
ಕನ್ನಡ ಚಿತ್ರರಂಗದ ಡಿಫರೆಂಟ್ ಡೈರೆಕ್ಟರ್ ಪ್ರೇಮ್ ಮತ್ತು ನಿರ್ಮಾಪಕಿ ರಕ್ಷಿತಾ ಬಂಡವಾಳ ಹಾಕಿರುವ ಸಿನಿಮಾ ಏಕ್ ಲವ್ ಯಾ ಚಿತ್ರಕ್ಕೆ ರಾಜ್ಯದೆಲ್ಲೆಡೆ ಅದ್ಧುತ ಪ್ರತಿಕ್ರಿಯೆ ಸಿಗುತ್ತಿದೆ. ಮೊದಲ ಸಿನಿಮಾದಲ್ಲಿಯೇ ರಾಣಾ ಮತ್ತು ರೇಶ್ಮಾ ಕನ್ನಡ ಸಿನಿ ರಸಿಕರ ಗಮನ ಸೆಳೆದಿದ್ದಾರೆ. ವಿವಿಧೆಡೆ ಹೌಸ್‌ಫುಲ್ ಪ್ರದರ್ಶನ ಕಂಡು ಯಶಸ್ಸಿನ ಸಂಭ್ರಮದಲ್ಲಿ ಇರುವ ಇಡೀ ತಂಡ ಪ್ರೆಸ್‌ಮೀಟ್ ಕರೆದು ಮಾಧ್ಯಮ ಸ್ನೇಹಿತರಿಗೆ ಹಾಗೂ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಸಿನಿಮಾ ಯಶಸ್ಸು ಮತ್ತು ಬಂಡವಾಳದ ಬಗ್ಗೆ ರಕ್ಷಿತಾ ಅವರನ್ನು ಪ್ರಶ್ನೆ ಮಾಡಲಾಗಿತ್ತು. 'ಯಾರಿಗಾದರೂ ಕಥೆ ಹೇಳುವುದಕ್ಕೆ ಇಷ್ಟ. ಕಥೆ ರೆಡಿಯಾಗಿದೆ ಅಂದ್ರೆ ನನ್ನ ಸಂಪರ್ಕ ಮಾಡಬಹುದು. ನನ್ನ ಬಜೆಟ್‌ನಲ್ಲಿ ಸಿನಿಮಾ ಆಗುತ್ತೆ ಅಂದ್ರೆ ಖಂಡಿತಾ ಮಾಡ್ತೀನಿ. ನಮ್ಮದು ಇನ್ನೂ ಸಣ್ಣ ಕಂಪನಿ, ನಮಗೆ ಕನ್ನಡ ಪ್ರಾಜೆಕ್ಟ್‌ಗಳು ಬಂದ್ರೆ ತುಂಬಾನೇ ಖುಷಿ ಆಗುತ್ತದೆ. ಪ್ರೇಮ್ ಅವರು ಸಿನಿಮಾನ ತುಂಬಾನೇ ರಿಚ್ ಆಗಿ ಮಾಡ್ತಾರೆ. ಸಿನಿಮಾದಲ್ಲಿ ಅದು ನೋಡಬಹುದು. ಅದಕ್ಕೆ ತಕ್ಕಂತೆ ಖರ್ಚು ಕೂಡ ಆಗಿದೆ. ಟಿವಿಯಲ್ಲಿ ಕಾಶ್ಮೀರ್ ಹಾಡು ನೋಡಿದರೆ ವಾವ್ ಅನ್ಸುತ್ತೆ ಇನ್ನೂ ಡೊಡ್ಡ ಸ್ಕ್ರೀನ್ ಅಂದ್ರೆ ವಾವ್ ಆಗಿದೆ,' ಎಂದು ರಕ್ಷಿತಾ ಹೇಳಿದ್ದಾರೆ.
'ಪ್ರೇಮ್ ಸರ್ ಸಿನಿಮಾದಲ್ಲಿ ಖರ್ಚು ಒಂದೇ ಮಾಡೋದು ಅಲ್ಲ. ಸಿನಿಮಾದಲ್ಲಿ ಇರುವ ಕ್ವಾಲಿಟಿ, ಕೊನೆಯಲ್ಲಿ ರೆಡಿಯಾಗುವ ಪ್ರಾಡೆಕ್ಟ್ ತುಂಬಾನೇ ಮುಖ್ಯ. ಅದನ್ನ ಚೆನ್ನಾಗಿ ತೋರಿಸುತ್ತಾರೆ. ಮದ್ವೆ ಆದಾಗ ಕ್ವಾಲಿಟಿ ಗೊತ್ತಿರಲಿಲ್ಲ. ಆಮೇಲೆ ಗೊತ್ತಾಯ್ತು. ನಾವು ಮದ್ವೆಯಾಗಿ 15 ವರ್ಷ ಆಯ್ತು. ಈಗಲೂ ಯೋಚನೆ ಮಾಡ್ತಿದ್ದೀನಿ, ಅದು ಹೇಗೆ ನಾನು ಇವರ ಜೊತೆ 15 ವರ್ಷ ಕಳೆದೆ,' ಎಂದು ರಕ್ಷಿತಾ ಮಾತನಾಡಿದ್ದಾರೆ.
'ನಾವು ಪ್ರೀತಿಸುತ್ತಿದ್ದ ದಿನಗಳು ಕ್ರೇಜಿಯಾಗಿತ್ತು. ಪ್ರೇಮ್‌ಗೆ ತುಂಬಾನೇ ಭಯವಿತ್ತು. ಯಾರಾದರೂ ನಾವಿಬ್ಬರೂ ಒಟ್ಟಿಗೆ ಇರುವ ಫೋಟೋ ಕ್ಲಿಕ್ ಮಾಡಿಕೊಂಡು ಬರೆದು ಬಿಡುತ್ತಾರೆಂದು. ತುಂಬಾ ಎಕ್ಸಟ್ರಾ ಎಫರ್ಟ್ ಹಾಕಿ ನನ್ನ ಮನೆಗೆ ಬಂದು ಭೇಟಿ ಮಾಡುತ್ತಿದ್ದರು. ಕೆಲವೊಮ್ಮೆ ಮೂರನೇ ವ್ಯಕ್ತಿಯನ್ನು ಕರೆದುಕೊಂಡು ಬರುತ್ತಿದ್ದರು. ಆಗ ನಾವು ಹೋಟೆಲ್‌ಗೆ ಹೋಗುತ್ತಿದ್ದೆವು. ಆದರೆ ಏನೇ ಮಾಡಿದರೂ ನನ್ನ ಪಕ್ಕ ಕುಳಿತುಕೊಳ್ಳುತ್ತಿರಲಿಲ್ಲ.' ಎಂದು 2009ರಲ್ಲಿ ಡೆಕ್ಕನ್ ಹೆರಾಲ್ಡ್ ನೀಡಿದ ಸಂದರ್ಶನದಲ್ಲಿ ತಮ್ಮ ಪ್ರೀತಿ ಬಗ್ಗೆ ಹಂಚಿಕೊಂಡಿದ್ದರು.
'ಪ್ರೇಮ್ ನನಗೆ ಮೊದಲು ಕರೆ ಮಾಡಿದಾಗ ಬೈದಿದ್ದೆ. ಅವರ ಸಿನಿಮಾದಲ್ಲಿರುವ ಸ್ಪೆಷಲ್ ಹಾಡಿಗೆ ನಾನು ಡ್ಯಾನ್ಸ್ ಮಾಡಬೇಕಂತೆ. ಆದರೆ ನಾಯಕಿ ಮಾತ್ರ ಬಾಲಿವುಡ್‌ನವರು ಅಂದಿದಕ್ಕೆ,' ಎಂದು ರಕ್ಷಿತಾ ಹೇಳಿದಾಗ 'ಸಾಮಾನ್ಯವಾಗಿ ನಾನು ಯಾವ ಹೀರೋಯಿನ್‌ಗೂ ಕಾಲ್ ಮಾಡುವುದಿಲ್ಲ. ಆದರೆ ಕೆಲವರು ಹೇಳಿದರೆ, ನೀವೇ ಕರೆ ಮಾಡಿ, ವೈಯಕ್ತಿಕವಾಗಿ ಇನ್ವೈಟ್ ಮಾಡಿ ಎಂದು. ಅವ್ರು ಬೈತಾರೆ ಅಂತ ಮಾತ್ರ ಅಂದು ಕೊಂಡಿರಲಿಲ್ಲ. ಆಕೆಗೆ ಸಮಾಧಾನ ಮಾಡಿ ಸಿನಿಮಾ ನೋಡಲು ಕರೆದೆ,' ಎಂದಿದ್ದರು ಪ್ರೇಮ್.
ರಕ್ಷಿತಾಗಾಗಿ ಪ್ರೇಮ್ ಜೋಗಿ ಸಿನಿಮಾ ಸ್ಪೆಷಲ್ ಸ್ಕ್ರೀನಿಂಗ್ ಮಾಡಿದಾಗ, ಇಡೀ ಗಾಂಧಿ ನಗರದಲ್ಲಿ ಇವರಿಬ್ಬರ ಬಗ್ಗೆ ಗುಸುಗುಸು ಶುರುವಾಗಿತ್ತು. 'ನಾನು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದ್ದೆವು. ನಾನು ಪ್ರೇಮ್‌ಗೆ ಪ್ರಪೋಸ್ ಮಾಡಿದ ದಿನ ಅವರು ಒಪ್ಪಿಕೊಳ್ಳಲಿಲ್ಲ. ಹಾಗೇ ಏನೂ ರಿಪ್ಲೈ ಮಾಡಲಿಲ್ಲ. ನೆಕ್ಸ್ಟ್ ದಿನ ನನ್ನ ತಾಯಿ ಬಳಿ ಹೋಗಿ ನಿಮ್ಮ ಮಗಳನ್ನು ಮದ್ವೆ ಆಗ್ತಿದ್ದೀನಿ ಅಂತ ಹೇಳಿದ್ದರು. ಆಗ ನನಗೆ ದೊಡ್ಡ ಶಾಕ್ ಆಯ್ತು,' ಎಂದು ರಕ್ಷಿತಾ ಹೇಳಿದ್ದಾರೆ. 'ನಾನು ಡೇಟಿಂಗ್ ಮಾಡುವ ವ್ಯಕ್ತಿ ಅಲ್ಲ. ನನಗೆ ಗೊತ್ತಿತ್ತು, ಆಕೆಯನ್ನು ಮದ್ವೆ ಆಗಬೇಕು ಎಂದು. ಅವ್ರು ಹೇಗಿದ್ದಾರೆ ಹಾಗೆಯೇ ನಾನು ಒಪ್ಪಿಕೊಂಡಿದ್ದೆ. ನಾವಿಬ್ಬರೂ ಬೇರೆ ಜಾತಿಗೆ ಸೇರಿದ್ದವರು ಎಂದು ಅನೇಕರು ಮಾತನಾಡಿಕೊಂಡರು. ನನ್ನ ಬಗ್ಗೆ ತಪ್ಪು ವಿಚಾರಗಳನ್ನು ಆಕೆ ಬಳಿ ಹೇಳುತ್ತಿದ್ದರು. ಆದರೆ ನಾವಿಬ್ಬರೂ ತುಂಬಾನೇ ಕಾನ್ಫಿಡೆಂಟ್ ಆಗಿ ಸಂಬಂಧ ಕಾಪಾಡಿಕೊಂಡೆವು,' ಎಂದಿದ್ದಾರೆ ಡಿಫರೆಂಟ್ ನಿರ್ದೇಶಕ ಪ್ರೇಮ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.