ನಿನ್ನ ಸನಿಹಕೆ ಸಿನಿಮಾದ ಮೊದಲ ಟಿಕೆಟ್ ಸ್ವೀಕರಿಸಿದ ಸಿಎಂ ಬೊಮ್ಮಾಯಿ

Published : Oct 05, 2021, 07:21 PM IST
ನಿನ್ನ ಸನಿಹಕೆ ಸಿನಿಮಾದ ಮೊದಲ ಟಿಕೆಟ್ ಸ್ವೀಕರಿಸಿದ ಸಿಎಂ ಬೊಮ್ಮಾಯಿ

ಸಾರಾಂಶ

ನಿನ್ನ ಸನಿಹಕೆ ಚಿತ್ರದ ಮೊದಲ ಟಿಕೆಟ್ ಸ್ವೀಕರಿಸಿದ ಸಿಎಂ ಚಿತ್ರದ ಪ್ರಿಮಿಯರ್ ವೀಕ್ಷಿಸಲಿದ್ದಾರೆ ಸಿಎಂ ಬೊಮ್ಮಾಯಿ

ನಿನ್ನ ಸನಿಹಕೆ ಚಿತ್ರದ ಮೊದಲ ಟಿಕೆಟನ್ನು ಸಿಎಂ ಬಸವರಾಜ ಬೊಮ್ಮಾಯಿ ಸ್ವೀಕರಿಸಿದ್ದಾರೆ. ಡಾ.ರಾಜ್ ಮೊಮ್ಮಗಳ ಚೊಚ್ಚಲ ಚಿತ್ರ ನಿನ್ನ ಸನಿಹಕೆ‌ ಸಿನಿಮಾವನ್ನು ಸಿ.ಎಂ ಬಸವರಾಜ್ ಬೊಮ್ಮಾಯಿ ವೀಕ್ಷೀಸಲಿದ್ದಾರೆ.

ನಿನ್ನ ಸನಿಹಕೆ ಚಿತ್ರದ ಪ್ರಿಮಿಯರ್ ಶೋವನ್ನು ಸಿ.ಎಂ. ಬೊಮ್ಮಾಯಿ ವೀಕ್ಷಿಸಲಿದ್ದು ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ  ಪಿ.ವಿ.ಆರ್ ಒರಾಯಾನ್ ಮಾಲ್ ನಲ್ಲಿ ಗುರುವಾರ ಸಂಜೆ 7ಗಂಟೆಗೆ ಪ್ರಿಮಿಯರ್ ಶೋ ಆಯೋಜನೆಯಾಗಿದೆ. ಡಾ.ರಾಜ್ ಕುಟುಂಬ ಸೇರಿದಂತೆ ಇಡೀ ಚಿತ್ರರಂಗದ ಗಣ್ಯಾತಿಗಣ್ಯರು ಭಾಗಿಯಾಗಲಿದ್ದಾರೆ.

ರಾಜ್‌ಕುಮಾರ್ ಮೊಮ್ಮಗಳ 'ನಿನ್ನ ಸನಿಹಕೆ' ಚಿತ್ರದ ಟ್ರೈಲರ್ ವೈರಲ್!

ಸಿ.ಎಂ ಬಸವರಾಜ್ ಬೊಮ್ಮಾಯಿಯವರ ಭೇಟಿ ಮಾಡಿದ ನಿನ್ನ ಸನಿಹಕೆ‌ ಚಿತ್ರತಂಡ ಮೊದಲ ಟಿಕೆಟ್ ಕೊಟ್ಟು ಸಿನಿಮಾ ವೀಕ್ಷಣೆಗೆ ಆಹ್ವಾನಿಸಿದೆ. ಚಿತ್ರ ನಾಯಕ ನಟ ಹಾಗೂ ನಿರ್ದೇಶಕ‌ ಸೂರಜ್ ಗೌಡ, ನಾಯಕಿ ಧನ್ಯ ರಾಮ್ ಕುಮಾರ್, ನಿರ್ಮಾಪಕರಾದ ಅಕ್ಷಯ್ ರಾಜಶೇಖರ್, ರಂಗನಾಥ್ ಕೂಡ್ಲಗಿ ಭಾಗಿಯಾಗಿದ್ದರು.

"

ಅಕ್ಟೋಬರ್ 8ರಂದು ಶುಕ್ರವಾರ ರಾಜ್ಯದಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಿನ್ನ ಸನಿಹಕೆ ಚಿತ್ರ ತೆರೆಗೆ ಬರಲಿದ್ದು ಈಗಾಗಲೇ ಸಿನಿ ಪ್ರಿಯರು ಹೊಸ ಸಿನಿಮಾದ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಡಾ.ರಾಜ್‌ಕುಮಾರ್ ಕುಟುಂಬದಿಂದ ಮೊದಲ ಬಾರಿ ಹೆಣ್ಣು ಮಗಳು ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಟೋಬರ್ 8ರಂದು ಬಿಡುಗಡೆ ಆಗುತ್ತಿರುವ 'ನಿನ್ನ ಸನಿಹಕೆ' ಚಿತ್ರದ ಮೂಲಕ ಧನ್ಯಾ ರಾಮ್‌ಕುಮಾರ್ ಎಂಟ್ರಿ ಕೊಡುತ್ತಿದ್ದಾರೆ. ಇಡೀ ರಾಜ್‌ ಕುಟುಂಬ ಈ ಚಿತ್ರಕ್ಕೆ ಕಾಯುತ್ತಿದೆ.

ಡಾ.ರಾಜ್‌ಕುಮಾರ್ ಅವರ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ 'ನಿನ್ನ ಸನಿಹಕೆ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಅಕ್ಟೋಬರ್ 8ರಂದು ಬಿಡುಗಡೆ ಆಗುತ್ತಿರುವ ಈ ಚಿತ್ರವನ್ನು ತಪ್ಪದೇ ನೋಡುವುದಾಗಿ ತಲೈವ ರಜನಿಕಾಂತ್ ಹೇಳಿದ್ದಾರೆ. ಈ ಮೂಲಕ ಡಾ. ರಾಜ್ ಮೊಮ್ಮಗಳಿಗೆ ಬೆಂಬಲ ಕೊಟ್ಟಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
ನೀನೇ ನನ್ನ ಚಾಟ್‌ಜಿಪಿಟಿ, ಬಾಡಿಗಾರ್ಡ್:‌ Rocking Star Yash ಬಗ್ಗೆ ಹೀಗಂದಿದ್ದೇಕೆ ರಾಧಿಕಾ?