ನಾ ನಿನ್ನ ಬಿಡಲಾರೆಯಲ್ಲಿ ನಟಿಯ ಹಾರರ್ ರೂಪ ಬಂದದ್ದು ಹೇಗೆ? ತ್ರಿಡಿ ತಂತ್ರಜ್ಞಾನದ ಮೇಕಿಂಗ್‌ ವಿಡಿಯೋ ವೈರಲ್‌

By Suchethana D  |  First Published Dec 2, 2024, 9:38 PM IST

ನಾ ನಿನ್ನ ಬಿಡಲಾರೆಯಲ್ಲಿ  ನಟಿಯ ಹಾರರ್ ರೂಪ ಬಂದದ್ದು ಹೇಗೆ? ತ್ರಿಡಿ ತಂತ್ರಜ್ಞಾನದ ಮೇಕಿಂಗ್‌ ವಿಡಿಯೋ ವೈರಲ್‌
 


ನವೀನ್ ಜಿ.ಎಸ್​ ನಿರ್ದೇಶನದ ಭಾರತಿ ಬಾಲಿ ನಿರ್ಮಾಣದ ನಾ ನಿನ್ನ ಬಿಡಲಾರೆ ಚಿತ್ರವು ಮೊನ್ನೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ದೆವ್ವದ ಮನೆಯಿಂದ ಶುರುವಾಗುವ ಈ ಸಿನಿಮಾದ ಕಥೆ ವಿವಿಧ ರೀತಿಯ ತಿರುವುಗಳನ್ನು ಪಡೆದುಕೊಂಡು ದ್ವಿತಿಯಾರ್ಧದಲ್ಲಿ ಕುತೂಹಲವನ್ನು ಕೆರಳಿಸುತ್ತದೆ. ಅಂಬಾಲಿ ಭಾರತಿ, ಕೆ.ಎಸ್. ಶ್ರೀಧರ್,  ಪಂಚಿ, ಲೋಹಿತ್, ಸೀರುಂಡೆ ರಘು, ಶ್ರೀನಿವಾಸ್​ ಪ್ರಭು ಮುಂತಾದವರು ನಟಿಸಿರುವ ಈ ಚಿತ್ರದಲ್ಲಿ ಅಂಬಾಲಿ ಭಾರತಿ ಅವರಿಗೆ ಹಾರರ್ ಮುಖ ಹೇಗೆ ಮಾಡಲಾಗಿತ್ತು ಎನ್ನುವ ವಿಡಿಯೋ ಇದೀಗ ವೈರಲ್‌ ಆಗಿದೆ. ತ್ರಿಡಿ ಫೇಸ್‌ ಮೌಲ್ಡಿಂಗ್‌ ತಂತ್ರಜ್ಞಾನವನ್ನು ಬಳಸಿ ಈ ಮುಖಚಹರೆಯನ್ನು ಹೇಗೆ ಮಾಡಲಾಗಿದೆ ಎನ್ನುವ ವಿಡಿಯೋ ಅನ್ನು ಸ್ಯಾಂಡಲ್‌ವುಡ್‌. ಸಮಾಚಾರ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‍‌ ಮಾಡಲಾಗಿದೆ.

ಅಷ್ಟಕ್ಕೂ ನಾನಿನಲ್ಲ ಬಿಡಲಾರೆ ಎಂದಾಕ್ಷಣ ಎಲ್ಲರ ಗಮನ ಹೋಗುವುದು 1979ರಲ್ಲಿ ಬಿಡುಗಡೆಗೊಂಡ  ಅನಂತ್ ನಾಗ್ ಅಭಿನಯಯದ ಚಿತ್ರ.  ಅನಂತ್ ನಾಗ್ ಮತ್ತು ಲಕ್ಷ್ಮೀ ಅವರ ಜೋಡಿ ಸೂಪರ್‍‌ಹಿಟ್‌ ಆಗಿರುವ ಚಿತ್ರವಿದು. ಈ ಚಿತ್ರವನ್ನು ಹಿಂದಿಯಲ್ಲಿ ಮಂಗಳಸೂತ್ರ ಎಂದು ರೀಮೇಕ್ ಮಾಡಲಾಗಿತ್ತು. ಅಲ್ಲಿಯೂ  ಅನಂತ್ ನಾಗ್ ಅಭಿನಯಿಸಿದ್ದರು.  ಕನ್ನಡ ಚಲನಚಿತ್ರೋದ್ಯಮದಲ್ಲಿ ಸಾರ್ವಕಾಲಿಕ ಅತ್ಯುತ್ತಮ ಭಯಾನಕ ಚಲನಚಿತ್ರಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಇದರದ್ದು.  ಅನಂತ್ ನಾಗ್ ಮತ್ತು ಲಕ್ಷ್ಮಿ ಒಟ್ಟಿಗೆ ನಟಿಸಿದ ಮೊದಲ ಚಿತ್ರ ಇದಾಗಿದ್ದು, ನಂತರ ಈ ಜೋಡಿ ಭಾರತೀಯ ಚಿತ್ರರಂಗದ ಅತ್ಯುತ್ತಮ ಆನ್‌ಸ್ಕ್ರೀನ್ ಜೋಡಿಗಳಲ್ಲಿ ಒಂದು ಎನಿಸಿರುವುದು ಈಗ ಇತಿಹಾಸ.  ನಾ ನಿನ್ನ ಬಿಡಲಾರೆ ಕರ್ನಾಟಕದಾದ್ಯಂತ ಹಲವು ಕೇಂದ್ರಗಳಲ್ಲಿ 100 ದಿನಗಳ ಕಾಲ ಓಡಿತು ಮತ್ತು ಇದು 1979 ರ ವರ್ಷದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಲನಚಿತ್ರಗಳಲ್ಲಿ ಒಂದಾಗಿದೆ. ಸ್ಯಾಂಡಲ್‌ವುಡ್‌  ಇತಿಹಾಸ ಪುಟಗಳಲ್ಲಿ ದಾಖಲಾಗಿರೋ‌ ಬ್ಲಾಕ್‌ಬಸ್ಟರ್‍‌ ಚಿತ್ರದ ಹೆಸರನ್ನೇ ಬಳಸಿ ಈಗ ಹೊಸ ಸಿನಿಮಾ ರೂಪಿಸಲಾಗಿದೆ.  

Tap to resize

Latest Videos

ಮೈಮರೆತು ದುಪ್ಪಟ್ಟಾ ಮೇಲೆ ಕುಳಿತ ನಟಿ ಸೋನಲ್‌ ಮೊಂಥೆರೋ: ಮುಂದೇನಾಯ್ತು ವಿಡಿಯೋ ನೋಡಿ...

ಅದೇ ಶೀರ್ಷಿಕೆ ಇದ್ದರೂ ಇಲ್ಲಿ  ಕಥಾವಸ್ತು ವಿಭಿನ್ನವಾಗಿದೆ.  ಈ ಹೊಸ ಚಿತ್ರದ ಬಗ್ಗೆ ಹೇಳುವುದಾದರೆ, ಆರಂಭದಲ್ಲಿ ಭೂತ, ಪ್ರೇತ ಸಾಮಾನ್ಯ ರೀತಿಯಲ್ಲಿ ನಡೆದುಕೊಂಡು ಹೋಗುತ್ತದೆ.   ಎಸ್ಟೇಟ್​ನಲ್ಲಿ ಒಂದು ದೆವ್ವದ ಮನೆ ಇದ್ದು, ಅಲ್ಲಿಂದ ಸ್ಟೋರಿ ಆರಂಭವಾಗುತ್ತದೆ. ಭೂತ, ಪ್ರೇತದ ಬಗ್ಗೆ ನಂಬುವ, ನಂಬದ ವರ್ಗವೂ ಇದೆಯಲ್ಲ, ಅದಕ್ಕಾಗಿಯೇ ಇಲ್ಲಿ ಇದು ಭೂತದ ಮನೆ ಹೌದೋ, ಅಲ್ವವೋ  ಎಂದು  ತಿಳಿಯಲು  ಕೆಲವು ಹುಡುಗರ ಆಗಮನವಾಗುತ್ತದೆ. ಆಗ ಅವರಿಗೆ  ದೆವ್ವ ಕಾಣಿಸಿಕೊಂಡು ಶಾಕ್‌ ಕೊಡುತ್ತದೆ. ಅಲ್ಲಿಂದ  ಫ್ಲ್ಯಾಶ್​ ಬ್ಯಾಕ್​ ಕಥೆ ಶುರುವಾಗುತ್ತದೆ. ಹೀಗೆ ಮಾಮೂಲಿನಂತೆ ಹೋಗುವ ಸಿನಿಮಾ ಕುತೂಹಲ ಕೆರಳಿಸುವುದು  ಇಂಟರ್​ವಲ್​ ಬಳಿಕ.
 
 ದೆವ್ವದ ದೃಶ್ಯಗಳ ಗ್ರಾಫಿಕ್ಸ್ ಚೆನ್ನಾಗಿ ಮೂಡಿಬಂದಿದೆ. ಅದರಲ್ಲಿ ಒಂದು ಈ ತ್ರಿಡಿ ತಂತ್ರಜ್ಞಾನ. ಅದನ್ನು ಹೇಗೆ ಮಾಡಲಾಗಿದೆ ಎನ್ನುವ ವಿಡಿಯೋ ಇದೀಗ ವೈರಲ್‌ ಆಗಿದೆ. ಇದೊಂದು  ಸೂಪರ್​ ನ್ಯಾಚುರಲ್ ಕಥೆ ಎನ್ನಿಸಿದ್ದರೂ  ವೈಜ್ಞಾನಿಕ ತಳಹದಿಯ ಮೇಲೆ ಕಥೆಯನ್ನು ಹೆಣೆಯಲಾಗಿದೆ. ಒರಿಜಿನಲ್‌ ನಾ ನಿನ್ನ ಬಿಡಲಾರೆಯಲ್ಲಿ  ರಾಘವೇಂದ್ರ ಸ್ವಾಮಿಗಳ ಕೃಪೆಯನ್ನು ತೋರಿಸಲಾಗಿದ್ದರೆ, ಇಲ್ಲಿಯೂ ಅದನ್ನು ಸ್ವಲ್ಪ ಉಳಿಸಿಕೊಳ್ಳಲಾಗಿದ್ದರೂ ಕಥೆ ಭಿನ್ನವಾಗಿ ಸಾಗಿದೆ. ಚೊಚ್ಚಲ ಸಿನಿಮಾದಲ್ಲಿ ನಟಿ ಅಂಬಾಲಿ ಭಾರತಿ ಅವರಿಗೆ ತ್ರಿಡಿ ತಂತ್ರಜ್ಞಾನದ ಮೂಲಕ ಫೇಸ್‌ ಮೌಲ್ಡಿಂಗ್‌ ಹೇಗೆ ಮಾಡಲಾಗಿತ್ತು ಎಂಬುದನ್ನು ಈ ವೈರಲ್‌ ವಿಡಿಯೋದಲ್ಲಿ ನೋಡಬಹುದು. 

ಚಳಿಯಲ್ಲಿ ಪಡ್ಡೆ ಹುಡುಗರ ಬಿಸಿ ಏರಿಸಿದ ನಟಿ ನಿವೇದಿತಾ! ಹಸಿಬಿಸಿ ವಿಡಿಯೋ ನೋಡಿ ಫ್ಯಾನ್ಸ್‌ ಸುಸ್ತು

click me!