ಗುಟ್ಟಾಗಿ ಮದ್ವೆಯಾದ್ರಂತೆ ನಟಿ ರಶ್ಮಿಕಾ ಮಂದಣ್ಣ! ಹುಡುಗನ ಬಗ್ಗೆ ರಿವೀಲ್​ ಮಾಡಿದ ನಟಿ

By Suvarna News  |  First Published Aug 3, 2023, 8:56 PM IST

ಗುಟ್ಟಾಗಿ ಮದ್ವೆಯಾದ್ರಂತೆ ನಟಿ ರಶ್ಮಿಕಾ ಮಂದಣ್ಣ; ಹುಡುಗನ ಬಗ್ಗೆಯೂ ರಿವೀಲ್​ ಮಾಡಿದ ನಟಿ, ಅವರ್ಯಾರು?
 


ಕೊಡಗಿನ ಬೆಡಗಿ ಸ್ಯಾಂಡಲ್​ವುಡ್ ತಾರೆ ರಶ್ಮಿಕಾ ಮಂದಣ್ಣ  ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾ ರಂಗವನ್ನು ರೂಲ್ ಮಾಡುತ್ತಿದ್ದಾರೆ.  ಹೀಗಾಗಿ ಮೂರು ಮೂರು ರಾಜ್ಯಗಳಲ್ಲಿ ಮನೆ ಮಾಡಿಕೊಂಡು ತಮ್ಮ ಪ್ರೀತಿಯ ಶ್ವಾನಗಳ ಜೊತೆ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಕ್ಟಿವ್ ಆಗಿರುವ ರಶ್ಮಿಕಾ ಮಂದಣ್ಣ ದಿನಕ್ಕೊಂದು ನೆಗೆಟಿವ್ ಟ್ರೋಲ್ ಎದುರಿಸುತ್ತಾರೆ. ಆದರೂ ಇದ್ಯಾವುದಕ್ಕೂ ಈಕೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ನ್ಯಾಷನಲ್ ಕ್ರಷ್​ ಎಂದೆನಿಸಿಕೊಂಡರೂ, ಕಾಂಟ್ರವರ್ಸಿ ಲೇಡಿ ಎಂದೇ ಕರೆಸಿಕೊಳ್ಳುತ್ತಿರುವವರು ನಟಿ ರಶ್ಮಿಕಾ ಮಂದಣ್ಣ (Rashmika Mandanna). ಬಾಲಿವುಡ್ ಅಂಗಳದ ನೀರು ಕುಡಿದ ಮೇಲೆ ಇದೀಗ ರಶ್ಮಿಕಾ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆ ಕದಿಯುತ್ತಿದ್ದಾರೆ.  ಅಭಿಮಾನಿಗಳ (Fans)ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಒಳ್ಳೊಳ್ಳೆ ಆಫರ್​ಗಳು ಸಿಗುತ್ತಿವೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಯಾಂಡಲ್‌ವುಡ್‌, ಟಾಲಿವುಡ್‌, ಕಾಲಿವುಡ್‌, ಬಾಲಿವುಡ್‌... ಹೀಗೆ ವಿಭಿನ್ನ ಭಾಷಾ ಚಿತ್ರಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ ನಟಿ. ಸ್ಯಾಂಡಲ್‍ವುಡ್ ಸಾನ್ವಿ, ಟಾಲಿವುಡ್ ಶ್ರೀವಲ್ಲಿ (Tollywood Shreevalli) ಎಂದೆಲ್ಲಾ ಕರೆಸಿಕೊಳ್ತಿರೋ ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್‍ನಲ್ಲಿ ಗುರುತಿಸಿಕೊಂಡಿದ್ದಾರೆ.   

27 ವರ್ಷದ ಈ ಚೆಲುವೆ  ಡೇಟಿಂಗ್​, ಮದ್ವೆ ವಿಷಯದಲ್ಲಿಯೂ ಸದಾ ಸುದ್ದಿಯಲ್ಲಿರುತ್ತಾರೆ. 'ಕಿರಿಟ್ ಪಾರ್ಟಿ’ ಸಿನಿಮಾ ವೇಳೆ ರಕ್ಷಿತ್ ಶೆಟ್ಟಿ (Rakshit Shetty) ಜೊತೆ ರಶ್ಮಿಕಾ ಎಂಗೇಜ್ ಆಗಿದ್ದರು. ಆದರೆ  ಕೆಲವೇ ತಿಂಗಳಲ್ಲಿ ಸಂಬಂಧ ಅಲ್ಲಿಗೇ ಮುಗಿಯಿತು. ಅವರಿವರ ಜೊತೆ ಆಗಾಗ್ಗೆ ಹೆಸರು ಕೇಳಿಬರುತ್ತಿದ್ದರೂ ಈ ವಿಷಯದಲ್ಲಿ ರಶ್ಮಿಕಾ ಹೆಸರು ಹೆಚ್ಚಾಗಿ ಥಳಕು ಹಾಕಿಕೊಂಡಿದ್ದು ವಿಜಯ್ ದೇವರಕೊಂಡ ಜೊತೆ. ಇದಾದ ಬಳಿಕ ಇವರ ಮದುವೆಯ ಕುರಿತು ಹೋದಲ್ಲೆಲ್ಲಾ ಪ್ರಶ್ನೆಗಳು ಎದುರಾಗುತ್ತಿರುತ್ತವೆ. ಅದೇ ರೀತಿ ಈಗ ಮದುವೆಯ ಪ್ರಶ್ನೆಯೊಂದು ಅವರಿಗೆ ಎದುರಾಗಿತ್ತು.  ಬಾಲಿವುಡ್ ನಟ ಟೈಗರ್ ಶ್ರಾಫ್ ಜತೆ ಸಿನಿಮಾ ಪ್ರಚಾರಕ್ಕೆ ಹೋಗಿದ್ದ ವೇಳೆ ಮದುವೆಯ ವಿಷಯ ಇವರಿಗೆ ಕೇಳಲಾಗಿದೆ. ಆಗ ಮದುವೆಯ ಕುರಿತು ಮಾತನಾಡಿದ ನಟಿ, ಎಲ್ಲರೂ ಶಾಕ್​ ಆಗುವಂಥ ಸ್ಟೇಟ್​ಮೆಂಟ್​ ಕೊಟ್ಟುಬಿಟ್ಟಿದ್ದಾರೆ.

Tap to resize

Latest Videos

ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ ಬುಡಕ್ಕೆ ಬೆಂಕಿ ಇಟ್ರಾ ಈ ಹೊಸ ಬ್ಯೂಟಿಗಳು?

ಇದೀಗ ಸಕತ್​ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಪತ್ರಕರ್ತರು ನಿಮ್ಮ ಮದುವೆ ಯಾವಾಗ ಎಂದು ಕೇಳಿದ್ದಕ್ಕೆ,  ನಟಿ ನಾನು ಈಗಾಗಲೇ ಮದುವೆಯಾಗಿದ್ದೇನೆ ಎಂದಿದ್ದಾರೆ.   ಈಗಾಗಲೇ ಗುಟ್ಟಾಗಿ ಮದುವೆ ಆಗಿಬಿಟ್ಟಿದೆ  ಎಂದು ಹೇಳಿಕೊಂಡಿದ್ದಾರೆ.  ಅರೆಕ್ಷಣ ಅಲ್ಲಿದ್ದವರು ದಂಗಾಗಿದ್ದಾರೆ. ಹಾಗೆ ನೋಡಿದರೆ ಕೆಲವು ನಟಿಯರು ಗುಟ್ಟಾಗಿ ಮದ್ವೆಯಾದದ್ದು ಇದೆ. ಹಾಗೆಯೇ ರಶ್ಮಿಕಾ ಕೂಡ ಆಗಿಬಿಟ್ರಾ ಎನ್ನುವ ಗುಮಾನಿ ಶುರುವಾಗಿದೆ. ನಂತರ ಜೋರಾಗಿ ನಕ್ಕ ರಶ್ಮಿಕಾ ಮಂದಣ್ಣ ತಾವು ಮದ್ವೆಯಾಗಿದ್ದು ಯಾರು? ಆ ಹುಡುಗ ಯಾರು ಎಂಬ ಬಗ್ಗೆ ವಿವರಿಸುವುದಾಗಿ ಹೇಳಿದಾಗ ಎಲ್ಲರ ಕಿವಿ ನೆಟ್ಟಗಾಗಿದೆ.

ಅಷ್ಟಕ್ಕೂ ರಶ್ಮಿಕಾ ಮದ್ವೆಯಾದದ್ದು ನರುಟೊನನ್ನಂತೆ (Naruto).  ನಾನು ಅವನನ್ನು ತುಂಬಾ ಪ್ರೀತಿಸುತ್ತೇನೆ. ಅವನಿಗೆ ನನ್ನನ್ನು ಅರ್ಪಿಸಿಕೊಂಡಿದ್ದೇನೆ. ನನ್ನ ಹೃದಯದಲ್ಲಿದ್ದಾನೆ ಎಂದಿದ್ದಾರೆ. ಆಗ ಜೋರಾಗಿ ಅಲ್ಲಿದ್ದವರು ನಕ್ಕಿದ್ದಾರೆ. ಅಷ್ಟಕ್ಕೂ ಈ ನರುಟೊ, ಕಾರ್ಟೂನ್​ ಪಾತ್ರ.  ನರುಟೊ ನಿಂಜಾ ವಾರಿಯರ್‌ ಇದರ ಹೆಸರು.  ಮಕ್ಕಳಿಂದ ಹಿಡಿದು ಹಿರಿಯರೂ ಈ ಪಾತ್ರವನ್ನು ಇಷ್ಟಪಡುತ್ತಾರೆ.   ರಶ್ಮಿಕಾ ಅವರು ರಹಸ್ಯವಾಗಿ ಮದುವೆಯಾಗುವಷ್ಟು ನರುಟೊವನ್ನು ಇಷ್ಟಪಡುತ್ತೇನೆ ಎಂದಿದ್ದಾರೆ.   

ಬಾತ್​ರೂಮಲ್ಲಿ ಕ್ರಿಯೇಟಿವ್​ ಆದ್ರೆ ಹೀಗಾಗತ್ತಂತೆ! ರಶ್ಮಿಕಾ ಫೋಟೋ ನೋಡಿ ಹುಬ್ಬೇರಿಸಿದ ಫ್ಯಾನ್ಸ್​

ಸದ್ಯ, ರಶ್ಮಿಕಾ   ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಚಿತ್ರದಲ್ಲಿ ನಟಿಸುತ್ತಿದ್ದಾರೆ, ಇದರಲ್ಲಿ ಅವರು ಅಲ್ಲು ಅರ್ಜುನ್‌ನ ಮೂಲದಿಂದ ಶ್ರೀವಲ್ಲಿ ಪಾತ್ರವನ್ನು ಪುನರಾವರ್ತಿಸುತ್ತಿದ್ದಾರೆ. ಪ್ರಸ್ತುತ ಮಹಡಿಯಲ್ಲಿರುವ ಮಹಿಳಾ ಕೇಂದ್ರಿತ ತಮಿಳು ಚಿತ್ರ ‘ರೇನ್‌ಬೋ’ಗೆ ಸಹ ಅವರು ಸಹಿ ಹಾಕಿದ್ದಾರೆ ಎನ್ನಲಾಗಿದೆ. 

click me!