ರಾತ್ರಿ 2 ಗಂಟೆಗೆ ಜೀವನದ ಬಗ್ಗೆ ಯೋಚನೆ ಮಾಡ್ತೀನಿ, ಗೂಗಲ್‌ನಲ್ಲಿ ಸಣ್ಣ ಆಗೋಕೆ ಹುಡುಕ್ತೀನಿ: ರಶ್ಮಿಕಾ ಮಂದಣ್ಣ

Published : Feb 17, 2025, 02:13 PM ISTUpdated : Feb 17, 2025, 02:25 PM IST
ರಾತ್ರಿ 2 ಗಂಟೆಗೆ ಜೀವನದ ಬಗ್ಗೆ ಯೋಚನೆ ಮಾಡ್ತೀನಿ, ಗೂಗಲ್‌ನಲ್ಲಿ ಸಣ್ಣ ಆಗೋಕೆ ಹುಡುಕ್ತೀನಿ: ರಶ್ಮಿಕಾ ಮಂದಣ್ಣ

ಸಾರಾಂಶ

ರಶ್ಮಿಕಾ ಮಂದಣ್ಣ, ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದು, ಛಾವಾ ಚಿತ್ರದ ಪ್ರಚಾರದ ವೇಳೆ ನೇಹಾ ಧೂಪಿಯಾ ಜೊತೆ ಸಂದರ್ಶನ ನೀಡಿದ್ದಾರೆ. ತಮ್ಮ ವೃತ್ತಿಜೀವನದ ಭವಿಷ್ಯದ ಬಗ್ಗೆ ಆಲೋಚಿಸುವುದಾಗಿ ಹೇಳಿದರು. ತೂಕ ಇಳಿಸುವ ಬಗ್ಗೆ ಹುಡುಕುವುದಾಗಿ ತಿಳಿಸಿದರು. ಕೆಲಸದ ಒತ್ತಡದಿಂದ ತಂಗಿಯ ಬೆಳವಣಿಗೆಯನ್ನು ತಪ್ಪಿಸಿಕೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು.

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‌ನ ಬೇಡಿಕೆಯ ನಟಿ. ವಿಕ್ಕಿ ಕೌಶಲ್ ಜೊತೆ ನಟಿಸುತ್ತಿರುವ ಛಾವಾ ಸಿನಿಮಾ ರಿಲೀಸ್‌ ಆಗಿದೆ. ಪ್ರಮೋಷನ್‌ನಲ್ಲಿ ಬ್ಯುಸಿಯಾಗಿರುವ ನಟಿ ಈಗ ನೇಹಾ ಧೂಪಿಯಾ ಜೊತೆ ಸಂದರ್ಶನದ ತಮ್ಮ ಜೀವ ಮತ್ತು ಫಿಟ್ನೆಸ್‌ ಬಗ್ಗೆ ಚರ್ಚೆ ಮಾಡಿದ್ದಾರೆ.

- ಒಂದು ವೇಳೆ ರಾತ್ರಿ 2 ಗಂಟೆವರೆಗೂ ಎದ್ದಿದ್ದರೆ ಯಾವುದರ ಬಗ್ಗೆ ಯೋಚನೆ ಮಾಡುತ್ತಿರುತ್ತೀರಿ?
ಖಂಡಿತ ನನ್ನ ಕರಿಯರ್‌ ಬಗ್ಗೆ ಯೋಚನೆ ಮಾಡುತ್ತೀನಿ. ನನ್ನ ಫ್ಯೂಚರ್‌ ತಲೆಯಲ್ಲಿ ಇರುತ್ತದೆ. ನಾನು ಸರಿಯಾಗಿ ಮಾಡುತ್ತಿದ್ದೀನಾ? ತಪ್ಪು ಮಾಡುತ್ತಿದ್ದೀನಾ? ನನ್ನ ಆಯ್ಕೆಗಳು ಹೇಗಿದೆ? ಎಂದು ಯೋಚನೆ ಮಾಡುತ್ತೀನಿ. ನಾನು ಯಶಸ್ಸನ್ನು ತಲೆಗೆ ತೆಗೆದುಕೊಂಡಿಲ್ಲ ಆದರೆ ಜನರು ಕೊಟ್ಟಿರುವ ಪ್ರೀತಿಯನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಸಂಪೂರ್ಣವಾಗಿ ಮಾಡುತ್ತೀನಿ. ನನ್ನನ್ನು ಇಷ್ಟ ಪಡುವವರು ಹಾಗೂ ದುಡ್ಡು ಕೊಟ್ಟು ಸಿನಿಮಾ ನೋಡಲು ಬರುವವರಿಗೆ ಬೇಸರ ಮಾಡಲು ಇಷ್ಟವಿಲ್ಲ. 

ಬ್ಲೌಸ್‌ ಹಾಕದೆ ಸೀರೆ ಧರಿಸಿದ ಧನುಶ್ರೀ; ಬ್ರೇಕಪ್ ಆದ್ಮೇಲೆ ಶೋಕಿ ಶುರು ಎಂದು ಕಾಲೆಳೆದ ನೆಟ್ಟಿಗರು

- ಮೊಬೈಲ್‌ನಲ್ಲಿ ಏನಾದರೂ ಹುಡುಕಿದ್ದರೆ, ನಾಚಿಕೆ ಆಗುವಂತದ್ದು ಏನು ಇರುತ್ತದೆ?
ಬಹುಷ ತೂಕ ಇಳಿಸಿಕೊಳ್ಳುವುದು ಹೇಗೆ ಎಂದು ಹುಡುಕಿರುತ್ತೀನಿ. ಸಿಕ್ಕಾಪಟ್ಟೆ ಡಯಟ್‌ ಮಾಡುವುದು ಆರೋಗ್ಯದ ಮೇಲೆ ಕಾಳಹಿ ವಹಿಸಿ ವರ್ಕೌಟ್ ಮಾಡಿದರೂ ತೂಕ ಇಳಿದಿಲ್ಲ ಅಂದ್ರೆ ಬೇಸರ ಆಗುತ್ತದೆ. ಅದಲ್ಲ ಅಂದ್ರೆ ನನಗೆ ಏನು ಗೊತ್ತಿಲ್ಲ ಏನು ಗೊತ್ತಿಲ್ಲ ಅಂದು ಸುಮ್ಮನೆ ಹುಡುಕುತ್ತಿರುತ್ತೀನಿ.ನಾನು ರೆಕಾರ್ಡ್ ಬ್ರೇಕ್ ಮಾಡಿದ್ದೀನಿ 100 ಕೆಜಿ ಎತ್ತಿದ್ದೀನಿ. 

ಸಿಸೇರಿಯನ್ ಆಗಿದ್ದಕ್ಕೆ ಸ್ವಲ್ಪ ದಿನ ಕಷ್ಟ ಆಯ್ತು ಆದ್ರೆ 2 ತಿಂಗಳಿಗೆ ಸಿನಿಮಾ ಆಫರ್ ಬಂತು: ಮಿಲನಾ ನಾಗರಾಜ್

- ಜೀವನ ಒಂದು ಕ್ಷಣವನ್ನು ಸಂಪೂರ್ಣವಾಗಿ ತೆಗೆಯಬೇಕು ಅಂದರೆ ಯಾವುದು?
ಕಳೆದ 7 ವರ್ಷಗಳಿಂದ ಕೆಲಸದಲ್ಲಿ ಸಖತ್ ಬ್ಯುಸಿಯಾಗಿ ನನ್ನ ತಂಗಿ ಬೆಳೆಯುವುದನ್ನು ನಾನು ನೋಡಿಲ್ಲ. ದಿನ ಕಳೆಯುತ್ತಿದ್ದಂತೆ ನನ್ನ ಎತ್ತರಕ್ಕೆ ಬಂದಿದ್ದಾಳೆ. ಹೀಗಾಗಿ ಆಕೆ ಅಷ್ಟು ಬೇಗ ಬೆಳೆಯುವುದನ್ನು ನಾನು ಬದಲಾಯಿಸಬೇಕು.

ಎಲ್ಲೋದ್ರು ಅಮೃತಾ ಅಯ್ಯಂಗಾರ್ ಎಂದು ಹುಡುಕಬೇಡಿ, ರಮ್ಯಾ ಜೊತೆನೇ ಇದ್ದಾರೆ; ಫೋಟೋ ವೈರಲ್

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬರ್ತಾ ಬರ್ತಾ ಸಖತ್ Bold ಆಗ್ತಿದ್ದಾರೆ ಬಿಗ್ ಬಾಸ್ ಸಿಂಹಿಣಿ Sangeetha Sringeri
ಮದ್ವೆ ಬಗ್ಗೆ ಡಾಲಿ ಧನಂಜಯ್​ ಒಂದೇ ಒಂದು ಮಾತು: 67% Gen Z ಮದ್ವೆಗೆ ರೆಡಿ! ಅಂಥದ್ದೇನು ಹೇಳಿದ್ರು ನಟ?