮಾವ
'ಶೆಟ್ರೆ ನೀವು ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನೀವ್ ಒಬ್ಬರೇ ನೋಡಿ ಹಿಂದೂ ಧರ್ಮದ ಬಗ್ಗೆ ಒಳ್ಳೆ ಒಳ್ಳೆ ಚಿತ್ರವನ್ನು ಕೊಡುತ್ತಿದ್ದೀರಾ ದೇವರು ನಿಮಗೆ ಆಯಸ್ಸು ಆರೋಗ್ಯ ತುಂಬಾ ಹೆಚ್ಚಿಸಲಿ form (ಉತ್ತರ ಕರ್ನಾಟಕದ ಬಿಜಾಪುರ ಹುಡುಗ) ಜೈ ಶ್ರೀ ರಾಮ್' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 'ಅವತ್ತು ಇಮ್ಮಡಿ ಪುಲಿಕೇಶಿ ಮಹಾರಾಜರು ಇರಲಿಲ್ಲ ಅಂದ್ರೆ ಇವತ್ತು ಇವರನ್ನ ಈ ರೀತಿಯಲ್ಲಿ ನೋಡ್ತಾ ಇದ್ವಾ ಯೋಚನೆ ಮಾಡಿ' ಎಂದು ಸಿನಿಮಾ ಬಗ್ಗೆ ಟೀಕೆ ಮಾಡಿದ್ದಾರೆ.
ಶೋಭಿತಾ ಶಿವಣ್ಣ ಮರಣೋತ್ತರ ಪರೀಕ್ಷೆ ಮುಕ್ತಾಯ, ವೈದ್ಯರು ಹೇಳಿದ್ದೇನು?
'ಇಮ್ಮಡಿ ಪುಲಿಕೇಶಿ ಅಮೋಘ ವರ್ಷ ನೃಪತುಂಗ ಮೂರನೇ ಗೋವಿಂದ ಆರನೇ ವಿಕ್ರಮಾದಿತ್ಯನ ಇವರ ಬಗ್ಗೆ ಓದಿ ಆಮೇಲೆ ಸಿನಿಮಾ ಹಣಕ್ಕೋಸ್ಕೋರ ಸಿನಿಮಾ ಮಾಡ್ಬೇಡಿ ಸ್ವಾಭಿಮಾನ ಅಸ್ಮಿತೆಗಾಗಿ ಸಿನಿಮಾ ಮಾಡಿ ಈ ವಿಷಯದಲ್ಲಿ ನಾನ್ ನಿಮ್ಮನ್ನ ಬೆಂಬಲಿಸೋಕ್ ಆಗಲ್ಲ ಶೆಟ್ರೆ..' ಎನ್ನುವ ಕಾಮೆಂಟ್‌ಗಳು ಬಂದಿವೆ. 'ಭರತ ಪಥೇಶ್ವರ, ಪರಮೇಶ್ವರ, ನೌಕಾಪಡೆಯ ಪಿತಾಮಹ ಅರಬ್ಬರ ಗಂಡ ಭಾರತದ ಧರ್ಮ ಸಾಂಸ್ಕೃತಿ ಪದ್ಧತಿ ಭಾಷೆಗಳನ್ನು ಉಳಿಸಿದ ಮೊದಲ ವೀರ ಚಾಲುಕ್ಯರ ಪರಮೇಶ್ವರ ಶ್ರೀ ಶ್ರೀ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರು. ಕರುನಾಡ ಕಂಡ ವೀರ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 'ಕಾಂತಾರ ಟೈಮ್ ಅಲ್ಲಿ ಒಂದು ಮಾತು ಹೇಳಿದ್ರಿ ಮೊದಲು ನಮ್ ಮಣ್ಣಿನ ಸಿನಿಮಾ ಮಾಡ್ಬೇಕು ಆಮೇಲೆ ಬೇರೆ ಅಂತ ಇವಾಗ ನೀವು ಮಾಡ್ತಾ ಇರೋದು ಏನು? ನಮ್ಮಲ್ಲೇ ಇನ್ನೂ ತುಂಬಾ ಕತೆಗಳು ಇದಾವೆ ಧಿಕ್ಕಾರ ನಿಮ್ಮ ಈ ನಿರ್ಧಾರಕ್ಕೆ..' ಎಂದು ರಿಷಬ್ ಅವರ ಚಿತ್ರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.