ಮಿಡಲ್ ಕ್ಲಾಸ್ ಹುಡುಗಿ ಕಷ್ಟ ಪಟ್ಟು ಓದಿ ಡಾಕ್ಟರ್ ಆಗಿದ್ದಾಳೆ; ಹೆಮ್ಮೆಯಿಂದ ಭಾವಿ ಪತ್ನಿ ಬಗ್ಗೆ ರಿವೀಲ್ ಮಾಡಿದ ಧನಂಜಯ್

By Vaishnavi Chandrashekar  |  First Published Nov 15, 2024, 3:39 PM IST

 ಆಲೋಚನೆಗಳು ಮತ್ತು ವರ್ಕ್ ಎಥಿಕ್ಸ್‌ ಮ್ಯಾಚ್ ಆಗುತ್ತದೆ ಎಂದು ಭಾವಿ ಪತ್ನಿ ಬಗ್ಗೆ ಸಣ್ಣ ಸುಳಿವು ಕೊಟ್ಟ ಧನಂಜಯ್..... 


ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ ನಟನೆಯ ಹಲವು ಸಿನಿಮಾಗಳು ರಿಲೀಸ್‌ಗೆ ಸಜ್ಜಾಗಿದೆ. ಕರಿಯರ್‌ನ ಪೀಕ್‌ನಲ್ಲಿರುವ ಡಾಲಿ ಇದೀಗ ಮದುವೆ ಅನೌನ್ಸ್ ಮಾಡಿದ್ದಾರೆ. ಹಲವು ವರ್ಷಗಳಿಂದ ಪ್ರೀತಿಸುತ್ತಿರುವ ಹುಡುಗಿ ಡಾ. ಧನ್ಯತಾರನ್ನು 2025, ಫೆಬ್ರವರಿ ಕೈ ಹಿಡಿಯಲಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಸಿಹಿ ಸುದ್ದಿಯನ್ನು ಜನರ ಜೊತೆ ಹಂಚಿಕೊಂಡಿರುವ ಡಾಲಿ ಮದುವೆ ತಯಾರಿ ಕೂಡ ಶುರು ಮಾಡಿಕೊಂಡಿದ್ದಾರೆ. ಡಾಲಿ ಸಿನಿಮಾ ನಟಿನ ಮದುವೆ ಆಗಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದವರು ಈಗ ಹುಡುಗಿ ಡಾಕ್ಟರ್ ಎಂದು ಕೇಳಿ ಶಾಕ್ ಆಗಿದ್ದಾರೆ. 

ಹುಡುಗಿ ಬಗ್ಗೆ ಡಾಲಿ:

Tap to resize

Latest Videos

undefined

'ಮದುವೆ ತಯಾರಿ ಶುರುವಾಗಿದೆ ಸಂಪೂರ್ಣವಾಗಿ ಮನೆಯವರು ನೋಡಿಕೊಳ್ಳುತ್ತಿದ್ದಾರೆ. ಮೈಸೂರಿನಲ್ಲಿ ಫೆಬ್ರವರಿ 16ರಂದು ಮದುವೆ ನಡೆಯುತ್ತಿದೆ. ಮದುವೆ ತಯಾರಿ ವಿಚಾರದಲ್ಲಿ ಸ್ವಲ್ಪ ಟೆನ್ಶನ್ ಇದ್ದೇ ಇರುತ್ತದೆ ಏಕೆಂದರೆ ಪ್ರತಿಯೊಬ್ಬರನ್ನು ಕರೆಯಬೇಕು ಹೀಗಾಗಿ ಶೂಟಿಂಗ್‌ನಿಂದ ಬ್ರೇಕ್ ತೆಗೆದುಕೊಂಡು ಇನ್‌ವೈಟ್ ಮಾಡಲು ಹೋಗಬೇಕು. ಇಲ್ಲಿ ಆಕ್ಟರ್ ಮತ್ತು ಡಾಕ್ಟರ್ ಲವ್ ಆಂಡ್ ಮದುವೆ ಅನ್ನೋದಕ್ಕಿಂತ ಹೆಚ್ಚಾಗಿ ನಮ್ಮ ಆಲೋಚನೆಗಳು ಮ್ಯಾಚ್ ಆಗುತ್ತದೆ ಹೀಗಾಗಿ ಒಟ್ಟಿಗೆ ಜರ್ನಿ ಶುರು ಮಾಡಿದೆ ಚೆನ್ನಾಗಿ ಇರುತ್ತದೆ. ಆಕೆ ಮಿಡಲ್ ಕ್ಲಾಸ್ ಹುಡುಗಿ ಕಷ್ಟ ಪಟ್ಟು ಡಾಕ್ಟರ್ ಆಗಿದ್ದಾರೆ ಅಲ್ಲದೆ ಅವರ ವರ್ಕ್ ಎಥಿಕ್ಸ್ ಯೋಚನೆಗಳು ನನಗೆ ಇಷ್ಟ ಆಯ್ತು' ಎಂದ ಕನ್ನಡ ಖಾಸಗಿ ಟಿವಿ ಸಂದರ್ಶನದಲ್ಲಿ ಡಾಲಿ ಮಾತನಾಡಿದ್ದಾರೆ. 

'ಆಪ್ತರನ್ನು ಮದುವೆಗೆ ಆಹ್ವಾನ ಮಾಡಲು ಶುರು ಮಾಡಬೇಕು ಆಗ ಭಾವಿ ಪತ್ನಿಯನ್ನು ಒಟ್ಟಿಗೆ ಕರೆದುಕೊಂಡು ಬರುತ್ತೀನಿ. ನಾವಿಬ್ಬರು ಒಂದೇ ರೀತಿಯಲ್ಲಿ ಯೋಚನೆ ಮಾಡುತ್ತೀವಿ. ಸಿನಿಮಾದವರ ಜೊತೆ ಜೀವನದ ಜರ್ನಿ ಹಾಗೆ ಶುರು ಮಾಡುವುದು ಬಹಳ ಕಷ್ಟ ಹಾಗಾಗಿ ಪ್ರೀತಿಸಿ ಹುಡುಗಿ ಆಯ್ಕೆ ಮಾಡಿಕೊಂಡು ಮದುವೆ ಆಗುತ್ತಿರುವುದು. ಇದು ಪಕ್ಕಾ ಲವ್ ಸ್ಟೋರಿ' ಎಂದು ಡಾಲಿ ಹೇಳಿದ್ದಾರೆ. 

click me!