
ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ (Upendra) ಅಭಿನಯ ಮತ್ತು ಆಕ್ಷನ್ ಕಟ್ ಹೇಳುತ್ತಿರುವ ಹೊಸ ಸಿನಿಮಾದ ಫಸ್ಟ್‌ಲುಕ್ ಪೋಸ್ಟರ್ (Firstlook Poster) ರಿಲೀಸ್ ಆಗಿದೆ. ನಿರೀಕ್ಷೆಯಂತೆಯೇ ಉಪೇಂದ್ರ ಅವರು ಟೈಟಲ್ (Title) ಅನಾವರಣ ಮಾಡಿದ್ದಾರೆ. ಭಿನ್ನ-ವಿಭಿನ್ನವಾದ ಶೀರ್ಷಿಕೆಗಳನ್ನು ಇಡುವುದರಲ್ಲಿ ಈಗಾಗಲೇ ಉಪೇಂದ್ರ ಫೇಮಸ್. ಈ ಬಾರಿ ಕೂಡ ಅಂಥದ್ದೇ ಒಂದು ಹೊಸ ಟೈಟಲ್ ಇಟ್ಟಿದ್ದಾರೆ. ಅದನ್ನು ಕುದುರೆ ಲಾಳ ಎನ್ನಬೇಕೋ, ಮೂರು ನಾಮ ಎನ್ನಬೇಕೋ, ಉಗುರಿನ ಮೇಲೆ ಮತದಾನದ ಇಂಕು ಹತ್ತಿರುವ ಗುರುತು ಎನ್ನಬೇಕೋ ಎಂಬುದು ಅವರೇ ಹೇಳಬೇಕು. ಸದ್ಯಕ್ಕೆ ಈ ಪೋಸ್ಟರ್ ಸಿನಿರಸಿಕರ ಗಮನ ಸೆಳೆಯುತ್ತಿದೆ.
ಈ ಪೋಸ್ಟರ್‌ನಲ್ಲಿ ಉಪೇಂದ್ರ ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ಕೊಂಬು ಇರುವ ಕುದುರೆ ಏರಿ ಕಂಬಳಿ ಹೊದ್ದಿರುವ ಲುಕ್ನಲ್ಲಿದ್ದಾರೆ. ಮಾತ್ರವಲ್ಲದೇ ಇದು ಪ್ಯಾನ್ ಇಂಡಿಯಾ ಸಿನಿಮಾ ಎಂಬುದು ಪಕ್ಕಾ ಆಗಿದೆ. ವಿಶೇಷವಾಗಿ 'ಉಪೇಂದ್ರ' ಚಿತ್ರದಲ್ಲಿ ನಾನು, ಉಪ್ಪಿ- 2 ಚಿತ್ರದಲ್ಲಿ ನೀನು, ಈಗ ಇವನು ಸ್ಟಾಟರ್ಜಿಯಲ್ಲಿ ರಿಯಲ್ ಸ್ಟಾರ್ ಉಪ್ಪಿ ಸಿನಿರಸಿಕರಿಗೆ ರಸದೌತಣ ಉಣಬಡಿಸಲಿದ್ದಾರೆ ಎಂದೇ ಹೇಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ (Social Media) ತಮ್ಮ ನಿರ್ದೇಶನದ ಹೊಸ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಅಭಿಮಾನಿಗಳಿಗೆ (Fans) ಈವರೆಗಿನ ಸಿನಿ ಜರ್ನಿಯನ್ನು ಸುಂದರವಾಗಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.
Upendra: ರಿಯಲ್ ಸ್ಟಾರ್ ಉಪೇಂದ್ರ-ವೇದಿಕಾ ನಟನೆಯ 'ಹೋಮ್ ಮಿನಿಸ್ಟರ್' ರಿಲೀಸ್ ಡೇಟ್ ಫಿಕ್ಸ್!
ಈ ಬಗ್ಗೆ ಟ್ವೀಟ್ಟರ್‌ನಲ್ಲಿ (Twitter) 'ಚಿತ್ರರಂಗದಲ್ಲಿ ಉಪೇಂದ್ರ ಅನ್ನೊ ಕಥೆ ಮಾಡಿ 33 ವರ್ಷದ ಚಿತ್ರಕಥೆಯಲ್ಲಿ ಸಂಭಾಷಣೆ ಹೇಳಿಸಿ, ಶಿಳ್ಳೆ ಚಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ' ಎಂದು ಅವರು ಪೋಸ್ಟ್ ಮಾಡಿದ್ದಾರೆ. ಸದ್ಯ ಪೋಸ್ಟರ್‌ನಲ್ಲಿ ಉಪೇಂದ್ರ ಅವರ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ಕಮೆಂಟ್ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ವಿಶೇಷವಾಗಿ ವಿನ್ಯಾಸಗೊಂಡಿರುವ ಈ ಪೋಸ್ಟರ್ ಸದ್ಯ ವೈರಲ್ (Viral) ಆಗುತ್ತಿದ್ದು, ಬ್ಯಾಕ್‌ಗ್ರೌಂಡ್‌ನಲ್ಲಿ ಉಪಗ್ರಹ ಕಾಣಿಸಿದೆ. ಈ ಎಲ್ಲ ಕಾರಣದಿಂದ ಈ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಹೆಚ್ಚಿದೆ.
ವಿಶೇಷವಾಗಿ ಈ ಸಿನಿಮಾ ಶುರುವಾಗುವ ಮೊದಲೇ ಚಿತ್ರದ ಆಡಿಯೋ ರೈಟ್ಸ್ ಲಹರಿ ಸಂಸ್ಥೆ ತೆಕ್ಕೆಗೆ ಜಾರಿದೆ. ಮಾತ್ರವಲ್ಲದೇ 'ಲಹರಿ ಫಿಲ್ಮ್ಸ್' (Lahari Films) ಮತ್ತು 'ವೀನಸ್ ಎಂಟರ್ಟೇನರ್ಸ್' (Venus Entertainers) ಸಂಸ್ಥೆಗಳು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಜಿ. ಮನೋಹರನ್ (G Manohara.) ಮತ್ತು ಕೆ ಪಿ ಶ್ರೀಕಾಂತ್ (KP Srikanth) ಜೊತೆಯಾಗಿ ನಿರ್ಮಾಣ ಮಾಡುತ್ತಿದ್ದು, ಅದ್ದೂರಿಯಾಗಿ ಸಿನಿಮಾ ಮೂಡಿಬರಲಿದೆ. ಇನ್ನು ಪ್ರಜಾಕೀಯದ (Prajakeeya) ಕಡೆಗೆ ಉಪೇಂದ್ರ ಅವರು ಗಮನ ಹರಿಸಿರುವುದರಿಂದ ಡೈರೆಕ್ಷನ್ ಕಡೆಗೆ ಸಮಯ ನೀಡಲು ಅವರಿಗೆ ಇಲ್ಲಿಯವರೆಗೂ ಸಾಧ್ಯವಾಗಿರಲಿಲ್ಲ. ಆದರೆ ಇದೀಗ ತಮ್ಮ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ.
Shriya Saran: ಉಪ್ಪಿ-ಕಿಚ್ಚ ಚಿತ್ರದಲ್ಲಿ ರಾಣಿಯಾದ ಬಹುಭಾಷಾ ತಾರೆ!
ಬರೋಬರಿ 7 ವರ್ಷಗಳ ನಂತರ ಮತ್ತೆ ನಿರ್ದೇಶನ ಮಾಡುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಈ ಮುನ್ನವೇ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡುವುದಾಗಿ ಮಾಹಿತಿ ನೀಡಿದ್ದರು. ಮಾರ್ಚ್ 11 ಡೇಟ್ ಸೇವ್ ಮಾಡಿಕೊಳ್ಳಿ. ಅಂದು ಒಂದು ಒಳ್ಳೆಯ ಶುಭ ಸುದ್ದಿ ನೀಡುತ್ತೇನೆ ಎಂದು ಅವರು ಈ ಮುಂಚೆಯೇ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಸದ್ಯ ಉಪೇಂದ್ರ ಆರ್ ಚಂದ್ರು ನಿರ್ದೇಶನದ 'ಕಬ್ಜ' (Kabza) ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಹಾಗೂ ಅವರ ಅಭಿನಯದ ಬಹು ನಿರೀಕ್ಷಿತ 'ಹೋಮ್ ಮಿನಿಸ್ಟರ್' (Home Minister) ಚಿತ್ರ ಏಪ್ರಿಲ್ 1ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.