ಸಂಜು ವೆಡ್ಸ್‌ ಗೀತಾ 2 ಸಿನಿಮಾ ಸೂಪರ್‌ ಹಿಟ್‌ ಆಗೋದು ನೂರಕ್ಕೆ ನೂರು ಗ್ಯಾರಂಟಿ: ನಟ ಉಪೇಂದ್ರ

By Kannadaprabha News  |  First Published Nov 15, 2024, 4:34 PM IST

ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್‌ ಕಾಂಬಿನೇಶ್‌ನ ‘ಸಂಜು ವೆಡ್ಸ್‌ ಗೀತಾ 2’ ಚಿತ್ರದ ‘ಅವನು ಸಂಜು ಅವಳು ಗೀತಾ’ ಎಂದು ಸಾಗುವ ಶೀರ್ಷಿಕೆ ಹಾಡನ್ನು ನಟ ಉಪೇಂದ್ರ ಬಿಡುಗಡೆ ಮಾಡಿದರು.


ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್‌ ಕಾಂಬಿನೇಶ್‌ನ ‘ಸಂಜು ವೆಡ್ಸ್‌ ಗೀತಾ 2’ ಚಿತ್ರದ ‘ಅವನು ಸಂಜು ಅವಳು ಗೀತಾ’ ಎಂದು ಸಾಗುವ ಶೀರ್ಷಿಕೆ ಹಾಡನ್ನು ನಟ ಉಪೇಂದ್ರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅವರು, ‘ಈ ಚಿತ್ರದ ಕತೆ ಕೇಳಿದಾಗಲೇ ಈ ಸಿನಿಮಾ ಸೂಪರ್‌ ಹಿಟ್‌ ಆಗೋದು ನೂರಕ್ಕೆ ನೂರು ಗ್ಯಾರಂಟಿ ಅಂತ ಹೇಳಿದ್ದೆ. ಈಗ ಹಾಡು ನೋಡಿದ ಮೇಲೆ ನನ್ನ ಮಾತು ನಿಜವಾಗುತ್ತದೆ ಎಂಬ ನಂಬಿಕೆ ಬಂದಿದೆ. ಹಾಡು ತುಂಬಾ ಚೆನ್ನಾಗಿ ಬಂದಿದೆ’ ಎಂದರು.

ಕವಿರಾಜ್‌ ಗೀತ ರಚನೆ ಮಾಡಿರುವ, ಶ್ರೀಧರ್‌ ವಿ ಸಂಭ್ರಮ್‌ ಸಂಗೀತ ನೀಡಿರುವ ಈ ಹಾಡನ್ನು ಸಂಗೀತಾ ಹಾಡಿದ್ದಾರೆ. ನಿರ್ದೇಶಕ ನಾಗಶೇಖರ್‌, ‘ಈಗ ಬಿಡುಗಡೆ ಆಗಿರುವ ಹಾಡಿನಲ್ಲಿ ಒಬ್ಬ ಸೈನಿಕನ ಪ್ರೇಮಕಥೆಯನ್ನು ಹೇಳಿದ್ದೇನೆ’ ಎಂದರು. ಶ್ರೀನಗರ ಕಿಟ್ಟಿ, ‘ಮೊದಲ ಬಾರಿಗೆ ರೇಶ್ಮೆ ಬೆಳೆಗಾರನ ಪಾತ್ರದಲ್ಲಿ ನಟಿಸಿದ್ದೇನೆ’ ಎಂದರು. ಛಲವಾದಿ ಕುಮಾರ್ ನಿರ್ಮಾಣದ ಚಿತ್ರವಿದು.

Tap to resize

Latest Videos

undefined

ಮಂಗ್ಲಿ ಹಾಡಿಗೆ ರಾಗಿಣಿ ಡಾನ್ಸ್‌: ‘ಸಂಜು ವೆಡ್ಸ್‌ ಗೀತಾ 2’ ಸಿನಿಮಾದ ‘ಹಬೀಬಿ ಹಬೀಬಿ’ ಹಾಡು ಆನಂದ್‌ ಆಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಖ್ಯಾತ ದಕ್ಷಿಣ ಭಾರತೀಯ ಗಾಯಕಿ ಮಂಗ್ಲಿ ಹಾಡಿರುವ ಈ ಹಾಡಿಗೆ ರಾಗಿಣಿ ದ್ವಿವೇದಿ, ರಚಿತಾ ರಾಮ್‌ ಹೆಜ್ಜೆ ಹಾಕಿದ್ದಾರೆ. ಈ ಕುರಿತು ನಿರ್ದೇಶಕ ನಾಗಶೇಖರ್‌, ‘ಇದು ಜನರನ್ನು ಸಿನಿಮಾದತ್ತ ಸೆಳೆಯುವ ಹಾಡು. ಭರ್ಜರಿ ಮನರಂಜನೆ ಹಾಡಿನಲ್ಲಿದೆ. ರಾಗಿಣಿ ಹಾಗೂ ನಾಯಕಿ ರಚಿತಾ ರಾಮ್‌ ಇಬ್ಬರೂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ಆರ್ಗ್ಯಾನಿಕ್‌ ವೀಕ್ಷಣೆ ಸಿಗಲಿ ಎಂಬ ಉದ್ದೇಶದಿಂದ ಹೆಚ್ಚು ಪ್ರಚಾರ ಮಾಡಿಲ್ಲ. 

ಕತೆ ಎಂದರೆ ಕಲಾವಿದನನ್ನು ತೃಪ್ತಿ ಪಡಿಸಬೇಕು, ನಿರ್ಮಾಪಕನಿಗೆ ಕಾಸು ಬರಬೇಕು: ಗೋಲ್ಡನ್‌ ಸ್ಟಾರ್‌ ಗಣೇಶ್‌

ಸದ್ಯ ಸಿನಿಮಾ ರೀರೆಕಾರ್ಡಿಂಗ್‌ ಹಂತದಲ್ಲಿದೆ. ಡಿಸೆಂಬರ್‌ 6ಕ್ಕೆ ರಿಲೀಸ್‌ ಮಾಡುವ ಸಾಧ್ಯತೆ ಇದೆ’ ಎಂದಿದ್ದಾರೆ. ಈ ಹಾಡಿಗೆ ಶ್ರೀಧರ್‌ ವಿ ಸಂಭ್ರಮ್‌ ಸಂಗೀತ ಸಂಯೋಜನೆ ಇದೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಛಲವಾದಿ ಮಹಾಸಭಾದ ಜ್ಞಾನಪ್ರಕಾಶ ಸ್ವಾಮೀಜಿ ಹಾಡನ್ನು ಬಿಡುಗಡೆ ಮಾಡಿದರು. ಛಲವಾದಿ ಕುಮಾರ್‌ ನಿರ್ಮಾಪಕರು. ಶ್ರೀನಗರ ಕಿಟ್ಟಿ ನಾಯಕ, ರಚಿತಾ ರಾಮ್‌ ಚಿತ್ರದ ನಾಯಕಿ. ರಾಗಿಣಿ ದ್ವಿವೇದಿ ನೆಗೆಟಿವ್‌ ಶೇಡ್‌ನಲ್ಲಿ ನಟಿಸಿದ್ದಾರೆ.

click me!