'ಕಡ್ಲೇ ಬೀಜ'ದ ಕಥೆ ಇನ್ನ ಮುಗಿದಿಲ್ವಾ...? ಅವಮಾನ ಎದುರಿಸಿದ್ದೇನೆ ಅಂದಿದ್ಯಾಕೆ ಲೂಸ್‌ ಮಾದ..!?

Published : Feb 08, 2025, 04:06 PM IST
'ಕಡ್ಲೇ ಬೀಜ'ದ ಕಥೆ ಇನ್ನ ಮುಗಿದಿಲ್ವಾ...? ಅವಮಾನ ಎದುರಿಸಿದ್ದೇನೆ ಅಂದಿದ್ಯಾಕೆ ಲೂಸ್‌ ಮಾದ..!?

ಸಾರಾಂಶ

ಲೂಸ್ ಮಾದ ಯೋಗೇಶ್, "ಸಿದ್ಲಿಂಗು ೨" ಚಿತ್ರದ ಮೂಲಕ ಮರಳಿದ್ದಾರೆ. ಈ ಬಾರಿ ರಮ್ಯಾ ಬದಲಿಗೆ ಸೋನು ಗೌಡ ನಾಯಕಿ. ವಿಜಯಪ್ರಸಾದ್ ನಿರ್ದೇಶನದ ಈ ಚಿತ್ರ ಫೆಬ್ರವರಿ ೧೪ ರಂದು ಬಿಡುಗಡೆಯಾಗಲಿದೆ. ಯೋಗೇಶ್, ನಿರ್ದೇಶಕರ ಜೊತೆಗಿನ ಕೆಲಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಲೂಸ್ ಮಾದ ಯೋಗೇಶ್ (Loose Mada Yogesh) ಅಂದ್ರೆ ಸಾಕು, ದುನಿಯಾದ ಸಣಕಲು ಹುಡುಗ ನೆನಪಿಗೆ ಬರೋದು ಖಂಡಿತ. ಪೊರ್ಕಿ ಥರ ಇದ್ದ ಯೋಗೇಶ್ ಅಂದು ಲೂಸ್  ಮಾದನ ಪಾತ್ರ ಮಾಡಿ ಕನ್ನಡಿಗರ ಮನಸ್ಸು ಗೆದ್ದು ಹೀರೋ ಆದವರು. ದುನಿಯಾ ಬಳಿಕ ನಟ ಯೋಗೇಶ್ ಅವರನ್ನು ಕನ್ನಡ ಸಿನಿಪ್ರೇಕ್ಷಕರು 'ಲೂಸ್ ಮಾದ ಯೋಗಿ' ಅಂತಾನೇ ಕರೆದಿರೋದು ಈಗ ಇತಿಹಾಸ. ತಮ್ಮ ವೃತ್ತಿಜೀವನದಲ್ಲಿ ಹಲವು ಏಳುಬೀಳುಗಳ ಬಳಿಕ ನಟ ಯೋಗೇಶ್ ಅವರು ಇದೀಗ 'ಸಿದ್ಲಿಂಗು 2' ಮೂಲಕ ಮತ್ತೆ ಪ್ರೇಕ್ಷಕರೆದುರು ಪ್ರತ್ಯಕ್ಷರಾಗುತ್ತಿದ್ದಾರೆ. 

ಹೌದು, ಹಲವು ವರ್ಷಗಳ ಬಳಿಕ ನಟ ಲೂಸ್ ಮಾದ ಯೋಗಿ ತೆರೆಯ ಮೇಲೆ ದರ್ಶನ ನೀಡುತ್ತಿದ್ದಾರೆ. ಅದಕ್ಕೆಲ್ಲಾ ಕಾರಣಗಳನ್ನು ಹುಡುಕುವ ಬದಲು 'ಬದುಕಿನ ಏರಿಳಿತ' ಅಂತ ಒಂದೇ ಶಬ್ಧದಲ್ಲಿ ಹೇಳಿಕೊಂಡು ಮುಂದೆ ಹೋದರೆ ಒಳ್ಳೆಯದೇನೋ.. ನಟಿ ರಮ್ಯಾ ಹಾಗೂ ನಟ ಯೋಗೇಶ್ ಅವರು 2012ರಲ್ಲಿ 'ಸಿದ್ಲಿಂಗು' ಚಿತ್ರದ ಮೂಲಕ ಸಿನಿರಸಿಕರನ್ನು ರಂಜಿಸಿದ್ದರು. ಅಂದು 'ಕಡ್ಲೇ ಬೀಜ' ಡೈಲಾಗ್ ಹೇಳಿ ಅದೇನೋ ಕಾಂಟ್ರೋವರ್ಸಿ, ಅದೂ ಇದೂ ಏನೋನೋ ಆಗಿಹೋಗಿತ್ತು. ಆದರೆ, ಸಿನಿಮಾ ಗೆದ್ದಿತ್ತು, ನಟಿ ರಮ್ಯಾ ಟೀಚರ್ ಪಾತ್ರದಲ್ಲಿ ಮಿಂಚಿದ್ದರು. 

ಆದರೆ, ಇಂದು ಸಿದ್ಲಿಂಗು 2 ಚಿತ್ರದಲ್ಲಿ ಲೂಸ್‌ ಮಾದ ಯೋಗಿಗೆ ಜೋಡಿಯಾಗಿ ಸ್ಯಾಂಡಲ್‌ವುಡ್ ಕ್ವೀನ್ ಖ್ಯಾತಿಯ ನಟಿ ರಮ್ಯಾ ನಟಿಸಿಲ್ಲ. ಬದಲಿಗೆ ಯೋಗೇಶ್‌ ಅವರಿಗೆ ಜೋಡಿಯಾಗಿ ಸೋನು ಗೌಡ ಜೊತೆಯಾಗಿದ್ದಾರೆ. ಸೋನು-ಲೂಸು ಜೋಡಿ ಈ ಚಿತ್ರದಲ್ಲಿ ಅದಷ್ಟು ಮೋಡಿ ಮಾಡಲಿದ್ದಾರೆ ಎಂಬುದನ್ನು ತೆರೆಯಲ್ಲಿ ನೋಡಿ ನಿರ್ಧರಿಸಬೇಕಿದೆ. ಇದೇ ತಿಂಗಳು 14 ರಂದು (14 February 2025 ) ತೆರೆಗೆ ಬರಲಿದೆ. ಈ ಚಿತ್ರವನ್ನು ಅದೇ ವಿಜಯಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಈ ಬಗ್ಗೆ ನಟ ಯೋಗೇಶ್ ಅವರು ಪೋಸ್ಟ್ ಮಾಡಿದ್ದಾರೆ. 

'ಶ್ರಮ ಪಟ್ಟು ಅವಮಾನಗಳನ್ನು ಎದುರಿಸಿ, ವಿಜಯಪ್ರಸಾದ್ ಜೊತೆ ಮತ್ತೊಮ್ಮೆ ಸಿನಿಮಾ ಮಾಡಿದ್ದೇನೆ. ಈ ಪ್ರಯಾಣದಲ್ಲಿ ಜಗಳ ಆಗಿದೆ, ಇರುಸು ಮುರುಸು ಅನುಭವವಾಗಿದೆ. ಆದರೆ ಒಬ್ಬ ಪರಿಪೂರ್ಣ ನಟ ಆಗಬೇಕು ಎಂದರೆ ನಿರ್ದೇಶಕ ವಿಜಯಪ್ರಸಾದ್ ಜೊತೆ ಕೆಲಸ ಮಾಡಬೇಕು' ಎಂದಿದ್ದಾರೆ ನಟ ಲೂಸ್ ಮಾದ ಯೋಗೇಶ್. ಇನ್ನು ಇದೇ ಮೊದಲ ಬಾರಿಗೆ ಯೋಗೇಶ್ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ ನಟಿ ಸೋನು ಗೌಡ. ಅವರಿಬ್ಬರ ಕಾಂಬಿನೇಶನ್‌ ಸಿನಿಮಾದಲ್ಲಿ ಹೇಗೆ ವರ್ಕ್‌ಔಟ್ ಆಗಿದೆ ಎಂಬುದನ್ನು ಕಾದು ನೋಡಬೇಕಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ