ರಕ್ಷಿತ್ ಶೆಟ್ಟಿ ಚಾರ್ಲಿ ನೋಡಿ ಈ ವಿಡಿಯೋ ಹಾಕಿದ್ರಾ? ರಶ್ಮಿಕಾ ಕಾಲೆಳೆದ ನೆಟ್ಟಿಗರು

By Shruiti G Krishna  |  First Published Jun 18, 2022, 6:46 PM IST

ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತನ್ನ ನಾಯಿಯನ್ನು ಮುದ್ದು ಮಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 777 ಚಾರ್ಲಿ ಸಿನಿಮಾ ನೋಡಿದ ಮೇಲೆ ರಶ್ಮಿಕಾ ಈ ರೀತಿ ಮಾಡುತ್ತಿದ್ದಾರೆ, ಎಂದು ಹಲವರು ಕಮೆಂಟ್ ಮಾಡಿದ್ದಾರೆ. ನೀವು 777 ಚಾರ್ಲಿ ಸಿನಿಮಾ ನೋಡಿದ್ರಾ? ಏನು ಇಷ್ಟ ಆಯ್ತು ಎಂದು ಕೇಳುತ್ತಿದ್ದಾರೆ. ಇನ್ನು ಕೆಲವರು ಚಾರ್ಲಿ ನೋಡಿದಕ್ಕೆ ಈ ವಿಡಿಯೋ ಶೇರ್ ಮಾಡಿದ್ದೀರಾ ಎಂದು ರಶ್ಮಿಕಾ ಕಾಲೆಳೆಯುತ್ತಿದ್ದಾರೆ.  


ಸ್ಯಾಂಡಲ್ ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty)  ನಟನೆಯ 777 ಚಾರ್ಲಿ (777 Charlie) ಸಿನಿಮಾ ಎಲ್ಲಾ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಯ ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಕಮಾಯಿ ಮಾಡಿದೆ. ಪ್ರೇಕ್ಷಕರು ಮಾತ್ರವಲ್ಲದೆ ಅನೇಕ ಸೆಲೆಬ್ರಿಟಿಗಳು ಈ ಚಿತ್ರಕ್ಕೆ ಫಿದಾ ಆಗಿದ್ದಾರೆ. ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಅನೇಕ ರಾಜಕಾರಣಿಗಳಿಗೂ 777 ಚಾರ್ಲಿ ನೋಡಿ ಇಷ್ಟ ಪಟ್ಟಿದ್ದಾರೆ. ಎಲ್ಲಾ ಭಾಷೆಯ ಅಭಿಮಾನಿಗಳು ರಕ್ಷಿತ್ ಶೆಟ್ಟಿ ಮತ್ತು ಚಿತ್ರತಂಡವನ್ನು ಹೊಗಳುತ್ತಿದ್ದಾರೆ. ಈ ನಡುವೆ ನಟಿ ರಶ್ಮಿಕಾ ಮಂದಣ್ಣ ಚಾರ್ಲಿ ನೋಡಿದ್ರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣವಾಗಿದ್ದು ರಶ್ಮಿಕಾ ಶೇರ್ ಮಾಡಿರುವ ವಿಡಿಯೋ. 

ರಶ್ಮಿಕಾ ಮಂದಣ್ಣ (Rashmika Mandanna) ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತನ್ನ ನಾಯಿಯನ್ನು ಮುದ್ದು ಮಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಶೂಟಿಂಗ್ ಬಿಡುವಿನಲ್ಲಿ ತಮ್ಮ ಮುದ್ದಾದ ಸಾಕುನಾಯಿ ಜೊತೆ ಅವರು ಕಾಲ ಕಳೆಯುತ್ತಿದ್ದಾರೆ. ತನ್ನ ನಾಯಿಯನ್ನು ಸದಾ ಜೊತೆಯಲ್ಲಿ ಕರೆದುಕೊಂಡು ಓಡಾಡುವ ಶೂಟಿಂಗ್ ವೇಳೆ ತುಂಬಾ ಮುದ್ದು ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಇದನ್ನು ಕಂಡರೆ ರಶ್ಮಿಕಾ ಅವರಿಗೆ ಎಲ್ಲಿಲ್ಲದ ಪ್ರೀತಿ. 777 ಚಾರ್ಲಿ ಸಿನಿಮಾದಲ್ಲಿ ಬರುವ ಧರ್ಮ ಮತ್ತು ಚಾರ್ಲಿ ಪಾತ್ರಗಳ ರೀತಿಯೇ ರಶ್ಮಿಕಾ ಕೂಡ ನಾಯಿಯನ್ನು ತುಂಬಾ ಇಷ್ಟಪಡುತ್ತಾರೆ.

Tap to resize

Latest Videos

ರಶ್ಮಿಕಾ ತನ್ನ ನಾಯಿಗೆ ಔರಾ ಎಂದು ಹೆಸರಿಟ್ಟಿದ್ದಾರೆ. ಔರಾನನ್ನು ರಶ್ಮಿಕಾ ಮಂದಣ್ಣ ಮುದ್ದಿಸುತ್ತಿರುವ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಸಿಕ್ಕಾಪಟ್ಟೆ ವೀಕ್ಷಿಣೆಗೆ ಕಂಡಿದೆ. ಹಾಗೂ ಸಿಕ್ಕಾಪಟ್ಟೆ ಮಂದಿ ಲೈಕ್ ಮಾಡಿದ್ದಾರೆ. 4 ಸಾವಿರಕ್ಕಿಂತ ಹೆಚ್ಚು ಕಮೆಂಟ್ಗಳು ಬಂದಿವೆ. ಇದಕ್ಕೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 777 ಚಾರ್ಲಿ ಸಿನಿಮಾ ನೋಡಿದ ಮೇಲೆ ರಶ್ಮಿಕಾ ಈ ರೀತಿ ಮಾಡುತ್ತಿದ್ದಾರೆ, ಎಂದು ಹಲವರು ಕಮೆಂಟ್ ಮಾಡಿದ್ದಾರೆ. ನೀವು 777 ಚಾರ್ಲಿ ಸಿನಿಮಾ ನೋಡಿದ್ರಾ? ಏನು ಇಷ್ಟ ಆಯ್ತು ಎಂದು ಕೇಳುತ್ತಿದ್ದಾರೆ. ಇನ್ನು ಕೆಲವರು ಚಾರ್ಲಿ ನೋಡಿದಕ್ಕೆ ಈ ವಿಡಿಯೋ ಶೇರ್ ಮಾಡಿದ್ದೀರಾ ಎಂದು ರಶ್ಮಿಕಾ ಕಾಲೆಳೆಯುತ್ತಿದ್ದಾರೆ.


ರಶ್ಮಿಕಾರಿಂದ ನ್ಯಾಷನಲ್ ಕ್ರಶ್ ಪಟ್ಟ ಕಿತ್ತುಕೊಂಡ್ರಾ ಆ ನಟಿ..?

 

ರಸ್ಮಿಕಾಗೂ ನಾಯಿ ಎಂದರೆ ತುಂಬಾ ಇಷ್ಟ ಪಡುವುದರಿಂದ ೀ ಸಿನಿಮಾ ನೋಡೇ ನೋಡುತ್ತಾರೆ ಅಂತ ಅನೇಕರು ಕಾಮೆಂಟ್ ಮಾಡುತ್ತಿದ್ದರು. ಇದೀಗ ಸಾಕು ನಾಯಿ ಜೊತೆ ವಿಡಿಯೋ ಸೇರ್ ಮಾಡಿರುವುದು ಚಾರ್ಲಿ ನೋಡಿದ್ದಾರೆ ಎನ್ನುವ ಅನುಮಾನಕ್ಕೆ ಕಾರಣವಾಗಿದೆ. ಇನ್ನು 777 ಚಾರ್ಲಿ ಸಿನಿಮಾ ನೋಡಿದ ನಂತರ ಅನೇಕರು ತಮ್ಮ ಸಾಕುನಾಯಿಯ ಜೊತೆ ಭಾವುಕವಾಗಿ ವಿಡಿಯೋ ಹಂಚಿಕೊಂಡಿದ್ದಾರೆ. 

ಸೆಲ್ಫಿ ಕೇಳಿದ ಫ್ಯಾನ್‌ ಮೇಲೆ ರೇಗಾಡಿದ ಬಾಡಿಗಾರ್ಡ್‌; ಸಿಟ್ಟು ಮಾಡಿಕೊಂಡ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್, ಟಾಲಿವುಡ್ ಮತ್ತು ಕಾಲಿವುಡ್ ಗಳಲ್ಲಿ ನಟಿ ರಶ್ಮಿಕಾ ಬ್ಯುಸಿಯಾಗಿದ್ದಾರೆ.   ಬಾಲಿವುಡ್ ಮತ್ತು ಸೌತ್ ಸಿನಿರಂಗದಲ್ಲಿ ರಶ್ಮಿಕಾ ಮಂದಣ್ಣ ಮಿಂಚ್ತಿದ್ದಾರೆ. ಬಾಲಿವುಡ್‌ನಲ್ಲಿ ರಶ್ಮಿಕಾ ಸದ್ಯ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ತೆಲುಗಿನಲ್ಲಿ ಪುಷ್ಪ-2, ತಮಿಲಿನಲ್ಲಿ ವಿಜಯ್ ಜೊತೆ ಸಿನಿಮಾ ಮಾಡುತ್ತಿದ್ದಾರೆ.  

 

click me!