ವಿದೇಶದಲ್ಲೂ ಪತ್ತೇದಾರಿಕೆ ಶುರು ಮಾಡಲಿದ್ದಾರೆ 'ಶಿವಾಜಿ ಸುರತ್ಕಲ್'!

By Suvarna NewsFirst Published Feb 28, 2020, 9:22 AM IST
Highlights

ನಟ ರಮೇಶ್‌ ಅರವಿಂದ್‌ ಖುಷಿಯಲ್ಲಿದ್ದಾರೆ. ಅವರೊಂದಿಗೆ ‘ಶಿವಾಜಿ ಸುರತ್ಕಲ್‌’ ಚಿತ್ರದ ಫುಲ್‌ ಟೀಮ್‌ ಕೂಡ ಗೆದ್ದ ಸಂಭ್ರಮದಲ್ಲಿದೆ. ನಿರೀಕ್ಷೆಯಂತೆ ಚಿತ್ರಕ್ಕೆ ಎಲ್ಲಾ ಕಡೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು ಅದಕ್ಕೆ ಕಾರಣ. ಇನ್ನು ಈ ಚಿತ್ರ ರಿಲೀಸ್‌ ಆಗಿದ್ದ ಮೊದಲ ದಿನ ಸಿಕ್ಕಿದ್ದ 60 ರಿಂದ 70 ಚಿತ್ರಮಂದಿರಗಳು ಮಾತ್ರ. ಆದರೆ ಈಗ ಆ ಸಂಖ್ಯೆ ದುಪ್ಪಟ್ಟಾಗಿದೆ. ಈಗ 134 ಚಿತ್ರಮಂದಿರಗಳಲ್ಲಿ ಶಿವಾಜಿ ಸುರತ್ಕಲ್‌ ಪ್ರದರ್ಶನ ಕಾಣುತ್ತಿದೆ.

ಆರಂಭದಲ್ಲೇ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್‌ ನೋಡಿಕೊಂಡು ಚಿತ್ರಮಂದಿರಗಳ ಮಾಲಿಕರೇ ಪ್ರದರ್ಶನಕ್ಕೆ ಅವಕಾಶ ಕೊಡಿ ಅಂತ ಕೇಳುತ್ತಿದ್ದಾರಂತೆ. ಅದರ ಜತೆಗೆ ಈ ಚಿತ್ರಕ್ಕೂ ಪ್ಯಾನ್‌ ಇಂಡಿಯಾ ರಿಲೀಸ್‌ ಅದೃಷ್ಟಸಿಕ್ಕಿದೆ. ಮಾಚ್‌ರ್‍ 6 ರಿಂದ ಅಮೆರಿಕ, ಕಿನ್ಯಾ ಹಾಗೂ ನಾರ್ವೆ ಸೇರಿದಂತೆ ವಿದೇಶಗಳಲ್ಲೂ ತೆರೆ ಕಾಣುತ್ತಿದೆ.

ಚಿತ್ರ ವಿಮರ್ಶೆ: ಶಿವಾಜಿ ಸುರತ್ಕಲ್

ಚಿತ್ರದ ರಿಲೀಸ್‌ ಆದ ನಂತರ ಸಿಕ್ಕ ಇಂತಹ ಹಲವು ಖುಷಿ ಸಮಾಚಾರ ಹಂಚಿಕೊಳ್ಳುವುದಕ್ಕಾಗಿ ನಟ ರಮೇಶ್‌ ಅರವಿಂದ್‌ ಚಿತ್ರ ತಂಡದ ಜತೆಗೆ ಮಾಧ್ಯಮದ ಮುಂದೆ ಬಂದಿದ್ದರು. ಅಲ್ಲಿ ಗೆದ್ದ ಖುಷಿ ಜತೆಗೆ ಮುಂದಿನ ಯೋಜನೆ, ಯೋಚನೆಗಳನ್ನು ಹಂಚಿಕೊಂಡರು.‘ ನಾವೆಲ್ಲ ಸಂಭ್ರಮದಲ್ಲಿದ್ದೇವೆ. ಸಿನಿಮಾಕ್ಕೆ ಇಂತಹ ರೆಸ್ಪಾನ್ಸ್‌ ಸಿಗುತ್ತದೆಯೋ ಇಲ್ಲವೋ ಎನ್ನುವ ಆತಂಕ ಇತ್ತು. ಆದರೆ ಈಗ ಅದು ದೂರವಾಗಿದೆ. ಎಲ್ಲಾ ಕಡೆಗಳಲ್ಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗಿದೆ. ನನ್ನ ಪಾತ್ರವೂ ಸೇರಿ ಸಿನಿಮಾದ ಪ್ರತಿ ವಿಭಾಗಗಳ ಬಗ್ಗೆಯೂ ಜನ ಮಾತನಾಡುತ್ತಿದ್ದಾರೆ. ನಿಜಕ್ಕೂ ಇದು ಸಂಭ್ರಮಿಸುವ ಸಂದರ್ಭ ತಂದುಕೊಟ್ಟಿದೆ’ ಎಂದರು ರಮೇಶ್‌ ಅರವಿಂದ್‌.

ಬೇರೆ ಭಾಷಾ ಚಿತ್ರಗಳಲ್ಲಿಯೂ ನಟಿಸಬೇಕಿತ್ತು: ರಮೇಶ್ ಅರವಿಂದ್

ನಿರ್ದೇಶಕ ಆಕಾಸ್‌ ಶ್ರೀವತ್ಸ ಸಿನಿಮಾದ ಮುಂದಿನ ಪಯಣ ತೆರೆದಿಟ್ಟರು. ‘ಸದ್ಯಕ್ಕೀಗ ಸಿನಿಮಾಕ್ಕೆ ಸಿಕ್ಕ ಒಳ್ಳೆಯ ಪ್ರತಿಕ್ರಿಯೆ ಬೇರೆ ಬೇರೆ ಅವಕಾಶಗಳು ತೆರೆದುಕೊಳ್ಳುವಂತೆ ಮಾಡಿದೆ. ತೆಲುಗು ಹಾಗೂ ತಮಿಳು ರಿಮೇಕ್‌ ಹಕ್ಕಿನ ಮಾರಾಟಕ್ಕೆ ಬೇಡಿಕೆ ಬಂದಿದೆ. ಒಂದಷ್ಟುಮಾತುಕತೆಗಳು ನಡೆದಿವೆ. ಅವೆಲ್ಲ ಈಗ ಪ್ರಾಥಮಿಕ ಹಂತದಲ್ಲಿವೆ. ಅದರ ಜತೆಗೀಗ ಸಿನಿಮಾ ಪ್ಯಾನ್‌ ಇಂಡಿಯಾ ರಿಲೀಸ್‌ ಆಗುತ್ತಿದೆ. ರಾರ‍ಯಡಿಕಲ್‌ ಪ್ರೇಮ್ಸ್‌ ಎನ್ನುವ ಸಂಸ್ಥೆ ಚಿತ್ರವನ್ನು ಚೆನ್ನೈ,ಕೊಯಮತ್ತೂರು, ಹೈದರಾಬಾದ್‌, ಮುಂಬೈ, ಪೂನಾ ಹಾಗೂ ದೆಹಲಿಯಲ್ಲಿ ರಿಲೀಸ್‌ ಮಾಡಲು ಮುಂದೆ ಬಂದಿದೆ. ಇನ್ನು ಮಾಚ್‌ರ್‍ 6 ರಿಂದ ವಿಶ್ವದಾದ್ಯಂತ ತೆರೆ ಕಾಣುತ್ತಿದೆ. ನಿರ್ಮಾಪಕ ರಮೇಶ್‌ ಕಶ್ಯಪ್‌ ಅಲ್ಲಿ ವಿತರಣೆಯ ಹೊಣೆ ಹೊತ್ತುಕೊಂಡಿದ್ದಾರೆ. ಇವೆಲ್ಲವೂ ಈಗ ಇಡೀ ಚಿತ್ರತಂಡಕ್ಕೆ ಖುಷಿ ತಂದಿದೆ’ ಎಂದರು. ನಿರ್ಮಾಪಕ ಅನೂಪ್‌ ಒಂದೊಳ್ಳೆಯ ಚಿತ್ರ ಮಾಡಿದ ಖುಷಿಯಿದೆ. ಹಾಕಿದ ಬಂಡವಾಳ ಕೂಡ ವಾಪಾಸ್‌ ಬರುವ ನಂಬಿಕೆ ಹುಟ್ಟಿದೆ’ ಎಂದು ನಗು ಬೀರಿದರು. ಚಿತ್ರೀಕರಣದಲ್ಲಿ ಬ್ಯುಸಿ ಇದ್ದ ಕಾರಣ ಚಿತ್ರದ ಇಬ್ಬರು ನಾಯಕಿಯರು ಸಕ್ಸಸ್‌ಮೀಟ್‌ಗೆ ಬಂದಿರಲಿಲ್ಲ.

'ಶಿವಾಜಿ ಸುರತ್ಕಲ್‌' ನೋಡಿ ಏನಂದ್ರು ಕ್ರಿಕೆಟಿಗ ದ್ರಾವಿಡ್?

click me!