
ರೋಹಿತ್ ಪದಕಿ ನಿರ್ದೇಶನದ, ಡಾಲಿ ಧನಂಜಯ್ ಅಭಿನಯದ ‘ರತ್ನನ್ ಪ್ರಪಂಚ’(Rathnan Prapancha) ಸಿನಿಮಾ ಅಕ್ಟೋಬರ್ 22ರಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಆಗುತ್ತಿದೆ. ಥಿಯೇಟರ್‌ನಲ್ಲಿ ಶೇ.100 ಸೀಟು ಭರ್ತಿ ಅವಕಾಶ ಇದ್ದರೂ ಓಟಿಟಿಯಲ್ಲಿ(OTT) ರಿಲೀಸ್ ಮಾಡುವ ನಿರ್ಧಾರ ಕೈಗೊಂಡಿದ್ದಕ್ಕೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ(Social Media) ಬೇಸರಿಸಿಕೊಂಡಿದ್ದರು. ಈ ಕುರಿತು ಧನಂಜಯ್ ಹೇಳಿದ ಮಾತುಗಳು ಇಲ್ಲಿವೆ:
1. ರತ್ನನ್ ಪ್ರಪಂಚ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಬೇಕು ಎಂದು ಮೂರು ತಿಂಗಳ ಹಿಂದೆಯೇ ನಿರ್ಧಾರವಾಗಿತ್ತು. ಮುಂದೆ ಚಿತ್ರಮಂದಿರಗಳ ಪರಿಸ್ಥಿತಿ ಹೇಗೆ, ಥಿಯೇಟರ್‌ಗಳು ಬಾಗಿಲು ತೆಗೆದರೂ ಎಲ್ಲಿಯವರೆಗೂ ಕಾಯಬೇಕು ಎಂಬಿತ್ಯಾದಿ ಅಂಶಗಳ ಬಗ್ಗೆ ನಮಗೆ ಐಡಿಯಾ ಇರಲಿಲ್ಲ. ಹೀಗಾಗಿ ಅಮೆಜಾನ್ ಪ್ರೈಮ್‌ಗೆ ಚಿತ್ರವನ್ನು ಕೊಡುವ ನಿರ್ಧಾರ ಮಾಡಲಾಗಿತ್ತು.
ಹಿಮ, ಕೊರೆಯುವ ಚಳಿಯಲ್ಲಿ ರೆಬಾ ಜೊತೆ ಕಾಶ್ಮೀರದಲ್ಲಿ ಕಾಣಿಸಿಕೊಂಡ ಧನಂಜಯ!
2. ನಮ್ಮ ಚಿತ್ರಕ್ಕೆ ಥಿಯೇಟರ್‌ಗಳ ಸಮಸ್ಯೆ ಅನ್ನೋದಕ್ಕಿಂತ ಈಗಾಗಲೇ ಥಿಯೇಟರ್‌ಗಳಿಗೆ ಬರುವುದಕ್ಕೆ ಸಾಲು ಸಾಲು ಸಿನಿಮಾಗಳು ರೆಡಿ ಇವೆ. ಆ ಚಿತ್ರಗಳ ಸಾಲಿನಲ್ಲಿ ನಾವು ನಿಲ್ಲಬೇಕಿದೆ. ಕಾಯುವುದು ಬೇಡ ಅಂತಲೇ ಓಟಿಟಿಗೆ ಚಿತ್ರವನ್ನು ಸೇಲ್ ಮಾಡಿದ್ದೇವೆ.
ಅಮೆಜಾನ್ ಪ್ರೈಮ್‌ನಲ್ಲಿ ಅ. 22ರಂದು ರತ್ನನ್ ಪ್ರಪಂಚ ಬಿಡುಗಡೆ
3. ಕೆಲವರು ಹೇಳುವಂತೆ ಚಿತ್ರದ ಮೇಲೆ ನಂಬಿಕೆ ಇಲ್ಲ, ಅದಕ್ಕೆ ಥಿಯೇಟರ್‌ಗಳಿಗೆ ಬಾರದೆ ಓಟಿಟಿಗೆ ಹೋಗಿದ್ದಾರೆ ಎನ್ನುತ್ತಿದ್ದಾರೆ. ಚಿತ್ರದ ಮೇಲೆ ನಂಬಿಕೆ ಇದ್ದಿದ್ದಕ್ಕೆ, ಚಿತ್ರದಲ್ಲಿ ಗಟ್ಟಿತನ ಇದ್ದಿದ್ದಕ್ಕೆ, ಚಿತ್ರದಲ್ಲಿ ಒಳ್ಳೆಯ ಕತೆ ಇದ್ದಿದ್ದಕ್ಕೆ ಅಮೆಜಾನ್ ಪ್ರೈಮ್‌ನವರೇ ಮುಂದೆ ಬಂದು ನಮ್ಮ ಚಿತ್ರವನ್ನು ತೆಗೆದುಕೊಂಡಿದ್ದಾರೆ.
4. ಓಟಿಟಿಯಲ್ಲಿ ನನ್ನ ಸಿನಿಮಾ ಬಿಡುಗಡೆ ಆಗುತ್ತಿರುವುದಕ್ಕೆ ನನಗೂ ಖುಷಿ ಇದೆ. ಓಟಿಟಿಗೆ ಸಿನಿಮಾ ಕೊಟ್ಟಮಾತ್ರಕ್ಕೆ ನಾನು ಚಿತ್ರಮಂದಿರಗಳ ವಿರೋಧಿ ಅಲ್ಲ. ‘ಸಲಗ’ ಮೂಲಕ ನಾನು ಇದೇ ತಿಂಗಳು ಚಿತ್ರಮಂದಿರಗಳಿಗೆ ಬರುತ್ತಿದ್ದೇನೆ. ನನ್ನ ನಟನೆಯ ಬೇರೆ ಚಿತ್ರಗಳು ಥಿಯೇಟರ್‌ಗಳಿಗೆ ಬರಲಿವೆ.
ರತ್ನನ್ ಪ್ರಪಂಚ ಟೀಸರ್ ಬಿಡುಗಡೆಗೆ ಡೇಟ್ ಫಿಕ್ಸ್
5. ನಮ್ಮ ಚಿತ್ರ ನೋಡಿದ ಪ್ರತಿಯೊಬ್ಬರು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ಅಂಥದ್ದೊಂದು ಕತೆ ಈ ಚಿತ್ರದಲ್ಲಿದೆ. ‘ರತ್ನನ್ ಪ್ರಪಂಚ’ ಅಮೆಜಾನ್ ಪ್ರೈಮ್ ಮೂಲಕ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪಲಿದೆ ಎನ್ನುವ ನಂಬಿಕೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.