ಚಂದನ್ ಶೆಟ್ಟಿ ಅವರು 'ಜಿಎಸ್‌ಟಿ' ಚಿತ್ರದ ಮ್ಯೂಸಿಕ್ ಕಂಪೋಸ್ ಬಗ್ಗೆ ಮಾತನಾಡಿ 'ಈ ಸಿನಿಮಾದಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದರೆ ಅದಕ್ಕೆ ಕಾರಣ ಸೃಜನ್ ಲೋಕೇಶ್. ಇದರ ಎಲ್ಲಾ ಕ್ರೆಡಿಟ್ ಅವರಿಗೇ ಸಲ್ಲಬೇಕು' ಎಂದಿದ್ದಾರೆ...
ಸ್ಯಾಂಡಲ್‌ವುಡ್‌ನಲ್ಲಿ ಕಳೆದ ವಾರ ಬಿಡುಗಡೆಯಾಗಿದ್ದ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಸಿನಿಮಾ ಮೂಲಕ ನಟರಾಗಿ ಚಂದನ್ ಶೆಟ್ಟಿ (Chandan Shetty) ಎಂಟ್ರಿ ಕೊಟ್ಟಿರುವದು ಗೊತ್ತೇ ಇದೆ. ಈ ಮೊದಲು ರಾಪರ್ ಆಗಿ ಹೆಚ್ಚಾಗಿ ತೊಡಗಿಸಿಕೊಂಡಿದ್ದ ಚಂದನ್ ಶೆಟ್ಟಿ ಅವರು ಈಗ ನಟ-ಸಿಂಗರ್ ಆಗಿ ಬೆಳೆದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 'ಹೀರೋ' ಎನಿಸಿಕೊಳ್ಳುವುದಕ್ಕಿಂತ ನನಗೆ ಕಲಾವಿದನಾಗಿ ಬೆಳೆಯುವುದು ಮುಖ್ಯ' ಎಂದಿದ್ದಾರೆ ಚಂದನ್ ಶೆಟ್ಟಿ. ಇನ್ನೂ ಎರಡು ಚಿತ್ರಗಳಲ್ಲಿ ಚಂದನ್ ನಟಿಸಿದ್ದು ಅವು ಬಿಡುಗಡೆ ಕಾಣಬೇಕಾಗಿದೆ.
ಮೈಸೂರಿನಲ್ಲಿ ಸದ್ಯಕ್ಕೆ ಸಂಗೀತ ನಿರ್ದೇಶನದ ಕೆಲಸವನ್ನು ಮಾಡುತ್ತಿದ್ದಾರೆ ಚಂದನ್ ಶೆಟ್ಟಿ. ಸೃಜನ್ ಲೋಕೇಶ್ (Srujan Lokesh) ಮುಖ್ಯ ಪಾತ್ರದ, ಸಂದೇಶ್ ಕಂಬೈನ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಘೋಸ್ಟ್'ಸ್ ಇನ್ ಟ್ರಬಲ್'ಎಂಬ ಹೆಸರಿನ (GST - Ghost's in Trouble) ಸಿನಿಮಾಗೆ ಚಂದನ್ ಶೆಟ್ಟಿ ಸಂಗೀತ ನೀಡುತ್ತಿದ್ದಾರೆ. ಅವರ ಮ್ಯೂಸಿಕ್ ಕೊಟ್ಟ ಮೇಲೆ ಒಂದಾದರೂ ಹಾಡನ್ನು ಅವರು ಹಾಡುತ್ತಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೆ?
undefined
ಎನೋ ಇದೆ, ಅಪರ್ಣಾ ಎದುರು ದರ್ಶನ್ ಅಂದು ಪುನೀತ್ ಬಗ್ಗೆ ಹೇಳಿದ್ದ ಮಾತು ಇಂದು ವೈರಲ್ ಆಗ್ತಿದ್ಯಲ್ಲ..!
'ಘೋಸ್ಟ್'ಸ್ ಇನ್ ಟ್ರಬಲ್' ಚಿತ್ರದ ಸಂಗೀತ ನಿರ್ದೇಶನದ ಕೆಲಸಕ್ಕಾಗಿ ನಟ-ಸಿಂಗರ್ ಹಾಗೂ ಮ್ಯೂಸಿಕ್ ಡೈರೆಕ್ಟರ್ ಚಂದನ್ ಶೆಟ್ಟಿಯವರು ಮೈಸೂರಿನಲ್ಲಿಇದ್ದಾರೆ. ಸಂಗೀತದ ಜೊತೆಜೊತೆಗೆ ಇತ್ತೀಚೆಗೆ ಬಿಡುಗಡೆ ಆಗಿರುವ ತಮ್ಮ ಮುಖ್ಯ ಭೂಮಿಕೆಯ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಪ್ರಮೋಶನ್ ಕೆಲಸವನ್ನು ಸಹ ಮಾಡುತ್ತಿದ್ದಾರೆ ಚಂದನ್. ಹೀಗೆ, ಸಿಂಗಿಂಗ್, ಆಕ್ಟಿಂಗ್ ಹಾಗು ಮ್ಯೂಸಿಕ್ ಡೈರೆಕ್ಷನ್ ಮಾಡುತ್ತ ಲೈಫಲ್ಲಿ ಫುಲ್ ಬ್ಯುಸಿ ಆಗಿದ್ದಾರೆ ಚಂದನ್ ಶೆಟ್ಟಿ.
ಚಂದನ್ ಶೆಟ್ಟಿ ಅವರು 'ಜಿಎಸ್‌ಟಿ' ಚಿತ್ರದ ಮ್ಯೂಸಿಕ್ ಕಂಪೋಸ್ ಬಗ್ಗೆ ಮಾತನಾಡಿ 'ಈ ಸಿನಿಮಾದಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದರೆ ಅದಕ್ಕೆ ಕಾರಣ ಸೃಜನ್ ಲೋಕೇಶ್. ಇದರ ಎಲ್ಲಾ ಕ್ರೆಡಿಟ್ ಅವರಿಗೇ ಸಲ್ಲಬೇಕು' ಎಂದಿದ್ದಾರೆ. ಅಂದರೆ, GST ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಸೃಜನ್ ಲೋಕೇಶ್ ಎನ್ನಬಹುದು. ಸದ್ಯ ಉತ್ತಮ ಸಂಗೀತ ನೀಡುವತ್ತ ಚಂದನ್ ಗಮನ ಹರಿಸಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮೊದಲು ಚಂದನ್ ಶೆಟ್ಟಿ ಅವರು ಶ್ರೇಯಸ್ ಮಂಜು ನಟನೆಯ ರಾಣಾ, ಚಿರಂಜೀವಿ ಸರ್ಜಾ ನಟನೆಯ ಸೀಸರ್ ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಷನ್ ಮಾಡಿದ್ದರು. ಜೊತೆಗೆ, ಧ್ರುವ ಸರ್ಜಾ ನಟನೆಯ 'ಪೊಗರು' ಚಿತ್ರದಲ್ಲಿ ಒಂದು ಹಾಡು ಕಾಂಪೋಸ್ ಕೂಡ ಮಾಡಿದ್ದರು. ಪೊಗರು ಚಿತ್ರದ ರೀ-ರೆಕಾಡಿಂಗ್ ಮಾಡಿದ್ದು ವಿ ಹರಿಕೃಷ್ಣ, ಒಂದು ಹಾಡಿಗೆ ಚಂದನ್ ಶೆಟ್ಟಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.
ಇದೀಗ, ನಟರಾದ ಸೃಜನ್ ಲೋಕೇಶ್ ಅವರ ಜೊತೆಗೆ ಭೂತದ ಸಮಸ್ಯೆಯನ್ನು ಪರಿಹರಿಸಲು ಚಂದನ್ ಶೆಟ್ಟಿ ಕೆಲಸ ಮಾಡುತ್ತಿದ್ದಾರೆ. ಪಾಪ, ಯಾವುದೋ ಭೂತ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿದೆ. 'ಘೋಸ್ಟ್'ಸ್ ಇನ್ ಟ್ರಬಲ್' ಅಂತ ಗೊತ್ತಿದ್ದೂ ಸೃಜನ್ ಹಾಗೂ ಚಂದನ್ ಸುಮ್ಮನಿರುವುದಾದರೂ ಹೇಗೆ ಹೇಳಿ? ಅದಕ್ಕೂ ಚಂದನ್ ಸಂಗೀತದ ಮೂಲಕ, ಸೃಜನ್ ಆಕ್ಷನ್ ಮೂಲಕ ಭೂತದ ಸಮಸ್ಯೆಯನ್ನು ಹೋಗಲಾಡಿಸಲಿದ್ದಾರೆ ಎನ್ನಬಹುದು.
ವಿಷ್ಣುವರ್ಧನ್‌ಗೆ ಪೋನ್‌ನಲ್ಲಿ ಡಾ ರಾಜ್ ಹೇಳಿದ್ದು ಕೇಳಿ ಎಸ್ ನಾರಾಯಣ್ ಕಕ್ಕಾಬಿಕ್ಕಿ ಯಾಕ್ ಆದ್ರು..?
ಒಟ್ಟಿನಲ್ಲಿ, ಬಹುಮುಖ ಪ್ರತಿಭೆಯ ನಟ-ನಿರೂಪಕ ಸೃಜನ್ ಲೋಕೇಶ್ ಹಾಗು ನಟ-ಸಿಂಗರ್-ಮ್ಯೂಸಿಕ್ ಡೈರೆಕ್ಟರ್ ಚಂದನ್ ಈ ಚಿತ್ರದಲ್ಲಿ ಒಟ್ಟಿಗೇ ಕೆಲಸ ಮಾಡುವ ಮೂಲಕ ಕನ್ನಡ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆಯನ್ನಂತೂ ಹುಟ್ಟುಹಾಕಿದ್ದಾರೆ. ಸದ್ಯ ಶೂಟಿಂಗ್ ಹಾಗು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಜಿಎಸ್‌ಟಿ ಚಿತ್ರವು ಕೆಲಸ ಮುಗಿಸಿಕೊಂಡು ಆದಷ್ಟು ಬೇಗ ತೆರೆಗೆ ಬರಲು ಸಿದ್ಧವಾಗುತ್ತಿದೆ. ಸ್ಯಾಂಡಲ್‌ವುಡ್ ಪ್ರೇಕ್ಷಕರು 'ಭೂತದ ಸಮಸ್ಯೆ'ಯನ್ನು ನೋಡುವ ದಿನ ದೂರವಿಲ್ಲ ಎನ್ನಬಹುದು!