ದರ್ಶನ್‌ ಸೀಕ್ರೆಟ್‌ ಓಪನ್ನಾಗಿ ಹೇಳಿದ ಕೆ ಮಂಜು, ಮುಂದಿನ ಪ್ರಾಜೆಕ್ಟ್ ಗುಟ್ಟ ಕೂಡ ಬಿಚ್ಚಿಟ್ರು!

Published : Feb 17, 2025, 11:48 AM ISTUpdated : Feb 17, 2025, 01:14 PM IST
ದರ್ಶನ್‌ ಸೀಕ್ರೆಟ್‌ ಓಪನ್ನಾಗಿ ಹೇಳಿದ ಕೆ ಮಂಜು, ಮುಂದಿನ ಪ್ರಾಜೆಕ್ಟ್ ಗುಟ್ಟ ಕೂಡ ಬಿಚ್ಚಿಟ್ರು!

ಸಾರಾಂಶ

ದರ್ಶನ್ ಕನ್ನಡ ಚಿತ್ರರಂಗಕ್ಕೆ ಸೀಮಿತರಾಗಿರುವುದು ಶ್ಲಾಘನೀಯ ಎಂದು ನಿರ್ಮಾಪಕ ಕೆ.ಮಂಜು ಹೇಳಿದ್ದಾರೆ. ದರ್ಶನ್ ವಿನಮ್ರ, ಕನ್ನಡ ಚಿತ್ರರಂಗದ ಬೆಳವಣಿಗೆಗೆ ಬದ್ಧ ಎಂದೂ ಮಂಜು ತಿಳಿಸಿದ್ದಾರೆ. ಮಂಜು ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಹೊಸ ಚಿತ್ರಗಳನ್ನು ನಿರ್ಮಿಸಲಿದ್ದಾರೆ.

ಕನ್ನಡ ಸಿನಿಮಾ ಇಂಡಸ್ಟ್ರಿಯ ಹಿರಿಯ ನಿರ್ಮಾಪಕರಾದ ಕೆ ಮಂಜು (K Manju) ಅವರು ನಟ ದರ್ಶನ್ ತೂಗುದೀಪ (Darshan Thoogudeepa) ಬಗ್ಗೆ ಮಾತನ್ನಾಡಿದ್ದಾರೆ. 'ನಟ ದರ್ಶನ್ ಕನ್ನಡಕ್ಕಷ್ಟೇ ತಮ್ಮನ್ನು ಸೀಮಿತ ಮಾಡಿಕೊಂಡಿದ್ದಾರೆ. ಬೇರೆ ಯಾವುದೇ ನಟರು ಏನಾದ್ರೂ ಮಾಡಿಕೊಳ್ಳಲಿ, ನಾನಿ ಮಾತ್ರ ಕನ್ನಡ ಸಿನಿಮಾಗಳನ್ನಷ್ಟೇ ಮಾಡುತ್ತೇನೆ. ಕನ್ನಡದ ನಟಿಯರು, ನಿರ್ಮಾಪಕರು, ತಂತ್ರಜ್ಞರೇ ನನ್ನ ಸಿನಿಮಾಕ್ಕೆ ಇರಲಿ' ಎಂದಿದ್ದಾರೆ. ಇದು ನಿಜವಾಗಿಯೂ ಅವರ ದೊಡ್ಡ ಗುಣ.' ಎಂದಿದ್ದಾರೆ ಕೆ ಮಂಜು. 

ಖಾಸಗಿ ಯೂಟ್ಯೂಬ್ ಒಂದಕ್ಕೆ ಸಂದರ್ಶನದಲ್ಲಿ ನಟ ದರ್ಶನ್ ಬಗ್ಗೆ ಮಾತನಾಡಿರುವ ಕೆ ಮಂಜು, 'ದರ್ಶನ್ ತುಂಬಾ ಹಂಬಲ್ ಇರೋ ನಟ. ಕನ್ನಡ ಚಿತ್ರರಂಗ ಬೆಳೀಬೇಕು ಎಂದು ಯಾವತ್ತೂ ಹಂಬಲಿಸುವ ನಟ. ಹಾಗಿಲ್ಲ ಅಂದಿದ್ರೆ ಅವರು ಬೇರೆ ಭಾಷೆಯ ಸಿನಿಮನಾಗಳಲ್ಲೂ ನಟಿಸಬಹುದಿತು ಸದ್ಯ ಅವರು ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಕೊಂಡಿರುವುದರಿಂದ ಅವರು ನಿರ್ಮಾಪಕರಿಗೆ ಮುಂಗಡ ಹಣ ವಾಪಸ್ ಮಾಡಿದ್ದಾರೆ. 'ತನ್ನಿಂದ ಅವ್ರಿಗೆ ತೊಂದ್ರೆ ಆಗೋದು ಬೇಡ' ಅನ್ನೋದು ಅವ್ರ ದೊಡ್ಡ ಗುಣ ಎಂದಿದ್ದಾರೆ ಕೆ ಮುಂಜು. 

Darshan CDP: ಫ್ಯಾನ್ಸ್‌ಗೆ ದರ್ಶನ್ 'ಸಿಡಿಪಿ' ಕೊಟ್ಟ ವಿಜಯಲಕ್ಷ್ಮೀ, ಆದ್ರೆ ಧನ್ವೀರ್ ಗೌಡ ಮಾಡಿದ್ದೇ ಬೇರೆ..!

ಇನ್ನು, ತಮ್ಮ ನಿರ್ಮಾಣದಲ್ಲಿ ಮುಂಬರುವ ಸಿನಿಮಾಗಳ ಬಗ್ಗೆಯೂ ಮಾತನ್ನಾಡಿದ್ದಾರೆ ನಿರ್ಮಾಪಕ ಕೆ ಮಂಜು. 'ಸದ್ಯದಲ್ಲೇ ನಾನು ಪರಭಾಷೆಯ ಚಿತ್ರರಂಗದಲ್ಲಿ ಸಿನಿಮಾ ನಿರ್ಮಾಣ ಮಾಡ್ತೀನಿ. ತಮಿಳಿನಲ್ಲಿ ಒಂದು ಹಾಗೂ ಮಲಯಾಳಂನಲ್ಲಿ ಒಂದು ಸಿನಿಮಾ ಮಾಡಲು ಪ್ಲಾನ್ ಮಾಡಿದೀನಿ. ಜೊತೆಗೆ, ಕನ್ನಡದಲ್ಲಿ ಎರಡು ಸಿನಿಮಾಗಳನ್ನು ನಿರ್ಮಾಣ ಮಾಡ್ತೀನಿ. ನನ್ನ ಮಗನಿಗೆ ಬೇರೆ ಒಬ್ರು ಸಿನಿಮಾ ಮಾಡೋಕೆ ಪ್ಲಾನ್ ಮಾಡಿದಾರೆ, ಅವ್ರಿಗೂ ಸಪೋರ್ಟ್ ಮಾಡ್ತೀನಿ. 

ಮಾರುತ ಅಂತ ಒಂದು ಸಿನಿಮಾ ಬರ್ತಿದೆ. ಅದನ್ನು ಎಸ್‌ ನಾರಾಯಣ್ ಅವ್ರು ನಿರ್ದೇಶನ ಮಾಡ್ತಿದಾರೆ. ನಂಗೆ ಸಿನಿಮಾ ಬಿಟ್ರೆ ಬೇರೆ ಗೊತ್ತಿಲ್ಲ. ಕನ್ನಡ ಸಿನಿಮಾ ಜೊತೆಗೆ ಬೇರೆ ಭಾಷೆಯ ಸಿನಿಮಾ ಮಾಡ್ತೀನಿ ಹೊರತೂ ಕನ್ನಡ ಬಿಟ್ಟು ಮಾಡಲ್ಲ. ನನ್ನ ಮಗನ ಸಿನಿಮಾ ಕೆರಿಯರ್, ನನ್ನ ಸಿನಿಮಾಗಳು ನನಗೆ ತುಂಬಾ ಮುಖ್ಯ, ಜೊತೆಗೆ, ಕನ್ನಡ ಸಿನಿಮಾಗಳು ಹೆಚ್ಚುಹೆಚ್ಚು ಬರಬೇಕು, ಕನ್ನಡ ಸಿನಿಮಾ ಉದ್ಯಮ ಬೆಳಿಬೇಕು ಅನ್ನೋದು ನನ್ನ ಬಯಕೆ' ಎಂದಿದ್ದಾರೆ ಕನ್ನಡದ ನಿರ್ಮಾಪಕರಾದ ಕೆ ಮಂಜು. 

'ತೊಡೆ ಚೆನ್ನಾಗಿ ಇದ್ಯಾ ನೋಡಿ ನಂದು' ಅಂದ್ಬಿಟ್ಟು ಲಂಗ ಎತ್ತಿಬಿಟ್ರಂತೆ ಜೂಲಿ ಲಕ್ಷ್ಮೀ..!

ಅಂದಹಾಗೆ, ನಟ ದರ್ಶನ್ ಅವರು ನಿನ್ನೆ, ಅಂದರೆ ಫೆಬ್ರವರಿ 16ಕ್ಕೆ ಕೆಲವೇ ಆಪ್ತರ ಜೊತೆ ತಮ್ಮ 48ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅನಾರೋಗ್ಯದ ಕಾರಣ ನೀಡಿ ತಮ್ಮ ಫ್ಯಾನ್ಸ್ ಜೊತೆ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಆದರೆ, ಡೆವಿಲ್ ಟೀಸರ್ ಬಿಡುಗಡೆ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್ ಗಿಫ್ಟ್ ಕೊಟ್ಟಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?