ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಕರ್ಮಕಾಂಡ; ಹೀರೋಯಿನ್ ಮಾಡೋದಾಗಿ 575 ಗ್ರಾಂ ಚಿನ್ನ ಪಡೆದು ನಾಮ ಹಾಕಿದ ಪ್ರೊಡ್ಯೂಸರ್!

Published : Feb 08, 2025, 04:12 PM IST
ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಕರ್ಮಕಾಂಡ; ಹೀರೋಯಿನ್ ಮಾಡೋದಾಗಿ 575 ಗ್ರಾಂ ಚಿನ್ನ ಪಡೆದು ನಾಮ ಹಾಕಿದ ಪ್ರೊಡ್ಯೂಸರ್!

ಸಾರಾಂಶ

ಸಿನಿಮಾ ಅವಕಾಶ ಹುಡುಕಿಕೊಂಡು ಬಂದ ಯುವತಿಗೆ ನಟಿ ಮಾಡುವುದಾಗಿ ನಂಬಿಸಿ 5 ಲಕ್ಷ ರೂ. ಹಣ ಮತ್ತು 575 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ ಆರೋಪದ ಮೇಲೆ ರಣಾಕ್ಷ ಸಿನಿಮಾ ನಿರ್ಮಾಪಕ ಶಿವರಾಮು ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಯುವತಿಯ ತಾಯಿ ನೀಡಿದ ದೂರಿನ ಮೇರೆಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಬೆಂಗಳೂರು (ಫೆ.08): ಸಿನಿಮಾ ಚಾನ್ಸ್ ಹುಡುಕಿಬಂದ ಯುವತಿಗೆ ನಾನು ನಿನ್ನನ್ನು ಸಿನಿಮಾ ಹೀರೋಯಿನ್ ಮಾಡ್ತೀನಿ ಎಂದು ನಂಬಿಸಿ ಯುವತಿಯ ತಾಯಿಯಿಂದ 5 ಲಕ್ಷ ರೂ. ನಗದು ಹಾಗೂ 575 ಗ್ರಾಂ ಚಿನ್ನಾಭವರಣವನ್ನು ಪಡೆದು ರಣಾಕ್ಷ ಸಿನಿಮಾ ಪ್ರೊಡ್ಯೂಸರ್ ಶಿವರಾಮು ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹೌದು, ಈತ ಹೇಳಿಕೊಳ್ಳುವುದಕ್ಕೆ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕ. ಸಿನಿಮಾ ಪ್ರೊಡ್ಯೂಸರ್ ಎಂದು ಎಲ್ಲೆಡೆ ಬಿಲ್ಡಪ್ ಕೊಟ್ಟಿದ್ದೇ ಕೊಟ್ಟಿದ್ದು. ಆದರೆ, ಆತನ ಹೆಸರಲ್ಲಿ ಈಗಲೂ ಒಂದೇ ಒಂದು ಯಶಸ್ವಿ ಸಿನಿಮಾ ಇಲ್ಲ. ಆದರೂ, ಬೆಂಗಳೂರಿಗೆ ಸಿನಿಮಾ ನಟನೆಯ ಅವಕಾಶವನ್ನು ಹುಡುಕಿಕೊಂಡು ಬಂದ ಯುವತಿ ಪೂಜಾ ಎಂಬುವವರಿಗೆ ನಿಮ್ಮನ್ನು ಹೀರೋಯಿನ್ ಮಾಡುವುದಾಗಿ ಭರವಸೆ ನೀಡಿದ್ದಾನೆ. ಆಗ ಯುವತಿ ನಿರ್ಮಾಪಕರು ತನಗೆ ಭರವಸೆ ನೀಡಿದ್ದಾರೆಂದು ಸಂತಸದಿಂದ ತಾನು ಹೀರೋಯಿನ್ ಆಗುತ್ತೇನೆಂದು ಅಮ್ಮನಿಗೆ ಹೇಳಿಕೊಂಡಿದ್ದಾರೆ. ಇದಾದ ನಂತರ ಬೆಂಗಳೂರಲ್ಲಿ ಮಗಳು ಇರುವ ಸ್ಥಳಕ್ಕೆ ಆಗಿಂದಾಗ್ಗೆ ಅಮ್ಮ ಬಂದು ಹೋಗುತ್ತಿದ್ದರು.

ಆಗ 2023ರಲ್ಲಿ ಮಗಳು ಪೂಜಾ ಸಿನಿಮಾ ಪ್ರೊಡ್ಯೂಸರ್ ಎಂದು ಹೇಳಿಕೊಂಡಿದ್ದ ಶಿವರಾಮು ಅವರಿಗೆ ತಮ್ಮ ತಾಯಿ ಸುನಂದಾ ಅವರನ್ನು ಪರಿಚಯ ಮಾಡಿಸಿದ್ದಾರೆ. ಆ ನಂತರ ನಿಮ್ಮ ಮಗಳು ದೊಡ್ಡ ನಟಿ ಆಗುತ್ತಾಳೆ. ಒಳ್ಳೆಯ ಭವಿಷ್ಯ ಬರುತ್ತದೆ. ಅವರಿಂದ ಕೋಟ್ಯಂತರ ರೂ. ಮಾಡಬಹುದು ಎಂದು ಆಸೆಯನ್ನು ಹುಟ್ಟಿಸಿದ್ದಾರೆ. ಇದಾದ ನಂತರ ಸಿನಿಮಾ ಮಾಡಲು ಸ್ವಲ್ಪ ಹಣದ ಅಡಚಣೆ ಇದೆ ಎಂದು ಆರಂಭದಲ್ಲಿ ಪೂಜಾಳ ತಾಯಿ ಬಳಿ 5 ಲಕ್ಷ ರೂ. ಹಣವನ್ನು ಪಡೆದುಕೊಂಡಿದ್ದಾನೆ. ನಂತರ, ಸಿನಿಮಾಗೆ 'ರಾಣಾಕ್ಷ' ಎಂಬ ಸಿನಿಮಾ ಶೂಟಿಂಗ್‌ ನಡೆಸಿದ್ದಾರೆ. ಕೆಲವು ದಿನಗಳ ನಂತರ ಪುನಃ ಪೂಜಾಳ ತಾಯಿ ಸುನಂದಾಗೆ ಕರೆ ಮಾಡಿ ಇನ್ನೊಂದಿಷ್ಟು ಹಣ ಸಿಗಬಹುದಾ? ಸಿನಿಮಾ ಬಿಡುಗಡೆಯಾದ ನಂತರ ಬಂದ ಲಾಭದಲ್ಲಿ ನಿಮಗೆ ಬಡ್ಡಿ ಸಮೇತ ಹಣ ವಾಪಸ್ ಕೊಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ದೇವರು-ದೆವ್ವದ ನಡುವಿನ ಸಂಘರ್ಷದ ಕಥೆಯ 'ರಣಾಕ್ಷ' ಟ್ರೈಲರ್ ಝಲಕ್ ನೋಡಿ!

ಪ್ರೊಡ್ಯೂಸರ್ ಶಿವರಾಮು ಹೇಳಿದ್ದನ್ನು ಕೇಳಿದ ಪೂಜಾಳ ತಾಯಿ ನನ್ನ ಬಳಿ ಇದೀಗ ನಗದು ಹಣವಿಲ್ಲ. ಜೊತೆಗೆ ಬ್ಯಾಂಕ್ ಬ್ಯಾಲೆನ್ಸ್ ಕೂಡ ಇಲ್ಲ. ನಮ್ಮ ಬಳಿ ಚಿನ್ನಾಭರಣವಿದ್ದು ಅದನ್ನು ಕೊಡುತ್ತೇವೆ ಎಂದು ತಿಳಿಸಿದ್ದಾರೆ. ಆಗ ಪೂಜಾಳ ತಾಯಿ ಸುನಂದಾ ಅವರು ತಮ್ಮ ಬಳಿಯಿದ್ದ 575 ಗ್ರಾಂ ಚಿನ್ನವನ್ನು ಶಿವರಾಮುಗೆ ತಂದು ಕೊಟ್ಟಿದ್ದಾರೆ. ಈ ವೇಳೆ ನೀವು ನನಗೆ ಚಿನ್ನವನ್ನು ಪಡದ ನಂತರ ವಾಪಸ್ ಕೊಡುತ್ತೀರಿ ಎಂಬ ಗ್ಯಾರಂಟಿಗೆ ಏನಾದರೂ ಶ್ಯೂರಿಟಿ ಕೊಡಿ ಎಂದು ಕೇಳಿದ್ದಾರೆ. ಆಗ ನಿರ್ಮಾಪಕ ಶಿವರಾಮು 2 ಚೆಕ್ ಅನ್ನು ಕೊಟ್ಟಿದ್ದಾರೆ.

ನನ್ನ ಮಗಳು ಪೂಜಾ ಸಿನಿಮಾ ನಟಿ ಆಗುತ್ತಾಳೆ ಎಂದು ಎರಡು ವರ್ಷದಿಂದ ಸುನಂದಾ ಅವರು ಕಾಯುತ್ತಾ ಕುಳಿತರೂ ಹಣ ವಾಪಸ್ ಬರುವ ಸುಳಿವೇ ಸಿಗಲಿಲ್ಲ. ಆದರೆ, ಹಣ ಮತ್ತು ಚಿನ್ನಾಭರಣವನ್ನು ಪಡೆದುಕೊಂಡ ಪ್ರೊಡ್ಯೂಸರ್ ಶಿವರಾಮು ಮಾತ್ರ ಭರ್ಜರಿಯಾಗಿ ಸುತ್ತಾಟ ಮಾಡುತ್ತಾ ಮಜಾ ಉಡಾಯಿಸುವ ವಿಡಿಯೋಗಳು ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದನ್ನು ನೋಡಿದ್ದಾರೆ. ಹಣವನ್ನು ಹಾಗೂ ಚಿನ್ನಾಭರಣವನ್ನು ವಾಪಸ್ ಕೇಳಿದರೆ ಹಲವು ಸಬೂಬು ಹೇಳುತ್ತಾ ಬಂದಿದ್ದ ಶಿವರಾಮು ತಾನು ಕೊಟ್ಟ ಚೆಕ್‌ನ ಅವಧಿ ಮುಗಿಯುತ್ತಿದ್ದಂತೆ ವರಸೆ ಬದಲಿಸಿದ್ದಾರೆ. ಆಗ ತಾವು ಮೋಸ ಹೋಗಿದ್ದೀವಿ ಎಂಬ ಅನುಮಾನದಿಂದ ಪೂಜಾಳ ತಾಯಿ ಸುನಂದಾ ಅವರು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ನಿರ್ಮಾಪಕನ ವಿರುದ್ಧ ದೂರು ನೀಡಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: 'ಕಡ್ಲೇ ಬೀಜ'ದ ಕಥೆ ಇನ್ನ ಮುಗಿದಿಲ್ವಾ...? ಅವಮಾನ ಎದುರಿಸಿದ್ದೇನೆ ಅಂದಿದ್ಯಾಕೆ ಲೂಸ್‌ ಮಾದ..!?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ