
ಬಜಾರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ನಟ ಧನ್ವೀರ್ ಗೌಡ ಅವರು ಇದೀಗ ಮತ್ತೊಮ್ಮೆ ಹೊಸದೊಂದು ಸಿನಿಮಾ ಮೂಲಕ ಕನ್ನಡ ಸಿನಿಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರಕ್ಕೆ 'ವಾಮನ' ಎಂದು ಹೆಸರಿದ್ದು, ಈ ಚಿತ್ರವು ಶೂಟಿಂಗ್ ಮುಗಿಸಿ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಪ್ರಮೋಶನ್ ಶುರುವಾಗಿದ್ದು, ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಮೊಟ್ಟಮೊದಲ ಹಾಡನ್ನು ನಾಳೆ, ಅಂದರೆ 15 ಮಾರ್ಚ್ 2025ರಂದು ಬಿಡುಗಡೆ ಮಾಡಲಿದ್ದಾರೆ. ಈ ಬಗ್ಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಜನೀಶ್ ಪೋಸ್ಟ್ ಹೀಗಿದೆ ನೋಡಿ... 'ಸ್ಯಾಂಡಲ್ ವುಡ್ ಶೊಕ್ದಾರ್ 'ಧನ್ವೀರ್' ಅಭಿನಯದ 'ಚೇತನ್ ಗೌಡ' ರವರ ಅದ್ದೂರಿ ನಿರ್ಮಾಣದ 'ಶಂಕರ್ ರಾಮನ್' ನಿರ್ದೇಶನದ 'ವಾಮನ' ಚಿತ್ರದ ಹೃದಯ ಮುಟ್ಟುವ ಮದರ್ ಸಾಂಗ್ ಅನ್ನು 'ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ರವರ ಧರ್ಮಪತ್ನಿ ವಿಜಯಲಕ್ಷ್ಮಿ ದರ್ಶನ್' ರವರು ದಿನಾಂಕ 15/03/2025 ರಂದು ಶನಿವಾರ ಸಂಜೆ 6:00 ಗಂಟೆಗೆ ಬಿಡುಗಡೆ ಮಾಡಲಿದ್ದಾರೆ.'.
Appu: ಅಶ್ವಿನಿ ಹುಟ್ಟುಹಬ್ಬದ ದಿನವೇ 'ಅಪ್ಪು' ತೆರೆಗೆ ಬಂತು, ಫ್ಯಾನ್ಸ್ ಅಭಿಮಾನಕ್ಕೆ ಸಾಕ್ಷಿಯಾಗಿದೆ ವೀರೇಶ್!
ಹೌದು, ನಟ ಧನ್ವೀರ್ ಗೌಡ ಅವರು ಬಜಾರ್ ಸಿನಿಮಾ ಮೂಲಕ ಸಕತ್ ಸೌಂಡ್ ಮಾಡಿದ್ದರು. ಸಿನಿಮಾ ಗೆಲುವಿಗಿಂತ ಹೆಚ್ಚಾಗಿ ಕನ್ನಡಕ್ಕೆ ಹೊಸ ಹ್ಯಾಂಡ್‌ಸಮ್ ಬಾಯ್ ಸಿಕ್ಕರು ಎಂದೇ ಇಡೀ ಚಿತ್ರರಂಗ ಹಾಗೂ ಕನ್ನಡ ಸಿನಿಪ್ರೇಕ್ಷಕವರ್ಗ ಮಾತನ್ನಾಡುತ್ತಿತ್ತು. ಮಾಸ್ ಹೀರೋಗೆ, ಸ್ಟಾರ್ ನಟರಿಗೆ ಬೇಕಾದ ಖದರ್, ಲುಕ್ ಎಲ್ಲವನ್ನೂ ಹೊಂದಿದ್ದ ನಟ ಧನ್ವೀರ್ ಎಂಟ್ರಿ ಚಿತ್ರರಂಗಕ್ಕೆ ಹೊಸ ಟಾನಿಕ್ ನೀಡಿತ್ತು. ಬಜಾರ್ ಸಿನಿಮಾ ಸೌಂಡ್ ಮಾಡಿತ್ತಾದರೂ ಆಮೇಲೆ ಯಾಕೋ ನಟ ಧನ್ವೀರ್ ಅಷ್ಟಾಗಿ ಸದ್ದು-ಸುದ್ದಿ ಮಾಡಲೇ ಇಲ್ಲ.
ಆದರೆ, ಕನ್ನಡದ ಸ್ಟಾರ್ ನಟ ದರ್ಶನ್ ಕೇಸ್‌ನಲ್ಲಿ ಮತ್ತೆ ಮುನ್ನೆಲೆಗೆ ಬಂದಿರುವ ನಟ ಧನ್ವೀರ್ ಅವರು ಇದೀಗ ವಾಮನ ಅವತಾರ ತಾಳಿ ಕನ್ನಡ ಪ್ರೇಕ್ಷಕರಿಗೆ ದರ್ಶನ್ ಕೊಡಲಿದ್ದಾರೆ. ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್ ಆಗಿಲ್ಲವಾದರೂ ಪ್ರಚಾರಕಾರ್ಯ ಸದ್ಯದಲ್ಲೇ ಶುರುವಾಗಲಿದೆ. ಇದೀಗ ಅಜನೀಶ್ ಲೋಕನಾಥ್ ಕೈಚಳಕದಲ್ಲಿ ಮೂಡಿಬಂದಿರುವ 'ಮದರ್' ಸಾಂಗ್ ಮನಮುಟ್ಟುವಂತಿದೆ ಎಂಬ ಮಾತಿದೆ. ಅದನ್ನು ನಾಳೆ ವಿಜಯಲಕ್ಷ್ಮೀ ಅವರು ರಿಲೀಸ್ ಮಾಡುವ ಮೂಲಕ ಲೋಕ ಕೇಳುವಂತೆ ಮಾಡಲಿದ್ದಾರೆ. ತಾಯಿ ಸೆಂಟಿಮೆಂಟ್ ಹೊಂದಿರುವ ಈ ಹಾಡು ಸೂಪರ್ ಹಿಟ್ ಆಗಲಿರುವ ಎಲ್ಲಾ ಲಕ್ಷಣ ಇದೆ ಎಂಬ ಮಾತು ಹರಡಿದೆ. 'ಆಲ್ ದಿ ಬೆಸ್ಟ್ ಧನ್ವೀರ್..' ಅಂತಿದಾರೆ ಫ್ಯಾನ್ಸ್.
ಇದು.. ಇದು.. ವೈರಲ್ ಆಗ್ಬೇಕಾಗಿರೋದು! ಡಾ ರಾಜ್‌ಕುಮಾರ್ ಬಗ್ಗೆ ಕಿಶೋರ್ ಹೇಳಿದ್ದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.