ಲೆಕ್ಕ ಮುಖ್ಯವಲ್ಲ, ಜನ ಮೆಚ್ಚುಗೆ ಮುಖ್ಯ: ಅಪೂರ್ವ

By Web Desk  |  First Published Mar 7, 2019, 10:31 AM IST

‘ಅಪೂರ್ವ’ ಚಿತ್ರಕ್ಕಾಗಿ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಶೋಧಿಸಿ ತಂದ ನಟಿ ಅಪೂರ್ವ ಈಗ ‘ಮೊಡವೆ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.


ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ಅಭಿನಯದ ಚೊಚ್ಚಲ ಚಿತ್ರ. ಯುವ ಪ್ರತಿಭೆ ಸಿದ್ದಾರ್ಥ್ ಮರೆದೆಪ್ಪ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಶಿವಾನಂದ ಹಾಗೂ ಕೃಷ್ಣ ಮೂರ್ತಿ ಇದರ ನಿರ್ಮಾಪಕರು. ಸದ್ಯಕ್ಕೀಗ ಈ ಚಿತ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿರುವ ಅಪೂರ್ವ ಹೊಸ ಅವಕಾಶಗಳತ್ತಲೂ ಮುಖ ಮಾಡಿದ್ದಾರೆ. ಅದಕ್ಕಾಗಿಯೇ ಈಗ ಚೆಂದದೊಂದು ಫೋಟೋ ಶೂಟ್ ಮಾಡಿಸಿ, ಹೊಸ ಲುಕ್‌ನಲ್ಲಿ ಮಿಚುತ್ತಿದ್ದಾರೆ.

Tap to resize

Latest Videos

‘ನಟ-ನಟಿಯರು ಹೊಸದಾಗಿ ಪೋಟೋಶೂಟ್ ಮಾಡಿಸಿದಾಗ ಹೊಸ ಅವಕಾಶಗಳಿಗಾಗಿಯೇ ಮಾಡಿಸಿದ್ದುಅಂತಂದುಕೊಳ್ಳುವುದು ಸರ್ವೇ ಸಾಮಾನ್ಯ. ಅದರಾಚೆ ಪ್ರೊಫೈಲ್‌ಗೂ ಇರಲಿ ಅಂತಲೂ ನಟ-ನಟಿಯರು ಫೋಟೋಶೂಟ್ ಮಾಡಿಸುತ್ತಾರೆನ್ನುವುದು ಕೂಡ ಸತ್ಯ. ನನಗೆ ಅಂತಹದೊಂದು ಪ್ರೊಫೈಲ್‌ಗೂ ಬೇಕಿತ್ತು, ಜತೆಗೆ ಹೊಸದೊಂದು ಚಿತ್ರಕ್ಕೂ ಬೇಕಿತ್ತು. ಹಾಗಾಗಿ ಈ ಫೋಟೋಶೂಟ್ ಮಾಡಿಸಿದ್ದೇನೆ. ಇಷ್ಟರಲ್ಲೇ ಆ ಸಿನಿಮಾ ಯಾವುದು ಎನ್ನುವುದು ಬಹಿರಂಗವಾಗಲಿದೆ. ಅದಿನ್ನು ಮಾತುಕತೆ ಹಂತದಲ್ಲಿದೆ’ಎನ್ನುತ್ತಾರೆ ನಟಿ ಅಪೂರ್ವ.

ನನಗೆ ಸಾಕಷ್ಟು ಅವಕಾಶಗಳು ಬರುತ್ತಿವೆ. ಹಾಗಂತ ಸಿಕ್ಕ ಅವಕಾಶಗಳನ್ನು ಒಪ್ಪಿಕೊಂಡು ಅಭಿನಯಸಬೇಕು ಎನ್ನುವ ಸಿದ್ಧಾಂತ ನಂದಲ್ಲ. ನಟನೆಗೆ ಅವಕಾಶ ಇರುವಂತಹ ಪಾತ್ರಗಳು ಸಿಗಬೇಕು, ಆ ಪಾತ್ರಗಳು ಪ್ರೇಕ್ಷಕರಿಗೂ ಇಷ್ಟ ಆಗಬೇಕು. ಎಷ್ಟು ಸಿನಿಮಾಗಳು ಎನ್ನುವ ಲೆಕ್ಕಕ್ಕಿಂತ ಎಂತಹ ಸಿನಿಮಾ ಮಾಡಿದ್ದೇನೆ ಎನ್ನುವುದು ಮುಖ್ಯವಾಗಬೇಕು.- ಅಪೂರ್ವ

click me!