
ಚಿತ್ರರಂಗದಲ್ಲಿ ಉತ್ತುಂಗಕ್ಕೆ ಏರಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ 'ಮಿಷನ್ ಮಜ್ನು' ಹಾಗೂ 'ಪುಷ್ಪ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಪ್ರಚಾರಕ್ಕೆ ಸಂಬಂಧಿಸಿದ ವಿಚಾರಗಳನ್ನು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು. ಆದರೀಗ ಲವ್ಲಿ ಉಂಗುರವನ್ನು ಕಳುಹಿಸಿದ ಸ್ಪೇಷಲ್ ವ್ಯಕ್ತಿ ಹೆಸರು ಬಹಿರಂಗ ಪಡಿಸದೇ ಧನ್ಯವಾದಗಳನ್ನು ತಿಳಿಸಿದ್ದಾರೆ.
ದೇವರಕೊಂಡ ಜೊತೆ ಲೇಟ್ ನೈಟ್ ಪಾರ್ಟಿ ಮಾಡಿದ ರಶ್ಮಿಕಾ ಮಂದಣ್ಣ!
ಶೂಟಿಂಗ್ ಆರಂಭಿಸುವ ಮುನ್ನ ಕ್ಯಾರವಾನ್‌ನಲ್ಲಿ ಮೇಕಪ್ ಮಾಡಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ, ಕೈಗೆ ಧರಿಸಿರುವ ಉಂಗುರದ ಫೋಟೋ ಕ್ಲಿಕ್ ಮಾಡಿ ' I Got You...ನಾನು ಇದನ್ನು ಸ್ವೀಕರಿಸಿದ್ದೇನೆ. ನಾನು ನಿಮ್ಮ ರಹಸ್ಯವಾದ ಪುಟ್ಟ ಸಂದೇಶವನ್ನು ಓದಿದ್ದೇನೆ. ಉಂಗುರ ನನಗೆ ಪರ್ಫೆಕ್ಟ್ ಆಗಿ ಫಿಟ್ ಆಗುತ್ತದೆ. ನನಗೆ ಇಷ್ಟವಾಗಿದೆ,' ಎಂದು ಬರೆದುಕೊಂಡಿದ್ದಾರೆ.
ರಶ್ಮಿಕಾ ಕೈ ಬೆರಳುಗಳಿಗೆ ಪರ್ಫೆಕ್ಟ್ ಆಗಿ ಫಿಟ್ ಅಗುವ ಉಂಗುರ ಕೊಟ್ಟಿರುವ ವ್ಯಕ್ತಿ ಯಾರು? ರಶ್ಮಿಕಾ ಯಾಕೆ ಹೆಸರು ರಿವೀಲ್ ಮಾಡಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳ ತಲೆ ಕೆಡೆಸಿದೆ.
ಅಷ್ಟಕ್ಕೂ ಏನೀ ರಿಂಗ್ ಸ್ಪೆಷಲ್?
ಅಂದಹಾಗೆ ವ್ಯಾಲೆಂಟೈನ್ಸ್ ಡೇ ಸಮಯದಲ್ಲಿ ಈ ರೀತಿಯ ಉಂಗುರಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದವು. ಇದನ್ನು 'ಫಾರೆವರ್' ರಿಂಗ್ ಎನ್ನಲಾಗುತ್ತದೆ. ನಮ್ಮ ಆತ್ಮೀಯರು ಸದಾ ನಮ್ಮ ಜೊತೆ ಇರುತ್ತಾರೆ ಎಂಬ ಭಾವನೆ ನೀಡುತ್ತದೆ. ಪ್ರೇಮಿಗಳು 'Two hands hug' ಉಂಗುರವನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಹಿಂದೆ ಕಪಲ್ ರಿಂಗ್ ಖ್ಯಾತಿಯಲ್ಲಿತ್ತು. ಟ್ರೆಂಡ್ ಬದಲಾಗುತ್ತಿದ್ದಂತೆ ಈ ಶೈಲಿಯ ಉಂಗುರಗಳು ಬೆಳಕಿಗೆ ಬರುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.