ರಾತ್ರಿ 11 ಗಂಟೆ ಅಂಬರೀಶ್‌ ಅಂಕಲ್ ಕಾರನ್ನು ಸ್ಪೀಡಾಗಿ ಓಡುಸ್ಕೊಂಡು ಬರ್ತಿದ್ರು ನಾನು ನಿಂತು ನೋಡುತ್ತಿದ್ದೆ: ಧರ್ಮಾ ಕೀರ್ತಿರಾಜ್

ಬಾಲ್ಯದ ನೆನಪುಗಳನ್ನು ಹಂಚಿಕೊಂಡ ಧರ್ಮ ಕೀರ್ತಿ ರಾಜ್. ಅಂಬರೀಶ್ ಅಂಕಲ್ ಸ್ಪೋರ್ಟ್‌ ಕಾರು ನೋಡಲು ಕಾಯುತ್ತಿದ್ದೆ ಎಂದ ನಟ.... 


ಕನ್ನಡ ಚಿತ್ರರಂಗ ಚಾಕೋಲೇಟ್ ಹುಡುಗ ಧರ್ಮ ಕೀರ್ತಿ ರಾಜ್ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸಿದ ನಂತರ ಫ್ಯಾನ್ಸ್‌ ಬೇಸ್ ಹೆಚ್ಚಾಯ್ತು ಅಂದ್ರೆ ತಪ್ಪಾಗದು. ಧರ್ಮ ಆಯ್ಕೆ ಮಾಡಿಕೊಂಡಿರುವ ಸಿನಿಮಾಗಳು ಕೂಡ ಸಿಕ್ಕಾಪಟ್ಟೆ ಸಾಫ್ಟ್‌. ತೆರೆ ಮೇಲೆ ಧರ್ಮಾ ಬರ್ತಾರೆ ಅಂದ್ರೆ ಹುಡುಗಿಯರಿಗೆ ಡ್ರೀಮ್ ಬಾಯ್ ನೋಡುತ್ತಿದ್ದಂತೆ. ಅಷ್ಟರ ಮಟ್ಟಕ್ಕೆ ಮೊದಲ ಸಿನಿಮಾದಿಂದಲೇ ಹೆಸರು ಗಿಟ್ಟಿಸಿಕೊಂಡರು.

80-90ರ ದಶಕದ ರೂಲಿಂಗ್ ವಿಲನ್ ಅಂದ್ರೆ ಕೀರ್ತಿರಾಜ್‌. ಸಿನಿಮಾ ಅಂದ್ಮೇಲೆ ವಿಲನ್ ಆಗಿ ಕೀರ್ತಿರಾಜ್ ಇರಲೇ ಬೇಕು ಎಂದು ನಿರ್ಮಾಪಕರು ಹಾಗೂ ವೀಕ್ಷಕರು ಡಿಮ್ಯಾಂಡ್ ಮಾಡುತ್ತಿದ್ದರು. ಅವರ ಮಗನಾಗಿ ಚಿತ್ರರಂಗಕ್ಕೆ ಬಂದು ಅವರ ಲೆಗೆಸಿಯನ್ನು ಮುಂದುವರೆಸಿಕೊಂಡು ಹೋಗಲು ಸಜ್ಜಾಗಿದ್ದಾರೆ. ಹೀಗಾಗಿ ತಂದೆ ಜೊತೆ ಸಿನಿಮಾ ರಂಗದವರನ್ನು ಭೇಟಿ ಮಾಡಿದ ನೆನಪು ಇದ್ಯಾ ಎಂದು ಪ್ರಶ್ನಿಸಿದಾಗ ಧರ್ಮ ಕೊಟ್ಟ ಉತ್ತರವಿದು. 

Latest Videos

2 ಸಿನಿಮಾ ಮಾಡಿದ ರನ್ಯಾ ಇಂಡಸ್ಟ್ರಿ ಬಿಟ್ಟು ಹೋಗೋಕೆ ಇದೇ ಕಾರಣ ಇರ್ಬೋದು ಅಂತಿದ್ದಾರೆ ರವಿ ಶ್ರೀವತ್ಸ

'ನನಗೆ ನೆನಪಿರುವುದು ಅಂದ್ರೆ ಅಂಬರೀಶ್ ಅಂಕಲ್ ಬರ್ತಡೇ ಸಮಯದಲ್ಲಿ ಅವರ ಮನೆಗೆ ಹೋಗುತ್ತಿದ್ದೆ ಹಾಗೂ ವಿಷ್ಣು ವರ್ಧನ್ ಅಂಕಲ್ ಮನೆಗೂ ಕೂಡ. ದತ್ತಣ್ಣ ಅಂಕಲ್ ನಮ್ಮ ತಂದೆ ಕ್ಲೋಸ್ ಇದ್ದರು ಅವರು ಮನೆಗೆ ಬಂದಾಗ ರೌಂಡ್ ಕರ್ಕೊಂಡು ಹೋಗಿ ಎಂದು ಹೇಳುತ್ತಿದ್ದೆ. ಪ್ರೊಡ್ಯೂಸರ್‌ ಜಾನಕಿರಾಮ್ ನಮ್ಮ ತಂದೆಗೆ ಸಿಕ್ಕಾಪಟ್ಟೆ ಕ್ಲೋಸ್‌ ಫ್ರೆಂಡ್ ಇಬ್ಬರು ಒಂದೇ ರೀತಿ ಡ್ರೆಸ್ ಮಾಡಿಕೊಳ್ಳುವುದು ಒಂದೇ ಕಾರು ಓಡಿಸುವವರು. ಅವರು ಅಗಲಿದಾಗ ತಂದೆ ತುಂಬಾ ಬೇಸರ ಮಾಡಿಕೊಂಡರು. ಆ ಸಮಯದಲ್ಲಿ ಜಿಪ್ಸಿ ಕಾರಿನಲ್ಲಿ ಅರ್ಜುನ್ ಸರ್ಜಾ ಅಂಕಲ್ ಬರುತ್ತಿದ್ದರು, ಅವಾಗ ಅವರು ಡ್ರೆಸ್ ಮಾಡಿಕೊಳ್ಳುತ್ತಿದ್ದ ಸ್ಟೈಲ್ ತುಂಬಾನೇ ಇಷ್ಟವಾಗುತ್ತಿತ್ತು. ವಿಧಾನಸೌಧ ಒಳಗಡೆ ನಾವು ಭಾನುವಾರ ಬೈಕ್ ರೌಂಡ್‌ ಹೋಗಿದ್ವಿ ಈಗ ಅಲ್ಲಿ ಗೇಟ್ ಹಾಕಿದ್ದಾರೆ. ನನ್ನ ಅಕ್ಕ ಕ್ಯಾಮೆರಾದಿಂದ ದೂರ ಉಳಿದುಬಿಟ್ಟಳು ಏಕೆಂದರೆ ಆಕೆಗೆ ಓದುವುದರಲ್ಲಿ ಆಸಕ್ತಿ ಜಾಸ್ತಿ' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಸಂದರ್ಶನದಲ್ಲಿ ಧರ್ಮ ಮಾತನಾಡಿದ್ದಾರೆ.

ನನಗೆ ಮೂಡ್‌ ಸ್ವಿಂಗ್ಸ್‌ ಜಾಸ್ತಿನೇ ಇದೆ ಈ ಸತ್ಯ ಯಾರಿಗೂ ಗೊತ್ತಿಲ್ಲ: ರಚಿತಾ ರಾಮ್

'ಚಿಕ್ಕ ವಯಸ್ಸಿನಲ್ಲಿ ಥಿಯೇಟರ್‌ಗೆ ಹೋದ್ರೆ ಕ್ಯಾಮೆರಾ ಮುಂದೆ ನಾನು ಬರಲು ಇಷ್ಟ ಪಡುತ್ತಿದ್ದೆ. ಅಣ್ಣಾವ್ರ ಮನೆಗೆ ನಾವು ಹಲವು ಸಲ ಭೇಟಿ ಮಾಡಿದ್ದೀವಿ ಅದು ಸಿನಿಮಾ ರಿಲೀಸ್ ಸಮಯದಲ್ಲಿ ಆಶೀರ್ವಾದ ಪಡೆಯಲು ಅಷ್ಟೇ. ಅದಾದ ಮೇಲೆ ದೊಡ್ಡಣ್ಣ ಅವರನ್ನು ಭೇಟಿ ಮಾಡುತ್ತಿದ್ವಿ. ಚಿಕ್ಕ ವಯಸ್ಸಿನಿಂದಲೂ ನಾನು ಸಾಫ್ಟ್‌ ಆಗಿದ್ದ ಕಾರಣ ಸಖತ್ ಮುದ್ದು ಮಾಡುತ್ತಿದ್ದರು. ಆಗ ರಿಮೊರ್ಟ್‌ ಕಂಟ್ರೋಲ್‌ ಕಾರುಗಳು ಇಷ್ಟ ಆಗುತ್ತಿತ್ತು ಅಂತ ಗಿಫ್ಟ್ ಕೊಡುತ್ತಿದ್ದರು. ಅಂಬರೀಶ್‌ ಅಂಕಲ್ ಬಳಿ ಒಂದು ಸ್ಪೂರ್ಟ್ಸ್‌ ಕಾರ ಹೊಂದಿದ್ದರು ಸುಮಾರು 11 ಗಂಟೆ ಸಮಯದಲ್ಲಿ ನಮ್ಮ ರಸ್ತೆಯಲ್ಲಿ ಸಾಗುವಾಗ ಬಾಲ್ಕಾನಿಯಲ್ಲಿ ನಿಂತುಕೊಂಡು ನೋಡುತ್ತಿದ್ದೆ' ಎಂದು ಧರ್ಮ ಹೇಳಿದ್ದಾರೆ.  

ಮೋರಿ ಪಕ್ಕದಲ್ಲಿ ಕುಳಿತು ವಡಾ ಪಾವ್‌ ತಿಂದ ದರ್ಶನ್- ಸೃಜನ್; ಗಾಬರಿಯಾದ ಅಭಿಮಾನಿ ಏನ್ ಮಾಡಿದ ನೋಡಿ!

click me!