ಬಾತ್ರೂಮಲ್ಲಿ ಕ್ರಿಯೇಟಿವ್ ಆದ್ರೆ ಹೀಗಾಗತ್ತಂತೆ! ರಶ್ಮಿಕಾ ಫೋಟೋ ನೋಡಿ ಹುಬ್ಬೇರಿಸಿದ ಫ್ಯಾನ್ಸ್
ಬಾತ್ರೂಮ್ನಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಸಕತ್ ಟ್ರೋಲ್ ಆಗುತ್ತಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ನಟಿ ಹೇಳಿದ್ದೇನು?
ಕೊಡಗಿನ ಬೆಡಗಿ ಸ್ಯಾಂಡಲ್ವುಡ್ ತಾರೆ ರಶ್ಮಿಕಾ ಮಂದಣ್ಣ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾ ರಂಗವನ್ನು ರೂಲ್ ಮಾಡುತ್ತಿದ್ದಾರೆ. ಹೀಗಾಗಿ ಮೂರು ಮೂರು ರಾಜ್ಯಗಳಲ್ಲಿ ಮನೆ ಮಾಡಿಕೊಂಡು ತಮ್ಮ ಪ್ರೀತಿಯ ಶ್ವಾನಗಳ ಜೊತೆ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಕ್ಟಿವ್ ಆಗಿರುವ ರಶ್ಮಿಕಾ ಮಂದಣ್ಣ ದಿನಕ್ಕೊಂದು ನೆಗೆಟಿವ್ ಟ್ರೋಲ್ ಎದುರಿಸುತ್ತಾರೆ. ಆದರೂ ಇದ್ಯಾವುದಕ್ಕೂ ಈಕೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ನ್ಯಾಷನಲ್ ಕ್ರಷ್ ಎಂದೆನಿಸಿಕೊಂಡರೂ, ಕಾಂಟ್ರವರ್ಸಿ ಲೇಡಿ ಎಂದೇ ಕರೆಸಿಕೊಳ್ಳುತ್ತಿರುವವರು ನಟಿ ರಶ್ಮಿಕಾ ಮಂದಣ್ಣ (Rashmika Mandanna). ಬಾಲಿವುಡ್ ಅಂಗಳದ ನೀರು ಕುಡಿದ ಮೇಲೆ ಇದೀಗ ರಶ್ಮಿಕಾ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಅಭಿಮಾನಿಗಳ (Fans)ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಒಳ್ಳೊಳ್ಳೆ ಆಫರ್ಗಳು ಸಿಗುತ್ತಿವೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್, ಬಾಲಿವುಡ್... ಹೀಗೆ ವಿಭಿನ್ನ ಭಾಷಾ ಚಿತ್ರಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ ನಟಿ. ಸ್ಯಾಂಡಲ್‍ವುಡ್ ಸಾನ್ವಿ, ಟಾಲಿವುಡ್ ಶ್ರೀವಲ್ಲಿ (Tollywood Shreevalli) ಎಂದೆಲ್ಲಾ ಕರೆಸಿಕೊಳ್ತಿರೋ ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್‍ನಲ್ಲಿ ಗುರುತಿಸಿಕೊಂಡಿದ್ದಾರೆ.
ಗುಡ್‌ಬೈ ಸಿನಿಮಾ ಮೂಲಕ ಮೊದಲ ಬಾರಿಗೆ ರಶ್ಮಿಕಾ ಬಾಲಿವುಡ್‌ನಲ್ಲಿ ಮಿಂಚಿದರು. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿತು. ನಂತರ ಬಂದ ಮಿಷನ್ ಮಜ್ನು ಸಿನಿಮಾ ಕೂಡ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ವಿಫಲವಾಯಿತು. ಹೀಗೆ ಹಲವು ಫ್ಲಾಪ್ ಸಿನಿಮಾ (Flop Cinema) ಕೊಟ್ಟರೂ ರಶ್ಮಿಕಾ ಮೇಲಿನ ಕ್ರೇಜ್ ಕೂಡ ಹಲವರಿಗೆ ಕಮ್ಮಿ ಆಗಿಲ್ಲ. ಆದರೆ ಈಕೆ ಟ್ರೋಲ್ನಿಂದಲೇ ಫೇಮಸ್ ಆಗ್ತಿರೋದೇ ಹೆಚ್ಚು. ಇತ್ತೀಚಿನ ದಿನಗಳಲ್ಲಿ ಅತ್ಯಂತ ಕಡಿಮೆ ಉಡುಪು ತೊಟ್ಟು, ಒಳ ಉಡುಪು ಧರಿಸದೇ... ಹೀಗೆ ಹಲವು ವೇಷಗಳಲ್ಲಿ ದೊಡ್ಡ ದೊಡ್ಡ ವೇದಿಕೆಯ ಮೇಲೆ ಕಾಣಿಸಿಕೊಂಡು ಟ್ರೋಲ್ ಆಗುತ್ತಿದ್ದಾರೆ. ಮೊನ್ನೆಯಷ್ಟೇ ಈಕೆ ಏರ್ಪೋರ್ಟ್ನಿಂದ ಮೇಕಪ್ ರಹಿತವಾಗಿ ಬರುವ ವಿಡಿಯೋ ಹಂಚಿಕೊಂಡಿದ್ದರು. ಆಗಲೂ ಟ್ರೋಲ್ಗೆ ಒಳಗಾಗಿದ್ದರು, ಇದ್ಯಾವ ಸೀಮೆ ನ್ಯಾಷನಲ್ ಕ್ರಷ್ ಎಂದು ಟ್ರೋಲಿಗರು ಕೇಳಿದ್ದರು. ಆದರೂ ರಶ್ಮಿಕಾ ತಲೆ ಕೆಡಿಸಿಕೊಳ್ಳುವುದಿಲ್ಲ. ಟ್ರೋಲ್ ಹೆಚ್ಚಿದರೆ ಖ್ಯಾತಿಯೂ ಹೆಚ್ಚುತ್ತದೆ ಎನ್ನುವ ಜಾಯಮಾನದ ಹಲವು ನಟ-ನಟಿಯರ ಪೈಕಿ ರಶ್ಮಿಕಾ ಕೂಡ ಇದ್ದಂತಿದೆ. ಇನ್ನೊಂದರ್ಥದಲ್ಲಿ ನೆಗೆಟಿವ್ ಕಮೆಂಟ್ಗಳಿಂದಲೇ ಪ್ರಚಾರವೂ ಸಿಗುತ್ತಿದೆ ಎನ್ನುವುದೂ ಸುಳ್ಳಲ್ಲ.
Rashmika Mandannaಗೆ ಇದ್ಯಾವ ಸೀಮೆ ನ್ಯಾಷನಲ್ ಕ್ರಷ್ ಎಂದ ನೆಟ್ಟಿಗರು
ಇದೀಗ ನಟಿ ಬಾತ್ರೂಮ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಹೌದು. ತಮ್ಮ ಬಾತ್ರೂಮ್ನಲ್ಲಿ ಕ್ಯಾಟ್ವಾಕ್ ಮಾಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ. Washroomನಲ್ಲಿ ಅವರು ಮಾಡಿರುವ ಈ ಫೋಟೋ ಶೂಟ್ ಸಕತ್ ವೈರಲ್ ಆಗುತ್ತಿದೆ. ವೈಟ್ ಆ್ಯಂಡ್ ವೈಟ್ ಆಗಿರೋ ಬಾತ್ರೂಮಿನಲ್ಲಿ ಕೆಂಪು ಬಣ್ಣದ ಕಾಸ್ಟೂಮ್ ಧರಿಸಿಕೊಂಡು ಪೋಸ್ ಕೊಟ್ಟಿದ್ದಾರೆ. ನಮ್ಮ ಸೃಜನಶೀಲತೆ ವಾಷ್ರೂಮ್ನಲ್ಲಿ ಉಕ್ಕಿ ಬಂದಾಗ (When our creativity met the washroom) ಎಂದು ಶೀರ್ಷಿಕೆ ಕೊಟ್ಟು ಈ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ನಟಿಯರ ಮನೆಯ ಬಾತ್ರೂಮ್ ಎಂದ ಮೇಲೆ ಕೇಳಬೇಕೆ? ಅದು ಚೆನ್ನಾಗಿಯೇ ಇದೆ. ಆದರೆ ಬಾತ್ರೂಂನಲ್ಲಿ ಫ್ಯಾಷನ್ ಪೆರೇಡ್ ಏಕೆ ಎನ್ನುವುದು ಈಕೆಯ ಫ್ಯಾನ್ಸ್ಗೆ ಅರ್ಥವಾಗುತ್ತಿಲ್ಲ.
ಈ ಫೋಟೋ ಸಕತ್ ಟ್ರೋಲ್ ಆಗುತ್ತಿದೆ. ಕೆಲವರು ಪುಣ್ಯ ಬಾತ್ರೂಮ್ನಲ್ಲಿ ಇನ್ನೇನೋ ಮಾಡುತ್ತಿರುವ ಫೋಟೋ ಹಾಕಿಲ್ಲ ಎಂದು ಕಾಲೆಳೆದಿದ್ದರೆ, ಹಲವರು ಇದು ಬಾತ್ರೂಂ ಟೈಲ್ಸ್ (bathroom Tiles) ಜಾಹೀರಾತು ಇರಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಸಾಕಮ್ಮಾ ತಾಯಿ, ನಿನ್ನ ಸೃಜನಶೀಲತೆ ಮತ್ತೆ ಹೀಗೆಲ್ಲಾ ಉಕ್ಕಿಸಿಕೊಳ್ಳಬೇಡ, ನೋಡಲು ಆಗುವುದಿಲ್ಲ ಎಂದು ಇನ್ನು ಕೆಲವರು ಹೇಳಿದ್ದರೆ, ಇಲ್ಲಿಯವರೆಗೆ ಚೆನ್ನಾಗಿದ್ದ ರಶ್ಮಿಕಾಗೆ ಇದೇನಾಯ್ತು ಎಂದು ಇನ್ನು ಸ್ವಲ್ಪ ಮಂದಿ ಪ್ರಶ್ನಿಸುತ್ತಿದ್ದಾರೆ. ಅಷ್ಟು ದೊಡ್ಡ ಬಂಗಲೆಯಲ್ಲಿ ಫೋಟೋಶೂಟ್ಗೆ ಬಾತ್ರೂಮೇ ಬೇಕಾಗಿತ್ತಾ ಎನ್ನುವುದು ಟ್ರೋಲಿಗರ ಪ್ರಶ್ನೆ. ಇನ್ನು ಕೆಲವರು ಈಕೆಯ ಬಾತ್ರೂಮ್ ಒಳಗೆ ಹೋಗಿ ಫೋಟೋ ಶೂಟ್ ಮಾಡಿದವರು ಯಾರು ಎಂದೂ ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣನವರ ಈ ಹೊಸ ಫೋಟೋಶೂಟ್ (photoshoot) ಸಕತ್ ಚರ್ಚೆಯ ವಸ್ತುವಾಗಿದೆ.
ಕೈ ಕೊಟ್ಟ ಅದೃಷ್ಟ.. ಹೊಸ ಚಿತ್ರದಿಂದಲೂ ರಶ್ಮಿಕಾ ಔಟ್