ನಿಮಗೆ Hope ಕೊಡಲು ಮಾಡಿದ್ದು, ಭಾಷೆ ತಡೆ ಬೇಡ: ರಶ್ಮಿಕಾ ಮಂದಣ್ಣ

By Suvarna NewsFirst Published May 25, 2021, 10:51 AM IST
Highlights

ಕೊರೋನಾ ಸಂಕಷ್ಟವನ್ನು ಎಲ್ಲರೂ ಧೈರ್ಯದಿಂದ ಎದುರಿಸೋಣ ಎಂದು ವಿಡಿಯೋ ಮೂಲಕ ಧೈರ್ಯ ತುಂಬಿದ ನಟಿ ರಶ್ಮಿಕಾ ಮಂದಣ್ಣ.

ಭಾರತೀಯ ಚಿತ್ರರಂಗದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆ, ಸಿನಿಮಾ ಚಿತ್ರೀಕರಣವನ್ನು ನಿಲ್ಲಿಸಿದ್ದರಿಂದ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಈ ವೇಳೆ ಲೈವ್ ಬರುವ ಮೂಲಕ ಅಭಿಮಾನಿಗಳ ಜೊತೆ ಮಾತನಾಡುತ್ತಾ, ಸಿನಿಮಾಗಳ ಬಗ್ಗೆ ಇಷ್ಟ ಕಷ್ಟಗಳ ಬಗ್ಗೆ ಹಂಚಿಕೊಳ್ಳುತ್ತಾರೆ. 

ರಶ್ಮಿಕಾ ಇದೀಗ ಜನರಲ್ಲಿ ಭರವಸೆ ಮೂಡಿಸಲು ಮುಂದಾಗಿದ್ದಾರೆ. ವಿಡಿಯೋದಲ್ಲಿ ಏನ್ಹೇಳಿದ್ದಾರೆ ಕೇಳಿ...

ನ್ಯಾಷನಲ್‌ ಕ್ರಶ್ ರಶ್ಮಿಕಾ ಮಂದಣ್ಣ ಬಾಲ್ಯದ ಫೋಟೋ!

'ಹಾಯ್ ಎಲ್ಲರಿಗೂ ಈಗಿನ ಪರಿಸ್ಥಿತಿಯಲ್ಲಿ ನೀವೇಲ್ಲರೂ ಆರೋಗ್ಯವಾಗಿದ್ದೀರಿ, ಜಾಗೃತೆಯಿಂದ ಇದ್ದೀರಿ ಎಂದು ಭಾವಿಸುವೆ. ನಾನು ಕಲ್ಪನೆ ಮಾಡಿಕೊಳ್ಳಲಾಗದ ರೀತಿಯಲ್ಲಿ ಕೊರೋನಾ ಎರಡನೇ ಅಲೆ ಅಬ್ಬರ ಶುರುವಾಗಿದೆ. ಈ ರೀತಿ ಮತ್ತೆ ಆಗುತ್ತದೆ ಎಂದು ಯಾರೂ ಕಲ್ಪಿಸಿಕೊಂಡಿಯೂ  ಇರಲಿಲ್ಲ. ಕೆಲವರಿಗೆ ಜೀವನ ಹೇಗಪ್ಪಾ ಎಂಬ ಆತಂಕ ಶುರುವಾಗಿದೆ. ಇನ್ನೂ ಕೆಲವರಿಗೆ ಈ ಸಮಯ ಒಳ್ಳೆಯ ರೀತಿಯಲ್ಲಿ ಉಪಯೋಗವಾಗುತ್ತಿದೆ. ಹೀಗೆಲ್ಲಾ ಆಗುತ್ತಿರುವುದನ್ನು ಒಪ್ಪಿಕೊಳ್ಳಲು ನನಗೂ ಕೊಂಚ ಸಮಯ ಬೇಕಾಗಿತ್ತು. ಆದರೆ ನಾನು ಒಂದು ಅರ್ಥ ಮಾಡಿಕೊಂಡಿರುವೆ, ನಾವು ಪಾಸಿಟಿವ್ ಆಗಿರಬೇಕು, ಈ ವೈರಸ್‌ನ ಎದುರಿಸೋ ಛಲ ಬೆಳೆಸಿಕೊಳ್ಳಬೇಕೆಂದು. ಇನ್ನು ಮುಂಬರುವ ಕೆಲವು ದಿನಗಳಲ್ಲಿ ನಾನು Ordinary Heroಗಳ Extrodinary ಕೆಲಸಗಳನ್ನು ಮಾಡುತ್ತಿರುವ ವಿಚಾರಗಳ ಬಗ್ಗೆ ಹಂಚಿಕೊಳ್ಳುವೆ. ಅವರು ನನ್ನ ನಂಬಿಕೆ ಹೆಚ್ಚಿಸಿದರು, ಅವರು ನನ್ನ ಮುಖದಲ್ಲಿ ನಗು ತಂದರು,' ಎಂದು ರಶ್ಮಿಕಾ ಮಾತನಾಡಿದ್ದಾರೆ. 

'ಈ ಸಮಯದಲ್ಲಿ ಯಾವ ಭಾಷೆಯ ಬ್ಯಾರಿಯರ್ಸ್ ಬೇಡ. ನಾನು ಮಾಡುತ್ತಿರುವುದು ನಿಮ್ಮೆಲ್ಲರಲಿ ಹೋಪ್ ಹೆಚ್ಚಿಸುವುದಕ್ಕೆ. ಈ ಸಂಕಷ್ಟದ ಸಮಯವನ್ನು ನಾವೆಲ್ಲರೂ ಒಟ್ಟಾಗಿ ಎದುರಿಸೋಣ. ಮನೆಯಲ್ಲಿರಿ,' ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

 

click me!