
ಇಂದು (ಫೆ.28) ಶುಕ್ರವಾರ ತೆರೆ ಕಾಣುತ್ತಿದೆ. ಫೆ.28ರಂದು ಚಿತ್ರಮಂದಿರಕ್ಕೆ ಸಿನಿಮಾ ಬರುತ್ತಿರುವ ಪ್ರಯುಕ್ತವಾಗಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ದಿನಕರ್ ಕಪೂರ್ ನಿರ್ದೇಶನ, ಅಮೂಲ್ಯ ದಾಸ್ ನಿರ್ಮಾಣ ಮಾಡಿರುವ ಚಿತ್ರವಿದು. ಹಾಸ್ಯ ನಟ ಕೃಷ್ಣ ಅಭಿಷೇಕ್, ಅರ್ಜುನ್ ಮುಘಲ್, ಅನುಸ್ಮೃತಿ ಸರ್ಕಾರ್, ಅನಘ ದೇಸಾಯಿ, ಪ್ರದೀಪ್ ಕಬ್ರ ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಈ ಚಿತ್ರವನ್ನು ನರ್ಗಿಸ್ ಬಾಬು ಬಿಡುಗಡೆ ಮಾಡುತ್ತಿದ್ದಾರೆ.
ಸಿನಿಮಾ ಬಿಡುಗಡೆ ಆಗುತ್ತಿರುವ ಹೊತ್ತಿನಲ್ಲಿ ನಟ ಜೆಕೆ ಮುಖದಲ್ಲಿ ಸಂಭ್ರಮ ಇತ್ತು. ‘ಧಾರಾವಾಹಿ ಮೂಲಕ ಬಾಲಿವುಡ್ ಪ್ರವೇಶ ಮಾಡಿದೆ. ರಾವಣನಾಗಿ ನನ್ನ ಅಲ್ಲಿನ ಪ್ರೇಕ್ಷಕರು ಸ್ವೀಕರಿಸಿದರು. ಅದೇ ಖ್ಯಾತಿ ನನ್ನ ಹಿಂದಿ ಮತ್ತು ಕನ್ನಡ ಚಿತ್ರಕ್ಕೆ ನಾಯಕನ್ನಾಗಿಸಿದೆ. ಓ ಪುಷ್ಪ ಐ ಹೇಟ್ ಟಿಯರ್ಸ್ ಎನ್ನುವುದು ಕಾಮಿಡಿ ಕಂ ಥ್ರಿಲ್ಲರ್ ಸಿನಿಮಾ. ಬಹು ದೊಡ್ಡ ತಾರಾಗಣವನ್ನು ಒಳಗೊಂಡಿರುವ ಸಿನಿಮಾ. ಈ ಚಿತ್ರದಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಪ್ರೇಮ ಕತೆ ಜತೆಗೆ ಥ್ರಿಲ್ಲರ್ ಅಂಶ ಇರುವುದು ಅಪರೂಪ. ಈ ಹಿನ್ನೆಲೆಯಲ್ಲಿ ಈ ಸಿನಿಮಾ ವಿಶೇಷ ಎನ್ನಬಹುದು. ಒಂದು ಒಳ್ಳೆಯ ವೃತ್ತಿಪರ ತಂಡದ ಜತೆಗೆ ಕೆಲಸ ಮಾಡಿದ ಖುಷಿ ನನಗೆ ಇದೆ’ ಎಂದರು ಜೆಕೆ.
ಕನ್ನಡದಲ್ಲಿಯೂ ಬರುತ್ತಿದೆ ಜೆಕೆ ನಟನೆಯ `ಓ ಪುಷ್ಪಾ ಐ ಹೇಟ್ ಟಿಯರ್ಸ್'!
ನಿರ್ದೇಶಕ ದಿನಕರ್ ಕಪೂರ್ ಅವರಿಗೆ ಎರಡು ಭಾಷೆಯಲ್ಲಿ ಸಿನಿಮಾ ತೆರೆಗೆ ಬರುತ್ತಿರುವುದು ಮೊದಲ ಅನುಭವ. ಡಬ್ಬಿಂಗ್ ಸ್ಟುಡಿಯೋದಲ್ಲಿ ಚಿತ್ರವನ್ನು ನೋಡಿ ನರ್ಗಿಸ್ ಬಾಬು ಅವರು ಕನ್ನಡದಲ್ಲೂ ಈ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದನ್ನು ನಿರ್ದೇಶಕರು ನೆನಪಿಸಿಕೊಂಡರು. ಒಟ್ಟು 300 ಚಿತ್ರಮಂದಿರಗಳಲ್ಲಿ ‘ಓ ಪುಷ್ಪ ಐ ಹೇಟ್ ಟಿಯರ್ಸ್’ ಚಿತ್ರ ಬಿಡುಗಡೆ ಆಗುತ್ತಿದೆ, ಎಲ್ಲರಿಗೂ ಇಷ್ಟವಾಗುವ ಸಿನಿಮಾ ಇದು ಎಂಬುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ನಿರ್ದೇಶಕರು. ನಾಯಕಿ ಅನು ಸ್ಮೃತಿ ಸರ್ಕಾರ್ ಅವರಿಗೆ ಇದು ಮೊದಲ ಸಿನಿಮಾ. ಹಿಂದಿಯಲ್ಲಿ ಕಂಡ ಯಶಸ್ಸು, ಕನ್ನಡದಲ್ಲೂ ಕಾಣುವ ಭರವಸೆ ಅವರದ್ದು. ಅರವಿಂದ್ ಸಿಂಗ್ ಪೂವಾರ್ ಛಾಯಾಗ್ರಹಣ, ರಾಂಜಿ ಗುಲಾಟಿ ಸಂಗೀತ ಈ ಚಿತ್ರಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.