
ಬೆಂಗಳೂರು (ಮಾ. 07): ಸುನೀಲ್ ಕುಮಾರ್ ದೇಸಾಯಿಯವರ ಉದ್ಘರ್ಷ ಟ್ರೇಲರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಾಂಚ್ ಮಾಡಿದ್ದಾರೆ. ಈ ಸಮಾರಂಭಕ್ಕೆ ಕಿಚ್ಚ ಸುದೀಪ್ ಕೂಡಾ ಬರಬಹುದೆಂಬ ನಿರೀಕ್ಷೆಯಿತು. ಆದರೆ ಅವರು ಬಂದಿಲ್ಲ. ಡಿ ಬಾಸ್ ಒಬ್ಬರೇ ಕಾಣಿಸಿಕೊಂಡಿದ್ದಾರೆ.
ಸರಿಗಮಪ ಆಡಿಷನ್‌ನಲ್ಲಿ‘ಈಜಿಪ್ಟ್’ ಕಿನ್ನರಿ!
ಕಿಚ್ಚ ಸುದೀಪ್ ಗೆ ಬ್ರೇಕ್ ಕೊಟ್ಟ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ. ಜೊತೆಗೆ ಉದ್ಘರ್ಷ ಚಿತ್ರಕ್ಕೆ ಸುದೀಪ್ ಅವರು ಧ್ವನಿಯನ್ನೂ ನೀಡಿದ್ದಾರೆ. ಆದರೂ ಕಾರ್ಯಕ್ರಮಕ್ಕೆ ಹಾಜರಾಗದೇ ಇದ್ದಿದ್ದು ದರ್ಶನ್- ಸುದೀಪ್ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಎನ್ನುವುದಕ್ಕೆ ಇನ್ನಷ್ಟು ಪುಷ್ಠಿ ನೀಡಿದಂತಾಗುತ್ತದೆ.
ಕೊನೆಯುಸಿರಿರುವರೆಗೂ ಬಣ್ಣ ಹಚ್ಚೋದು ನಿಲ್ಲಿಸೋಲ್ಲ: ಬುಲೆಟ್
ಸುದೀಪ್ ಗೈರು ಹಾಜರಿಗೆ ಸುನೀಲ್ ಕುಮಾರ್ ದೇಸಾಯಿ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಸುದೀಪ್ ಗೆ ಆಹ್ವಾನ ಕೊಟ್ಟಿರಲಿಲ್ಲ. ಅವರು ಸತತ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಟ್ರೇಲರ್ ಲಾಂಚ್ ಗೆ ಬನ್ನಿ ಎನ್ನುವುದು ಅವರಿಗೆ ಕಷ್ಟ ಕೊಟ್ಟಂತಾಗುವುದು. ಅವರ ಸಹಕಾರ ನಮಗೆ ಇದ್ದೇ ಇದೆ ಎಂದು ದೇಸಾಯಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.