Latest Videos

ಕಸ್ಟಡಿಯಲ್ಲಿ 12 ದಿನ, ಜಿಮ್ , ಊಟ, ನಿದ್ದೆಯೂ ಇಲ್ಲ, ಇಷ್ಟೊಂದು ತೂಕ ಕಳೆದುಕೊಂಡ ನಟ ದರ್ಶನ್ !

By Chethan KumarFirst Published Jun 23, 2024, 8:45 AM IST
Highlights

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಇದೀಗ ಪರಪ್ಪನ ಅಗ್ರಹಾರ ಜೈಲು ಸೇರಿದೆ. ಪೊಲೀಸ್ ಕಸ್ಟಡಿ, ವಿಚಾರಣೆ ಇದೀಗ ಜೈಲುವಾಸದಿಂದ ದರ್ಶನ್ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದಾರೆ. ಪೊಲೀಸರ ಮುಂದೆ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ. ನಟ ದರ್ಶನ್ ಪೊಲೀಸರ ಮುಂದೆ ಹೇಳಿರುವ ಮಾತುಗಳೇನು?
 

ಬೆಂಗಳೂರು(ಜೂ.23) ದೊಡ್ಡ ಸ್ಟಾರ್ ನಟನಾಗಿ ಈ ಪರಿಸ್ಥಿತಿಗೆ ಬಂದಿರುವ ಕುರಿತು ನಟ ದರ್ಶನ್ ಪಶ್ಚಾತ್ತಾಪ ಪಟ್ಟಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರ ಜೊತೆ ನಟ ದರ್ಶನ್ ತನ್ನ ತಪ್ಪುಗಳ ಕುರಿತು ಮಾತನಾಡಿದ್ದಾರೆ. ಬಂಧನದ ಬಳಿಕ ಮಾನಸಿಕವಾಗಿ ಕುಗ್ಗಿ ಹೋಗಿರುವ ದರ್ಶನ್ ಇನ್ನೆಂದು ಈ ರೀತಿ ಮಾಡುವುದಿಲ್ಲ ಎಂದು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ. ತಪ್ಪಾಗಿದೆ. ಈ ರೀತಿ ಆಗುತ್ತೆ ಎಂದು ಅಂದುಕೊಂಡಿರಲಿಲ್ಲ ಎಂದು ದರ್ಶನ್ ಪೊಲೀಸ್ ಅಧಿಕಾರಿ ಜೊತೆ ಹೇಳಿದ್ದಾರೆ.

ಪೊಲೀಸ್ ಕಸ್ಟಡಿಯಿಂದ ಜೈಲಿಗೆ ಹೋಗುವ ಮುನ್ನ ದರ್ಶನ್ ಪಶ್ಚಾತ್ತಾಪ ಪಟ್ಟಿದ್ದಾರೆ. 12 ದಿನ ಪೊಲೀಸ್ ಕಸ್ಟಡಿ,  ವಿಚಾರಣೆ, ಸ್ಥಳ ಮಹಜರು, ವೈದ್ಯಕೀಯ ಪರೀಕ್ಷೆ. ಹೀಗೆ ಪ್ರತಿ ಹಂತದಲ್ಲಿ ಮಾನಸಿಕವಾಗಿ ಹಿಂಸೆ ಅನುಭವಿಸಿರುವುದಾಗಿ ನಟ ದರ್ಶನ್ ಹೇಳಿದ್ದಾರೆ.  ಪೊಲೀಸ್ ಕಸ್ಟಡಿಯಲ್ಲಿರುವಾಗ ನಟ ದರ್ಶನ್ ಊಟ ತಿಂಡಿ ನಿರಾಕರಿಸಿದ್ದರು. ನಾನ್ ವೆಜ್ ಊಟವನ್ನೇ ಮಾಡುತ್ತಿದ್ದ ದರ್ಶನ್ ಕೇವಲ ಜ್ಯೂಸ್ ಕುಡಿಯುತ್ತಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ.

ಬಂಧನಕ್ಕೂ ಮೊದಲು ನಟ ದರ್ಶನ್ ಸಮಯಕ್ಕೆ ಸರಿಯಾಗಿ ನಾನ್ ವೆಜ್ ಊಟ ಮಾಡುತ್ತಿದ್ದರು. ಇನ್ನು ಬೆಳಗ್ಗೆ 2 ರಿಂದ 3 ಗಂಟೆ ಜಿಮ್ ಅಭ್ಯಾಸ ಮಾಡುತ್ತಿದ್ದರು. ಆದರೆ ಬಂಧನದ ಬಳಿಕ ಪೊಲೀಸ್ ಕಸ್ಟಡಿಯಲ್ಲಿ ದರ್ಶನ್ ನಾನ್ ವೆಜ್ ಇಲ್ಲ, ಊಟ ತಿಂಡಿಯೂ ಬೇಡ ಎಂದು ಕೇವಲ ಜ್ಯೂಸ್ ಮಾತ್ರ ಕುಡಿಯುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಊಟ-ತಿಂಡಿ ಬೇಡ ಎಂದು ನಿರಾಕರಿಸುತ್ತಿದ್ದರು. ಸರಿಯಾಗಿ ಊಟ, ತಿಂಡಿ, ನಿದ್ದೆ ಇಲ್ಲದೆ ದರ್ಶನ್ 3.5 ಕೆಜಿ ತೂಕ ಇಳಿದಿತ್ತು. ಬಂಧನದ ವೇಳೆ ನಟ ದರ್ಶನ್ 107 ಕೆಜಿ ತೂಕ ಹೊಂದಿದ್ದರು. ಆದರೆ ಬಂಧನದ ಬಳಿಕ ಮೂರುವರೆ ಕೆಜಿ ತೂಕ ಕಡಿಮೆಯಾಗಿದೆ. ಇದೀಗ ದರ್ಶನ್ 103.3 ಕೆಜಿಗೆ ಇಳಿದಿದ್ದಾರೆ. ಪೊಲೀಸ್ ಕಸ್ಡಡಿ ನಿನ್ನೆ(ಜೂ.22)ಕ್ಕೆ ಅಂತ್ಯಗೊಂಡ ಕಾರಣ ಇದೀಗ ಪರಪ್ಪರ ಅಗ್ರಹಾರ ಜೈಲು ಸೇರಿದ್ದಾರೆ. 

ಸ್ಟಾರ್ ನಟನಾಗಿದ್ದ ನತಗೆ ಈ ರೀತಿ ಪರಿಸ್ಥಿತಿ ಎದುರಾಗಿದೆ ಎಂದು ಕೊರಗುತ್ತಾ ದೈಹಿಕವಾಗಿ ಬಳಲಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಮೌನಕ್ಕೆ ಜಾರಿದ್ದಾರೆ. ನಿನ್ನೆ ರಾತ್ರಿ ಜೈಲಿನಲ್ಲಿ ಮುದ್ದೆ, ಚಪಾತಿ, ಸಾಂಬಾರ್ ಮತ್ತು ಮಜ್ಜಿಗೆ ಸೇವಿಸಿದ್ದ ದರ್ಶನ್, ತಡವಾಗಿ ನಿದ್ದೆ ಮಾಡಿದ್ದಾರೆ. 

ತಡರಾತ್ರಿವರೆಗೂ ದರ್ಶನ್ ಮಂಕಾಗಿ ಜೈಲು ಕೊಠಡಿಯಲ್ಲಿ ಕುಳಿತಿದ್ದರು. ರಾತ್ರಿ 11:30ರ ಸುಮಾರಿಗೆ ನಿದ್ದೆಗೆ ಜಾರಿದ ದರ್ಶನ್ ಮುಂಜಾನೆ 6:30 ಎದ್ದಿದ್ದಾರೆ. ಕಾಫಿ,ದಿನ ಪತ್ರಿಕೆ ಎಲ್ಲದರಿಂದಲೂ ದರ್ಶನ್ ದೂರ ಉಳಿದಿದ್ದಾರೆ. 
 

click me!