
ಕನ್ನಡ ಚಿತ್ರರಂಗದ ಮನೆ ಮನಗಳು ಮೇಘನಾ ರಾಜ್ ಶ್ವಾನ ಬ್ರೂನೋ ಮೇ.21ರಂದು ಅಸುನೀಗಿತ್ತು. ರೆಬೆಲ್ ಸ್ಟಾರ್ ಅಂಬರೀಶ್ ನೆಚ್ಚಿನ ಶ್ವಾನ ಕನ್ವರ್ ಮೇ.24ರಂದು ಕೊನೆಯುಸಿರೆಳೆದಿದೆ. ಎರಡೂ ಸೇಂಟ್ ಬರ್ನಾರ್ಡ್ ತಳಿಗೆ ಸೇರಿದ ಶ್ವಾನಗಳಾಗಿದ್ದು, ಮೂರು ದಿನಗಳ ಅಂತರದಲ್ಲಿ ಮೃತಪಟ್ಟಿರುವುದನ್ನು ನೋಡಿ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆದರೆ ಇಲ್ಲಿ ನಿಮಗೊಂದು ಇಂಟ್ರೆಸ್ಟಿಂಗ್ ವಿಚಾರ ತಿಳಿಸುತ್ತೇವೆ....
ಚಿರುವಿನ ಬಳಿ ಹೋದ ಮೇಘನಾ ಮುದ್ದು ನಾಯಿ ಬ್ರೂನೋ!
ಹೌದು! ಮೊದಲು ಮೇಘನಾ ರಾಜ್ ಮನೆಗೆ ಸೇಂಟ್ ಬರ್ನಾರ್ಡ್ ತಳಿಗೆ ಸೇರಿದ ಬ್ರೂನೋ ತಂದ ಬಳಿಕ ಎಲ್ಲರ ಗಮನ ಸೆಳೆದಿತ್ತು. ಮರಿ ಇದ್ದಾಗ ಥೇಟ್ ಗೊಂಬೆಯಂತೆ ಇರುತ್ತದೆ ಈ ತಳಿಯ ಶ್ವಾನ. ಒಮ್ಮೆ ಮುದ್ದಾಡಿದರೂ ಸಾಕು ಪದೆ ಪದೇ ಮುಟ್ಟ ಬೇಕು ಎಂದೆನಿಸುತ್ತದೆ. ಅಷ್ಟು ವಿಶೇಷ ಬಾಂಧವ್ಯವನ್ನು ಮನುಷ್ಯನೊಂದಿಗೆ ಬೆಳೆಸಿಕೊಳ್ಳುವಲ್ಲಿ ಈ ಶ್ವಾನಗಳು ಯಶಸ್ವಿಯಾಗಿಬಿಡುತ್ತವೆ. ಅದರಲ್ಲೂ ನಟ ಅಂಬರೀಶ್ ಕಣ್ಣು ಚಿರುವಿನ ಈ ಪುಟ್ಟ ಮರಿ ಮೇಲೆ ಇತ್ತು. ಆಗಲೇ ಅಂಬರೀಷ್ ಕೂಡ ತಮ್ಮ ನಿವಾಸಕ್ಕೂ ಅದೇ ತಳಿಯ ಎರಡು ಶ್ವಾನಗಳನ್ನು ತಂದು, ಕನ್ವರ ಮತ್ತು ಬುಲ್ ಬುಲ್ ಎಂದ ಹೆಸರಿಟ್ಟಿದ್ದರು.
ಸುಮಲತಾ ಭಾವುಕ ಪೋಸ್ಟ್:
'ನಮ್ಮ ಪ್ರೀತಿಯ ಡಾಗಿ ಕನ್ವರ್. ನಮ್ಮ ಕೈ ಸೇರಿದಾಗ ಆತ 6 ತಿಂಗಳ ಮರಿ. ಇಂದು ನಮ್ಮನ್ನು ಬಿಟ್ಟು ಮೇಲಿರುವ ಅವರ ಮಾಸ್ಟರ್ ಬಳಿ ತೆರಳಿದ್ದಾನೆ. ಅಂಬರೀಶ್ ಐಕಾನಿಕ್ 'ಅಂತ' ಚಿತ್ರದಿಂದ ಕನ್ವರ್ ಹೆಸರಿಡಲಾಗಿತ್ತು. ನಮ್ಮ ಕುಟುಂಬಸ್ಥನಾಗಿ 8 ವರ್ಷ ಜೊತೆಗಿದ್ದ,' ಎಂದು ಬರೆದುಕೊಂಡು ಕನ್ವರ್ ಜೊತೆಗಿದ್ದ ಎಲ್ಲಾ ಸುಮಧುರ ಕ್ಷಣಗಳ ಫೋಟೋ ಹಾಗೂ ವಿಡಿಯೋ ಹಂಚಿಕೊಂಡಿದ್ದಾರೆ.
ಬ್ರೂನೋ ಮೃತಪಟ್ಟಾಗಲೂ ಮೇಘನಾ ರಾಜ್, ಮೇಲಿರುವ ಚಿರುವಿನೊಂದಿಗೆ ಆಡಲು ತೆರಳಿದೆ ಎಂಬ ಭಾವುಕ ಪೋಸ್ಟ್‌ವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿ ಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.