
ಕನ್ನಡ ಚಿತ್ರರಂಗದ ಅದ್ಭುತ ಕಲಾವಿದ ನೀನಾಸಂ ಸತೀಶ್ ಸೋಷಿಯಲ್ ಮೀಡಿಯಾದಲ್ಲಿ ಕೊಂಚ ಆ್ಯಕ್ಟಿವ್. ಸಿನಿಮಾ ಹೊರತು ಪಡಿಸಿ, ಬೇರೇನೂ ವಿಷಯವನ್ನು ಸಾಮಾನ್ಯವಾಗಿ ಹಂಚಿಕೊಳ್ಳುವುದಿಲ್ಲ, ಆದರೆ ಹಂಚಿಕೊಳ್ಳುವ ಪ್ರತಿ ವಿಚಾರದ ಹಿಂದೆಯೂ ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇರುತ್ತದೆ.
ಇದ್ದಕ್ಕಿದ್ದಂತೆ ಬ್ಲ್ಯಾಕ್ ಕಾರು ಮುಂದೆ ಬ್ಲ್ಯಾಕ್ ಟೀ-ಶರ್ಟ್ ಧಿರಿಸಿ ನಿಂತಿರುವ ಫೋಟೋ ಹಂಚಿಕೊಂಡರು. ಕಾಮೆಂಟ್ ಮೂಲಕ ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಂತೆ, ಅದೇ ರೀತಿಯ ಮತ್ತೊಂದು ಫೋಟೋ ಅಪ್ಲೋಡ್ ಮಾಡಿದ 10 ವರ್ಷದ ಹಿಂದೆ ಚಿತ್ರೀಕರಣ ನಡೆದ ಸಿನಿಮಾದ ಬಗ್ಗೆ ಬರೆದು ಕೊಂಡಿದ್ದಾರೆ.
ದೊಡ್ಡಮ್ಮ ತೀರ್ಕೊಂಡ್ರು ಅವರ ಮುಖ ನೋಡೋಕೆ ಆಗಿಲ್ಲ; ಕೊರೋನಾ ಬಗ್ಗೆ ಸತೀಶ್ ಮಾತು!
'10 ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಒಂದು ಸೀನ್ ಶೂಟ್ ಮಾಡಿದ್ವಿ. ಆ ಚಿತ್ರವನ್ನ ಹೆಗಲ ಮೇಲೆ ಹೊತ್ತು ನೀವು ಸಂಭ್ರಮಿಸಿದ ನೆನಪು ಇನ್ನೂ ಹಸಿರಾಗಿದೆ.ನೆನಪಿದೆಯೇ?' ಎಂದು ಕೇಳಿದ್ದಾರೆ. 'ಇದು ಲೂಸಿಯಾ ಸಿನಿಮಾ ಚಿತ್ರೀಕರಣ ಮಾಡಿದ ಸ್ಥಳ. ಇಲ್ಲಿ ಕಾರು ಪಂಚರ್ ಆದ ಸೀನ್ ಮಾಡಿದ್ರಿ, ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಸದ್ಯ ಹರಿಪ್ರಿಯಾ ಜೊತೆ 'ಪೆಟ್ರೋಮ್ಯಾಕ್ಸ್' ಸಿನಿಮಾ ಚಿತ್ರೀಕರಣ ಮುಗಿಸಿರುವ ಸತೀಶ್ ಕೈಯಲ್ಲಿ 'ಮ್ಯಾಟ್ನಿ', 'ಗೋದ್ರಾ' ಮತ್ತು 'ದಸರಾ' ಸಿನಿಮಾಗಳಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.