
ಕಿರುತೆರೆಯ ಖ್ಯಾತ ನಟ ಕಿರಣ್ ರಾಜ್(Kiran Raj) ಸದ್ಯ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ನಟ ಕಿರಣ್ ರಾಜ್ ಸಿನಿಮಾರಂಗದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಕಿರಣ್ ಸಂಪೂರ್ಣ ಹೀರೋ ಆಗಿ ನಟಿಸಿರುವ ಬಡ್ಡೀಸ್ (Baddies) ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಜೂನ್24ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಸದ್ಯ ಸಿನಿಮಾದ ಪ್ರಮೋಷನ್ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಇದೀಗ ಸಿನಿಮಾತಂಡ ಉತ್ತರ ಕರ್ನಾಟಕದ ಭಾಗಳಲ್ಲಿ ಚಿತ್ರದ ಪ್ರಚಾರ ಕಾರ್ಯ ನಡೆಯುತ್ತಿದೆ. ಇಂದು ಪ್ರಚಾರಕ್ಕೆ ತೆರಲುವ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಸಿನಿಮಾದ ಪ್ರಚಾರ ಕಾರ್ಯ ಇಂದು ದಾವಣಗೆರೆ ಸಮೀಪದ ಕೆಲವು ಕಾಲೇಜುಗಳಿಗೆ ಬಡ್ಡೀಸ್ ತಂಡ ತೆರಳಬೇಕಿತ್ತು. ಆದರೆ ಪ್ರಚಾರ ಕಾರ್ಯದಲ್ಲಿ ಬಳಕೆಯಾದ ಟ್ರಕ್ ಮೇಲೆ ವಿದ್ಯುತ್ ಕಂಬ ಬಿದ್ದಿದೆ (Promotin Vehicle Met With Accident). ಆದ್ದರಿಂದ ಇಂದಿನ ಪ್ರಚಾರ ಕಾರ್ಯ ರದ್ದು ಮಾಡಲಾಗಿದೆ. ಈ ಬಗ್ಗೆ ಕಿರಣ್ ರಾಜ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಅಲ್ಲದೇ ಕಿರಣ್ ರಾಜ್ ನೋಡಲು ಕಾರತದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಭಾರಿ ನಿರಾಯಸೆಯಾಗಿದೆ. ಹಾಗಾಗಿ ಕಿರಣ್ ರಾಜ್ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೂಡ ಕೇಳಿದ್ದಾರೆ.
ಸರ್ಕಾರಿ ಶಾಲೆಗೆ ಹೊಸ ಮೆರಗು ನೀಡಿದ 'ಕನ್ನಡತಿ' ನಟ ಕಿರಣ್ ರಾಜ್
ಈ ಬಗ್ಗೆ ಕಿರಣ್ ರಾಜ್ ಸಾಮಾಜಿಕ ಜಾಲತಾಣದಲ್ಲಿ, ಹಾಯ್ ಎಲ್ಲರಿಗೂ ಸಮಸ್ಕಾ. ಈ ದಿನ ಇಷ್ಟು ಕಾಲೇಜುಗಲಿಗೆ ಹೋಗುವುದಿತ್ತು. ಬಹುಶಃ ದೃಷ್ಟಿ ಜಾಸ್ತಿನೆ ಆಗಿರಬೇಕು ಅನ್ಸುತ್ತೆ. ಹಾಗಾಗಿ ಈ ತರಹದ ಅನಿರೀಕ್ಷಿತ ಘಟನೆ ಸಂಭವಿಸಿದೆ. ಹೀಗಾಗಿ ಕೊನೆಯ ಕ್ಷಣದಲ್ಲಿ ನಮ್ಮ ಪ್ಲ್ಯಾನ್ ಚೇಂಜ್ ಮಾಡಬೇಕಾಯಿತು. ದೇವರ ದಯೆಯಿಂದ ಟೀಮ್ ಅವರಿಗೆ ಯಾವುದೇ ಹಾನಿಯಲ್ಲ. ಎಲ್ಲರೂ ಆರಾಮಾಗಿ ಇದ್ದಾರೆ. ಸಿನಿಮಾ ಬಿಡುಗಡೆಯ ನಂತರ ಥಿಯೇಟರ್ ವಿಸಿಟ್ ಬಂದಾಗ ತಮ್ಮೆಲ್ಲರನ್ನೂ ಖಂಡಿತ ಮಿಸ್ ಮಾಡದೆ ಭೇಟಿ ಮಾಡುತ್ತೇವೆ. ದಯಮಾಡಿ ಕ್ಷಮೆ ಇರಲಿ. ನಿಮ್ಮ ಪ್ರೀತಿ ವಿಶ್ವಾಸ ಸದಾ ನಮ್ಮ ಮೇಲಿರಲಿ. ಮಿಸ್ ಮಾಡದೆ ಸಿನಿಮಾ ನೋಡಿ ಹಾರೈಸಿ. ಲವ್ ಯೂ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಕಿರಣ್ ರಾಜ್ ಪೋಸ್ಟ್‌ಗೆ ಅಭಿಮಾನಿಗಳು ಕಾಮೆಂಟ್ ಮಾಡಿ ಹುಷಾರಾಗಿರಿ ಎಂದು ಹೇಳುತ್ತಿದ್ದಾರೆ. ಇನ್ನು ಕೆವಲರು ಆರೋಗ್ಯ ಮುಖ್ಯ ನಿಮ್ಮ ಸಿನಿಮಾಗೆ ಖಂಡಿತ ಬೆಬಂಲ ವಿದೆ ಎಂದು ಫ್ಯಾನ್ಸ್ ಕಿರಣ್ ಸಿನಿಮಾಗೆ ಸಾಥ್ ನೀಡುತ್ತಿದ್ದಾರೆ. ಬಡ್ಡೀಸ್ ಚಿತ್ರಕ್ಕೆ ಗುರು ತೇಜ್ ಆಕ್ಷನ್ ಕಟ್ ಹೇಳಿದ್ದಾರೆ.
ಧರ್ಮಸ್ಥಳಕ್ಕೆ ಓಡಿಹೋಗಿ ಮದ್ವೆ ಆಗಿದ್ದಾರೆ; ಮದುವೆ ಪ್ಲ್ಯಾನ್ ಬಿಚ್ಚಿಟ್ಟ ಭುವಿ-ಹರ್ಷ
ಬಾರತಿ ಶೆಟ್ಟಿ ನಿರ್ಮಾಣದಲ್ಲಿ ಸಿನಿಮಾ ಮೂಡಿಬಂದಿದೆ. ಇನ್ನು ಈ ಸಿನಿಮಾದಲ್ಲಿ ಕಿರಣ್ ರಾಜ್ ಜೋಡಿಯಾಗಿ ಸಿರಿ ಪ್ರಹ್ಲಾದ್ ನಟಿಸಿದ್ದಾರೆ. ಬಡ್ಡೀಸ್ ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದಾರೆ. ನಿಬಾ ಶೆಟ್ಟಿ ಛಾಯಾಗ್ರಾಹಣ ಚಿತ್ರಕ್ಕಿದೆ. ಕಿರಣ್ ರಾಜ್ ಮತ್ತು ಸಿರಿ ಜೊತೆ ಬಡ್ಡೀಸ್ ಸಿನಿಮಾದಲ್ಲಿ ಗೋಪಾಲ ದೇಶಪಾಂಡೆ, ಅರವಿಂದ್ ಬೋಳಾರ್, ಗಿರೀಶ್ ಜಟ್ಟಿ, ಉದಯ್ ಸೂರ್ಯ, ರೋಹನ್ ಸಾಯಿ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ. ಕಿರುತೆರೆಯಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವ ನಟ ಕಿರಣ್ ರಾಜ್ ಇದೀಗ ದೊಡ್ಡ ಪರದೆ ಮೇಲೂ ಸ್ಟಾರ್ ಆಗಿ ಮಿಂಚಲು ಸಿದ್ಧರಾಗಿದ್ದಾರೆ. ಈ ಸಿನಿಮಾಗೆ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿರಲಿದೆ, ಪ್ರೇಕ್ಷಕರು ಕಿರಣ್ ರಾಜ್ ಸಿನಿಮಾಗೆ ಬಹುಪರಾಕ್ ಹೇಳ್ತಾರಾ ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.