ಅದೊಂದು ಫೋಟೋ ಬಗ್ಗೆ ಕ್ಲಾರಿಟಿ ಕೊಟ್ಟ ಚಂದನ್‌ ಶೆಟ್ಟಿ; Oho.. ಅದಲ್ಲ..., ಇದಂತೆ ವಿಷ್ಯ!

Published : Feb 08, 2025, 06:21 PM IST
ಅದೊಂದು ಫೋಟೋ ಬಗ್ಗೆ ಕ್ಲಾರಿಟಿ ಕೊಟ್ಟ ಚಂದನ್‌ ಶೆಟ್ಟಿ; Oho.. ಅದಲ್ಲ..., ಇದಂತೆ ವಿಷ್ಯ!

ಸಾರಾಂಶ

ಚಂದನ್ ಶೆಟ್ಟಿ ಹಿಮಾಚಲ ಪ್ರವಾಸ ಮುಗಿಸಿ, 'ಕಾಟನ್ ಕ್ಯಾಂಡಿ' ಹಾಡಿನ 16 ಮಿಲಿಯನ್ ವೀಕ್ಷಣೆ ಸಂಭ್ರಮಿಸಿದರು. ಸುಶ್ಮಿತಾ ಜೊತೆಗಿನ ಡಿನ್ನರ್ ಫೋಟೋದಿಂದ ಮದುವೆ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿ, ವೃತ್ತಿಜೀವನದತ್ತ ಗಮನ ಹರಿಸಿರುವುದಾಗಿ ತಿಳಿಸಿದರು. ಪ್ರವಾಸದಲ್ಲಿ ತಾಜ್ ಮಹಲ್ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡಿದರು.

ಕನ್ನಡದ ಫೇಮಸ್ ರಾಪರ್ ಚಂದನ್‌ ಶೆಟ್ಟಿಯವರು (Chandan Shetty) ಹಿಮಾಚಲ ಪ್ರದೇಶಕ್ಕೆ ಹೋಗಿದ್ದ ಟೂರ್‌ನಿಂದ ವಾಪಸ್ ಆಗಿ ಈಗಾಗಲೇ ಕೆಲದಿನಗಳಾಗಿವೆ. ಕಾರಿನಲ್ಲಿ ಸ್ನೇಹಿತರ ಜೊತೆ ಹಿಮಾಚಲ ಪ್ರದೇಶಕ್ಕೆ ತೆರಳಿದ್ದ ನಟ, ಸಿಂಗರ್ ಚಂದನ್‌ ಶೆಟ್ಟಿಯವರು ಅಲ್ಲಿ ಬಹಳಷ್ಟು ಸ್ಥಳಗಳನ್ನು ನೋಡಿ, ಎಂಜಾಯ್ ಅನುಭವಿಸಿ ಮತ್ತೆ ಬೆಂಗಳೂರಿಗೆ ಮರಳಿದ್ದಾರೆ. ಬಳಿಕ ಇಲ್ಲಿ, ಬೆಂಗಳೂರಿನಲ್ಲಿ 'ಕಾಟನ್‌ ಕ್ಯಾಂಡಿ' ವಿಡಿಯೋ 16 ಮಿಲಿಯನ್ ವ್ಯೂಸ್ ಪಡೆದಿದ್ದಿರ ಖುಷಿಗೆ ಡಿನ್ನರ್ ಸವಿದಿದ್ದಾರೆ. 

ಕಾಟನ್‌ ಕ್ಯಾಂಡಿ ಸಹನಟಿ ಸುಶ್ಮಿತಾ ಗೋಪಿನಾಥ್ ಹಾಗೂ ಚಂದನ್ ಡಿನ್ನರ್‌ ಹೋಗಿ ಆ ಖುಷಿಯಲ್ಲಿ ಫೋಟೋ ಒಂದನ್ನು ತೆಗೆದುಕೊಂಡಿದ್ದಾರೆ. ಆ ಪಿಕ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಸಿಕ್ಕಾಪಟ್ಟೆ ಲೈಕ್ಸ್‌ ಹಾಗೂ ಕಾಮೆಂಟ್ಸ್‌ ಬರೋದು ಸಹಜ.. ಆದರೆ, ಅದರ ಜೊತೆಜೊತೆಗೇ, 'ಶೆಟ್ರೆ ಜೋಡಿ ಚೆನ್ನಾಗಿದೆ ಮದುವೆ ಆಗಿ ಬಿಡಿ' ಎನ್ನುವ ಒಂದು ಕಾಮೆಂಟ್ ಅಲ್ಲದೇ, 'ಶೆಟ್ರೇ ಮದ್ವೆ ಊಟ ಯಾವಾಗ..?' ಎಂಬ ಇನ್ನೊಂದು ಕಾಮೆಂಟ್‌ ಸಹ ಗಮನ ಸೆಳೆಯುತ್ತಿತ್ತು. ಅದಕ್ಕೀಗ ಚಂದನ್ ಶೆಟ್ಟಿಯವರು ಕ್ಲಾರಿಟಿ ಕೊಟ್ಟಿದ್ದಾರೆ. 

ಚಂದನ್‌ ಶೆಟ್ಟಿ ಟ್ರಿಪ್‌ಗೆ ಹೋಗಿರೋದು ಯಾಕೆ? ಅದೆಷ್ಟೇ ಹುಶಾರಾಗಿದ್ರೂ ಗುಟ್ಟು ರಟ್ಟಾಗೋಯ್ತು!

ಹಾಗಿದ್ರೆ ಸಿಂಗರ್ ಚಂದನ್ ಶೆಟ್ಟಿ ಹೇಳಿದ್ದೇನು? 'ನನ್ನ ಸ್ನೇಹಿತರ ಜೊತೆ ಹೋಗಿದ್ದ ಹಿಮಾಚಲ ಪ್ರದೇಶದ ಟೂರ್ ಮುಗಿಸಿ ವಾಪಸ್ ಬೆಂಗಳೂರಿಗೆ ಬಂದಿದ್ದಾಗಿದೆ. ಅಷ್ಟರಲ್ಲಿ ನನ್ನ 'ಕಾಟನ್‌ ಕ್ಯಾಂಡಿ' ವಿಡಿಯೋ 16 ಮಿಲಿಯನ್ಸ್ ವ್ಯೂಸ್ ದಾಖಲಿಸಿದೆ. ಆ ಖುಷಿ ಸೆಲೆಬ್ರೇಟ್ ಮಾಡಲು ನಾನು ಹಾಗೂ ಸುಷ್ಮಿತಾ ಗೋಪಿನಾಥ್ ಡಿನ್ನರ್ ಹೋಗಿದ್ವಿ. ಆ ಪಿಕ್ ಪೋಸ್ಟ್ ಮಾಡಿದ್ದೆ ಅಷ್ಟೇ. ಸದ್ಯವೇ ಕಾಟನ್ ಕ್ಯಾಂಡಿ ಇಡೀ ತಂಡ ಡಿನ್ನರ್‌ಗೆ ಹೋಗಲಿದ್ದೇವೆ' ಎಂದಿದ್ದಾರೆ. 

ಸದ್ಯ ನಾನು 'ಲವ್ ಗಿವ್' ಅಂತ ಯಾವುದೇ ಅಜೆಂಡಾ ಇಟ್ಟುಕೊಂಡಿಲ್ಲ. ಕೆರಿಯರ್‌ ಬಗ್ಗೆ ಫುಲ್ ಫೋಕಸ್ ಆಗಿದೀನಿ..' ಎಂದಿದ್ದಾರೆ. ಮುಂದೆ ಸಾಕಷ್ಟು ಸ್ಟೇಜ್ ಶೋಗಳು ಹಾಗೂ ಸಂಗೀತ ನಿರ್ದೇಶನದ ಪ್ರಾಜೆಕ್ಟ್‌ಗಳು ಕಾಯುತ್ತಿವೆ. ಅವುಗಳಿಗೆ ಸಮಯ ಮೀಸಲಿಟ್ಟಿದ್ದೇನೆ. ವೈಯಕ್ತಿಕ ಬದುಕಿನಲ್ಲಿ ನಾನೀಗ ಖುಷಿಯಾಗಿದ್ದೇನೆ, ಯಾವುದೇ ಸಮಸ್ಯೆ ಇಲ್ಲ.. ವೃತ್ತಿ ಜೀವನಕ್ಕೆ ನನ್ನ ಸಮಯ ಮೀಸಲಿಟ್ಟಿದ್ದೇನೆ.. ಲವ್ವು, ಸುತ್ತಾಟ ಅದೆಲ್ಲ ಸದ್ಯಕ್ಕೆ ಮುಗಿದ ಅಧ್ಯಾಯ' ಎಂದಿದ್ದಾರೆ. 

ಅಣ್ಣಾವ್ರ 'ಭಕ್ತ ಕುಂಬಾರ' ಶೂಟಿಂಗ್ ವೇಳೆ ಮನಸ್ತಾಪ ಆಗಿದ್ದು ನಿಜವೇ? ಇಲ್ಲಿದೆ ಸತ್ಯ ಸಂಗತಿ!

ಹಿಮಾಚಲ ಪ್ರದೇಶದ ಟ್ರಿಪ್ ವೇಳೆ ಚಂದನ್‌ ಶೆಟ್ಟಿಯವರು ನಾಗ್ಪುರ, 'ಪ್ರೇಮಿಗಳ ಸೌಧ' ಆಗ್ರಾದ ತಾಜ್‌ ಮಹಲ್‌, ಜಗತ್ತಿನ ಎತ್ತರದ ಬ್ರಿಡ್ಜ್ 'ಚಿಚಂ' ಹೀಗೆ ಅನೇಕ ಕಡೆ ಭೇಟಿ ನೀಡಿದ್ದಾರೆ. ಅವರನ್ನು ತಾಜ್ ಮಹಲ್ ಮುಂದೆ ನೋಡಿ ಅಭಿಮಾನಿಗಳು ಪುಳಕಗೊಂಡಿದ್ದಾರೆ, ಹರ್ಷ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲು ಅವರು ಆಸ್ಟ್ರೇಲಿಯಾದ ಸಿಡ್ನಿಗೆ ಹೋಗಿದ್ದರು. ಅಲ್ಲಿ ತಮ್ಮ ಬಾಲ್ಯದ 'ವಿಮಾನ ಓಡಿಸುವ' ಕನಸನ್ನು ನನಸು ಮಾಡಿಕೊಂಡು ಬಂದಿದ್ದಾರೆ. ಮುಂದೆ ಇನ್ನೇನು ಮಾಡಬಹುದು ಚಂದನ್ ಶೆಟ್ಟಿ ಎಂದು ಅವರ ಫ್ಯಾನ್ಸ್ ಕುತೂಹಲದಿಂದ ಕಾಯುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ