ಅಪ್ಪು ಎಂದು ಗೊತ್ತಾಗ್ದೇ ರಪರಪ ಅಂತ ಲಾಠಿ ಏಟು ಕೊಟ್ರಂತ ಪೊಲೀಸ್ರು! ಆ ಘಟನೆ ವಿವರಿಸಿದ್ದ ಪುನೀತ್​ ರಾಜ್​...

ಪೊಲೀಸರು ತಮಗೆ ಲಾಠಿ ಏಟು ನೀಡಿದ್ದ ಪ್ರಸಂಗವನ್ನು ತೆರೆದಿಟ್ಟಿದ್ದ ನಟ ಪುನೀತ್​ ರಾಜ್​ಕುಮಾರ್​ ಅವರ ವಿಡಿಯೋ ಒಂದು ವೈರಲ್​ ಆಗುತ್ತಿದೆ. ಅಂದು ಆಗಿದ್ದೇನು?
 


ಇದೇ 17 ಕನ್ನಡದ ಕಣ್ಮಣಿ ಅಪ್ಪು ಅರ್ಥಾತ್​  ಪುನೀತ್​  ರಾಜ್​ ಅವರ 50ನೇ ಹುಟ್ಟುಹಬ್ಬದ ಸಂಭ್ರಮ.  ಅರಳುವ ಮುನ್ನವೇ ಬಾಡಿದ ಈ ನಟನ ಬಗ್ಗೆ ಇನ್ನೂ ಅದೆಷ್ಟೋ ಮಂದಿ ಮರೆಯಲಾಗದ ನೆನಪಿನ ಬುತ್ತಿಗಳನ್ನು ಬಿಚ್ಚಿಡುತ್ತಲೇ ಇದ್ದಾರೆ. ಪುನೀತ್‌ ರಾಜ್‌ಕುಮಾರ್‌ ಅವರು ಎಲ್ಲರನ್ನೂ ಅಗಲಿ ಮೂರೂವರೆ ವರ್ಷಗಳಾದರೂ ಅವರ ನೆನಪು ಸದಾ ಹಸಿರು. ಹಲವಾರು ನಟರು ಮಾತ್ರವಲ್ಲದೇ ಗಾಯಕರು, ನಿರ್ದೇಶಕರು ಸೇರಿದಂತೆ ಸಾಮಾನ್ಯ ಜನರನ್ನೂ ಅವರು ಹುರಿದುಂಬಿಸುತ್ತಿದ್ದ ರೀತಿಯೇ ಚೆಂದ. ಇದೇ ಕಾರಣಕ್ಕೆ ಅವರು ಎಲ್ಲರನ್ನೂ ಅಗಲಿದರೂ ಅವರ ನೆನಪನ್ನು ಸಿನಿ ಕ್ಷೇತ್ರದವರು ಸೇರಿದಂತೆ ಎಲ್ಲರೂ ಮಾಡುತ್ತಲೇ ಇರುತ್ತಾರೆ. ಬದುಕಿದ್ದಾಗ ಇವರು ಮಾಡಿದ ಸಮಾಜಮುಖಿ ಕಾರ್ಯಗಳಿಗೆ ಲೆಕ್ಕವೇ ಇಲ್ಲ. ಹಲವರ ಪಾಲಿಗೆ ಬೆಳಕಾಗಿದ್ದ ಅಪ್ಪು, ಸಾವಿನಲ್ಲಿಯೂ ನಾಲ್ವರು ಅಂಧರ ಬಾಳಿಗೆ ಬೆಳಕಾಗಿ ಹೋದವರು. ಇವರ ನಿಧನದ ನಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು ಹಲವರು. ಅಪ್ಪು ಅವರ ಹಾದಿಯನ್ನೇ ಹಿಡಿಯುತ್ತಿರುವ ಅವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. 

ಇದರ ನಡುವೆಯೇ ಪುನೀತ್‌ ರಾಜ್ ಅವರಿಗೆ ಸೇರಿರುವ ವಿಡಿಯೋಗಳನ್ನು ಅಭಿಮಾನಿಗಳು ಶೇರ್‍‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಕನ್ನಡದ ಕೋಟ್ಯಧಿಪತಿಯ ವಿಡಿಯೋ ಒಂದು ವೈರಲ್​ ಆಗಿದೆ. ಪುನೀತ್​ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ಅವರ ಹಳೆಯ ವಿಡಿಯೋಳೆಲ್ಲವೂ ಮತ್ತೆ  ಮತ್ತೆ ಶೇರ್​ ಆಗುತ್ತಿದೆ. ಇದರಲ್ಲಿ ಪುನೀತ್​ ಅವರು, ತಾವು ರಾಜ್​ಕುಮಾರ್​ ಅವರ ಮಗ ಎಂದು ತಿಳಿಯದೇ, ಪೊಲೀಸರು ರಪರಪ ಲಾಠಿ ಏಟು ಕೊಟ್ಟಿದ್ದ ಘಟನೆಯೊಂದನ್ನು ನೆನಪಿಸಿಕೊಂಡಿರುವ ವಿಡಿಯೋ ಇದಾಗಿದೆ. ಪೊಲೀಸರೊಬ್ಬರು ಈ ಕಾರ್ಯಕ್ರಮಕ್ಕೆ ಬಂದಾಗ, ಈ ಘಟನೆಯನ್ನು ಅಪ್ಪು ನೆನಪಿಸಿಕೊಂಡಿದ್ದರು. ಆಗಿನ್ನೂ ಪುನೀತ್​ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರದ ಕಾಲ. ಅಂದ್ರೆ ಸುಮಾರು 1995ರಲ್ಲಿ ನಡೆದ ಘಟನೆ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ಇವರು ರಾಜ್​ಕುಮಾರ್​ ಮಗ ಎಂದು ಪೊಲೀಸರಿಗೆ ತಿಳಿದಿರಲಿಲ್ಲ!

Latest Videos

ನೋಡಲು ಚೆನ್ನಾಗಿಲ್ಲ, ಕಲರ್​ ಇಲ್ಲ ಎಂದು ತುಂಬಾ ಫೀಲಿಂಗ್​ ಇತ್ತು: ಮನದ ಮಾತು ಹೇಳಿದ್ದ ಅಪ್ಪು ವಿಡಿಯೋ ವೈರಲ್​!

ಅಷ್ಟಕ್ಕೂ ಆಗಿದ್ದೇನೆಂದರೆ, ಮಂಡ್ಯದಲ್ಲಿ ಕಾರ್ಯಕ್ರಮವೊಂದು  ನಡೆಯುತ್ತಿತ್ತು. ಅದರಲ್ಲಿ ಡಾ.ರಾಜ್​ಕುಮಾರ್​ ಅವರನ್ನು  ಲಾರಿ ಮೂಲಕ  ಮೆರವಣಿಗೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ದಾದಾ ಸಾಹೇಬ್ ಫಾಲ್ಕೆ ಅವಾರ್ಡ್​ ಬಂದ ಸಂದರ್ಭದಲ್ಲಿ ಈ ಮೆರವಣಿಗೆ ಮಾಡಲಾಗಿತ್ತು.  ಆ ಸಮಯದಲ್ಲಿ ಆದ ಎಡವಟ್ಟು ಇದು ಎಂದಿದ್ದಾರೆ. ಅಪ್ಪು ಅವರೇ ಹೇಳಿರುವಂತೆ 'ಆಗ ನಾನು ಲೇಟಾಗಿ ಹೋಗಿಬಿಟ್ಟೆ.  ಹೀಗಾಗಿ ಬೇರೆ ರಸ್ತೆಯಲ್ಲಿ ಓಡಿ ಹೋಗಿ ಅಪ್ಪಾಜಿ ಇದ್ದರು ಎಂದು ಲಾರಿ ಹತ್ತಲು ಮುಂದಾದೆ. ಆಗಿನ್ನೂ ನಾನು ಸಿನಿಮಾಕ್ಕೆ ಎಂಟ್ರಿ ಕೊಟ್ಟಿರಲಿಲ್ಲ. ಅದಕ್ಕಾಗಿ ನಾನು ರಾಜ್​ಕುಮಾರ್​ ಮಗ ಎಂದು ಗೊತ್ತಾಗಲಿಲ್ಲ. ಯಾರೋ ಒಬ್ಬ ಹತ್ತುತ್ತಿದ್ದಾನೆ ಎಂದುಕೊಂಡ ಪೊಲಿಸರು  ಲಾರಿ ಹತ್ತುವಾಗ ಪೊಲೀಸ್ರು ಕೊಟ್ರು ನೋಡಿ ಲಾಠಿ ಏಟು... ಅಬ್ಬಬ್ಬಾ... ಅದರ ಮಜಾನೇ ಬೇರೆ. ಆ ಟೈಮ್​ನಲ್ಲಿ ನನಗೆ ಗೊತ್ತಾಗಲಿಲ್ಲ... ಆದರೆ ಪಾಪ ಪೊಲೀಸರಿಗೂ ನಾನ್ಯಾರು ಗೊತ್ತಾಗಿರಲಿಲ್ಲ. ಕೊನೆಗೆ ಅಪ್ಪಾಜಿ ಅರೆ ನನ್ನ ಮಗ ಎಂದಾಗಲೇ ಅವರಿಗೆ ಗೊತ್ತಾಯ್ತು ಎಂದಿದ್ದರು. 
 

ಕೆಲ ದಿನಗಳ ಹಿಂದೆ ಅಪ್ಪು ಅವರು ಡಬ್ಬಿಂಗ್​ ಎಂದ್ರೆ ಭಯ ಎನ್ನುತ್ತಲೇ ತಮ್ಮ ಬಣ್ಣದ ಬಗ್ಗೆ ಇದ್ದ ಕೀಳರಿಮೆ ಬಗ್ಗೆ ಮಾತನಾಡಿದ್ದರು.  'ನನಗೆ ಡಬ್ಬಿಂಗ್​ ಅಂದ್ರೆ ಭಯ ಇತ್ತು. ನನ್ನ ಸಿನಿಮಾ ನೋಡುವಾಗ ನನಗೇ ಎಷ್ಟೊಂದು ತಪ್ಪು ಕಾಣಿಸ್ತಿತ್ತು. ಅಷ್ಟೇ ಅಲ್ಲದೇ ರಾಜ್​ಕುಮಾರ್​ ಹೆಸರು ಕೂಡ ನನ್ನ ಜೊತೆ ಇತ್ತು. ಆದ್ದರಿಂದ ಚೆನ್ನಾಗಿ ಮಾಡಬೇಕಿತ್ತು. ಇದೇ ಕಾರಣಕ್ಕೆ ತಪ್ಪುಗಳೇ ಕಾಣಿಸ್ತಿದ್ದರಿಂದ ಅದನ್ನು ನೋಡೋಕೇ ಭಯ ಆಗ್ತಿತ್ತು ಎಂದಿದ್ದಾರೆ. ಅದೇ ವೇಳೆ ಇನ್ನೊಂದು ಕಾರಣವನ್ನೂ ಅವರು ಕೊಟ್ಟಿದ್ದಾರೆ. ಅದೇನೆಂದರೆ ಡಬ್ಬಿಂಗ್​ ನೋಡದೇ ಇರಲು ಇನ್ನೊಂದು ಕಾರಣ ಎಂದ್ರೆ, ಚಿಕ್ಕಂದಿನಿಂದಲೂ ನಾನು ನೋಡಲು ಚೆನ್ನಾಗಿಲ್ಲ, ಕಲರ್​ ಇಲ್ಲ ಎನ್ನುವ ಫೀಲಿಂಗ್​ ಇತ್ತು. ಇದರಿಂದಲೂ ಯಾಕೋ ಮುಜುಗರ ಆಗುತ್ತಿತ್ತು' ಎಂಬುದಾಗಿ ಪುನೀತ್​ ರಾಜ್​ ಹೇಳಿದ್ದರು. 

ಅಪ್ಪು ಬಣ್ಣ ಕಪ್ಪು ಎಂದವರಿಗೆ ಡಾ.ರಾಜ್‌ ಹೇಳಿದ್ದೇನು? ಕುತೂಹಲದ ಹಳೆಯ ವಿಡಿಯೋ ವೈರಲ್‌

click me!