
ಸ್ಯಾಂಡಲ್‌ವುಡ್ ಭರವಸೆಯ ನಿರ್ದೇಶಕರಾದ ಹೇಮಂತ್ ಎಂ ರಾವ್ ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಚಿತ್ರದ ಹೆಸರು 'ಭೈರವನ ಕೊನೆ ಪಾಠ'. ಕನ್ನಡದ ಕರುನಾಡ ಚಕ್ರವರ್ತಿ ಖ್ಯಾತಿಯ ನಟ ಶಿವರಾಜ್‌ಕುಮಾರ್ ನಟನೆಯಲ್ಲಿ ಮುಂಬರುವ ಈ ಸಿನಿಮಾ ಮೂಡಿಬರಲಿದೆ. ಈ ಚಿತ್ರವನ್ನು ವೈಶಾಖ್ ಜೆ ಗೌಡ ನಿರ್ಮಿಸುತ್ತಿದ್ದು, ಬಿಗ್ ಬಜೆಟ್ ಜೊತೆಗೆ ಕನ್ನಡ ಸೇರಿದಂತೆ ಒಟ್ಟೂ ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ನಟ ಶಿವಣ್ಣ ಅವರಿಗೆ ಈಗಾಗಲೆ ಕರ್ನಾಟಕ ಮೀರಿ ಜನಪ್ರಿಯತೆ ಸೃಷ್ಟಿಯಾಗಿದೆ.
ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಿಂದ ಶುರುವಾದ ಹೇಮಂತ್ ರಾವ್ ಅವರ ಸಿನಿ ಜರ್ನಿ, 'ಸಪ್ತ ಸಾಗರದಾಚೆ ಎಲ್ಲೋ' ಮೂಲಕ ಇಡೀ ಜಗತ್ತನ್ನೇ ಸುತ್ತಿಕೊಂಡು ಬಂದಿದೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ, ಸೈಡ್ ಎ ಹಾಗು ಸೈಡ್ ಬಿ ಮೂಲಕ ಸಾಕಷ್ಟು ಕ್ರೇಜ್ ಸೃಷ್ಟಿಸಿದೆ. ಈ ಚಿತ್ರ ಸೂಪರ್ ಹಿಟ್ ಆಗಿದ್ದರೂ ಹಿಟ್ ಲಿಸ್ಟ್‌ಗೆ ಸೇರಿಕೊಂಡು ಒಂದು ಮಟ್ಟಿಗಿನ ಜನಪ್ರಿಯತೆ ಪಡೆದುಕೊಂಡಿದೆ.
ವೆಡ್ ಇನ್ ಇಂಡಿಯಾ ಸಖತ್ ಸೌಂಡ್ ಮಾಡ್ತಿದೆ, ಅಂಬಾನಿ ಫ್ಯಾಮಿಲಿ ವೆಡ್ಡಿಂಗ್ ಕಲ್ಚರ್‌ಗೆ ಜಗತ್ತೇ ಫಿದಾ..!
ನಟ ಶಿವರಾಜ್‌ಕುಮಾರ್ ಅವರು ಸಾಕಷ್ಟು ವಿಭಿನ್ನ ಚಿತ್ರಗಳನ್ನು ಇತ್ತೀಚೆಗೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕನ್ನಡವನ್ನೂ ಮೀರಿ ತಮ್ಮ ಮಾರ್ಕೆಟ್ ವಿಸ್ತರಿಸಿಕೊಂಡಿರುವ ನಟ ಶಿವರಾಜ್‌ಕುಮಾರ್ ಅವರು ಇದೀಗ ಹೇಮಂತ್ ರಾವ್ ನಿರ್ದೇಶನದ 'ಭೈರವನ ಕೊನೆ ಪಾಠ'ದಲ್ಲಿ ನಟಿಸಲಿದ್ದಾರೆ. ಹೇಮಂತ್ ರಾವ್ ಸಿನಿಮಾಗಳು ಸಾಕಷ್ಟು ವಿಭಿನ್ನತೆಯಿಂದ ಕೂಡಿದ್ದು, ಈ ಚಿತ್ರ ಕೂಡ ಸಾಕಷ್ಟು ಭಿನ್ನತೆ ಮೆರೆಯಲಿದೆ ಎನ್ನಲಾಗುತ್ತಿದೆ. ಈ ಸಂಗತಿಯೀಗ ಕನ್ನಡ ಸಿನಿಪ್ರೇಮಿಗಳಲ್ಲಿ ಭಾರೀ ಕುತೂಹಲ ಕೆರಳಿಸಿದೆ.
ಒಟ್ಟಿನಲ್ಲಿ, ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಳಿಕ ಡೈರೆಕ್ಟರ್ ಹೇಮಂತ್ ರಾವ್ ಯಾವ ಪ್ರಾಜೆಕ್ಟ್ ತೆಗೆದುಕೊಳ್ಳಬಹುದು ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ನಟ ಶಿವರಾಜ್‌ಕುಮಾರ್ ನಟನೆಯ ಚಿತ್ರವನ್ನು ಕರ್ನಾಟಕ ಮೀರಿ ತೆಗೆದುಕೊಂಡು ಹೋಗಲು ಹೇಮಂತ್ ರಾವ್ ನಿರ್ಧರಿಸಿದ್ದಾರೆ. ನಟ ರಕ್ಷಿತ್ ಶೆಟ್ಟಿ ಹಾಗು ರುಕ್ಮಿಣಿ ವಸಂತ್ ಜೋಡಿಯಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಕೊಟ್ಟಿದ್ದ ಹೇಮಂತ್ ರಾವ್ 'ಬೈರವನ ಕೊನೆ ಪಾಠ'ಕ್ಕೆ ಹೋಗುತ್ತಿದ್ದಾರೆ.
ಕೊಲೆ ಕೇಸ್‌ನಲ್ಲಿ ದರ್ಶನ್ ಹೆಸರು ಕೇಳಿ ಶಾಕ್ ಆಯ್ತು, ಬಹುಭಾಷಾ ನಟ ಸಾಯಿಕುಮಾರ್ ಹೇಳಿದ್ದೇನು ನೋಡಿ..!
ಭೈರವನ ಕೊನೆ ಪಾಠ ಎಂಬ ಟೈಟಲ್ ಭಾರೀ ವಿಭಿನ್ನ ಎನಿಸುತ್ತಿದ್ದು, ಹೊಸ ಭರವಸೆ ಮೂಡಿಸುತ್ತಿದೆ, ಸದ್ಯ ಸ್ಯಾಂಡಲ್‌ವುಡ್‌ನ ಯಾವುದೇ ಸಿನಿಮಾ ಕೂಡ ಸದ್ದು ಮಾಡುತ್ತಿಲ್ಲ. ಮುಂಬರುವ ಕೆಲವು ಸಿನಿಮಾಗಳಾದರೂ ಸ್ಯಾಂಡಲ್‌ವುಡ್ ಸಿನಿಪ್ರೇಕ್ಷಕರನ್ನ ಥಿಯೇಟರ್ ಕಡೆ ಕರೆದುಕೊಂಡು ಬರಲಿ ಎಂದು ಕನ್ನಡ ಚಿತ್ರರಂಗ ಆಶಿಸುತ್ತಿದೆ. ಬರಲಿರುವ ಹೊಸ ಸಿನಿಮಾಗಳು ಈ ಹಾರೈಕೆಯನ್ನು ನೆರವೇರಿಸಲಿ ಎಂಬುದು ಇಡೀ ಚಿತ್ರರಂಗದ ಕನಸು. ನನಸಾಗುವದೇ ಈ ಕನಸು? ಕಾಲವೇ ಉತ್ತರಿಸಬೇಕು.
ಕಿಡ್ನಾಪ್ ಅನ್ನೋಕೆ ಅವ್ನ ಏನೂ ಮೂಟೆ ಕಟ್ಟಿ ಕರ್ಕೊಂಡು ಬಂದಿಲ್ಲ; 'ಓಂ' ನಟ ಹರೀಶ್ ರಾಯ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.