
ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಈಕೆಯನ್ನು ಸ್ಯಾಂಡಲ್‌ವುಡ್‌ಗೆ ಕರೆತಂದಿದ್ದು ಜೋಗಿ ಪ್ರೇಮ್. ‘ಏಕ್ ಲವ್ ಯಾ’ ಚಿತ್ರದಲ್ಲಿ ರಾಣಾಗೆ ನಾಯಕಿಯಾಗುವ ಮೂಲಕ ಗಾಂಧಿನಗರಕ್ಕೆ ಬಂದ ರೀಷ್ಮಾ, ಮೊದಲ ಸಿನಿಮಾ ತೆರೆಗೆ ಬರುವ ಮುನ್ನವೇ ಮತ್ತೊಂದು ಚಿತ್ರಕ್ಕೆ ನಾಯಕಿಯಾಗಿದ್ದಾರೆ.
‘ಪೊಗರು’ ನಂತರ ನಟ ಶ್ರೇಯಸ್ ಅವರಿಗೆ ಸಿನಿಮಾ ನಿರ್ದೇಶನ ಮಾಡಲು ಹೊರಟಿರುವ ನಂದ ಕಿಶೋರ್, ಇನ್ನೂ ತಮ್ಮ ಚಿತ್ರಕ್ಕೆ ಹೆಸರಿಟ್ಟಿಲ್ಲ. ಈ ಚಿತ್ರವನ್ನು ಕೆ ಮಂಜು ಹಾಗೂ ಗುಜ್ಜಾಲ್ ಪುರುಷೋತ್ತಮ ಅವರು ನಿರ್ಮಿಸುತ್ತಿದ್ದಾರೆ. ಶೇಖರ್ ಚಂದ್ರ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಶ್ರೇಯಸ್ ಹುಟ್ಟು ಹಬ್ಬಕ್ಕೆ ಚಿತ್ರ ಘೋಷಣೆ ಆಗಿದೆ.
'ಏಕ್ ಲವ್ ಯಾ' ಅನ್ಕೊಂಡು ರಚ್ಚುಗೇ ಕಾಂಪಿಟೇಷನ್ ಕೊಡಲು ಬರ್ತಿದ್ದಾಳೆ ಈ ಸುಂದ್ರಿ
ಈಗ ಚಿತ್ರಕ್ಕೆ ನಾಯಕಿ ಪಾತ್ರಕ್ಕೆ ರೀಷ್ಮಾ ಆಗಮಿಸಿದ್ದಾರೆ. ಹಾಗೆ ನೋಡಿದರೆ ಆ ದಿನಗಳು ಚೇತನ್ ನಟಿಸುತ್ತಿರುವ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬರಲಿರುವ ‘ಮಾರ್ಗ’ ಚಿತ್ರಕ್ಕೂ ನಾಯಕಿ ಆಗಿದ್ದಾರೆ. ಈಗ ಮೂರನೇ ಚಿತ್ರಕ್ಕೆ ಬುಕ್ ಆಗಿದ್ದಾರೆ. ಒಂದು ಸಿನಿಮಾ ಬಿಡುಗಡೆಯಾಗದಿದ್ದರೂ ಮೂರು ಚಿತ್ರಗಳಿಗೆ ನಾಯಕಿಯಾಗಿರುವ ಅದೃಷ್ಟವಂತೆ ನಟಿ ರೀಷ್ಮಾ ನಾನಯ್ಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.